8 Jun 2019 | 1 min Read
Sonali Shivlani
Author | 213 Articles
ಹೆಂಡತಿಯೊಂದಿಗೆ ತೊಡಗಿಸಿಕೊಂಡಿರುವ ಮತ್ತು ಒಳ್ಳೆ ಒಡನಾಟ ಇಟ್ಟುಕೊಂಡಿರುವ ಗಂಡನಾಗಿ, ನಿಮ್ಮ ಗರ್ಭಿಣಿ ಹೆಂಡತಿಯನ್ನು ನೀವು ಕಾಳಜಿ ಮಾಡುವುದು ಮುಖ್ಯ. ಹೌದು, ನಿಸ್ಸಂಶಯವಾಗಿ ನೀವು ಅವಳಿಗಾಗಿ ಮಗುವನ್ನು ಹೆರಲು ಸಾಧ್ಯವಿಲ್ಲ, ಅಥವಾ ಅವಳಿಗಾಗಿ ತಿನ್ನಲು ಸಾಧ್ಯವಿಲ್ಲ , ಅಥವಾ ಅವಳ ಪರವಾಗಿ ಗರ್ಭಧಾರಣೆಯ ಅಸ್ವಸ್ಥತೆಗಳನ್ನು ಅನುಭವಿಸಲು ಸಾಧ್ಯವಿಲ್ಲ! ಆದರೆ ಬೇರೆ ರೀತಿಯಲ್ಲಿ ಅವಳನ್ನು ಬೆಂಬಲಿಸಲು ನೀವು ಮಾಡಬಹುದಾದ ಅನೇಕ ವಿಷಯಗಳಿವೆ – ಮತ್ತು ಈ ರೀತಿಯ ಆಲೋಚನೆಗಳು ಮತ್ತು ಕಾಳಜಿಗಳು ಅವರ ಪ್ರಯಾಣವನ್ನು ಸರಳಗೊಳಿಸುವಲ್ಲಿ ಬಹಳ ದೂರ ಹೋಗಬಹುದು! ನಿಮ್ಮ ಗರ್ಭಿಣಿ ಹೆಂಡತಿಯನ್ನು ಹೇಗೆ ಬೆಂಬಲಿಸುವುದು ಎಂಬುದರ ಬಗೆಗಳು ಇಲ್ಲಿವೆ.
ಆಕೆ ಭಾವಪರವಶರಾಗಿರಬಹುದು ಮತ್ತು ಹೆದರಿರಬಹುದು ಮತ್ತು ಆಯಾಸಗೊಂಡಿರಬಹುದು – ಮತ್ತು ಅವಳು ಬಯಸುವುದು ಅವಳನ್ನು ಆಲಿಸುವ ಒಂದು ಕಿವಿ, ಮತ್ತು ಒರಗಿಕೊಳ್ಳಲು ಒಂದು ಭುಜ. ಅವಳಿಗೋಸ್ಕರ ಇರಿ. ಅಂತೆಯೇ, ನೀವು ಸಹ ನೀವು ತಂದೆಯಾಗಲಿರುವೆನೆಂಬ ಅರಿವಿನಿಂದಾಗಿ ಕಾತರನಾಗಿರಬಹುದು ಮತ್ತು ಭಾವಪರವಶರಾಗಿರಬಹುದು. ಅವಳೊಂದಿಗೆ ಮಾತನಾಡಿ, ನಿಮಗೆ ಹೇಗೆ ಅನಿಸುತಿದೆ ಎಂದು ಹೇಳಿ. ಈ ರೀತಿ ಮಾಡುವುದರಿಂದ ಇಬ್ಬರಿಗೂ ಒಳ್ಳೆಯ ಭಾವನೆ ಮೂಡುತ್ತದೆ, ಮತ್ತು ನೀವು ಈ ಏರಿಳಿತದ ಪ್ರಯಾಣದಲ್ಲಿ ಪರಸ್ಪರ ಇರುವಿರಿ ಎಂಬ ಜ್ಞಾನದಲ್ಲಿ ನೀವು ಸುರಕ್ಷಿತರಾಗುತ್ತೀರಿ. ಸಂವಹನಯನ್ನು ಮುಕ್ತವಾಗಿ ಇರಿಸಿ – ಇದು ಯಾವಾಗಲೂ ಸಹಾಯ ಮಾಡುತ್ತದೆ!
