3 Jun 2019 | 1 min Read
Medically reviewed by
Author | Articles
ಮೂರನೇ ಟ್ರಿಮಿಸ್ಟರ್ನಲ್ಲಿ ಮಾಡುವ ಸ್ಕ್ಯಾನ್ಗಳು
ಇಮೇಜಿಂಗ್ ತಪಾಸಣೆಗಳನ್ನು 27 – 37 ವಾರಗಳಲ್ಲಿ ಅಥವಾ ಗರ್ಭಧಾರಣೆಯು ಮುಗಿಯುವವರೆಗೆ ಮಾಡಲಾಗುತ್ತದೆ. ನಿಮ್ಮ ಮಗುವಿನ ಮತ್ತು ನಿಮ್ಮ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ನಿಮಗೆ ಈ ಪರೀಕ್ಷೆಗೆ ಒಳಗಾಗಲು ನಿಮ್ಮ ಸ್ತ್ರೀರೋಗತಜ್ಞರು ಶಿಫಾರಸು ಮಾಡುತ್ತಾರೆ.. ಈ ತಪಾಸಣೆಗಳು ನಿಮಗೆ ಹಾಗು ನಿಮ್ಮ ಮಗುವಿಗೆ ಸುರಕ್ಷಿತವಾದುದು ಹಾಗು ಅನಿವಾರ್ಯ ಕೂಡ.
ಮೂರನೆಯ ಟ್ರಿಮಿಸ್ಟರ್ನಲ್ಲಿ ಮಾಡಬೇಕಾದ ಮುಖ್ಯ ಸ್ಕ್ಯಾನ್ನ್ಗಳ ಪಟ್ಟಿಯನ್ನು ಕೆಳಗೆ ನೀಡಲಾಗಿದೆ.
ಅಲ್ಟ್ರಾಸೌಂಡ್ ತಪಾಸಣೆಗಳು
ಮೂರನೆಯ ಟ್ರಿಮಿಸ್ಟರ್ ನ ಅಲ್ಟ್ರಾಸೌಂಡ್ ಒಂದು ತಪಾಸಣೆಯಾಗಿದ್ದು , ಅದರಲ್ಲಿ ಅಧಿಕ ಆವರ್ತನದ ಶಬ್ದ ಅಲೆಗಳನ್ನು ಬಳಸಿ , ಬೆಳೆಯುತ್ತಿರುವ ಮಗುವಿನ ಹಾಗು ತಾಯಿಯ ಅಂಗಾಂಗಗಳ ಚಿತ್ರಣವನ್ನು ನೀಡಲಾಗುತ್ತದೆ. ಅಲ್ಟ್ರಾಸೌಂಡ್ ತಪಾಸಣೆಯ ಸರಾಸರಿ ಸಂಖ್ಯೆ , ಪ್ರತಿ ಗರ್ಭಧಾರಣೆಯ ಮೇಲೆ ಅವಲಂಬಿಸುತ್ತದೆ. ಒಂದು ಅಲ್ಟ್ರಾಸೌಂಡ್ ಅಥವಾ ಸೋನೋಗ್ರಾಮ್ , ಬ್ರೂಣದ ಬೆಳವಣಿಗೆಯನ್ನು ಮಾನಿಟರ್ ಮಾಡಲು ಸಹಾಯ ಮಾಡುತ್ತದೆ ಹಾಗು ಯಾವುದೇ ರೀತಿಯ ತೊಂದರೆ ಬಗ್ಗೆಯೂ ತಿಳಿಸಿಕೊಡುತ್ತದೆ. ಸೋನೋಗ್ರಾಮನ್ನು , ಮಗುವಿನ ಬೆಳವಣಿಗೆಯನ್ನು ಅಳಿಯುವ ಉಪಕರಣವನ್ನಾಗಿಯೂ ಬಳಸುತ್ತಾರೆ. ಆದ್ದರಿಂದ ಕೆಲವೊಮ್ಮೆ ಅದನ್ನು ಗ್ರೋತ್ ಸ್ಕ್ಯಾನ್ ಅಂತಲೂ ಸಹಾ ಕರೆಯುತ್ತಾರೆ. ಅದು ಒಳಗಿರುವ ಮಗುವಿನ ಕ್ರೌನ್ ರಂಪ್ ಉದ್ದವನ್ನು, ತಲೆಯ ಸುತ್ತಳತೆಯನ್ನು ಇತ್ಯಾದಿಗಳನ್ನು ಅಳಿಯುತ್ತದೆ.
