11 Jun 2019 | 1 min Read
Medically reviewed by
Author | Articles
ಮಕ್ಕಳಿನಲ್ಲಿ ‘ಎ ಡಿ ಹಚ್ ಡಿ’ ಯನ್ನು ಗುರುತಿಸುವುದು.
ಮಕ್ಕಳು ಅತ್ಯಂತ ಕ್ರಿಯಾಶೀಲರಾಗಿರುವುದು, ಆಲೋಚನೆಯಿಲ್ಲದೆ ವರ್ತಿಸುವುದು, ಚಡಪಡಿಸುವುದು ಹಾಗು ತಾವು ಮಾಡಬೇಕಾದದ್ದನ್ನು ಮರೆಯುವುದು ಸಾಮಾನ್ಯ. ಆದರೆ ಇವು ಮಗುವಿನ ಸಾಮಾಜಿಕ ಹಾಗು ಶೈಕ್ಷಣಿಕ ನಿರ್ವಹಣೆಯ ಮೇಲೆ ಪರಿಣಾಮ ಬೀರಿಲು ಶುರುವಾದರೆ ಏನಾಗುವುದು? ಉದ್ವೇಗ, ಹೈಪೆರಾಕ್ಟಿವಿಟಿ ಹಾಗು ಗಮನ ಕೊರತೆ , ಇವು ‘ಎ ಡಿ ಹಚ್ ಡಿ’ ಸಮಸ್ಯೆಯ ಲಕ್ಷಣಗಳು.
‘ಎ ಡಿ ಹಚ್ ಡಿ’ : ಕಟ್ಟುಕಥೆಯೆ?
ಬಹಳ ದಿನ, ಉದ್ವೇಗ, ಹೈಪೆರಾಕ್ಟಿವಿಟಿ ಹಾಗು ಗಮನ ಕೊರತೆ ಇವೆಲ್ಲವು ಸಾಮಾನ್ಯ ನಡುವಳಿಕೆ ಎಂದು ಪರಿಗಣಿಸಿದ್ದರು . ಪೋಷಕರು ಸಹ ಮಗುವಿನ ನಡುವಳಿಕೆ ಮಗುವಿನ ಶೈಕ್ಷಿಣಿಕ ಹಾಗು ಸಾಮಾಜಿಕ ಜೀವನದಲ್ಲಿ ಪರಿಣಾಮ ಬೀರುತ್ತಿದ್ದರೂ ವೈದ್ಯಕೀಯ ತಪಾಸಣೆ ಮಾಡಿಸುತ್ತಿರಲಿಲ್ಲ. ಆದರೆ ‘ಎ ಡಿ ಹಚ್ ಡಿ’ ಯನ್ನು ನಿಜವಾದ ಅಸ್ವಸ್ಥತೆ ಎಂದು ಪರಿಗಣಿಸಬೇಕಾದ ಸಮಯ ಬಂದಿದೆ.
‘ಎ ಡಿ ಹಚ್ ಡಿ’ ಯ ಕಾರಣಗಳು
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಯೆಗಳಲ್ಲಿ ‘ಎ ಡಿ ಹಚ್ ಡಿ’ಕೂಡ ಒಂದು.ಇದು ಒಂದು ದೀರ್ಘಕಾಲದ ಅಸ್ವಸ್ಥತೆಯಾಗಿದ್ದು , ಭಾರತದಲ್ಲಿ ಶೇಕಡಾ ೫% ಮಕ್ಕಳಲ್ಲಿ , ಅಂದರೆ ಸುಮಾರು ೧೦ ಲಕ್ಷ ಮಕ್ಕಳಲ್ಲಿ ಇದು ಕಂಡುಬರುತ್ತದೆ. ‘ಎ ಡಿ ಹಚ್ ಡಿ’ ಯು ಮೆದುಳಿನ ಬೆಳವಣಿಗೆಯಲ್ಲಿ ಕಂಡುಬರುವ ಸಮಸ್ಯೆ. ಆದರೆ ಇದಕ್ಕೆ ಕಾರಣವೇನು ಎಂಬುದನ್ನು ಇನ್ನು ಪತ್ತೆಹಚ್ಚಲಾಗಿಲ್ಲ. ಇದೊಂದು ಅನುವಂಶಿಕ ಅಸ್ವಸ್ಥತೆ ಎಂದು ಭಾವಿಸಲಾಗಿದೆ. ಬೇರೆ ಅಪಾಯದ ಅಂಶಗಳೇನೆಂದರೆ :
ಗರ್ಭಧಾರಣೆಯ ವೇಳೆ ಪರಿಸರದ ಟಾಕ್ಸಿನ್ಸ್ಗಳಿಗೆ ಒಡ್ಡುವಿಕೆ
