• Home  /  
  • Learn  /  
  • ಎರಡನೆಯ ಟ್ರೈಮೆಸ್ಟರ್ ನಲ್ಲಿ ಪ್ರತಿಯೊಬ್ಬ ತಾಯಿಗೂ ಶಿಫಾರಸ್ಸು ಮಾಡಲಾಗುವ ಸ್ಕ್ಯಾನ್ ಗಳು
ಎರಡನೆಯ ಟ್ರೈಮೆಸ್ಟರ್ ನಲ್ಲಿ ಪ್ರತಿಯೊಬ್ಬ ತಾಯಿಗೂ ಶಿಫಾರಸ್ಸು ಮಾಡಲಾಗುವ ಸ್ಕ್ಯಾನ್ ಗಳು

ಎರಡನೆಯ ಟ್ರೈಮೆಸ್ಟರ್ ನಲ್ಲಿ ಪ್ರತಿಯೊಬ್ಬ ತಾಯಿಗೂ ಶಿಫಾರಸ್ಸು ಮಾಡಲಾಗುವ ಸ್ಕ್ಯಾನ್ ಗಳು

3 Jun 2019 | 1 min Read

Medically reviewed by

Author | Articles

ಎರಡನೆಯ ಟ್ರಿಮಿಸ್ಟರ್ನಲ್ಲಿ ಮಾಡುವ ಸ್ಕ್ಯಾನ್ಗಳು, ಮಗುವಿನ ಬೆಳವಣಿಗೆಯನ್ನು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ ಹಾಗು ಯಾವುದೇ ರೀತಿಯ ಚಿಂತಾಜನಕ ಪರಿಸ್ಥಿತಿಯು ಇದ್ದಲ್ಲಿ , ಅದನ್ನು ಪತ್ತೆ ಹಚ್ಚಲು ಸಹಾಯ ಮಾಡುತ್ತವೆ.

ಮೊದಲನೆಯ ಟ್ರಿಮಿಸ್ಟರ್ ಮುಗಿದ ನಂತರ , ಇನ್ನು ಎರಡು ಪ್ರಮುಖ ಟ್ರಿಮಿಸ್ಟರ್ಗಳು ಉಳಿದಿರುತ್ತವೆ. ಎರಡನೆಯ ಟ್ರಿಮಿಸ್ಟರ್ ಶುರುವಾಗುತ್ತಿದ್ದಂತೆ, ಮೊದಲು ಕೆಲವು ವಾರಗಳಿಂದ ಇದ್ದ ವಾಕರಿಕೆ ಹಾಗೂ ಬೆಳಗ್ಗಿನ ಬೇನೆ ಕ್ರಮೇಣ ಕಡಿಮೆಯಾಗುತ್ತದೆ. ನಿಜವಾದ ಗರ್ಭಧಾರಣೆಯ ಉತ್ಸಾಹ  – ಹೊಟ್ಟೆ ಮುಂದೆ ಬರುವುದು , ಗರ್ಭದಲ್ಲಿ ಮಗುವಿನ ಒದೆತ ಇವೆಲ್ಲವು ಶುರುವಾಗುತ್ತದೆ. ಈ ಸಮಯದಲ್ಲೇ , ಗರ್ಭಿಣಿ ಹಾಗು ಮಗುವಿನ ಅರೋಗ್ಯ ಅರಿಯಲು ನಿಯಮಿತ ತಪಾಸಣೆಗಳನ್ನು ಮಾಡಲಾಗುತ್ತದೆ. ಈ ತಪಾಸಣೆಗಳು , ಗರ್ಭದಾರಣೆ ಕ್ಷೇಮವಾಗಿ ಪೂರ್ಣಗೊಳ್ಳಲು ಸಹಕಾರವಾಗುತ್ತದೆ.