ಎಲೆಕ್ಟ್ರಾನಿಕ್ ಬ್ರೂಣದ ಹೃದಯದ ಬಡಿತ ಮಾನಿಟರಿಂಗ್
ಎಲೆಕ್ಟ್ರಾನಿಕ್ ಬ್ರೂಣದ ಹೃದಯದ ಬಡಿತ ಮಾನಿಟರಿಂಗ್, ಮೂರನೆಯ ಟ್ರಿಮಿಸ್ಟರ್ ನಲ್ಲಿ ಮಾಡುವ ಸ್ಕ್ಯಾನ್, ಇದು ಮಗುವು ಆರೋಗ್ಯವಾಗಿರುವುದನ್ನು ಖಚಿತ ಪಡಿಸುತ್ತದೆ. ಇದು ಹೃದಯದ ಬಡಿತ ಮತ್ತು ಮಗುವಿನ ಹೃದಯದ ಬೀಟಿಂಗ್ ಪರಿಶೀಲಿಸುತ್ತದೆ. ಈ ರೀತಿಯ ತಪಾಸಣೆಯನ್ನು ಗರ್ಭಧಾರಣೆಯ ವೇಳೆ, ಪ್ರಸವ ಹಾಗು ಹೆರಿಗೆಯ ವೇಳೆ ಮಾಡಲಾಗುತ್ತದೆ. ಇದನ್ನು ಗರ್ಭಧಾರಣೆಯ ೨೦ವಾರಗಳು ಕಳೆದ ನಂತರ ಪ್ರಸವಪೂರ್ವ ತಪಾಸಣೆ ಸಮಯದಲ್ಲಿ, ಎಂದಾದರೂ ಮಾಡಿಸಬಹುದು.
ಒತ್ತಡವಿಲ್ಲದ ಪರೀಕ್ಷೆ
ಮೂರನೆಯ ಟ್ರಿಮಿಸ್ಟರ್ ನಲ್ಲಿ ಮಾಡುವ ಸ್ಕ್ಯಾನ್ ಗಳಲ್ಲಿ , ಒತ್ತಡವಿಲ್ಲದ ಪರೀಕ್ಷೆ (ಎನ್ ಎಸ್ ಟಿ ) ಕೂಡ ಒಂದು .ಇದನ್ನು ಗರ್ಭಧಾರಣೆಯಾದ 28ವಾರ ಕಳೆದ ನಂತರ ಮಾಡಲಾಗುತ್ತದೆ. ಈ ತಪಾಸಣೆಯು ಮಗುವು ಸರಿಯಾದ ಪ್ರಮಾಣದಲ್ಲಿ ಆಮ್ಲಜನಕವನ್ನು ಪಡೆಯುತ್ತಿದೆಯೋ , ಇಲ್ಲವೋ ಹಾಗೆಯೇ ಬ್ರೂಣದ ಚಟುವಟಿಕೆ ಹಾಗು ಹೃದಯ ಬಡಿತಗಳ ಬಗ್ಗೆ ತಿಳಿಸುತ್ತದೆ. ಈ ಎನ್ ಎಸ್ ಟಿ ಮಗುವಿನ ಹೃದಯದ ಬಡಿತವನ್ನು ಅದು ಚಲಿಸುವಾಗ ಅಳೆಯಲು ತಾಯಿಯ ಹೊಟ್ಟೆಗೆ ಕಟ್ಟಿರುವ ಫೇಟಲ್ ಮಾನಿಟರ್ ಅನ್ನು ಒಳಗೊಂಡಿದೆ. ಇದನ್ನು ಒತ್ತಡವಿಲ್ಲದ ಪರೀಕ್ಷೆಯೆಂದು ಕರೆಯಲಾಗುತ್ತದೆ , ಏಕೆಂದರೆ ಈ ತಪಾಸಣೆ ಮಾಡುವ ವೇಳೆ , ಬ್ರೂಣದ ಮೇಲೆ ಯಾವ ರೀತಿಯ ಒತ್ತಡವನ್ನೂ ಹೇರುವುದಿಲ್ಲ. ಕೆಲವೊಮ್ಮೆ , ಮಗುವಿನ ಚಲನೆ ತಿಳಿಯುವುದಿಲ್ಲ , ಆ ಸಂದರ್ಭದಲ್ಲಿ ಈ ತಪಾಸಣೆಯನ್ನು