• Home  /  
 • Learn  /  
 • ಗರ್ಭಾವಸ್ಥೆಯಲ್ಲಿ ಪ್ರಯಾಣ ಮಾಡಲು ಯಾವಾಗ ಸುರಕ್ಷಿತ?
ಗರ್ಭಾವಸ್ಥೆಯಲ್ಲಿ ಪ್ರಯಾಣ ಮಾಡಲು ಯಾವಾಗ ಸುರಕ್ಷಿತ?

ಗರ್ಭಾವಸ್ಥೆಯಲ್ಲಿ ಪ್ರಯಾಣ ಮಾಡಲು ಯಾವಾಗ ಸುರಕ್ಷಿತ?

8 Jun 2019 | 1 min Read

Medically reviewed by

Author | Articles

ಗರ್ಭಾವಸ್ಥೆಯಲ್ಲಿ ಪ್ರಯಾಣಿಸಲು ಯೋಚನೆ ಮಾಡಿದ್ದೀರಾ? ನೀವು ಸಂಪೂರ್ಣವಾಗಿ ತಿಳಿಯಬೇಕಾದ ವಿಷಯಗಳು ಇಲ್ಲಿವೆ!

 

ಗರ್ಭವಾಸ್ಥೆಯು 40 ವಾರಗಳ ದೀರ್ಘ ಹಂತವಾಗಿದೆ, ಇದರ ನಂತರ ಪುರ್ಪೇರಿಯಂ (ಹೆರಿಗೆಯ ನಂತರದ 6 ವಾರಗಳು). ಇಂದಿನ ಜಗತ್ತಿನಲ್ಲಿ ಈ ದೀರ್ಘ ಕಾಲದಲ್ಲಿ ಎಲ್ಲಿಗಾದರೂ ಪ್ರಯಾಣಿಸದಿರುವುದು ಕಷ್ಟಕರವಾಗಿದೆ. ಹೀಗಾಗಿ, ನೀವು ಗರ್ಭಿಣಿಯಾಗಿದ್ದಾಗ ಸುರಕ್ಷಿತವಾಗಿರಲು ಮತ್ತು ಪ್ರಯಾಣಿಸುವುದನ್ನು ಆನಂದಿಸಲು ಸಹಾಯ ಮಾಡುವಂತಹ ಕೆಲವು ಮಾಹಿತಿ ಇಲ್ಲಿದೆ.

 

ನನಗೆ ಗರ್ಭಾವಸ್ಥೆಯಲ್ಲಿ ಪ್ರಯಾಣಿಸುವುದು ಸುರಕ್ಷಿತವೇ?

 

ಗರ್ಭಾವಸ್ಥೆಯಲ್ಲಿ ನೀವು ಪ್ರಯಾಣಿಸಬಹುದೆ ಅಥವಾ ಇಲ್ಲವೇ ಎಂಬುದು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ಗರ್ಭಾವಸ್ಥೆಯಲ್ಲಿ ನೀವು ಯಾವುದೇ ಗುರುತಿಸಲ್ಪಟ್ಟ ಕಾಳಜಿ ಅಥವಾ ತೊಡಕುಗಳನ್ನು ಹೊಂದಿರದಿದ್ದಲ್ಲಿ, ಪ್ರಯಾಣದ ವಿವಿಧ ಮಾರ್ಗಗಳನ್ನು ನೀವು ಬಳಸಬಹುದು. ಎರಡನೇ ತ್ರೈಮಾಸಿಕದಲ್ಲಿ ಪ್ರಯಾಣವು ಅತ್ಯಂತ ಸೂಕ್ತವಾಗಿದೆ. ಅಷ್ಟು ಹೊತ್ತಿಗೆ, ನಿಮಗೆ ಮೊದಲ ತ್ರೈಮಾಸಿಕದ ನಿಮ್ಮ ಬೆಳಿಗ್ಗಿನ ಸುಸ್ತು ಹೆಚ್ಚಾಗಿರುವುದಿಲ್ಲ ಮತ್ತು ಮೂರನೇ ತ್ರೈಮಾಸಿಕದಂತೆ ಸುಲಭವಾಗಿ ಆಯಾಸಕ್ಕೆ ಒಳಗಾಗುವುದಿಲ್ಲ. ಅಲ್ಲದೆ, ಬಹುತೇಕ ಮಗುವಿನ ಪ್ರಮುಖ ಅಂಗಗಳು ಈಗ ರೂಪುಗೊಂಡಿರುತ್ತವೆ.

