ನಿಮ್ಮ ಮಗುವಿಗೆ ಸೂಕ್ತವಾದ ಶಾಲೆಯನ್ನು ಆಯ್ಕೆ ಮಾಡುವಾಗ ಪರಿಗಣಿಸಬೇಕಾದ 10 ಅಂಶಗಳು

cover-image
ನಿಮ್ಮ ಮಗುವಿಗೆ ಸೂಕ್ತವಾದ ಶಾಲೆಯನ್ನು ಆಯ್ಕೆ ಮಾಡುವಾಗ ಪರಿಗಣಿಸಬೇಕಾದ 10 ಅಂಶಗಳು

ಮುಂದಿನ ವರ್ಷದ ಶೈಕ್ಷಣಿಕ ಅವಧಿಯ ಪ್ರವೇಶ ಪ್ರಕ್ರಿಯೆ ಶುರುವಾಗುವ ಸಮಯವಿದು  ಹಾಗು  ಪೋಷಕರು ತಮ್ಮ ಮಕ್ಕಳಿಗೆ ಅತ್ಯುತ್ತಮ ಶಾಲೆಯನ್ನು ಹುಡುಕುವ ಸಮಯ. ಸರಿಯಾದ ಶಾಲೆಯನ್ನು ಆಯ್ಕೆ ಮಾಡುವುದು ಒಂದು  ಕಷ್ಟದ  ಕಾರ್ಯವೇ ಸರಿ! ಆದ್ದರಿಂದ  ಕೆಲವು ಅಂಶಗಳನ್ನು ಕೆಳಗೆ ನೀಡಲಾಗಿವೆ . ಇವು ಪೋಷಕರಿಗೆ  ತಮ್ಮ ಮಕ್ಕಳಿಗೆ ಸರಿಯಾದ ಶಾಲೆಯನ್ನು ಆಯ್ಕೆ ಮಾಡಲು ಸಹಕಾರಿಯಾಗಲಿವೆ.

 

- ಯಾವ ಶೈಕ್ಷಣಿಕ ಮಂಡಳಿಗೆ ನೀವು ಆದ್ಯತೆ  ನೀಡುತ್ತೀರಿ

ಮೊದಲನೆಯದಾಗಿ ನೀವು ಒಂದು ಶೈಕ್ಷಣಿಕ ಮಂಡಳಿಯನ್ನು ಆಯ್ಕೆ ಮಾಡಬೇಕು.' ಸಿ ಸ್ ಸಿ',  'ಸಿ ಬಿ ಸ್ ಸಿ' , ' ಬಿ' ಇತ್ಯಾದಿ  ಮಂಡಳಿಗಳಿರುತ್ತವೆ. ಅದನ್ನು ಆಯ್ಕೆ ಮಾಡಿದ ಮೇಲೆ , ಮಂಡಳಿಯನ್ನು  ಆಫರ್ ಮಾಡುವ ಶಾಲೆಗಳ ಪಟ್ಟಿ ಮಾಡಿಕೊಳ್ಳಿ.

 

- ಶಾಲೆಗೆ  ನಿಮ್ಮ ಮನೆಯ ಸಾಮೀಪ್ಯ

ಶಾಲೆಯನ್ನು ಆಯ್ಕೆಮಾಡುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಮತ್ತೊಂದು ಅಂಶವೇನೆಂದರೆ , ಶಾಲೆಯು ನಿಮ್ಮ ಮನೆಯಿಂದ ಎಷ್ಟು ದೂರ ಎಂಬುದು. ಸಾಮಾನ್ಯವಾಗಿ ಶಾಲೆಯು - ಕಿ .ಮೀ ದೂರದಲ್ಲಿದ್ದರೆ ಒಳ್ಳೆಯದು ( ಇದಕ್ಕಿಂತ ಕಡಿಮೆ ಇದ್ದರೆ ಇನ್ನೂ ಒಳ್ಳೆಯದು ) ಹಾಗು ಇದಕ್ಕಿಂತ ಹೆಚ್ಚಿದ್ದರೆ ಮುಗುವಿನ ಪ್ರಯಾಣ ಸಮಯ ಜಾಸ್ತಿಯಾಗುತ್ತೆ.

 

- ಸುರಕ್ಷತಾ ಕ್ರಮಗಳು

ಶಾಲೆಯು ಮಕ್ಕಳಿಗಾಗಿ ಯಾವ ರೀತಿಯ ಸುರಕ್ಷತಾ ಕ್ರಮವನ್ನು ಕೈಗೊಂಡಿದೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಶಾಲೆಯ ಆವರಣಗಳಲ್ಲಿ ಸಿ ಸಿ ಟಿ ವಿ ಅಳವಡಿಸಿದ್ದಾರೆಯೇ ಹಾಗು ಶಾಲಾ ಬಸ್ಗಳಲ್ಲಿ ಜಿ ಪಿ ಸ್ ಟ್ರಾಕರ್ ಗಳಿವೆಯೇ ಎಂಬುದನ್ನು ತಿಳಿದುಕೊಳ್ಳಿ.

