• Home  /  
  • Learn  /  
  • ಎತ್ತರ ಮತ್ತು ತೂಕದ ಚಾರ್ಟ್: ನಿಮ್ಮ ಮಗುವಿನ ಆರೋಗ್ಯವನ್ನು ಗಮನಿಸಲು ಒಂದು ಸುಲಭ ಸಾಧನ
ಎತ್ತರ ಮತ್ತು ತೂಕದ ಚಾರ್ಟ್: ನಿಮ್ಮ ಮಗುವಿನ ಆರೋಗ್ಯವನ್ನು ಗಮನಿಸಲು ಒಂದು ಸುಲಭ ಸಾಧನ

ಎತ್ತರ ಮತ್ತು ತೂಕದ ಚಾರ್ಟ್: ನಿಮ್ಮ ಮಗುವಿನ ಆರೋಗ್ಯವನ್ನು ಗಮನಿಸಲು ಒಂದು ಸುಲಭ ಸಾಧನ

12 Jun 2019 | 1 min Read

Medically reviewed by

Author | Articles

ಎತ್ತರ ಹಾಗು ತೂಕದ ಚಾರ್ಟ್ , ಮಗುವಿನ ಬೆಳೆವಣಿಗೆಯನ್ನು ತಿಳಿಯಲು ಹೇಗೆ ಸಹಾಯ ಮಾಡುತ್ತದೆ?

ಮಗುವಿನ ಬೆಳೆವಣಿಗೆಯನ್ನು ತಿಳಿಯುವಲ್ಲಿ, ಎತ್ತರ ಹಾಗು ತೂಕದ ಚಾರ್ಟ್ ಬಹಳ ಮುಖ್ಯವಾದ ಪಾತ್ರ ವಹಿಸುತ್ತದೆ. ನಿಮ್ಮ ಮಗುವಿನ ಬೆಳವಣಿಗೆಯನ್ನು ಮಾಸಿಕವಾಗಿ ತಿಳಿಯಲು , ಇದು ಬಹಳ ಪರಿಣಾಮಕಾರಿ ಹಾಗು ಸುಲಭದ ಉಪಕರಣ. ಈ ಎತ್ತರ ಹಾಗು ತೂಕದ ಚಾರ್ಟ್ , ನಿಮಗೆ ಹಾಗು ವೈದ್ಯರಿಗೆ ಮಗುವಿನ ಬೆಳವಣಿಗೆಯನ್ನು ನಿಯಮಿತ ಮಧ್ಯಂತರಗಳಲ್ಲಿ ತಿಳಿಯಲು ಸಹಾಯ ಮಾಡುತ್ತದೆ. ಇದು ಮಗುವಿನಲ್ಲಿ ಯಾವುದಾದರು  ಸಮಸ್ಯೆಯಿದ್ದರೆ , ಅದನ್ನು ತಿಳಿಯಲು ಸಹಾಯ ಮಾಡುತ್ತದೆ. ಮಗುವಿನ ಬೆಳವಣಿಗೆಗೆ ಆಹಾರ ಕೂಡ ಬಹಳ ಮುಖ್ಯ ಹಾಗು ಎತ್ತರ ಹಾಗು ತೂಕದ ಚಾರ್ಟ್ ಅದರ ಅತ್ಯುತ್ತಮ ಸೂಚಕ.

 