 

ಗರ್ಭಾವಸ್ಥೆಯಲ್ಲಿ ನನ್ನ ವಾಯುಯಾನದ ಸಂದರ್ಭದಲ್ಲಿ ನಾನು ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು?

 

ಗರ್ಭಿಣಿಯಾಗಿದ್ದಾಗ ನೀವು ವಿಮಾನದಲ್ಲಿ ಪ್ರಯಾಣ  ಮಾಡಲು ಸುರಕ್ಷಿತವಾಗಿದೆ. ಈ ಹಂತದಲ್ಲಿ, ಪ್ರಸವಪೂರ್ವ ಹೆರಿಗೆ ಮತ್ತು ಗರ್ಭಪಾತದ ಸಾಧ್ಯತೆಗಳು ಕಡಿಮೆಯಾಗಿರುವುದರಿಂದ, ಎರಡನೇ ತ್ರೈಮಾಸಿಕದಲ್ಲಿ ಪ್ರಯಾಣ ಮಾಡಲು ಉತ್ತಮ ಸಮಯ. ಗರ್ಭಾವಸ್ಥೆಯಲ್ಲಿ ವಾಯು ಪ್ರಯಾಣ ಮಾಡುವುದು, ಅದರಲ್ಲೂ ವಿಶೇಷವಾಗಿ ದೀರ್ಘ ಪ್ರಯಾಣಕ್ಕೆ, ಅಂತರಾಷ್ಟ್ರೀಯ ಪ್ರಯಾಣವನ್ನು ಈ ಹಂತದಲ್ಲಿ ಶಿಫಾರಸು ಮಾಡಲಾಗುತ್ತದೆ. ನೀವು ಮೂರನೇ ತ್ರೈಮಾಸಿಕದ ಆರಂಭಿಕ ಹಂತದಲ್ಲಿದ್ದರೆ, ನೀವು ವಿಮಾನದ ಮೂಲಕ ಪ್ರಯಾಣಿಸಬಹುದು ಆದರೆ 250 ಮೈಲಿಗಳಿಗಿಂತಲೂ ಕಡಿಮೆ ಪ್ರಯಾಣಿಸಬಹುದು, ಇದರರ್ಥ ನೀವು ಹತ್ತಿರದ ನಗರಗಳಿಗೆ ಪ್ರಯಾಣಿಸಬಹುದು ಅಥವಾ ಬೇರೆ ರೀತಿಯಲ್ಲಿ ಹೇಳುವುದಾದರೆ, ದೇಶೀಯ ಪ್ರವಾಸ ಮಾತ್ರ.

 

ಅದಲ್ಲದೆ, ಗರ್ಭಾವಸ್ಥೆಯಲ್ಲಿ ನಿಮ್ಮ ವಿಮಾನ ಪ್ರಯಾಣದ ಸಮಯದಲ್ಲಿ ಗಮನಹರಿಸಬೇಕಾದ ಕೆಲವು ವಿಷಯಗಳು ಇಲ್ಲಿವೆ:

 

ವಿಮಾನಯಾನ ಮಾಡುವುದಕ್ಕೆ ಗಮನಿಸಬೇಕಾದದ್ದು:

 

