ಮಕ್ಕಳಲ್ಲಿ ಮಲಬದ್ಧತೆಗೆ ವಿರೇಚಕ (ಲ್ಯಾಕ್ಸೇಟಿವ್) ಗಳನ್ನು ನೀಡುವುದು ಸುರಕ್ಷಿತವೇ?

cover-image
ಮಕ್ಕಳಲ್ಲಿ ಮಲಬದ್ಧತೆಗೆ ವಿರೇಚಕ (ಲ್ಯಾಕ್ಸೇಟಿವ್) ಗಳನ್ನು ನೀಡುವುದು ಸುರಕ್ಷಿತವೇ?

ತಾಯಂದಿರು ತಮ್ಮ ಮಕ್ಕಳಿಗೆ ಯಾವಾಗಲೂ  ನೈಸರ್ಗಿಕ ಲಕ್ಸಾಟಿವ್ಸ್ಗಳನ್ನು ನೀಡಲು ಶಿಫಾರಸ್ಸು ಮಾಡುತ್ತಾರೆ. ಆದರೆ ಅದರಿಂದ ಮಲಬದ್ಧತೆಯ ಸಮಸ್ಯೆ ಪರಿಹಾರವಾಗುವುದಿಲ್ಲ. ಹಾಗಾದರೆ ಏನು ಮಾಡಬೇಕು?

 

ಮಲಬದ್ಧತೆ ಸಾಮಾನ್ಯವಾಗಿ ಎಲ್ಲಾ ವಯಸ್ಸಿನವರಿಗೂ ಕಾಡುವ ಸಮಸ್ಯೆ ಹಾಗು ಮಕ್ಕಳೇನು ಇದಕ್ಕೆ ಹೊರತಲ್ಲ. ನಿಮ್ಮ  ಮಗುವೇನಾದರೂ ಮಲವಿಸರ್ಜನೆಯ ವೇಳೆ ನೋವಾಗುತ್ತಿದೆ ಎಂದು ಅಳುತ್ತಿದೆಯೇ? ಹಾಗಾದರೆ ಇದು ನೋವಿನ ಮಲಬದ್ಧತೆಯ ಲಕ್ಷಣ ಹಾಗು ಇದನ್ನು ನೈಸರ್ಗಿಕ ಲಕ್ಸಾಟಿವ್ಸ್ ಮೂಲಕ ಹೋಗಲಾಡಿಸಬಹುದು.

 

ಮಗುವಿನಲ್ಲಿ ಮಲಬದ್ದತೆಯನ್ನು ಹೇಗೆ ಗುರುತಿಸುವುದು ?

 

ಮಗುವಿನಲ್ಲಿ ಮಲಬದ್ದತೆಯನ್ನು ಗುರುತಿಸುವುದು ಬಹಳ ಸುಲಭ. ಇದರ ಲಕ್ಷಣಗಳನ್ನು ಕೆಳಗೆ ನೀಡಲಾಗಿದೆ.

ನಿಮ್ಮ ಮಗು ಮುಂಚೆಗಿಂತ ಕಡಿಮೆ ಮಲವಿಸರ್ಜನೆ ಮಾಡುವುದು

ಮಗುವು ಗಟ್ಟಿ ಹಾಗು ಒಣಗಿದ ಮಲವನ್ನು ವಿಸರ್ಜನೆ ಮಾಡುವುದು

ಮಲವಿಸರ್ಜನೆ ವೇಳೆ ಅಳುವುದು.

ಮಗುವಿನ ಟಾಯ್ಲೆಟ್ ಸೀಟ್ ಮೇಲೆ ಅಥವಾ ಡೈಪರನಲ್ಲಿ  ರಕ್ತದ ಕಲೆಯನ್ನು ಗಮನಿಸುವುದು.

ಅವಳ ಹೊಟ್ಟೆ ಗಟ್ಟಿಯಾಗುವುದು.

ಅವಳು ಆಹಾರವನ್ನು ನೀರಾಕರಿಸುವಳು.