 

- ಸಂವಹನ ವ್ಯವಸ್ಥೆ

ಶಾಲೆಯಲ್ಲಿ ಸಾರಿಗೆ ಮತ್ತು ಸಂವಹನ ವ್ಯವಸ್ಥೆ ಇರುವುದು ಬಹಳ ಮುಖ್ಯ. ಇವು ಇದಲ್ಲಿ ಪೋಷಕರು ತಮ್ಮ ಸಮಸ್ಯೆ ಅಥವಾ ಸಲಹೆಗಳನ್ನು ಬಹಿರಂಗವಾಗಿ ಚರ್ಚಿಸಬಹುದು.

 

ವಿದ್ಯಾರ್ಥಿ ಶಿಕ್ಷಕ ಅನುಪಾತ

ಮತ್ತೊಂದು ಮುಖ್ಯವಾದ ಅಂಶವನ್ನು ತಿಳಿದುಕೊಳ್ಳಬೇಕು. ಅದು ಏನೆಂದರೆ ವಿದ್ಯಾರ್ಥಿ ಶಿಕ್ಷಕ ಅನುಪಾತ. ಅನುಪಾತ ಹೆಚ್ಚಿದ್ದರೆ , ಶಿಕ್ಷಕರಾದವರು ಪ್ರತಿಯೊಬ್ಬ ವಿದ್ಯಾರ್ಥಿಗೆ ನೀಡುವ ಗಮನ ಕಡಿಮೆ. ಆದ್ದರಿಂದ , ಯಾವ ಶಾಲೆಯಲ್ಲಿ ಅನುಪಾತ ಕಡಿಮೆ ಇರುತ್ತದೋ , ಶಾಲೆಯನ್ನು ಆಯ್ಕೆ ಮಾಡಿಕೊಳ್ಳಿ.

 

ಸಹ ಶಿಕ್ಷಣ ಬೇಕೋ ಬೇಡವೋ

ಸಹ ಶಿಕ್ಷಣ ಬೇಕೋ ಬೇಡವೋ ಎಂಬುದು ವೈಯಕ್ತಿಕ ಆಯ್ಕೆ. ಆದರೆ ನಿಮ್ಮ ಮಗುವಿಗೆ ಶಾಲೆಯನ್ನು ಆಯ್ಕೆ ಮಾಡುವಾಗ , ಅಂಶವನ್ನು ಖಂಡಿತವಾಗಿ ಪರಿಗಣಿಸಿ.

 

- ಅನುಸರಿಸಬೇಕಾದ  ಮಾದರಿ

ಶಾಲೆಯು ಪುಸ್ತಕದ ಜ್ಞಾನಕ್ಕೆ ಮಾತ್ರ ಗಮನ ನೀಡುವುದೋ ಅಥವಾ ಪ್ರತ್ಯೇಕತೆಗೆ ಹಾಗು ಕೌಶ್ಯಲತೆಗಳನ್ನು  ಹೆಚ್ಚಿಸಲು ಸಹ ಪ್ರೋತ್ಸಾಹಿಸುವುದೋ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ.

 

ಶೈಕ್ಷಣಿಕ ಹಾಗು ಪಠ್ಯೇತರ ಚಟುವಟಿಕೆಗಳು

ಯಾವ ಶಾಲೆ ಶೈಕ್ಷಣಿಕ ಹಾಗು ಪಠ್ಯೇತರ ಚಟುವಟಿಕೆಗಳು, ಎರಡಕ್ಕೂ ಸಮನಾದ  ಪ್ರಾಮುಖ್ಯತೆ ನೀಡುತ್ತದೋ , ಅಂತ ಶಾಲೆಯನ್ನು ಆಯ್ಕೆ ಮಾಡುವುದು ಅಗತ್ಯ . ಏಕೆಂದರೆ ಶೈಕ್ಷಣಿಕ ಹಾಗು ಪಠ್ಯೇತರ ಚಟುವಟಿಕೆಗಳು, ಎರಡೂ ಸಹ ಒಟ್ಟಾರೆ ಪ್ರಗತಿಗೆ ಬಹು ಮುಖ್ಯ. ಶಾಲೆಯು ಕೇವಲ ಶಿಕ್ಷಣಕ್ಕೆ ಮಾತ್ರ ಪ್ರಾಮುಖ್ಯತೆ ನೀಡಿದರೆ, ಮಗುವಿಗೆ ಬೇರೆ ಚಟುವಟಿಕೆಗಳಿಗೆ ಗಮನ ಹರಿಸಲು ಸಮಯವಿರುವುದಿಲ್ಲ. ಹಾಗೆಯೇ ಶಾಲೆಯು ಪಠ್ಯೇತರ ಚಟುವಟಿಕೆಗಳಿಗೆ ಹೆಚ್ಚು ಗಮನ ನೀಡಿದರೆ , ಮಕ್ಕಳ ಅಧ್ಯಯನಕ್ಕೆ ಪೋಷಕರು ಹೆಚ್ಚಿನ ಪ್ರಯತ್ನ ಹಾಗು ಸಮಯ ನೀಡಬೇಕಾಗುತ್ತದೆ.

