ಮೊದಲನೆಯ ಟ್ರೈಮೆಸ್ಟರ್ ನಲ್ಲಿ ಪ್ರತಿಯೊಬ್ಬ ತಾಯಿಗೂ ಶಿಫಾರಸ್ಸು ಮಾಡಲಾಗುವ ಸ್ಕ್ಯಾನ್ ಗಳು

cover-image
ಮೊದಲನೆಯ ಟ್ರೈಮೆಸ್ಟರ್ ನಲ್ಲಿ ಪ್ರತಿಯೊಬ್ಬ ತಾಯಿಗೂ ಶಿಫಾರಸ್ಸು ಮಾಡಲಾಗುವ ಸ್ಕ್ಯಾನ್ ಗಳು

 

ಗರ್ಭಧಾರಣೆಯ ಮೊದಲನೆಯ ಟ್ರಿಮಿಸ್ಟರ್ನಲ್ಲಿ ಮಾಡಿಸುವ ಸ್ಕ್ಯಾನ್ ನಿಮ್ಮ ಗರ್ಭಧಾರಣೆಯ ಪ್ರಗತಿಯನ್ನು ಹಾಗೂ ನಿಮ್ಮ ಮಗುವಿನ ಬೆಳವಣಿಗೆಯನ್ನು ಪರಿಶೀಲಿಸಲು ಸಹಾಯ ಮಾಡುತ್ತದೆ .


ಮೊದಲನೆಯ ಟ್ರಿಮಿಸ್ಟರ್ ಯಾವಾಗಲೂ ಬಹಳ ವಿಸ್ಮಯಕರವಾದದ್ದು. ಒಂದು ಹೊಸ ಜೀವವು ನಿಮ್ಮೊಳಗೆ ಬೆಳೆಯುತ್ತಿರುವುದನ್ನು ಕಂಡುಕೊಂಡಾಗ ಆಗುವ ಸಂತೋಷ, ಆ ಸಂತೋಷದ ವಿಷಯವನ್ನು ನಿಮ್ಮ ಆಪ್ತರಲ್ಲಿ ಹಂಚಿಕೊಳ್ಳುವುದು ಹಾಗು ಮುಂಬರುವ ಕೆಲವು ತಿಂಗಳುಗಳ ಕಾಲ, ನಿಮಗೆ ನಡೆಯುವ ವಿಶೇಷ ಪೋಷಣೆ ಹಾಗೂ ಲಾಲನೆ , ಇವೆಲ್ಲವೂ ತಾಯಿಯಾಗುವವರಲ್ಲಿ ಬಹಳ ವಿಶೇಷ ಹಾಗು ಅದೃಷ್ಟವಂತರೆಂಬ ಭಾವನೆಯನ್ನು ಮೂಡಿಸುತ್ತದೆ. ಗರ್ಭಿಣಿ ಮಹಿಳೆ ಮೊದಲ ತ್ರೈಮಾಸಿಕದಲ್ಲಿ ಅನುಭವಿಸಬಹುದಾದ ತೀವ್ರವಾದ ಭಾವನೆಗಳ ಜೊತೆಗೆ, ವೈದ್ಯರಿಗೆ ನಿಯಮಿತವಾದ ಭೇಟಿಗಳ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವುದು ಮುಖ್ಯವಾಗಿದೆ. ಕೆಲವು ತಪಾಸಣೆಗಳು ಹಾಗು ಸ್ಕ್ಯಾನ್ಗಳ ಮೂಲಕ , ನಿಮ್ಮ ಮತ್ತು ನಿಮ್ಮ ಮಗುವಿನ ಯೋಗಕ್ಷೇಮವನ್ನು ನೀವು ಖಚಿತವಾಗಿಸಿಕೊಳ್ಳಬಹುದು. ಗರ್ಭಧಾರಣೆಯ ಸಮಯದಲ್ಲಿ ಮಾಡುವ ಸ್ಕ್ಯಾನ್ಗಳಿಂದ , ಮಗುವಿನ ಸ್ಥಾನ ಹಾಗು ಗರ್ಭಕೋಶದಲ್ಲಿ ಅದರ ಅರೋಗ್ಯ ಹಾಗು ಯಾವುದೇ ರೀತಿಯ ಜನ್ಮಜಾತ ವೈಪರೀತ್ಯಗಳ ಬಗ್ಗೆ ತಿಳಿದುಕೊಳ್ಳಬಹುದು.


ಗರ್ಭಧಾರಣೆಗೆ ಸಂಬಂಧಿಸಿದ ವಿವಿಧ ಬಗೆಯ ಅಲ್ಟ್ರಾಸೌಂಡ್ ಸ್ಕ್ಯಾನ್ಗಳು  ಯಾವುವು?


