11 Jun 2019 | 1 min Read
Medically reviewed by
Author | Articles
ಅಭಿವೃದ್ಧಿ ವಿಳಂಬ ಎಂದರೇನು?
ಒಂದು ಮಗುವು , ಅಭಿವೃದ್ಧಿ ಮೈಲುಗಲ್ಲುಗಳನ್ನು ಸರಿಯಾದ ಸಮಯಕ್ಕೆ ತಲುಪದಿದ್ದರೆ , ಆಗ ಅಭಿವೃದ್ಧಿ ವಿಳಂಬವಾಗುತ್ತದೆ. ಅಭಿವೃದ್ಧಿ ವಿಳಂಬವು ದೈಹಿಕ ಹಾಗು ಮಾನಸಿಕ ವಿಕಸನದಲ್ಲಿ ಕಂಡುಬರುವ ವಿಳಂಬ. ಇದು ಮುಂದುವರಿಯುವ ವಿಳಂಬ. ಅಭಿವೃದ್ಧಿ ವಿಳಂಬಕ್ಕೂ ಹಾಗು ತಾತ್ಕಾಲಿಕ ವಿಳಂಬಕ್ಕೂ ವ್ಯತ್ಯಾಸವಿದೆ. ಪ್ರತಿಯೊಂದು ಮಗುವು ತನ್ನ ಸ್ವಂತ ವೇಗದಲ್ಲಿ ಬೆಳೆಯುತ್ತದೆ .ಆದಾಗ್ಯೂ , ಒಂದು ಮಗುವು ಸಾಮಾನ್ಯ ಮಗುವಾದಲ್ಲಿ , ಅದು ಪೂರ್ಣ ವಿಕಸನದ ಕೆಲವೊಂದು ಮೈಲುಗಲ್ಲುಗಳನ್ನು ನಿಗದಿತ ವಾರಗಳ ಅಥವಾ ತಿಂಗಳುಗಳ ಶ್ರೇಣಿಯಲ್ಲಿ ತಲುಪುವುದು ಅವಶ್ಯಕವಾಗಿದೆ.
ಅಭಿವೃದ್ಧಿ ವಿಳಂಬದ ಲಕ್ಷಣಗಳನ್ನು ಹೇಗೆ ಗುರುತಿಸುವುದು?
ಮಗುವಿನಲ್ಲಿ ಅಭಿವೃದ್ಧಿ ವಿಳಂಬಗಳನ್ನು ಮೊದಲು ಗುರುತಿಸುವವರು ಪೋಷಕರು. ತಮ್ಮ ಮಗು ಬೇರೆ ಮಕ್ಕಳಿಗೆ ಹೋಲಿಸಿದಾಗ , ಸರಿಯಾಗಿ ಬೆಳೆಯುತ್ತಿಲ್ಲವೆಂದು ತಿಳಿದಾಗ , ಪೋಷಕರಲ್ಲಿ ಆತಂಕ ಮೂಡುವುದು ಸಹಜ. ಎಷ್ಟೋಬಾರಿ , ಇದು ತಾತ್ಕಾಲಿಕ ವಿಳಂಬವಾಗಿರುತ್ತದೆ , ಏಕೆಂದರೆ ಮಗುವು ಪೋಷಕರು ಗಮನಿಸುವ ಕೌಶಲ್ಯವನ್ನು ಬಿಟ್ಟು , ಬೇರೆ ಯಾವುದೊ ಕೌಶಲ್ಯವನ್ನು ಕಲಿಯುವಲ್ಲಿ ಮಗ್ನವಾಗಿರುತ್ತದೆ ಹಾಗು ಇದನ್ನು ಅಭಿವೃದ್ಧಿ ವಿಳಂಬವೆನ್ನುವುದಿಲ್ಲ. ನಿಮ್ಮ ಮಗುವಿನ್ನಲ್ಲಿ ಅಭಿವೃದ್ಧಿ ವಿಳಂಬವಿದೆ ಎಂದು ನಿಮಗೆ ಅನಿಸಿದ್ದಲ್ಲಿ , ನಿಮ್ಮ ಮಕ್ಕಳ ವೈದ್ಯರನ್ನು ಭೇಟಿಮಾಡಿ. ವೈದ್ಯರು ನಿಮನ್ನು ಮಗುವಿನ ಬೆಳವಣಿಗೆಯ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಬಹುದು ಹಾಗು ವಿಳಂಬವಾದ ಮೈಲಿಗಲ್ಲಿನ ಬಗ್ಗೆ ನಿರ್ಣಯಿಸಬಹುದು . ಕೆಲವೊಮ್ಮೆ ಅಭಿವೃದ್ಧಿ ತಜ್ಞರನ್ನು ಭೇಟಿಮಾಡಲು ಹೇಳಬಹುದು.