ಚಿಕ್ಕ ವಯಸ್ಸಿನಲ್ಲಿ , ಪರಿಸರ ಟಾಕ್ಸಿನ್ಸ್ , ಉದಾಹರಣೆಗೆ ಹೆಚ್ಚಿನ ಮಟ್ಟದ ಸೇಸ ಗೆ ಒಡ್ಡುವಿಕೆ
ಮೆದುಳಿನ ಗಾಯಗಳು
ಜನನದ ಸಮಯದಲ್ಲಿ ಕಡಿಮೆ ತೂಕ
ಪುರುಷ ಲೈಂಗಿಕತೆ
ಎ ಡಿ ಹಚ್ ಡಿ ನ ಲಕ್ಷಣಗಳು
‘ಎ ಡಿ ಹಚ್ ಡಿ’ನ ಮಕಳ್ಳಲ್ಲಿ ಅನೇಕ ರೋಗಲಕ್ಷಣಗಳಿರುತ್ತವೆ. ಆದಾಗ್ಯೂ , ಹೈಪೆರಾಕ್ಟಿವ್ ಇರುವ ಎಲ್ಲಾ ಮಕ್ಕಳ್ಲಲಿ ‘ಎ ಡಿ ಹಚ್ ಡಿ’ ಇರುವುದಿಲ್ಲ. ‘ಎ ಡಿ ಹಚ್ ಡಿ’ಯು , ಮಗುವಿನಲ್ಲಿ ಇದೆ ಎಂದು ನಿರ್ಣಯಿಸಲು , ಅನೇಕ ಲಕ್ಷಣಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ , ಉದಾಹರಣೆಗೆ ಶಾಲೆ , ಮನೆ ಸಾರ್ವಜನಿಕ ಸ್ಥಳಗಳಲ್ಲಿ ಗಮನಿಸಬೇಕು. ಕೆಳಗೆ ನೀಡಿರುವ ಲಕ್ಷಣಗಳು ಬಹಳ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು :
ಯಾವುದಾದರು ಕೆಲಸ, ಕಾರ್ಯಗಳಲ್ಲಿ ಕೇಂದ್ರೀಕರಿಸಲು ಕಷ್ಟ ಉದಾಹರಣೆಗೆ ದೀರ್ಘ ಸಂಭಾಷಣೆ ಹಾಗು ಉಪಾನ್ಯಾಸಗಳಲ್ಲಿ .
ವಿವರಗಳಿಗೆ ಗಮನ ಕೊಡದಿರುವುದು ಹಾಗು ಶಾಲೆಯಲ್ಲಿ ಸಣ್ಣ ಸಣ್ಣ ತಪ್ಪುಗಳನ್ನು ಪದೇ ಪದೇ ಮಾಡುವುದು.
ದೀರ್ಘಕಾಲದ ಮಾನಸಿಕ ಚಟುವಟಿಕೆಯಿಂದ ದೂರವಿರುವುದು. ಉದಾಹರಣೆಗೆ ಒಗಟು ಬಿಡಿಸುವುದು ಅಥವ ಉದ್ದನೆಯ ಸಾಲುಗಳನ್ನು ಓದುವುದು.
ಮಾತನಾಡಿಸಿದಾಗ ಬೇರೆ ಎಲ್ಲೋ ಗಮನ ಹರಿಸುವುದು.
ಸೂಚನೆಗಳನ್ನು ಪಾಲಿಸುವುದಕ್ಕೆ ಕಷ್ಟ ಪಡುವುದು ಹಾಗು ಕೆಲಸವನ್ನು ಪೂರ್ಣಗೊಳಿಸದಿರುವುದು.
ಬಹಳ ಅಸ್ತವ್ಯಸ್ತವಾಗಿರುವುದು ಹಾಗು ಸಮಯ ನಿರ್ವಹಣೆ ಮಾಡದಿರುವುದು
ವಸ್ತುಗಳನ್ನು ನಾಜೂಕಾಗಿ ಬಳಸದಿರುವುದು ಹಾಗು ವಸ್ತುಗಳಾದ ಪುಸ್ತಕ, ಮೊಬೈಲ್ ಫೋನ್ , ಪರ್ಸ್ , ಕನ್ನಡಕ ಗಳನ್ನು ಕಳೆದು ಹಾಕುವುದು
ಸುಲಭವಾಗಿ ಚಂಚಲಗೊಳ್ಳುವುದು ಹಾಗು ಆಗಾಗ್ಗೆ ಮಾಡುವ ಕೆಲಸಗಳನ್ನು ಬದಲಾಯಿಸುವುದು.
