ಗರ್ಭಾವಸ್ಥೆಯಲ್ಲಿ ಮಲಗುವ ಸರಿಯಾದ ಭಂಗಿ - ಸ್ವಲ್ಪ ನಿದ್ದೆ ಮಾಡಲು ಈ ಸಲಹೆಯನ್ನು ಪಡೆಯಿರಿ!

ಗರ್ಭಾವಸ್ಥೆಯಲ್ಲಿ ಮಲಗುವ ಸರಿಯಾದ ಭಂಗಿ - ಸ್ವಲ್ಪ ನಿದ್ದೆ ಮಾಡಲು ಈ ಸಲಹೆಯನ್ನು ಪಡೆಯಿರಿ!

 

ನಿಮ್ಮ ಮಗು ದೊಡ್ಡದಾಗಿ ಬೆಳೆಯುತ್ತಿದ್ದಂತೆ, ಉತ್ತಮ ನಿದ್ರೆ ಪಡೆಯಲು ಸರಿಯಾದ ಭಂಗಿ ಕಂಡುಕೊಳ್ಳುವುದು ನಿಮಗೆ ಕಷ್ಟವಾಗಬಹುದು! ನಿಮ್ಮ ಮುಂದಕ್ಕೆ ನಿಮ್ಮ ಹೊಟ್ಟೆ ಚಾಚುಲು ಪ್ರಾರಂಭವಾಗುತ್ತದೆ, ಆದರಿಂದ ನೀವು ನಿಮ್ಮ ಹೊಟ್ಟೆಯ ಮೇಲೆ  ನಿದ್ರೆ ಮಾಡುವ ರೀತಿಯಲ್ಲಿಯೇ ಇನ್ನು ಮುಂದೆ ಮಲಗುವ ಆಯ್ಕೆ ನಿಮಗೆ ಇರುವುದಿಲ್ಲ!


ನಿಮ್ಮ ಮನಸ್ಸಿನಲ್ಲಿರುವುದು ಇಷ್ಟೇ - ಬೆಳೆಯುತ್ತಿರುವ ಮಗುವಿಗೆ ಹಾನಿಯಾಗದಂತೆ ಗರ್ಭಾವಸ್ಥೆಯಲ್ಲಿ ಆರಾಮವಾಗಿ ನಿದ್ದೆ ಮಾಡಲು ಉತ್ತಮ ಮಾರ್ಗವಿದೆಯೇ?


ಗರ್ಭಾವಸ್ಥೆಯಲ್ಲಿ ನಿದ್ದೆ ಮಾಡುವ ಅತ್ಯುತ್ತಮ ರೀತಿ ಯಾವುದು?


ನಿಮಗೆ ಸುರಕ್ಷಿತ ಮತ್ತು ಉತ್ತಮವಾದ ಮಲಗುವ ರೀತಿಯೆಂದರೆ ನಿಮ್ಮ ಎಡಭಾಗಕ್ಕೆ ಮಲಗುವುದು. ಈ ಸ್ಥಾನವು ನಿಮ್ಮ ಮಗುವಿಗೆ ರಕ್ತ ಮತ್ತು ಪೋಷಕಾಂಶಗಳನ್ನು ಪೂರೈಸುವ ಜರಾಯುವಿಗೆ(ಪ್ಲಾಸೆಂಟಾಗೆ) ಸರಿಯಾದ ರಕ್ತದ ಹರಿವನ್ನು ಖಾತ್ರಿಗೊಳಿಸುತ್ತದೆ. ಇದು ನಿಮ್ಮ ಪಿತ್ತಜನಕಾಂಗಕ್ಕೂ ಒತ್ತಡವನ್ನು ಕಡಿಮೆ ಮಾಡುತ್ತದೆ. ನಿಮ್ಮ ಎಡ ಭಾಗಕ್ಕೆ ಮಲಗಿ, ನಿಮ್ಮ ಮೊಣಕಾಲುಗಳ ಮಧ್ಯೆ ಮತ್ತು ನಿಮ್ಮ ಹೊಟ್ಟೆಯ ಅಡಿಯಲ್ಲಿ ಒಂದು ಮೆತ್ತನೆಯ ದಿಂಬನ್ನು  ಇರಿಸಿಕೊಳ್ಳಿ.


 

ನಿಮ್ಮ ಬೆನ್ನ ಮೇಲೆ ಅಥವಾ ಬಲಭಾಗದಲ್ಲಿ ಮಲಗುವುದು ಏಕೆ ಅಪಾಯಕಾರಿ?