 

ಮಕ್ಕಳಿಗೆ ಬರುವ ಮಲಬದ್ಧತೆಗೆ ಕಾರಣವೇನಿರಬಹುದು?

 

ಮಲಬದ್ದತೆಗೆ ಹಲವಾರು ಕಾರಣಗಳಿರಬಹುದು. ಅವುಗಳಲ್ಲಿ ಬಹಳ ಸಾಮಾನ್ಯವಾದ ಕಾರಣಗಳನ್ನು ಈ ಕೆಳಗೆ ನೀಡಲಾಗಿದೆ.

ಆಹಾರದಲ್ಲಿ ನಾರಿನಂಶ ಕಡಿಮೆಯಿರುವುದು.

ಸಾಕಷ್ಟು ಪ್ರಮಾಣದಲ್ಲಿ ನೀರು ಅಥವಾ ದ್ರವ ಪದಾರ್ಥಗಳನ್ನು ಸೇವಿಸದಿರುವುದು.

ಬಹಳ ಸಮಯದ ತನಕ ಮಲವಿಸರ್ಜನೆ ಮಾಡದಿರುವುದು. ಸ್ಟ್ರಿಕ್ಟ್ ಪಾಟ್ಟಿ ಟ್ರೈನಿಂಗ್ ಅಥವಾ ಸಾರ್ವಜನಿಕ ಸೌಚಾಲಯಗಳನ್ನು ಬಳಸಲು ಹಿಂಜರಿಯುವುದು ಅಥವಾ ಮಗುವಿಗೆ ಹಿಂದಿನ ಮಲವಿಸರ್ಜನೆ ವೇಳೆ ನೋವುಂಟಾಗಿರುವುದು , ಇದ್ಯಾವುದಾದರಿಂದ , ಮಗುವು ಮಲ ವಿಸರ್ಜನೆ ಮಾಡದೇ ಇರಬಹುದು. ಇದು ಮಕ್ಕಳ್ಲಲಿ ಕಂಡುಬರುವ ಮಲಬದ್ದತೆಗೆ, ಬಹಳ ಸಾಮಾನ್ಯವಾದ ಕಾರಣಗಳಾಗಿವೆ.

ವಾಂತಿ ಬರಿಸುವ ರೋಗಗಳು ಅಥವಾ ಕಡಿಮೆ ಆಹಾರ ,ನೀರು ಸೇವನೆ ಮಲಬದ್ದತೆಗೆ ಕರಣವಾಗಬಹುದು.

ಕೆಲವೊಂದು ಔಷಧಿಗಳು

ಅಕಾಲಿಕ ಶಿಶುಗಳಲ್ಲಿ

ತಾಯಿಯ ಎದೆ  ಹಾಲಿನಿಂದ ಫಾರ್ಮುಲಾ ಹಾಲಿಗೆ ಬದಲಿಸಿದಾಗ , ಕೆಲವೊಮ್ಮೆ ಮಲಬದ್ದತ್ತೆ ಉಂಟಾಗುತ್ತದೆ ಹಾಗೂ  ಮಲವು ಗಟ್ಟಿಯಾಗುತ್ತದೆ. ಆದ್ದರಿಂದ ಮಗುವಿಗೆ ಎದೆ ಹಾಲು ಬಿಡಿಸುವಾಗ , ಕ್ರಮೇಣವಾಗಿ ಬಿಡಿಸಬೇಕು .ಇದರಿಂದ ಮಲಬದ್ದತೆಯು ಉಂಟಾಗುವುದನ್ನು ತಡೆಯಬಹುದು.

ನನ್ನ ಮಗುವಿಗೆ ಮಲಬದ್ಧತೆಯಾದಾಗ ಏನು ಮಾಡಬೇಕು?