ಹಾರ್ಮೋನಿನ ಬದಲಾವಣೆಗಳು, ಬಳಲಿಕೆ, ದಣಿವು, ಮತ್ತು ಅಸ್ವಸ್ಥತೆಗಳ ಜೊತೆ ಸೇರಿ, ಮತ್ತು ಸಾಮಾನ್ಯವಾಗಿ ನೆಮ್ಮದಿ ಇಲ್ಲದೆ ಇರುವುದು ಮತ್ತು ಅವಳ ಜೀವನ ಮಾರ್ಪಡಿಸಲಾಗದಂತೆ ಬದಲಾಗಿದೆ ಎಂಬ ಭಾವನೆ – ಇವುಗಳೆಲ್ಲವೂ ಸೇರಿ ತಮ್ಮ ಗರ್ಭಾವಸ್ಥೆಯಲ್ಲಿ ಅನೇಕ ಮಹಿಳೆಯರು ಮೂಡಿಯಾಗಲು ಕಾರಣವಾಗುತ್ತವೆ. ಒಂದು ಕ್ಷಣ ಅವಳು ಸಂತೋಷವಾಗಿರಬಹುದು, ಮತ್ತೊಂದು ಕ್ಷಣದಲ್ಲಿ, ಅವಳು ಅಳುತ್ತಿರಬಹುದು – ನೀವು ಆಗ ಅವಳು ಏನು ಮಾಡಲು ಆಗುವುದಿಲ್ಲ ಎಂದು ಅರ್ಥ ಮಾಡಿಕೊಳ್ಳಬೇಕು. ನೀವೇನು ಮಾಡಬಹುದೆಂದರೆ ಅವಳು ಅಳಲು ಒಂದು ಭುಜ ನೀಡಬೇಕು, ಮತ್ತು ಒಂದು ಸ್ವಚ್ಛವಾಗಿರುವ ಕರ್ಚೀಎಫ್ ಕೊಡಬಹುದು!
ಅವಳು ಇಂದು ದೋಸೆಯನ್ನು ಇಷ್ಟ ಪಡುತ್ತಿದ್ದರೆ, ನಾಳೆ ಅದರ ವಾಸನೆಯಿಂದ ಅವಳಿಗೆ ವಾಕರಿಕೆಯಾಗಬಹುದು. ಅವಳ ಆಯ್ಕೆಯಲ್ಲಿ ಅವಳಿಗೆ ಬೆಂಬಲ ನೀಡಿ ಮತ್ತು ಅವುಗಳನ್ನು ಅರ್ಥಮಾಡಿಕೊಳ್ಳಿ.
ಇದು ಯಾವಾಗಲೂ ಕಾರ್ಯಸಾಧ್ಯವಾಗದೇ ಇರಬಹುದು, ಆದರೆ ನೀವು ಯಾವಾಗಲೆಲ್ಲಾ ಹೋಗಬಹುದೋ, ಆಗ ಅವಳ ಮಾಸಿಕ ತಪಾಸಣೆಗೆ ಅವಳ ಜೊತೆ ವೈದ್ಯರ ಬಳಿ ಹೋಗಿ. ಅಲ್ಟ್ರಾಸೌಂಡ್ ಸ್ಕ್ಯಾನ್ ಸಮಯದಲ್ಲಿ ಅವಳ ಕೈಯನ್ನು ಹಿಡಿದುಕೊಳ್ಳಿ. ನಿಮ್ಮ ಮಗುವಿನ ಹೃದಯ ಬಡಿತವನ್ನು ಜೊತೆಯಲ್ಲಿ ಕೇಳುವ ಸಮಯ, ಅಥವಾ ಅದರ ಚಿತ್ರವನ್ನು ಪರದೆಯ ಮೇಲೆ ಜೊತೆಯಲ್ಲಿ ನೋಡುವ ಸಮಯವಾಗಿಯೂ ಇದು ತುಂಬಾ ಸುಂದರವಾಗಿರುತ್ತದೆ, ಮತ್ತು ಈ ಕ್ಷಣಗಳು ಹಿಂದಿರುಗಿ ನೋಡಿದಾಗ ಉತ್ತಮ ನೆನಪುಗಳನ್ನು ರೂಪಿಸುತ್ತವೆ!