ನಿಮ್ಮ ಮಗುವಿನಲ್ಲಿ ಕೆಳಕಂಡ ನಾಲ್ಕು ಮಾನದಂಡಗಳನ್ನು ಗಮನಿಸಿ :
ನಿಮ್ಮ ಮಗುವು ಒಂದು ಅಥವಾ ಹೆಚ್ಚಿನ ಅಭಿವೃದಿ ಅಂಶಗಳಲ್ಲಿ , ಬೇರೆ ಮಕ್ಕಳಿಗೆ ಹೋಲಿಸಿದಾಗ , ಹಿಂದೆ ಉಳಿದಿದೆ ಎಂದೆನಿಸಿದರೆ , ಸಹಾಯ ಕೇಳುವುದು ಸೂಕ್ತ. ನಿಮ್ಮ ಮಗುವು ಹೆಚ್ಚಿನ ಅಥವಾ ಎಲ್ಲಾ ಕೌಶಲ್ಯಗಳ್ಲಲಿ ಅಭಿವೃದ್ಧಿ ವಿಳಂಬವನ್ನು ತೋರಿಸುತ್ತಿದ್ದರೆ , ಅದನ್ನು ಜಾಗತಿಕ ಅಭಿವೃದ್ಧಿ ವಿಳಂಬವೆನ್ನುತ್ತಾರೆ. ಜಾಗತಿಕ ಅಭಿವೃದ್ಧಿ ವಿಳಂಬವನ್ನು ಬಹಳ ಗಂಭೀರವಾಗಿ ತೆಗೆದುಕೊಳ್ಳಬೇಕು ಏಕೆಂದರೆ ಇದು ಯಾವುದೊ ಆನುವಂಶೀಯ ದೋಷ ಅಥವಾ ಗಂಭೀರವಾದ ವೈದ್ಯಕೀಯ ಸಮಸ್ಯೆಯ ಸೂಚನೆಯಾಗಿರುತ್ತದೆ. ಸರಿಯಾದ ಸಮಯಕ್ಕೆ ವೈದ್ಯಕೀಯ ತಪಾಸಣೆ ಹಾಗು ಸಹಾಯದಿಂದ , ಮಗುವು ತನ್ನಲಿರುವ ಅಸ್ವಸ್ಥತೆಯನ್ನು ಜಯಿಸಲು ಹಾಗು ಸಾಮಾನ್ಯ ಜೀವನ ನಡೆಸಲು ಸಹಾಯವಾಗುತ್ತದೆ.
ವೈದ್ಯರನ್ನು ಯಾವಾಗ ಭೇಟಿಯಾಗಬೇಕು?
ಅಭಿವೃದ್ಧಿ ವಿಳಂಬವಿರುವ ಮಗುವಿಗೆ , ಎಷ್ಟು ಬೇಗ ಚಿಕಿತ್ಸೆ ನೀಡಿಸುತ್ತೀರೋ , ಅಷ್ಟೂ ಒಳ್ಳೆಯದು. ಅಭಿವೃದ್ಧಿ ವಿಳಂಬದ ಯಾವುದೇ ಲಕ್ಷಣವನ್ನು ನಿಮ್ಮ ಮಗುವಿನಲ್ಲಿ ಗಮನಿಸಿದರೆ , ತಕ್ಷಣ ಅದರ ಬಗ್ಗೆ ನಿಮ್ಮ ವೈದ್ಯರ ಬಳಿ ಚರ್ಚಿಸುವುದು ಉತ್ತಮ.
ಮಕ್ಕಳಿನಲ್ಲಿ ಅಭಿವೃದ್ಧಿ ವಿಳಂಬವಾಗುವುದ್ದಕ್ಕೆ ಕಾರಣಗಳೇನು?
ಅಪೌಷ್ಟಿಕತೆ ಹಾಗು ಪ್ರಿ ಮ್ಯಾಚುರಿಟಿ , ಅಭಿವೃದ್ಧಿ ವಿಳಂಬಕ್ಕೆ ಎರಡು ಮುಖ್ಯ ಕಾರಣಗಳು. ತೀವ್ರ ಒತ್ತಡ ಕೂಡ ಮತ್ತೊಂದು ಮುಖ್ಯ ಕರಣ.