ಬೇರೆ ಬೇರೆ ರೀತಿಯ ಬೆಳವಣಿಗೆ ಚಾರ್ಟ್ಗಳನ್ನು ವೈದ್ಯರು ಬಳಸುತ್ತಾರೆ. ಕೆಲುವು ೫ ವರ್ಷದೊಳಗಿನ ಮಕ್ಕಳಿಗೆ ಮಾತ್ರ ಬಳಸುತ್ತಾರೆ. ಯಾವುವೆಂದರೆ ಎತ್ತರ ಹಾಗು ತೂಕದ ಚಾರ್ಟ್, ತೂಕ ಹಾಗು ಉದ್ದದ ಚಾರ್ಟ್, ಮೋಟಾರ್ ಅಭಿವೃದ್ಧಿಯ ಮೈಲುಗಲ್ಲು, ತೋಳಿನ ಸುತ್ತಳತೆ ಇತ್ಯಾದಿ. ಬಿ ಎಮ್ ಐ ( ತಳದ ಚಯಾಪಚಯ ಸೂಚ್ಯಂಕ ) ಚಾರ್ಟ್‌‍ನ್ನು , ೫ ರಿಂದ ೧೮ ವರ್ಷದ ಮಕ್ಕಳಿಗೆ ಬಳಸುತ್ತಾರೆ.

 

 

ಈಗ ಖರೀದಿಸಿ ಮತ್ತು 35% ರಿಯಾಯಿತಿ ಪಡೆಯಿರಿ

 

ಎತ್ತರ ಹಾಗು ತೂಕದ ಚಾರ್ಟ್ ಹೇಗೆ ಬಳಸುವುದು?

 

ಗಂಡು ಹಾಗು ಹೆಣ್ಣು ಮಕ್ಕಳಿಗೆ ಮೇಲಿನ ಅಂಕಿಗಳು ಎತ್ತರ ಹಾಗು ತೂಕದ ಚಾರ್ಟ್ ಶೇಕಡವನ್ನು ನೀಡುತ್ತದೆ.

 

ವರ್ಲ್ಡ್ ಹೆಲ್ತ್ ಆರ್ಗನೈಸೇಷನ್ ನೀಡಿರುವ ಮಕ್ಕಳ ಬೆಳವಣಿಗೆಯ ಮಾನದಂಡಗಳನ್ನು ಆಧರಿಸಿ  ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ (ಐ ಎ ಪಿ) ಎತ್ತರ ಹಾಗು ತೂಕದ ಚಾರ್ಟ್ ಭಾರತದ ಮಕ್ಕಳಿಗಾಗಿ ರಚಿಸಿದೆ. ೨೦೧೫ರಲ್ಲಿ  (ಐ ಎ ಪಿ)ಯು ಪರಿಸ್ಕರಿಸಿದ ಎತ್ತರ ಹಾಗು ತೂಕದ ಚಾರ್ಟ್ ೫ ರಿಂದ ೧೮ ವರ್ಷದ ಮಕ್ಕಳಿಗಾಗಿ ಬಳಸಲಾಗುತ್ತಿದೆ. ಗಂಡು ಮಗು ಹಾಗು ಹೆಣ್ಣು ಮಗುವಿನ ಬೆಳವಣಿಗೆಯಲ್ಲಿ ವ್ಯತ್ಯಾಸ ಇರುವುದರಿಂದ , ಎತ್ತರ ಹಾಗು ತೂಕದ ಚಾರ್ಟ್ ಕೂಡ  ಬೇರೆ ಬೇರೆ ಇದೆ.

 

ಸೂಕ್ತ ಮಾಪನಗಳ ಬಳಿಕ (ಉದಾಹರಣೆಗೆ ಎತ್ತರ , ಮೆಟೊಬೊಲಿಕ್ ಸೂಚ್ಯಂಕ, ತಲೆಯ ಸುತ್ತಳತೆ ಇತ್ಯಾದಿ), ವೈದ್ಯರು ಗ್ರಾಫಿನ ಮೇಲೆ ಮೌಲ್ಯದ ಅಡ್ಡ ಗೆರೆಯನ್ನು ಎಳೆಯುತ್ತಾರೆ. ಪ್ರತಿ ಬಾರಿ ವೈದ್ಯರ ಬಳಿ ಹೋದಾಗ , ಹೊಸ ಮೌಲ್ಯದ ಅಡ್ಡಗೆರೆ ಎಳೆಯಲಾಗುತ್ತದೆ ಹಾಗು ಅದನ್ನು ಹಳೆಯ ಮೌಲ್ಯಕ್ಕೆ ಹೋಲಿಸಲಾಗುತ್ತದೆ ಹಾಗು ನಿಗದಿತ ಮೌಲ್ಯಗಳಿಗೂ ಹೋಲಿಸಲಾಗುತ್ತದೆ. ಹಳೆಯ ಹಾಗು ಹೊಸ ಮೌಲ್ಯಗಳನ್ನು ಹೋಲಿಸಿದಾಗ , ಅದು ಮಗುವಿನ ಬೆಳವಣಿಗೆಯ ನಮೂನೆಯನ್ನು ತಿಳಿಯಲು ಸಹಮಾಡುತ್ತದೆ.