ಗರ್ಭಧಾರಣೆಯಲ್ಲಿ ಅಲ್ಟ್ರಾಸೊನೋಗ್ರಫಿ :

ಗರ್ಭಧಾರಣೆಯ ಸ್ಕ್ಯಾನ್ನಲ್ಲಿ ಅಥವಾ ಗರ್ಭಧಾರಣೆಯ ಅಲ್ಟ್ರಾಸೋನೋಗ್ರಫಿ (ಯು ಸ್ ಜಿ )ಯಲ್ಲಿ , ನಿರ್ದಿಷ್ಟ ಆವರ್ತನದ ಶಬ್ಧದ ಅಲೆಗಳನ್ನು, ಒಂದು ಯಂತ್ರದ ಮೂಲಕ   ಗರ್ಭಕೋಶದೊಳಗೆ ಕಳಿಸಲಾಗುತ್ತದೆ. ಆ ಅಲೆಗಳು ಶ್ರೋಣಿಯ ಪ್ರದೇಶದಲ್ಲಿರುವ ವಿವಿಧ ಆಕಾರಗಳನ್ನು ಅಪ್ಪಳಿಸಿ , ಅದರಿಂದ ಹೊರ ಬರುವ ಪ್ರತಿದ್ವನಿಯನ್ನು ಕಂಪ್ಯೂಟರ್ ನ ಸಹಾಯದಿಂದ  ಚಿತ್ರವನ್ನಾಗಿ ಪರಿವರ್ತಿಸಲಾಗುತ್ತದೆ. ಆ ಚಿತ್ರವು , ವೈದ್ಯರಿಗೆ ಬ್ರೂಣದ ಬೆಳವಣಿಗೆ ಹಾಗು ಬ್ರೂಣದಲ್ಲಿ ಯಾವುದಾದರೂ ಅಸಹಜತೆ ಇದ್ದಲ್ಲಿ , ಅದರ ಬಗ್ಗೆ ಮಾಹಿತಿಯನ್ನು ನೀಡುತ್ತದೆ.

ಎರಡನೆಯ ಟ್ರಿಮಿಸ್ಟರ್ ಅಲ್ಟ್ರಾಸೌಂಡ್  – ಅನೋಮಲಿ ಸ್ಕ್ಯಾನ್

ಎರಡನೆಯ ಟ್ರಿಮಿಸ್ಟರ್ನಲ್ಲಿ, ಅನೋಮಲಿ ಸ್ಕ್ಯಾನ್(ಅನಾಟಮಿ ಸ್ಕ್ಯಾನ್) ಬಹಳ ಮುಖ್ಯವಾದ ಸ್ಕ್ಯಾನ್ ಆಗಿರುತ್ತದೆ.

ಅನಾಟಮಿ ಸ್ಕ್ಯಾನ್ ಅಥವಾ ಅನಾಟಮಿ ಅಲ್ಟ್ರಾಸೌಂಡ್ , ಗರ್ಭಧಾರಣೆಯ  18 – 22 ವಾರಗಳ ಅವಧಿಯಲ್ಲಿ ಮಾಡಲಾಗುತ್ತದೆ. ಈ ಸ್ಕ್ಯಾನ್ನಿಂದ , ಎಲ್ಲಾ ಪ್ರಮುಖ ಅಂಗಗಳ ಬೆಳವಣಿಗೆಯನ್ನು ತಿಳಿದುಕೊಳ್ಳಬಹುದಾಗಿದೆ ಹಾಗು ಯಾವುದಾದರು ಅಸಹಜತೆಯನ್ನು ಸರಿಪಡಿಸು ಕ್ರಮವನ್ನು ತೆಗೆದುಕೊಳ್ಳಲು ಸಹಾಯಕವಾಗಲಿದೆ .  ಹೆಸರೇ ಸೂಚಿಸುವಂತೆ , ಈ ಸ್ಕ್ಯಾನ್ ಮಗುವಿನ ದೇಹ ರಚನೆಯ ಮೌಲ್ಯಮಾಪನ ಮಾಡುತ್ತದೆ, ಮತ್ತು ಪ್ರತಿಯೊಂದು ಪ್ರಮುಖ ಅಂಗಾಂಗದ ಬೆಳೆವಣಿಗೆಯ ಬಗ್ಗೆ ಮಾಹಿತಿ ನೀಡುತ್ತದೆ.