ಒತ್ತಡ : ಒತ್ತಡ, ಮಗುವಿನ ಮೆದುಳಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಹಾಗು ಅರಿವಿನ ಬೆಳವಣಿಗೆಯನ್ನೂ ತಡೆ ಯುತ್ತದೆ. ಬೇಷರತ್ತಾದ ಸ್ವೀಕಾರ ಹಾಗು ಪ್ರೀತಿಯ ಮೂಲಕವೇ , ಮಗುವು ಒತ್ತಡದಿಂದ ಚೇತರಿಸಿಕೊಳ್ಳಲು ಸಾಧ್ಯ.
ಆಹಾರ : ಪ್ರತಿಯೊಬ್ಬರ ಅರೋಗ್ಯ ಹಾಗು ಯೋಗ ಕ್ಷೇಮಕ್ಕೆ ಬಹಳ ಮುಖ್ಯವಾದ್ದುದೆಂದರೆ ಸರಿಯಾದ ಆಹಾರ. ಸರಿಯಾದ ಆಹಾರದ ಕೊರತೆಯಿಂದ ಬೆಳವಣಿಗೆಯಲ್ಲಿ ಕುಂಠಿತ ಹಾಗು ಅಭಿವೃದ್ಧಿ ವಿಳಂಬವಾಗಬಹುದು. ಆದ್ದರಿಂದ ನಿಮ್ಮ ಮಗುವು ಸಮತೋಲನದ ಆಹಾರ ಸೇವನೆ ಮಾಡುವಂತೆ ನೋಡಿಕೊಳ್ಳಿ. ನಿಮ್ಮ ಮಕ್ಕಳನ್ನು ಜಂಕ್ ಪದಾರ್ಥಗಳಿಂದ ದೊರವಿಡಿ ಹಾಗು ಪೌಷ್ಟಿಕ ಆಹಾರಗಳನ್ನು ಸೇವಿಸುವ ಅಭ್ಯಾಸವನ್ನು ಬೆಳಿಸಿಕೊಳ್ಳುವಲ್ಲಿ ಸಹಾಯ ಮಾಡಿ.
ಪ್ರೀಮ್ಯಾಚುರಿಟಿ : ಪೂರ್ವಭಾವಿಯಾಗಿ ಹುಟ್ಟಿದ ಮಗುವಿನ ಬೆಳವಣಿಗೆಯಲ್ಲಿ ಸಮಸ್ಯೆಗಳಿರಬಹುದು. ಪೂರ್ಣ ಅವಧಿಗೆ ಹುಟ್ಟಿದ ಮಗುವಿಗೆ ಹೋಲಿಸಿದರೆ ಪೂರ್ವಭಾವಿಯಾಗಿ ಹುಟ್ಟಿದ ಮಗುವಿನಲ್ಲಿ ಹೆಚ್ಚಿನ ಮಟ್ಟದ ಬೆಳವಣಿಗೆಯ ಸಮಸ್ಯೆಗಳಿರುತ್ತದೆ. ಪೂರ್ವಭಾವಿಯಾಗಿ ಹುಟ್ಟಿದ ಮಗುವಿನಲ್ಲಿ , ಸರಿಪಡಿಸಿದ ವಯಸ್ಸಿನ ಬೆಳವಣಿಗೆಯನ್ನು ಅಳಿಯಲಾಗುತ್ತದೆ. ಉದಾಹರಣೆಗೆ ೧-ವರ್ಷದ ಮಗುವು ೨ ತಿಂಗಳು ಮುಂಚಿತವಾಗಿ ಹುಟ್ಟಿದ್ದರೆ, ಮಗುವಿನ ಸರಿಪಡಿಸಿದ ವಯಸ್ಸು ೧೦ ತಿಂಗಳು. ಆದ್ದರಿಂದ ಪೂರ್ವಭಾವಿಯಾಗಿ ಹುಟ್ಟಿದ ಮಕ್ಕಳಿನಲ್ಲಿ , ಬೆಳವಣಿಗೆಯ ಮೈಲುಗಳನ್ನು ನಿರಂತರವಾಗಿ ಗಮನಿಸುವುದು ಬಹಳ ಮುಖ್ಯ.
ಹಕ್ಕು ತ್ಯಾಗ : ಈ ಲೇಖನದಲ್ಲಿರುವ ಮಾಹಿತಿ ವೈದ್ಯಕೀಯ ತಪಾಸಣೆಗೆ , ಚಿಕಿತ್ಸೆಗೆ ಪರ್ಯಾಯವಲ್ಲ. ಯಾವಾಗಲು ವೈದ್ಯರ ಸಲಹೆಯನ್ನು ಪಡೆಯಿರಿ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.