ಗರ್ಭಧಾರಣೆಯ ಸ್ಕ್ಯಾನ್ನಲ್ಲಿ ಅಥವಾ ಗರ್ಭಧಾರಣೆಯ ಅಲ್ಟ್ರಾಸೌಂಡ್ ನಲ್ಲಿ  , ಶಬ್ಧದ ಅಲೆಗಳನ್ನು, ಒಂದು ಯಂತ್ರದ ಮೂಲಕ ಗರ್ಭಕೋಶದೊಳಗೆ ಕಳಿಸಲಾಗುತ್ತದೆ ಹಾಗು  ಅದರಿಂದ ಬರುವ ಪ್ರತಿದ್ವನಿಯನ್ನು ಕಂಪ್ಯೂಟರ್ನ ಸಹಾಯದಿಂದ ಚಿತ್ರವನ್ನಾಗಿ ಪರಿವರ್ತಿಸಲಾಗುತ್ತದೆ. ಆ ಚಿತ್ರದಲ್ಲಿ, ಗಡುಸಾದ ಅಂಗಾಂಶಗಳಾದ ಮೂಳೆಗಳು ಬಿಳಿಯಾಗಿ ಕಾಣುತ್ತವೆ, ಮೃದುವಾದ ಅಂಗಾಂಶಗಳು ಬೂದುಬಣ್ಣವಾಗಿ ಕಾಣಿಸುತ್ತವೆ ಹಾಗು ಆಮ್ನಿಯೋಟಿಕ್ ಫ್ಲೂಯಿಡ್ ಪ್ರತಿಧ್ವನಿಸಿದ ಕಾರಣ ಕಪ್ಪಾಗಿ ಕಾಣುತ್ತದೆ.


ಈ ಸ್ಕ್ಯಾನ್ಗಳಲ್ಲಿ ಮೂರು ವಿಧ:


  • 2ಡಿ ಸ್ಕ್ಯಾನ್ ಬಗ್ಗೆ ಮೇಲೆ ತಿಳಿಸಲಾಗಿದೆ. ಇದು ಒಂದು ವಿಶಿಷ್ಟ ಮಾದರಿಯ ಸ್ಕ್ಯಾನಾಗಿದ್ದು, ಬೇಕಾದ ವಿಷಯಗಳ ಬಗ್ಗೆ ಮಾಹಿತಿಯನ್ನು ತಿಳಿಸಿಕೊಡುತ್ತದೆ. ಆದರೆ ಈ ಸ್ಕ್ಯಾನ್ ಮಗುವಿನ ಸ್ಪಷ್ಟವಾದ ಚಿತ್ರವನ್ನು ತೋರಿಸುವುದಿಲ್ಲ. ಇದು ಉತ್ಸುಕರಾದ ಪೋಷಕರಿಗೆ ಸ್ವಲ್ಪ ಕಡಿಮೆ ತೃಪ್ತಿದಾಯಕ ಅನುಭವವನ್ನು ನೀಡುತ್ತದೆ
  • 3ಡಿ ಸ್ಕ್ಯಾನ್ ,2ಡಿ ಸ್ಕ್ಯಾನನ್ನು ಹೋಲುತ್ತದೆ. ಆದರೆ ಇದು 3ಡಿ ಆಯಾಮದ ಚಿತ್ರವನ್ನು ನೀಡುತ್ತದೆ. ಇದರಲ್ಲಿ  ಮಗುವಿನ ವೈಶಿಷ್ಟ್ಯವನ್ನು ಕಾಣಬಹುದು .

 

  • ೪ಡಿ ಸ್ಕ್ಯಾನ್ , ೩ಡಿ ಸ್ಕ್ಯಾನನ್ನು ಹೋಲುತ್ತದೆ. ಆದರೆ ಇದು ೪ಡಿ ಆಯಾಮದ ಚಿತ್ರವನ್ನು ನೀಡುತ್ತದೆ. ಇದರಲ್ಲಿ ಮಗುವಿನ ಚಲನೆಯನ್ನು ನೋಡಬಹುದು-ಇದು ಗರ್ಭಾಶಯದಲ್ಲಿ ಮಗುವಿನ ವಿಡಿಯೋದಂತೆ ಕಾಣುತ್ತದೆ.

 

ಮೊದಲನೆಯ ಟ್ರಿಮಿಸ್ಟರ್ನಲ್ಲಿ ಮಾಡುವ ಗರ್ಭಧಾರಣೆಗೆ ಸಂಬಂಧ ಪಟ್ಟ ಅಲ್ಟ್ರಾಸೌಂಡ್ ಯಾವುದು?