ನೀವು ಮೊದಲಬಾರಿಗೆ ನಿಮ್ಮ ಮಗುವಿನಲ್ಲಿ ಮಲಬದ್ದತೆಯನ್ನು ಕಂಡಾಗ , ಮಗುವಿನ ಆಹಾರದಲ್ಲಿ ಸ್ವಲ್ಪ ಬದಲಾವಣೆ ತಂದರೆ , ಮಲಬದ್ಧತೆಯನ್ನು  ಹೋಗಲಾಡಿಸಬಹುದು.

ಹೆಚ್ಚು ನೀರಿನ ಸೇವನೆ

ನಿಮ್ಮ ಮಗುವು ೧ ವರ್ಷದೊಳಗಾದಲ್ಲಿ, ಮಗುವಿಗೆ ೮೦-೧೨೦ಎಂ ಎಲ್ ನೀರು ಅಥವಾ ಹಣ್ಣಿನ ರಸವನ್ನು ಪ್ರತಿ ದಿನ ನೀಡಿ.

ನಿಮ್ಮ ಮಗುವು ೧ ವರ್ಷ ಮೇಲ್ಪಟ್ಟಲ್ಲಿ , ಪ್ರತಿ ದಿನ ಸುಮಾರು ಅರ್ಧ ಲೀಟರ್ ನೀರು ಅಥವಾ ದ್ರವ್ಯ ಪದಾರ್ಥಗಳನ್ನು ಸೇವಿಸುವಂತೆ ನೋಡಿಕೊಳ್ಳಿ.

ಆಹಾರಗಳಲ್ಲಿ ಬದಲಾವಣೆಗಳು

ಚಿಕ್ಕ ಮಕ್ಕಳಿಗೆ, ಹೆಚ್ಚು ಎದೆ ಹಾಲು ಹಾಗು ಕಡಿಮೆ ಫಾರ್ಮುಲಾ ಫೀಡ್ ಕೊಡುವುದು ಉತ್ತಮ. ನಾರಿನಂಶವಿರುವ ಪದಾರ್ಥಗಳಾದ ಹಣ್ಣುಗಳು, ತರಕಾರಿಗಳು, ಗೋಧಿ, ಬಾರ್ಲಿ, ಧಾನ್ಯಗಳ ಸೇವನೆಯಿಂದ ಮಲಬದ್ಧತೆ ಕಡಿಮೆಯಾಗುತ್ತದೆ. ಸಾದ್ಯವಾದರೆ ಫಾರ್ಮುಲ ಫೀಡ್  ನಿಲ್ಲಿಸಿದರೆ ಒಳ್ಳೆಯದು.

ದೊಡ್ಡ ಮಕ್ಕಳಿಗೆ, ಹಣ್ಣುಗಳು, ತರಕಾರಿಗಳು, ಪ್ರೋಬೈಯೋಟಿಕ್ಸ್ ಗಳಾದ ಮೊಸರು , ಯೋಗರ್ಟ್‍ಗಳನ್ನು  ನೀಡುವುದರಿಂದ , ಜೀರ್ಣಶಕ್ತಿ ಹೆಚ್ಚುವುದು.

ವ್ಯಾಯಾಮ

ನಿಮ್ಮ ಮಗು ೧ ವರ್ಷದೊಳಗಿದ್ದರೆ, ಹೊಟ್ಟೆಯನ್ನು ಮೆತ್ತಗೆ ಸವರುವುದಿಂದ ಅಥವಾ ಮಸಾಜ್ ಮಾಡುವುದರಿಂದ , ಸ್ವಲ್ಪ ಆರಾಮ ಸಿಗಬಹುದು. ಲೆಗ್ ಬೈಸಿಕಲ್ ಕೂಡ ಪ್ರಯತ್ನಿಸಬಹುದು.