ಗರ್ಭಧಾರಣೆ ಮತ್ತು ಜನನದ ಬಗ್ಗೆ ಮಾಹಿತಿ ಇರುವ ಪುಸ್ತಕಗಳನ್ನು ಓದಿ, ಮತ್ತು ವೆಬ್ಸೈಟ್ಗಳನ್ನು ಬ್ರೌಸ್ ಮಾಡಿ. ಗರ್ಭಾವಸ್ಥೆಯ ಬಗ್ಗೆ ಎಲ್ಲವನ್ನೂ ತಿಳಿಯಲು ನೀವು ಬಯಸಿದರೆ, ನಿಮ್ಮ ಹೆಂಡತಿಯೊಂದಿಗೆ ಗರ್ಭಧಾರಣೆ ಮತ್ತು ಆರೋಗ್ಯದ ಬಗ್ಗೆ ನೀವು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಮನೆಯಲ್ಲಿ ಸಾಕಷ್ಟು ಹಣ್ಣುಗಳು, ತರಕಾರಿಗಳು ಮತ್ತು ಒಣಬೀಜಗಳು ಯಾವಾಗಲೂ ಇವೆ ಎಂದು ಖಚಿತಪಡಿಸಿಕೊಳ್ಳಿ. ಈಗ ಅವಳು ಏನು ತಿನ್ನಲು ಇಷ್ಟಪಡುತ್ತಾರೆ ಎಂದು ನೀವು ಕಂಡುಕೊಳ್ಳಬಹುದು, ಮತ್ತು ಅದು ಅವರಿಗೆ ಲಭ್ಯವಾಗುವಂತೆ ನೀವು ತಂದಿಡಬಹುದು. ಆಕೆ ತನ್ನ ಆಹಾರದ ಪಟ್ಟಿಯನ್ನು ನೋಡಿಕೊಳ್ಳಲಾಗದಂತೆ ತುಂಬಾ ದಣಿದಿದ್ದಿರಬಹುದು – ನೀವು ಅದನ್ನು ಅವರಿಗಾಗಿ ಮಾಡಬಹುದಾದರೆ ಅದು ಉತ್ತಮವಾಗಿರುತ್ತದೆ.
ನಿಮಗೆ ಹಾಗೆ ಕಾಣಿಸದಿದ್ದರೂ, ನಿಮ್ಮ ಹೆಂಡತಿ ವಿಶ್ರಾಂತಿ ಪಡೆವಾಗಲೂ ಸಹ ಅವಳ ದೇಹವು ಬಹಳಷ್ಟು ಕೆಲಸವನ್ನು ಮಾಡುತ್ತಿರುತ್ತದೆ. ಆದ್ದರಿಂದ ಅವರಿಗೆ ಸಾಕಷ್ಟು ನಿದ್ರೆ ಮತ್ತು ವಿಶ್ರಾಂತಿ ಬೇಕು. ಮನೆಗೆಲಸದ ನಿಮ್ಮ ಕೋಟಾವನ್ನು ಹೆಚ್ಚಿಸಿ. ಅವಳಿಗೆ ವಿರಾಮಗಳನ್ನು ನೀಡಿ. ಹಾಗೆಂದರೆ, ನಿಮ್ಮ ಪತ್ನಿಯು ಮನೆಯಲ್ಲಿ ಯಾವುದೇ ಕೆಲಸ ಮಾಡಬಾರದು ಎಂದು ಅರ್ಥವಲ್ಲ. ಗರ್ಭಾವಸ್ಥೆಯಲ್ಲಿ ಸಕ್ರಿಯವಾಗಿರುವುದು ಸುಲಭದ ಹೆರಿಗೆಯ ಕೀಲಿಯಾಗಿದೆ. ಆದರೆ ಮೊದಲ ತ್ರೈಮಾಸಿಕದಲ್ಲಿ ಅವಳು ಬೇಗನೆ ದಣಿಯಬಹುದು, ಈ ಸಂದರ್ಭದಲ್ಲಿ, ನೀವು ಅವರಿಗೆ ಸಹಾಯ ಮಾಡಿಲು ಮುಂದೆ ಬಂದರೆ ಚೆನ್ನಾಗಿರುತ್ತದೆ.