ಗರ್ಭದಾರಣೆ ಸಮಯದಲ್ಲಿ ಹಲವಾರು ವಿಭಿನ್ನ ಸ್ಕ್ಯಾನ್ಗಳನ್ನು ಮಾಡಲಾಗುತ್ತದೆ. ಮೊದಲನೆಯ ಟ್ರಿಮಿಸ್ಟರ್ನಲ್ಲಿ ಮಾಡುವ ವಿವಿಧ ಸ್ಕ್ಯಾನ್ಗಳ ವಿವರ ಹೀಗಿದೆ:


  • ವಿಯಬಿಲಿಟಿ  ಸ್ಕ್ಯಾನ್ (ಮೊದಲನೆಯ ಗರ್ಭಧಾರಣೆಯ ಸ್ಕ್ಯಾನ್): ಇದು ಮೊಟ್ಟ ಮೊದಲನೆಯ ಸ್ಕ್ಯಾನ್. ಇದನ್ನು ಗರ್ಭಧಾರಣೆಯಾದ 6-10 ವಾರಗಳೊಳಗೆ ಮಾಡಲಾಗುತ್ತದೆ. ಈ ಸ್ಕ್ಯಾನ್ನನ್ನು ಯೋನಿಯವಾಗಿ ಮಾಡಲಾಗುತ್ತದೆ ಹಾಗು ಇದು ಉಳಿಯಬಲ್ಲ ಗರ್ಭಧಾರಣೆಯಾಗಿರುವುದನ್ನು ದೃಢೀಕರಿಸುತ್ತದೆ. ಈ ಸ್ಕ್ಯಾನ್ ಮಗುವಿನ ಹೃದಯ ಬಡಿತವನ್ನೂ ತಿಳಿಸುತ್ತದೆ. ವಿಯಬಿಲಿಟಿ ಸ್ಕ್ಯಾನ್, ಒಂದು ಬಹಳ ವಿಶೇಷವಾದ ಸ್ಕ್ಯಾನ್ ಆಗಿರುತ್ತದೆ ಏಕೆಂದರೆ , ಇದು ತಂದೆ ತಾಯಿಯಾಗುವವರಿಗೆ, ಗರ್ಭಾಶಯದಲ್ಲಿ ಬೆಳೆಯುತ್ತಿರುವ ತಮ್ಮ ಮಗುವಿನ ಮೊದಲ ಚಿತ್ರಣವನ್ನು ನೀಡುತ್ತದೆ. ಈ ಸ್ಕ್ಯಾನ್ , ಗರ್ಭದಲ್ಲಿ ಇರುವ  ಮಕ್ಕಳ ಸಂಖ್ಯೆಯನ್ನು ತಿಳಿಸಿಕೊಡುತ್ತದೆ ಹಾಗು ಗರ್ಭಿಣಿಯಲ್ಲಿ ಯಾವುದೇ ರೀತಿಯ ರಕ್ತಸ್ರಾವ ಅಥವಾ ಕಲೆಯು ಇದ್ದಲ್ಲಿ ಅಂದರೆ ಹಿಂದಿನ ಕಾರಣಗಳನ್ನು ಅದು ಗುರುತಿಸುತ್ತದೆ.

  • ಡೇಟಿಂಗ್ ಸ್ಕ್ಯಾನ್ :  ಈ ಸ್ಕ್ಯಾನ್ ಮಗುವಿನ ಜನನದ ನಿಗದಿತ ದಿನಾಂಕವನ್ನು ತಿಳಿಸಿಕೊಡುತ್ತದೆ, ಹಾಗೂ ಮಗುವು ಗರ್ಭಕೋಶಕ್ಕೆ ಸರಿಯಾಗಿ ಅಂಟಿಕೊಂಡಿರುವುದೋ , ಇಲ್ಲವೋ , ಎಂಬುದನ್ನು ತಿಳಿಸಿಕೊಡುತ್ತದೆ  ಮತ್ತು ಮಗುವಿನ ನಿಲುವನ್ನು ದೃಢೀಕರಿಸುತ್ತದೆ.