 • ನಿಮ್ಮ ಡ್ಯೂ ಡೇಟ್ ವಿವರಗಳೊಂದಿಗೆ ನಿಮ್ಮ ಪ್ರಸೂತಿಕಾರರ ಫೈಲ್ ಅನ್ನು ತೆಗೆದುಕೊಂಡಿರಿ. 
 • ನಿಮ್ಮ ಸೀಟ್-ಬೆಲ್ಟ್ ಅನ್ನು ಜೋಡಿಸುವಾಗ, ಅದು ನಿಮ್ಮ ಮೇಲಿನ ತೊಡೆಯ ಮೇಲೆ ಇರಿಸಿಕೊಂಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. 
 • ನೀವು ಪ್ರಯಾಣಿಸುತ್ತಿರುವ ವಿಮಾನವು ಪ್ರಕ್ಷುಬ್ಧದಲ್ಲಿದ್ದರೆ(ಟರ್ಬ್ಯುಲೆನ್ಸ್), ಸಾರ್ವಕಾಲಿಕವಾಗಿ ನಿಮ್ಮ ಸೀಟ್ ಬೆಲ್ಟ್ ಅನ್ನು ಜೋಡಿಸಿಕೊಂಡಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. 
 • ನಿಮ್ಮ ವಿಮಾನ ಪ್ರಯಾಣವು ದೀರ್ಘಾವಧಿಯದಾಗಿದ್ದರೆ, ಅಲ್ಲೇ ಸ್ವಲ್ಪ ನಡೆಯಿರಿ. 
 • ಸಾಧ್ಯವಾದರೆ ಐಲ್(aisle) ಸೀಟ್ ಅನ್ನುತೆಗೆದುಕೊಳ್ಳಿ, ಇದರಿಂದ ನೀವು ಸುಲಭವಾಗಿ ಸುತ್ತ ಓಡಾಡಬಹುದು.

 

ವಾಯುಯಾನಕ್ಕೆ ಮಾಡಲೇಬಾರದದ್ದು :

 

 • ನಿಮ್ಮ ಗರ್ಭಧಾರಣೆಯು 36 ವಾರಗಳನ್ನು ಮೀರಿದ್ದರೆ, ಪ್ರಯಾಣವನ್ನು ತಪ್ಪಿಸಿ. 
 • ನೀವು ಜರಾಯುಗೆ(ಪ್ಲಾಸೆಂಟಾ) ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರೆ ಅಥವಾ ಇದು ಅಪಾಯಕಾರಿ ಗರ್ಭಧಾರಣೆಯಾಗಿದ್ದರೆ, ಗರ್ಭಿಣಿಯಾಗಿದ್ದಾಗ ವಿಮಾನಯಾನವನ್ನು ತಪ್ಪಿಸಿ. 
 • ನಿಮ್ಮ ವೈದ್ಯರು ನಿಮ್ಮ ಸ್ಥಿತಿಯನ್ನು ನಿರ್ಣಯಿಸಿದ ನಂತರ ಪ್ರಯಾಣಕ್ಕಾಗಿ ಕಟ್ಟುನಿಟ್ಟಾಗಿ ಬೇಡ ಎಂದಿದ್ದರೆ, ನೀವು ವಾಯುಯಾನವನ್ನು ತಪ್ಪಿಸಬೇಕು. 
 • ಸಾಮಾನ್ಯವಾಗಿ, ದಂಪತಿಗಳು ಗರ್ಭಧಾರಣೆಯ ಎರಡನೇ ತ್ರೈಮಾಸಿಕದಲ್ಲಿ ವಿದೇಶಕ್ಕೆ ಪ್ರವಾಸ ಕೈಗೊಳ್ಳುತ್ತಾರೆ. ದಂಪತಿಗಳ ನಡುವೆ ಮತ್ತು ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ನಡುವಿನ ಬಂಧವನ್ನು ಬಲಪಡಿಸಲು ಇದನ್ನು ಮಾಡಲಾಗುತ್ತದೆ; ನಿಮಗೆ ಗೊತ್ತಿದ್ದರೆ ಇದನ್ನು ‘ಬೇಬಿ ಮೂನ್’ ಎಂದು ಕರೆಯುತ್ತಾರೆ.