ಮಾಡಲಾಗುತ್ತದೆ. ನಿಗದಿತ ಸಮಯಕ್ಕೆ ಹೆರಿಗೆ ಆಗದಿರುವಾಗ , ಜರಾಯು(ಪ್ಲಾಸೆಂಟಾ) ಅರೋಗ್ಯ ಹಾಗು ಸರಿಯಾಗಿ ಕಾರ್ಯ ನಿರ್ವಹಿಸುತ್ತಿದೆಯೋ , ಇಲ್ಲವೋ ಎಂಬುದನ್ನು ತಿಳಿಯಲು , ವೈದ್ಯರು ಈ ತಪಾಸಣೆಯನ್ನು ಮಾಡಿಸಲು ಸೂಚಿಸುತ್ತಾರೆ. ಎನ್ ಎಸ್ ಟಿ ಯು ತಾಯಿ ಹಾಗು ಮಗುವಿಗೆ ಯಾವ ರೀತಿಯ ಹಾನಿಯನ್ನೂ ಮಾಡುವುದಿಲ್ಲ.
ಕಾಂಟ್ರಾಕ್ಷನ್ ಸ್ಟ್ರೆಸ್ ಪರೀಕ್ಷೆ
ಸಂಕೋಚನದ ಒತ್ತಡ ಪರೀಕ್ಷೆ ( ಸಿ ಎಸ್ ಟಿ ) ,ಎನ್ ಎಸ್ ಟಿ ಯಾ ತರಹ ಬ್ರೂಣದ ಹೃದಯ ಬಡಿತವನ್ನು ಅಳಿಯುತ್ತದೆ. ಈ ಪರೀಕ್ಷೆಯಲ್ಲಿ , ಗರ್ಭಾಶಯದ ಸಂಕೋಚನದ ಮೂಲಕ ಹೃದಯ ಬಡಿತವನ್ನು ಅಳಿಯಲಾಗುತ್ತದೆ. ಇದನ್ನು ಒತ್ತಡದ ಪರೀಕ್ಷೆ ಅಥವಾ ಆಕ್ಸಿಟೋಸಿನ್ ಸವಾಲು ಪರೀಕ್ಷೆ ಎಂದು ಕರಿಯಲಾಗುತ್ತದೆ. ಸಾಮಾನ್ಯವಾಗಿ , ಸಂಕೋಚನದ ಸಂದರ್ಭದಲ್ಲಿ, ಜರಾಯುವಿನಲ್ಲಿ(ಪ್ಲಾಸೆಂಟಾ) ರಕ್ತದ ಹರಿಯುವಿಕೆ ಕಡಿಮೆಯಾಗುತ್ತದೆ. ಜರಾಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೆ , ಮಗುವಿನ ಹೃದಯ ಬಡಿತ ಅಚಲವಾಗಿರುತ್ತದೆ. ಆದರೆ ಜರಾಯು ಸರಿಯಾಗಿ ಕಾರ್ಯನಿರ್ವಹಣೆ ಮಾಡದಿದ್ದಲ್ಲಿ, ಪ್ರತಿ ಸಂಕೋಚನದ ನಂತರ , ಮಗುವಿನ ಹೃದಯ ಬಡಿತ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ. ಈ ಪರೀಕ್ಷೆಯನ್ನು ಎನ್ಎಸ್ಟಿ ಅಥವಾ ಬಯೋಫಿಸಿಕಲ್ ಪ್ರೊಫೈಲ್ನಂತೆ ಸಾಮಾನ್ಯವಾಗಿ ನಿರ್ವಹಿಸುವುದಿಲ್ಲ. ಯಾವುದಾದರು ಅಸ್ವಸ್ಥತೆ ಕಂಡುಬಂದಲ್ಲಿ ಮಾತ್ರ , ವೈದ್ಯರು ಈ ಪರೀಕ್ಷೆಯನ್ನು ಮಾಡಿಸಲು ಸೂಚಿಸುತ್ತಾರೆ.