ತಮ್ಮ ಬೆನ್ನಿನಲ್ಲಿ ಅಥವಾ ಬಲಭಾಗದಲ್ಲಿ ನಿದ್ದೆ ಮಾಡುವ ಗರ್ಭಿಣಿ ಮಹಿಳೆಯರಿಗೆ ಸತ್ತಮಗು ಹುಟ್ಟುವ ಹೆಚ್ಚಿನ ಅವಕಾಶವಿದೆ ಎಂದು ಅಧ್ಯಯನಗಳು ಹೇಳುತ್ತವೆ. ನಿಮ್ಮ ಬೆನ್ನಿನ ಮೇಲೆ ಮಲಗುವುದರಿಂದ, ಕೆಳಮಟ್ಟದ ವೆನಾ ಕ್ಯಾವದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ, ಅದು ನಿಮ್ಮ ಹೃದಯಕ್ಕೆ ರಕ್ತವನ್ನು ಹಿಂದಿರುಗಿಸುವ ದೊಡ್ಡ ರಕ್ತನಾಳ. ಬಲಭಾಗದಲ್ಲಿ ಮಲಗುವುದು ಮಹಾಪಧಮನಿಯ ಮೇಲೆ ಒತ್ತಡವನ್ನುಂಟುಮಾಡುತ್ತದೆ, ಅತಿ ದೊಡ್ಡ ಅಪಧಮನಿಯು ನಿಮ್ಮ ಹೃದಯದಿಂದ ನಿಮ್ಮ ದೇಹಕ್ಕೆ ಆಮ್ಲಜನಕ ಸಮೃದ್ಧ ರಕ್ತವನ್ನು ಪೂರೈಸುತ್ತದೆ. ಇದರಿಂದಾಗಿ ಮಗುವನ್ನು ಪೋಷಿಸುವ ಜರಾಯುವಿಗೆ(ಪ್ಲಾಸೆಂಟಾಗೆ)  ರಕ್ತ ಮತ್ತು ಪೋಷಕಾಂಶಗಳ ಪೂರೈಕೆಯಲ್ಲಿ ಪರಿಣಾಮ ಬೀರಬಹುದು.


ಗರ್ಭಾವಸ್ಥೆಯಲ್ಲಿ ಉತ್ತಮ ನಿದ್ರೆಗಾಗಿ ಸಲಹೆಗಳು:


  • ತಿಂದ ತಕ್ಷಣವೇ ಮಲಗಬಾರದು. ತಿನ್ನುವುದಕ್ಕೂ ಮತ್ತು ಮಲಗುವುದಕ್ಕೂ 2 ಗಂಟೆ ಅಂತರವನ್ನು ಕಾಪಾಡಿಕೊಳ್ಳಿ.

  • ನಿಮಗೆ ಎದೆಯುರಿಯ ತೊಂದರೆ ಏನಾದರು ಕಂಡುಬಂದರೆ, ಮಲಗುವಾಗ ನಿಮ್ಮ ತಲೆಯನ್ನು ಎತ್ತರಿಸಿ, ನಿಮ್ಮ ಕುತ್ತಿಗೆಯ ಅಡಿಯಲ್ಲಿ ಹೆಚ್ಚುವರಿ ದಿಂಬುಗಳಿಂದ ಎತ್ತರಿಸಿ ಅಥವಾ ಹಾಸಿಗೆ ಮೇಲಕ್ಕೆ ಮಾಡಿ ಬಳಸಿ.

  • ನೀವು ಉಸಿರಾಟದ ಕೊರತೆಯನ್ನು ಅನುಭವಿಸಿದರೆ, ನಿಮ್ಮ ಕೆಳಗೆ ಒಂದು ಮೆತ್ತನೆಯ ದಿಂಬನ್ನು ಇರಿಸಬಹುದು.

  • ನಿಮ್ಮ ಬೆನ್ನನ್ನು ಬೆಂಬಲಿಸುವ ಗರ್ಭಧಾರಣೆಯ ದಿಂಬು ಖರೀದಿ ಮಾಡಬಹುದು.

  • ನಿಮ್ಮ ಬೆನ್ನಿನ ಮೇಲೆ ತಿರುಗಿದರೆ ಗಾಬರಿಯಾಗಬೇಡಿ. ಉಸಿರಾಟದ ತೊಂದರೆಯಿಂದಾಗಿ ನೀವು ತಕ್ಷಣ ಎಚ್ಚರಗೊಳ್ಳಬಹುದು. ನಿಮಗೇನಾದರೂ ಹಾಗೆ ಆಗಿದ್ದರೆ, ನಿಮ್ಮಷ್ಟಕ್ಕೇ ಸ್ಥಾನ ಬದಲಾವಣೆ ಮಾಡಿಕೊಳ್ಳಿ.

ಇಮೇಜ್ ಮೂಲಗಳು: ಮಿಬ್ಸ್ಕೇಪ್, ವೆಬ್ಎಮ್ಡಿ


ಹಕ್ಕುತ್ಯಾಗ: ಈ ಮಾಹಿತಿಯನ್ನು ಬೇಬಿಚಕ್ರ ಬಳಕೆದಾರರಿಗೆ  ತಜ್ಞರು ಒದಗಿಸಿದ್ದಾರೆ.

 


Pregnancy

Read More
ಕನ್ನಡ

Leave a Comment

Recommended Articles