 

ರಸ್ತೆ ಮಾರ್ಗವಾಗಿ ನಾನು ಪ್ರಯಾಣ ಹೋಗುತ್ತಿದ್ದರೆ, ಯಾವ ವಿಷಯಗಳನ್ನು ನಾನು ನೆನಪಿನಲ್ಲಿಟ್ಟುಕೊಳ್ಳಬೇಕು?

 

ಗರ್ಭಾವಸ್ಥೆಯಲ್ಲಿ ಕಾರ್ ಮೂಲಕ ಪ್ರಯಾಣಿಸುವುದು ಉತ್ತಮ ಸಾರಿಗೆ ವ್ಯವಸ್ಥೆಯಾಗಿದೆ. ಗರ್ಭಾವಸ್ಥೆಯ ನಿಮ್ಮ ಮೊದಲ ದಿನದಿಂದ ನಿಮ್ಮ ಕೊನೆಯ ದಿನದವರೆಗೂ ನೀವು ಕಾರ್ ಮೂಲಕ ಪ್ರಯಾಣಿಸಬಹುದು. ಆದರೆ, ಹಾಗೆ ಮಾಡುವಾಗ ನಿಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ಆಂಶಗಳು ಇಲ್ಲಿವೆ:

 

 • ನಿಮ್ಮ ಪ್ರಯಾಣದ ಸಮಯದಲ್ಲಿ ಚಾಲಕರ ಪಕ್ಕದ ಸೀಟೀಗೆ ಆದ್ಯತೆ ನೀಡಿ 
 • ಪ್ರಯಾಣದ ಉದ್ದಕ್ಕೂ ನಿಮ್ಮ ಸೀಟ್-ಬೆಲ್ಟ್ ಧರಿಸಿ 
 • ನಿಮ್ಮ ಸ್ತನ ಮತ್ತು ನಿಮ್ಮ ಮೇಲಿನ ಭುಜದ ನಡುವೆ ಸೀಟ್ ಬೆಲ್ಟ್ ನ ಮೇಲಿನ ಪಟ್ಟಿ ಅನ್ನು ಜೋಡಿಸಿಕೊಳ್ಳಿ, ನಿಮ್ಮ ಕಿಬ್ಬೊಟ್ಟೆಯ ಸುತ್ತ ಇರಬಾರದೆಂದು ನೆನಪಿನಲ್ಲಿಡಿ, ಕೆಳ ಪಟ್ಟಿಯು ನಿಮ್ಮ ತೊಡೆಯ ಕೆಳಗೆ ಇರಬೇಕು. 
 • ಒಂದು ಸಣ್ಣ ನಡಿಗೆಗಾಗಿ ಪ್ರತಿ 1½-2 ಗಂಟೆಗಳಿಗೊಮ್ಮೆ ವಿರಾಮವನ್ನು ತೆಗೆದುಕೊಳ್ಳಿ (ನಿಮ್ಮ ಕಾಲುಗಳಲ್ಲಿ ರಕ್ತ ಪರಿಚಲನೆ ಹೆಚ್ಚಿಸಲು) ಹಾಗೂ ಮೂತ್ರಕೋಶದ ಒತ್ತಡ ವಿಮೋಚನೆ ಮಾಡಲು ವಾಶ್ ರೂಮ್ನ ಬಳಕೆ ಮಾಡಿ. 
 • ನಿಮ್ಮ ಹೊಟ್ಟೆ ಮತ್ತು ಸ್ಟೀರಿಂಗ್ ನಡುವಿನ ಅಂತರವು 1 ಅಡಿಗಿಂತಲೂ ಹೆಚ್ಚು ಇರುವವರೆಗೆ ನೀವು ಗರ್ಭಾವಸ್ಥೆಯಲ್ಲಿ ಸುಮಾರು 32 ವಾರಗಳವರೆಗೆ ಅಥವಾ ಹೆಚ್ಚಿನ ಸಮಯದವರೆಗೆ ಸಹ ಕಾರ್ ಓಡಿಸಬಹುದು.