 

ಗ್ರಾಫಿನ ಮೇಲೆ  ತೂಕ-ವಯಸ್ಸು-ಎತ್ತರ ಗಳ ಅಡ್ಡ ಗೆರೆ ಎಳೆದ ಮೌಲ್ಯಗಳು ಅತಿಮೇಲಿನ ಗೆರೆಗಿಂತ ಹೆಚ್ಚು ಅಥವಾ ಅತಿಕೆಳಗಿನ ಗೆರೆ ಗಿಂತ ಕೆಳಗೆ ಇದ್ದಲಿ , ಅದು  ಸಾಮಾನ್ಯ ಶ್ರೇಣಿಯಿಂದ ಹೊರಗಿದೆ ಎಂದರ್ಥ. ಇದು ನಿಮ್ಮ ಮಗುವಿನಲ್ಲಿ ಯಾವುದೊ ಅರೋಗ್ಯ ಸಂಬಂಧ ಪಟ್ಟ ಸಮಸ್ಯೆ ಇದೆ ಎಂದು ತಿಳಿಸುತ್ತದೆ.

 

ನೀವು ಮನೆಯಲ್ಲೇ ಕುಳಿತು ಎತ್ತರ ಹಾಗು ತೂಕದ ಮಾಪನ ಮಾಡಿ ಗ್ರಾಫ್ನ ಮೇಲೆ ಅಡ್ಡ ಗೆರೆ ಎಳೆಯಬಹುದು . ಅದು ಹೈಲೈಟ್ ಮಾಡಲಾದ ಕರ್ವ್ ನಿಂದ ಹೊರಗಿದ್ದರೆ , ಆಗ ಅದನ್ನು ನಿಮ್ಮ ವೈದ್ಯರ ಬಳಿ ತೋರಿಸಬಹುದು.

 

ಎತ್ತರ ಹಾಗು ತೂಕದ ಚಾರ್ಟ್  ಏಕೆ ಉಪಯುಕ್ತ :

 

ನಿಮ್ಮ ಮಗುವಿನ ಬೆಳವಣಿಗೆಯನ್ನು ಮನೆಯಲ್ಲೇ ತಿಳಿಯಲು , ಎತ್ತರ ಹಾಗು ತೂಕದ ಚಾರ್ಟ್ ಒಂದು ಅಗ್ಗದ , ಸುಲಭವಾದ , ಸುರಕ್ಷಿತ , ಆಕ್ರಮಣಶೀಲವಲ್ಲದ ಹಾಗು ಕಾರ್ಯಕಾರಿ ಉಪಕರಣ

ನಿಮ್ಮ ಮಗುವು ನಿಗದಿತ ಮೌಲ್ಯಗಳಿಗೆ ತಕ್ಕಂತೆ ಬೆಳಿಯುತ್ತಿದೆಯೇ ಎಂಬುದನ್ನು ತಿಳಿಸಿಕೊಡುತ್ತದೆ ಹಾಗು ನಿಮ್ಮ ಮಗುವಿನ ವಯಸ್ಸಿನ ಇತರೆ ಮಕ್ಕಳ ಬೆಳವಣಿಗೆಗೆ ನಿಮ್ಮ ಮಗುವಿನ ಬೆಳವಣಿಗೆಯನ್ನು ಹೋಲಿಸುತ್ತದೆ.