ಅನೋಮಾಲಿ ಸ್ಕ್ಯಾನ್ ಕೆಳಗಿರುವ ಉದ್ದೇಶಗಳನ್ನು ಪೂರ್ಣಗೊಳಿಸುತ್ತದೆ.

  • ಬ್ರೂಣದ ಚಲನೆಯನ್ನು ತಪಾಸಣೆ ಮಾಡುತ್ತದೆ.

  • ಬ್ರೂಣದ ಬೆಳವಣಿಗೆಯನ್ನು ತಪಾಸಣೆ ಮಾಡುತ್ತದೆ.

  • ಎಲ್ಲಾ ರೀತಿಯ ಒಳ ಅಂಗಾಂಗಗಳ ಬೆಳವಣಿಗೆ, ಹೃದಯ ಹಾಗು ಅದರ ಕೋಣೆಗಳು , ಮೂತ್ರಪಿಂಡ , ಸ್ಪೈನ್ , ಎಲ್ಲದರ ತಪಾಸಣೆ ನಡೆಸುತ್ತದೆ.

  • ಗರ್ಭಾಶಯದಲ್ಲಿ ಭ್ರೂಣದ ಮೃದುವಾದ ಚಲನೆಯನ್ನು ಖಚಿತಪಡಿಸಿಕೊಳ್ಳಲು ಆಮ್ನಿಯೋಟಿಕ್ ದ್ರವದ ಪ್ರಮಾಣವನ್ನು ಅಳೆಯುತ್ತದೆ

  • ಜರಾಯು(ಪ್ಲಾಸೆಂಟಾ) ಹಾಗು ಕರುಳು ಬಳ್ಳಿಯ ಸ್ಥಾನವನ್ನು ಕಂಡುಹಿಡಿಯುತ್ತದೆ.

  • ಸ್ಪಷ್ಟವಾಗಿ ಕ್ರೋಮೋಸೋಮಲ್ ಅಸಹಜತೆಗಳ ಯಾವುದೇ ಪಾಯಿಂಟರ್ಗಳಿಗಾಗಿ ಸ್ಕ್ಯಾನ್ ಮಾಡುತ್ತದೆ

  • ಗರ್ಭಕಂಠವನ್ನು ತಪಾಸಣೆ ಮಾಡುತ್ತದೆ ಹಾಗು ಜನನದ ಕಾಲುವೆಯನ್ನು ಅಳೆಯುತ್ತದೆ . ಇದು ಸಹಜ ಹೆರಿಗೆಗೆ ಸಹಾಯವಾಗುತ್ತದೆ.

ಈ ಎಲ್ಲದರ ಜೊತೆಗೆ ,ವೈದ್ಯರು ಕೆಳಕಂಡ ಅಂಶಗಳಿಗಾಗಿ ಕೂಡ  ತಪಾಸಣೆ ಮಾಡುತ್ತಾರೆ :

  • ಗರ್ಭದಲ್ಲಿ ಇರುವ ಮಕ್ಕಳ ಸಂಖ್ಯೆ . ಕೆಲವೊಮ್ಮೆ ಇದು  ೨೦ನೇ ವಾರದಲ್ಲಿ ತಿಳಿಯುತ್ತದೆ.