ನಿಮ್ಮ ಮಗುವು ೧ ವರ್ಷ ಮೇಲ್ಪಟ್ಟಲ್ಲಿ , ಅವನಿಗೆ ನಡಿಯಲು ಅಥವಾ ಸೈಕಲ್ ತುಳಿಯಲು ಅಥವಾ ಬೇರೆ ಯಾವುದಾದರು ವ್ಯಾಯಾಮ  ಮಾಡುಲು ಪ್ರೋತ್ಸಾಹಿಸಿ, ಇದು ಸಹಾ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಹಾಲು - ಇದು ನೈಸರ್ಗಿಕ ದ್ರವ ಲಕ್ಸಾಟಿವ್ , ಇದು ಸಹಾ ಮಲಬದ್ದತೆಯನ್ನು ಕಡಿಮೆ ಮಾಡುತ್ತದೆ.

ಹಣ್ಣುಗಳು, ಹಾಲು, ಹೆಚ್ಚು ನೀರಿನ ಸೇವನೆ , ಇವೆಲ್ಲವೂ ನೈಸರ್ಗಿಕ ಲಕ್ಸಾಟಿವ್ಗಳು, ನಿಮ್ಮ ಮಕ್ಕಳು ಸೇವಿಸುವುದರಿಂದ , ಮಲಬದ್ಧತೆ ಒಂದು ವಾರದಲ್ಲಿ ಕಡಿಮೆಯಾಗುವುದು. ಆದರೆ ಇವುಗಳಿಂದ ಮಲಬದ್ದತ್ತೆ ಕಡಿಮೆಯಾಗದಿದ್ದರೆ, ವೈದ್ಯಕೀಯ ಲಕ್ಸಾಟಿವ್ಸ್‍ಗಳನ್ನು  ಬಳಸ ಬೇಕಾಗುತ್ತವೆ.

 

ಮಕ್ಕಳಿಗೆ ಲಕ್ಸಾಟಿವ್ಸ್ ನೀಡಬಹುದೇ?

 

ಮಕ್ಕಳಿಗೆ ಲಕ್ಸಾಟಿವ್ಸ್  ನೀಡುವುದು ಉಚಿತವಲ್ಲ. ಆದರೆ, ಕೆಲವೊಮ್ಮೆ ಮನೆಯ ಮದ್ದು ಕೆಲಸ ಮಾಡಡ್ದಿದಲ್ಲಿ , ಲಕ್ಸಾಟಿವ್ , ವೈದ್ಯರ ಸಲಹೆ ಮೇರೆಗೆ ನೀಡಬಹುದು.

ಮಕ್ಕಳ ಲಕ್ಸಾಟಿವ್ ಗಳನ್ನು ಈ ಕೆಳಗೆ ನೀಡಲಾಗಿದೆ.

ಗ್ಲಿಸರಿನ್ ಸಪೊಸಿಟರಿ

ಮಾಲ್ಟ್ - ಬಾರ್ಲಿ ತಯಾರಿತ ಅಥವಾ ಸೀಲಿಯಂ ಪೌಡರ್

ಲೆಕ್ಟುಲೊಸ್

ಸೋರ್ಬಿಟೊಲ್

ಪಾಲಿಇಥೈಲಿನ್ ಗ್ಲೈಕೋಲ್

ಮಿಲ್ಕ್ ಆಫ್  ಮೆಗ್ನೀಷಿಯ

ಸೆನ್ನಾ

ಡೊಕ್ಯುಸೆಟ್ ಸೋಡಿಯಂ

ಮೇಲೆ ನೀಡಿರುವ ಲಕ್ಸಾಟಿವ್ ಗಳ ಸೇವನೆ ಅಡ್ಡ ಪರಿಣಾಮ ಬೀರಬಹುದು . ಆದ್ದರಿಂದ, ಇವನ್ನು ೨ ವರ್ಷದೊಳಗಿನ ಮಕ್ಕಳಿಗೆ  ನೀಡಬಾರದು. ಇಲ್ಲವೇ ವೈದ್ಯರನ್ನು ಕೇಳಿ , ನಂತರ ನೀಡಬೇಕು.

 

#babychakrakannada
logo

Select Language

down - arrow
Personalizing BabyChakra just for you!
This may take a moment!