  • ಮೊದಲನೆಯ ಟ್ರಿಮಿಸ್ಟರ್ನಲ್ಲಿ ಮಾಡುವ ಕೊನೆಯ ಗರ್ಭಧಾರಣೆಯ ಅಲ್ಟ್ರಾಸೌಂಡ್ ಸ್ಕ್ಯಾನ್ ಬಹಳ ಮುಖ್ಯವಾಗಿರುತ್ತದೆ ಹಾಗು ಇದನ್ನು ನಾಚುಲ್ ಟ್ರಾನ್ಸ್ಯೂಸಿನ್ಸಿ (ನ್ ಟಿ) ಸ್ಕ್ಯಾನ್ ಎಂದು ಕರೆಯಲಾಗುತ್ತದೆ. ಈ ಸ್ಕ್ಯಾನ್ನ ಪ್ರಮುಖ ಉದ್ದೇಶವೇನೆಂದರೆ,  ಬ್ರೂಣದಲ್ಲಿ ಡೌನ್ ಸಿಂಡ್ರೋಮ್ ಇರುವಿಕೆಯನ್ನು ಪತ್ತೆ ಹಚ್ಚುವುದು ಹಾಗು ಹೃದಯರಕ್ತನಾಳದ ಅಸಹಜತೆಗಳನ್ನು ಮತ್ತು ಕ್ರೋಮೋಸೋಮಲ್ ಅಸಹಜತೆಗಳನ್ನು, ಮಗುವಿನಲ್ಲಿ ಪತ್ತೆ ಹಚ್ಚುವುದು. ಈ ಸ್ಕ್ಯಾನನ್ನು ಗರ್ಭಧಾರಣೆಯ 11 - 13 ವಾರಗಳಲ್ಲಿ ಮಾಡಲಾಗುತ್ತದೆ. ಇದರಿಂದ, ಯಾವುದೇ ಅಸಹಜತೆ ಇದ್ದಲ್ಲಿ , ಅದಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳುವುದಕ್ಕೆ ಸಾಕಷ್ಟು ಸಮಯ ಸಿಗುತ್ತದೆ.


ಗರ್ಭದಾರಣೆಯ ಸ್ಕ್ಯಾನ್ ಗಳಲ್ಲದೆ, ಗರ್ಭಿಣಿಯನ್ನು ರಕ್ತ ತಪಾಸಣೆ ಹಾಗು ಮೂತ್ರ ತಪಾಸಣೆಗಳಿಗೂ ಒಳಪಡಿಸಲಾಗುತ್ತದೆ. ಈ ತಪಾಸಣೆಗಳಿಂದ, ಆಕೆಯ ಆರೋಗ್ಯದ ಪರಿಸ್ಥಿತಿ ತಿಳಿಯುತ್ತದೆ. ಈ ತಪಾಸಣೆಗಳು, ಮುಂಬರುವ ಯಾವುದಾದರು ತೊಂದರೆಗಳ ಕಾರಣವನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.


ಸಾಮಾನ್ಯವಾಗಿ, ಆರೋಗ್ಯ ಸೌಲಭ್ಯಗಳು ಆಸ್ಪತ್ರೆಗೆ ನಿಮ್ಮ ಭೇಟಿಗಳನ್ನು ಮಿತಿಗೊಳಿಸಲು ಪ್ರಮುಖ ಪರೀಕ್ಷೆಗಳನ್ನು ಒಟ್ಟುಗೂಡಿಸುತ್ತವೆ. ಉದಾಹರಣೆಗೆ, ಮೊದಲನೆಯ ಟ್ರಿಮಿಸ್ಟರ್ನಲ್ಲಿ, ಎರಡು ರೀತಿಯ ನಿರ್ದಿಷ್ಟ ವಸ್ತುಗಳು ಕಂಡುಹಿಡಿಯಲು ರಕ್ತ ತಪಾಸಣೆ ಹಾಗು ನಾಚುಲ್ ಟ್ರಾನ್ಸ್ಯೂಸಿನ್ಸಿ ಸ್ಕ್ಯಾನ್ ಗಳನ್ನು ಒಂದೇ ದಿನದಲ್ಲಿ ಮಾಡಲಾಗುತ್ತದೆ. ಇದರಿಂದ ಯಾವುದೇ ರೀತಿಯ ಜನ್ಮಜಾತ ಅಸಹಜತೆಯನ್ನು ಮುಂಚಿತವಾಗಿಯೇ  ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.


ನಿಮ್ಮ ವೈದ್ಯರ ಬಳಿ ಮಾತನಾಡಿ ಹಾಗು ವಿವಿಧ ಬಗೆಯ ಸ್ಕ್ಯಾನ್ಗಳ ವೇಳಾಪಟ್ಟಿಯನ್ನು ನಿಗದಿ ಪಡಿಸಿಕೊಳ್ಳಿ ,ನಿಮ್ಮ  ಗರ್ಭಧಾರಣೆಯ ಸಮಯವನ್ನು  ನಿಶ್ಚಿಂತೆಯಿಂದ ಕಳೆಯಿರಿ. 

 

#babychakrakannada
logo

Select Language

down - arrow
Personalizing BabyChakra just for you!
This may take a moment!