  • ಮಗುವಿನ ತಲೆಯ ರಚನೆ ಹಾಗು ಆಕಾರ

  • ಸೀಳು ತುಟಿಗಳಿಗಾಗಿ ತಪಾಸಣೆ

  • ಮಗುವಿನ ಅಂಗಗಳು, ಕೈ , ಕಾಲುಗಲ್ಲಿರುವ ಬೆರಳುಗಳ ಸಂಖ್ಯೆಗಳ ಎಣಿಕೆ

ಕೆಲವೊಮ್ಮೆ ಮಗುವಿನ ಸ್ಥಾನ , ಸ್ಕ್ಯಾನಿಂಗ್ಗೆ ಪೂರಕವಾಗಿರುವುದಿಲ್ಲ. ಅಂತ ಸಂದರ್ಭದಲ್ಲಿ , ಸೋನೋಗ್ರಾಫರ್ ಸ್ಕ್ಯಾನಿಂಗ್ಗಾಗಿ ಮತ್ತೊಂದು ಸಮಯವನ್ನು ನಿಗದಿ ಪಡಿಸುತ್ತಾರೆ. ಆದರೆ ವಿಶೇಷವಾಗಿ ನಿರ್ಣಾಯಕ ಮಗುವಿನ ಅಲ್ಟ್ರಾಸೌಂಡ್ನೊಂದಿಗೆ ಯಾವುದೇ ಅವಕಾಶಗಳನ್ನು ತೆಗೆದುಕೊಳ್ಳುವುದಿಲ್ಲ, ಯಾವುದೇ ಕಾರಣಕ್ಕೂ ಇದನ್ನು ತಪ್ಪಿಸುವುದಿಲ್ಲ.

ಈ ಸಮಯದಲ್ಲಿ , ಮಗುವಿನ ಲಿಂಗವನ್ನು ಪತ್ತೆಹಚ್ಚ ಬಹುದು , ಆದರೆ ಲಿಂಗ ಪತ್ತೆಹಚ್ಚುವುದನ್ನು , ಭಾರತದಲ್ಲಿ ನಿಷೇದಿಸಲಾಗಿದೆ. ಭಾರತದಲ್ಲಿ ಹೆಣ್ಣು ಬ್ರೂಣದ ಹತ್ಯೆ ಹೆಚ್ಚಿರುವುದರಿಂದ , ಪ್ರತಿಯೊಬ್ಬ ಸೋನೋಗ್ರಾಫರ್ , ಸ್ಕ್ಯಾನಿಂಗ್ ಮಾಡುವ ಮೊದಲು ನಿಮ್ಮಿಂದ ಸಹಿಮಾಡಿದ ಒಪ್ಪಂದವನ್ನು ತೆಗೆದು ಕೊಳ್ಳುತ್ತಾರೆ. ಇದರಲ್ಲಿ , ನೀವು ಎಂದೂ ಗರ್ಭದಲ್ಲಿರುವ ಮಗುವಿನ ಲಿಂಗವನ್ನು ಕೇಳುವುದಿಲ್ಲವೆಂಬ ಒಪ್ಪಂದಕ್ಕೆ ಸಹಿಯಾಕಿರುತ್ತೀರಿ.

ಎರಡನೇ ಟ್ರಿಮಿಸ್ಟರ್ನಲ್ಲಿ ಮಾಡುವ ಇತರೆ ಸ್ಕ್ಯಾನ್ನ್ಗಳು:

ಈ ಅನಾಟಮಿ ಸ್ಕ್ಯಾನ್ನಲ್ಲಿ , ಯಾವುದಾದರು ಅಸಹಜತೆ ಕಂಡುಬಂದಲ್ಲಿ, ವೈದ್ಯರು ಒಂದು ಅಥವಾ ಹೆಚ್ಚಿನ ಸ್ಕ್ಯಾನ್ ಮಾಡಿಸಲು ಸೂಚಿಸಬಹುದು. ಆ ವೇಳೆ ನೀವು ಗಾಬರಿಯಾಗದೆ , ತಾಳ್ಮೆಯಿಂದ ಇರುವುದು ಉತ್ತಮ. ನಿಮ್ಮ ಎಲ್ಲ ಆಯ್ಕೆಗಳನ್ನು ವೈದ್ಯರೊಂದಿಗೆ ಚರ್ಚಿಸಿ ಮತ್ತು ಸಲಹೆಯ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ

 

#babychakrakannada

A

gallery
send-btn

Related Topics for you