ಮೊದಲ ತ್ರೈಮಾಸಿಕದಲ್ಲಿ ಲೈಂಗಿಕತೆ ಹೊಂದುವುದು ತುಂಬಾ ಸಹಕಾರಿಯಲ್ಲ. ನಿಮ್ಮ ಹೆಂಡತಿ ತುಂಬಾ ದಣಿದಿರಬಹುದು, ಮತ್ತು / ಅಥವಾ ನೀವು ತುಂಬಾ ಭಾವಪರವಶವಾಗಿರಬಹುದು. ನಿಮ್ಮ ಇಬ್ಬರ ನಡುವೆ ಏನೇ ಪರಿಸ್ಥಿತಿ ಇರಲಿ, ಅದು ನೀವಿಬ್ಬರೂ ಆಲಂಗಿಸಿಕೊಳ್ಳುವುದನ್ನು ಅಥವಾ ಮುದ್ದಾಡುವುದನ್ನು ತಪ್ಪಿಸಬಾರದು. ಪ್ರೀತಿಯನ್ನು ಅನುಭವಿಸಲು ಸ್ಪರ್ಶ ತುಂಬಾ ಮುಖ್ಯ, ಮತ್ತು ಎಷ್ಟು ಸಾಧ್ಯವೋ ಅಷ್ಟು, ಅವಳನ್ನು ಮುದ್ದಾಡಿ. ಮತ್ತು ಆಕೆಗೆ ,ಆಕೆಯ ದೇಹದ ತುಂಬಾ ಆರಾಮದಾಯಕವಾಗಿರುವುದಿಲ್ಲ, ಮತ್ತು ನೀವು ಆಕೆಯ ಮೇಲೆ ತೋರಿಸುವ ಗಮನ ಅವಳನ್ನು ಪ್ರೀತಿಯಿಂದ ಮತ್ತು ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ.
ವೈದ್ಯರ ಸಲಹೆಯ ಮೇರೆಗೆ ವ್ಯಾಯಾಮ ಮತ್ತು ನಡೆಯುವುದು ನಿಮ್ಮ ಹೆಂಡತಿಯ ಆರೋಗ್ಯಕ್ಕೆ ಮುಖ್ಯವಾಗಿದೆ. ಅವಳು ಅದನ್ನು ಮಾಡಲು ಸ್ವಯಂ ಪ್ರೇರಿಪಿತವಾಗದಿದ್ದರೆ, ನೀವೂ ಆವಳ ಜತೆಗೂಡಿ ಅವಳನ್ನು ನಿಧಾನವಾಗಿ ಪ್ರೇರೇಪಿಸಬಹುದು. ಒಟ್ಟಿಗೆ ವ್ಯಾಯಾಮ ಮಾಡುವುದು ಯಾವಾಗಲೂ ಒಳ್ಳೆಯದು, ಮತ್ತು ಈ ರೀತಿಯಲ್ಲಿ ಹೆಚ್ಚು ಪ್ರೇರಣೆ ಸಿಗುತ್ತದೆ!
ಏನಾದರು ತುರ್ತುಸ್ಥಿತಿ ಇರಬಹುದು – ಅಥವಾ ಇರದೆಯೂ ಇರಬಹುದು; ಅವಳಿಗೆ ನಿಮ್ಮ ಧ್ವನಿಯನ್ನು ಕೇಳಬೇಕಾಗಿರಬಹುದು. ಏನೇ ಇದ್ದರೂ, ಅವಳ ಎಲ್ಲಾ ಫೋನ್ ಕರೆಗಳಿಗೆ ಉತ್ತರಿಸಿ, ಮತ್ತು ಆಕೆಯೊಂದಿಗೆ ಎಲ್ಲಾ ಸಮಯದಲ್ಲೂ ಸಂಪರ್ಕದಲ್ಲಿರಿ.
ಗರ್ಭಧಾರಣೆಯು ಜೀವನವನ್ನು ಬದಲಾಯಿಸುವುದು. ನಿಮ್ಮ ಹೆಂಡತಿ ಗರ್ಭಿಣಿಯಾಗುವುದಕ್ಕಿಂತ ಮುಂಚೆ ಹೇಗೆ ಇದ್ದರೋ ಹಾಗೆ ನಂತರ ಇರಬೇಕು ಎಂದು ನೀವು ನಿರೀಕ್ಷಿಸಬಾರದು. ಅವರಿಗೆ ಎಲ್ಲಾ ರೀತಿಯ ಪ್ರೀತಿ ಮತ್ತು ಬೆಂಬಲವು ಅವಶ್ಯಕವಾಗಿದೆ, ಮತ್ತು ಅದನ್ನು ನೀಡುವ ಉತ್ತಮ ವ್ಯಕ್ತಿ ಎಂದರೆ ಅದು ನೀವು. ನೆನಪಿಡಿ, ನೀವು ಅವಳನ್ನು ಹೆಚ್ಚು ಬೆಂಬಲಿಸುವುದರಿಂದ, ಆಕೆ ಹೆಚ್ಚು ಸಂತೋಷದಿಂದ ಮತ್ತು ಹೆಚ್ಚು ಆರಾಮದಾಯಕವಾಗಿರಬಹುದು!
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.