ಆಗ್ಗಾಗೆ ಕೈ , ಕಾಲುಗಳನ್ನು ಚಡಪಡಿಸುವುದು
ತರಗತಿಯಲ್ಲಿ ಅಥವಾ ಮನೆಯಲ್ಲಿ , ಕೆಲವೇ ಕೆಲವು ಸಮಯ ಕೂರುಲು ಅಥವಾ ನಿಲ್ಲಲು ಕಷ್ಟಪಡುವುದು.
ಮಾಡಬಾರದ ಜಾಗಗಳ ಮೇಲೆ , ಉದಾಹರಣೆಗೆ ಶಾಲೆಯಲ್ಲಿ ಕುರ್ಚಿ ಅಥವಾ ಮೇಜು , ಮನೆಯಲ್ಲಿ ಸೋಫಾ ಮೇಲೆ ಕುಣಿಯುವುದು, ಓಡು ವುದು ಇತ್ಯಾದಿ ದೈಹಿಕ ಚಟುವಟಿಕೆಗಳನ್ನು ಮಾಡುವುದು.
ಸುಮ್ಮನೆ ಕೂತು ಆಡುವ ಬಿಡುವಿನ ಚಟುವಟಿಕೆಗಳನ್ನು ಆಡದಿರುವುದು.
ವಿಪರೀತ ಮಾತನಾಡುವುದು ಹಾಗು ಏನನ್ನಾದರು ಉತ್ತರಿಸಲು ತನಗೆ ಅವಕಾಶ ಬರುವ ತನಕ ಕಾಯದಿರುವುದು. ಬೇರೆ ಮಕ್ಕಳು ಮಾತನಾಡುವಾಗ ಅವರ ವಾಕ್ಯವನ್ನು ಇವರೇ ಪೂರ್ಣಗೊಳಿಸುವುದು.
ಎ ಡಿ ಹಚ್ ಡಿ ಗೆ ಪರಿಹಾರ
‘ಎ ಡಿ ಹಚ್ ಡಿ’ ಸರಿಯಾದ ಚಿಕಿತ್ಸೆ ಇಲ್ಲದಿದ್ದರೂ , ಅದರ ಲಕ್ಷಣಗಳನ್ನು ಔಷದಿಯ ಮೂಲಕ ನಿಯಂತ್ರಿಸಬಹುದು. ಔಷಧಿ ಹಾಗು ‘ಎ ಡಿ ಹಚ್ ಡಿ’ ಬಿಹೇವಿಯೆರ್ ಥೆರಪಿ , ಎರಡನ್ನೂ ನೀಡಲಾಗುತ್ತದೆ. ಉತ್ತೇಜಿತ ಹಾಗು ಉತ್ತೇಜಿತವಲ್ಲದ ಔಷಧಿಗಳನ್ನು ನೀಡಲಾಗುವುದು. ಇವು ಮೆದುಳಿನಲ್ಲಿ ರಾಸಾಯನಿಕ ಸಮತೋಲನ ತರುವುದರಲ್ಲಿ ಸಹಾಯ ಮಾಡುತ್ತವೆ. ‘ಎ ಡಿ ಹಚ್ ಡಿ’ ಬಿಹೇವಿಯೆರ್ ಥೆರಪಿಯು ಒಂದು ರೀತಿಯ ಮಾನಸಿಕ ಚಿಕಿತ್ಸೆಯಾಗಿದ್ದು , ಸಮಾಲೋಚನೆ ಹಾಗು ಮಾರ್ಗದರ್ಶನ ಮೂಲಕ, ಮಗುವಿನ ವರ್ತನೆಯಲ್ಲಿ ಸುಧಾರಣೆ ತರುಲು ಪ್ರಯತ್ನ ಪಡುತ್ತದೆ.
ಡಿಸ್ಕಿಲೈಮರ್ : ಈ ಲೇಖನದಲ್ಲಿರುವ ಮಾಹಿತಿ ವೈದ್ಯಕೀಯ ತಪಾಸಣೆಗೆ , ಚಿಕಿತ್ಸೆಗೆ ಬದಲಿಯಲ್ಲ. ಯಾವಾಗಲು ವೈದ್ಯರ ಸಲಹೆ ಪಡೆಯಿರಿ.
A