 

- ಶಾಲೆಯ ಸಂಸ್ಕೃತಿ

ಶಾಲೆಯು ಸಮಗ್ರ ವಿಧಾನ ಹಾಗು ಒಳ್ಳೆ  ಭೋದನೆಯ ತತ್ವಗಳನ್ನು ಪಾಲಿಸುತ್ತದೆಯೇ ಎಂಬುದನ್ನು ತಿಳಿದುಕೊಳ್ಳಬೇಕು. ತತ್ವಗಳು ನಿಮ್ಮ ತತ್ವ ಹಾಗು ಸಿದ್ದಂತಗಳಿಗೆ ಅನುಗುಣವಾಗಿದೆಯೇ  ಎಂಬ ಅಂಶವನ್ನು ಪರಿಗಣಿಸಬೇಕು.

 

೧೦ - ಆರ್ಥಿಕ ಪರಿಗಣನೆ

ಶಾಲೆಯ ಪ್ರವೇಶ ಶುಲ್ಕ , ವಾರ್ಷಿಕ ಶುಲ್ಕ , ಸಾರಿಗೆ ಶುಲ್ಕ ಹಾಗು ಇತರೆ ಖರ್ಚುಗಳನ್ನೂ  ಸಹ ಪರಿಗಣಿಸಬೇಕು. ಏಕೆಂದರೆ ಇದು  ಕೇವಲ ಒಂದು ಬಾರಿಯ ಹೂಡಿಕೆಯಲ್ಲ . ಯಾವ ಸಮಯದಲ್ಲಾದರೂ ಖರ್ಚುಗಳು ಬರಬಹುದು. ಆದ್ದರಿಂದ ನೀವು ನಿಮ್ಮ ಆರ್ಥಿಕತೆಯ ಪರಿಸ್ಥಿಗೆ ತಕ್ಕಂತೆ ಶಾಲೆಯನ್ನು ಆಯ್ಕೆ ಮಾಡಿಕೊಳ್ಳಿ.

 

ಮೇಲಿನ ಅಂಶಗಳನ್ನೇ,  ನಾನು ನನ್ನ ಮಗಳಿಗೆ ಸರಿಯಾದ ಶಾಲೆಯನ್ನು ಆಯ್ಕೆಮಾಡುವಾಗ ಪರಿಗಣಿಸಿದ್ದೆ.  ನಾನು ಶಾಲೆಯ ಹುಡುಕಾಟದಲ್ಲಿದಾಗ , ಒಂದನ್ನು ಅರಿತೆನು .  ಅದೇನೆಂದರೆ , ಯಾವ ಶಾಲೆಯು ಮೇಲಿನ ಎಲ್ಲಾ ಅಂಶಗಳನ್ನು ಪೂರೈಸುವುದಿಲ್ಲ. ಆದ್ದರಿಂದ , ಯಾವ ಶಾಲೆಯು ಹೆಚ್ಚಿನ ಅಂಶಗಳನ್ನು ಪೂರೈಸುತ್ತದೆಯೋ , ಅದನ್ನೇ ಆಯ್ಕೆ ಮಾಡಿಕೊಳ್ಳಿ. ನಮಗೆ ಯಾವ ಅಂಶಗಳು ಮುಖ್ಯವೋ, ಅಂಶಗಳನ್ನು ,ಆಯ್ಕೆ ಮಾಡಿದ ಶಾಲೆಯು ಪೂರೈಸಿದರೆ ಸಾಕು .

 

ಎಲ್ಲಾ ಅಂಶಗಳು ನಿಮ್ಮ ಮಗುವಿಗೆ ಶಾಲೆಯನ್ನು ಆಯ್ಕೆ ಮಾಡುವುದಕ್ಕೆ ಸಹಾಯ ಮಾಡುತ್ತವೆ ಎಂದು ನಾನು ಭಾವಿಸುತ್ತೇನೆ.

 

ನಿಮ್ಮ ಕಾಮೆಂಟ್ಸ್ ಗಳೇನಾದರೂ ಇದ್ದರೆ  ತಿಳಿಸಿ ಹಾಗು ನಾನು ಯಾವುದಾದರು ಅಂಶವನ್ನು ಉಲ್ಲೇಖಿಸಿಲ್ಲವಾದರೆ ,  ನಿಮಗೆ ಅದು ಮುಖ್ಯ ಅಂಶವೆಂದೆನಿಸಿದರೆ , ಅದನ್ನು ತಿಳಿಸಿ. ಇದರಿಂದ ಇತರೆ ಪೋಷಕರಿಗೆ ಸಹಾಯವಾಗುತ್ತದೆ.

 

#babychakrakannada
logo

Select Language

down - arrow
Personalizing BabyChakra just for you!
This may take a moment!