ಆಮ್ನಿಯೋಸೆಂಟೆಸಿಸ್
ಆಮ್ನಿಯೋಸೆಂಟೆಸಿಸ್ ಎಂಬ ವಿಧಾನದಲ್ಲಿ , ಗರ್ಭಶಯದಲ್ಲಿರುವ ಆಮ್ನಿಯೋಟಿಕ್ ದ್ರವದ ಮಾದರಿಯನ್ನು ಸೂಜಿಯ ಮೂಲಕ ಸಂಗ್ರಹಿಸಲಾಗುತ್ತದೆ. ಈ ಪರೀಕ್ಷೆಯನ್ನು, ಸಾಮಾನ್ಯವಾಗಿ ಮಗುವಿನಲ್ಲಿ ಯಾವುದಾದರು ಅನುವಂಶಿಕ ಅಸ್ವಸ್ಥತೆ ಅಥವಾ ಕ್ರೋಮೋಸೋಮಲ್ ಅಸಹಜತೆಯನ್ನು ಪತ್ತೆಹಚ್ಚಲು ಮಾಡುತ್ತಾರೆ. ಉದಾಹರಣೆಗೆ , ಡೌನ್’ಸ್ ಸಿಂಡ್ರೋಮ್. ಸೂಜಿ ಗರ್ಭವನ್ನು ಸುರಕ್ಷಿತವಾಗಿ ಪ್ರವೇಶಿಸುವಂತೆ ಮಾಡಲು ಸಾಮಾನ್ಯವಾಗಿ ಅಲ್ಟ್ರಾಸೌಂಡ್ ಮಾರ್ಗದರ್ಶನದಲ್ಲಿ ಇದನ್ನು ಮಾಡಲಾಗುತ್ತದೆ.
ನಿಮ್ಮ ಆರೋಗ್ಯದ ಸ್ಥಿತಿ ಹಾಗು ಗರ್ಭಧಾರಣೆಯ ಪ್ರಗತಿಯನ್ನು ಗಮನದಲ್ಲಿ ಇಟ್ಟುಕೊಂಡು , ಮೂರನೆಯ ಟ್ರಿಮಿಸ್ಟರ್ನಲ್ಲಿ , ನೀವು ಮಾಡಿಸಬೇಕಾದ ಸ್ಕ್ಯಾನ್ನ್ಗಳು ಹಾಗು ಇತರೇ ರೀತಿಯ ರಕ್ತ ತಪಾಸಣೆಯ ಬಗ್ಗೆ ತಿಳಿಸಿ ಕೊಡುವ ಸರಿಯಾದ ವ್ಯಕ್ತಿ ಎಂದರೆ , ನಿಮ್ಮ ಸ್ತ್ರೀರೋಗತಜ್ಞರು.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.