 

ಸಾರ್ವಜನಿಕ ಸಾರಿಗೆಯನ್ನು ಬಳಸಿ ಪ್ರಯಾಣ ಮಾಡುವುದು ಸುರಕ್ಷಿತವೇ?

 

ಗರ್ಭಿಣಿಯಾಗಿದ್ದಾಗ ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವುದು ಸ್ವಲ್ಪ ಕಷ್ಟ ಏಕೆಂದರೆ ಸ್ವಲ್ಪ ಅಲ್ಲಿ ಇಲ್ಲಿ ತಳ್ಳುವ ಸಾಧ್ಯತೆಗಳಿವೆ. ಆದಾಗ್ಯೂ, ಪ್ರಯಾಣದ ಅವಧಿ ತುಂಬಾ ಕಡಿಮೆಯಾಗಿದ್ದರೆ (30 ನಿಮಿಷಗಳಿಗಿಂತ ಕಡಿಮೆ), ನೀವು ಬಸ್ ಗಳಂತಹ ಸಾರ್ವಜನಿಕ ಸಾರಿಗೆಗಳನ್ನು ಬಳಸಬಹುದು. ಬಸ್ನಲ್ಲಿ ಪ್ರಯಾಣಿಸುವಾಗ, ಹಿಂಭಾಗದ ಆಸನಗಳಿಗಿಂತ ಮುಂಭಾಗದ ಆಸನಗಳನ್ನು ಬಳಸಿ. ರಿಕ್ಷಾದಲ್ಲಿ ನೀವು ಪ್ರಯಾಣಿಸಬೇಕಾದರೆ, ನಿಧಾನಗತಿಯ ವೇಗದಲ್ಲಿ ಓಡಿಸಲು ಡ್ರೈವರ್ಗೆ ಕೇಳಿ ಮತ್ತು ಸಾಧ್ಯವಾದಷ್ಟು ಜರ್ಕ್ ಗಳನ್ನು ತಪ್ಪಿಸಿ. ಆದರೆ ಈ ರೀತಿಯ ಪ್ರಯಾಣ 32 ವಾರಗಳವರೆಗೆ ಮಾತ್ರ ಶಿಫಾರಸು ಮಾಡಲ್ಪಡುತ್ತದೆ ಮತ್ತು ನಿಮಗೆ ಯಾವುದೇ ತೊಂದರೆಗಳಿಲ್ಲದಿದ್ದರೆ ಮಾತ್ರ. ಸಣ್ಣ ಮತ್ತು ದೂರದ ಪ್ರಯಾಣಕ್ಕಾಗಿ ರೈಲು ಪ್ರಯಾಣ ಅನುಮತಿಸಲಾಗಿದೆ.

 

ಅನಗತ್ಯ ತೊಂದರೆಗಳನ್ನು ತಪ್ಪಿಸಲು ಯಾವುದೇ ರೀತಿಯ ದೀರ್ಘ ಪ್ರಯಾಣದ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡಿ ಮತ್ತು ಹಸಿರು ಚಿಟ್ ಖಚಿತಪಡಿಸಿಕೊಳ್ಳಲು!

 

ಹಕ್ಕುತ್ಯಾಗ:  ಲೇಖನದಲ್ಲಿನ ಮಾಹಿತಿಯು ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗಾಗಿ ಪರ್ಯಾಯವಾಗಿ ಉದ್ದೇಶಿಸಿಲ್ಲ ಅಥವಾ ಸೂಚಿಸಲ್ಪಟ್ಟಿಲ್ಲ. ನಿಮ್ಮ ವೈದ್ಯರ ಸಲಹೆಯನ್ನು ಯಾವಾಗಲೂ ಪಡೆಯಿರಿ.

 

#babychakrakannada

A

gallery
send-btn

Related Topics for you