ನಿಮ್ಮ ಮಗುವಿನಲ್ಲಿ ಆಹಾರದ (ಪ್ರೋಟಿನ್ – ಎನರ್ಜಿ ಅಪೌಷ್ಟಿಕತೆ), ದೀರ್ಘಕಾಲದ ರೋಗ , ಇತ್ಯಾದಿ ಗಳನ್ನೂ , ಆರೋಗ್ಯದ ಪರಿಸ್ಥಿಯನ್ನು ನಿರ್ಣಯಿಸಲು ಸಹಾಯವಾಗುತ್ತದೆ.

 

 

 

ಈಗ ಖರೀದಿಸಿ ಮತ್ತು 38% ರಿಯಾಯಿತಿ ಪಡೆಯಿರಿ

 

ಗಂಡು ಮಕ್ಕಳ ಎತ್ತರ ಹಾಗು ತೂಕದ ಚಾರ್ಟ್ (೧ ರಿಂದ ೧೮ ವರ್ಷದವರೆಗೆ) (ಐ ಎ ಪ್ ಹಾಗು ಡಬ್ಲ್ಯೂ ಹಚ್ ಒ ,ಎರಡೂ ಸೇರಿಸಿ)

 

ವಯಸ್ಸು (ವರ್ಷಗಳಲ್ಲಿ)

ಎತ್ತರ (ಸೆಂಟಿಮೀಟರ್)

ತೂಕ (ಕಿಲೋಗ್ರ್ಯಾಮ್)

0 to 1

46 to 80

2.5 to 12

1 to 2

71 to 94

7.5 to 15

2 to 3

82 to 103

9.5 to 18

3 to 4

89 to 111

11.5 to 21

4 to 5

95.5 to 118.5

12.5 to 24.5

5 to 6

100 to 126

13.5 to 28

6 to 7

104 to 132.5

14.5 to 33.5

7 to 8

109 to 139

16 to 39.5

8 to 9

114 to 145.5

17.5 to 45.5

9 to 10

119 to 151.5

19 to 51.5

10 to 11

123.5 to 157

21 to 58

11 to 12

128 to 163.5

22.5 to 66

12 to 13

133 to 170

25 to 175.5

13 to 14

138 to 175.5

27.5 to 78

14 to 15

143 to 179.5

30.5 to 83

15 to 16

148 to 183

34.5 to 86

16 to 17

152 to 184.5

37 to 87.5

17 to 18

155 to 186.5

39.5 to 88

 

 ಹೆಣ್ಣು ಮಕ್ಕಳಿಗೆ ಎತ್ತರ ಹಾಗು ತೂಕದ ಚಾರ್ಟ್ ಟೇಬಲ್ (೦ ಇಂದ ೧೮ ವರ್ಷದವರೆಗೆ ) (ಐ ಎ ಪಿ ಹಾಗು ಡಬ್ಲ್ಯೂ ಹಚ್ ಓ ಸೇರಿ )

 

ವಯಸ್ಸು ( ವರ್ಷಗಳಲ್ಲಿ )

ಎತ್ತರ (ಸೆಂಟಿಮೀಟರ್)

ತೂಕ (ಕಿಲೋಗ್ರ್ಯಾಮ್)

0 to 1

46 to 79

2.3 to 11.5

1 to 2

69 to 92.5

7 to 14.5

2 to 3

80 to 102

9 to 17.5

3 to 4

85.5 to 111

11 to 21

4 to 5

95 to 118

12.5 to 25

5 to 6

97.5 to 125.5

13 to 29

6 to7

102 to 135

13.8 to 33

7 to 8

107 to 138

15 to 38

8 to 9

112.5 to 144.5

16.5 to 43

9 to 10

117.5 to 151

18.2 to 49

10 to 11

123 to 157

20.8 to 56

11 to 12

129 to 162

23 to 62

12 to 13

134 to 166

26 to 67

13 to 14

138 to 168

28.5 to 70.5

14 to 15

141 to 169.5

31.2 to 72

15 to 16

143.5 to 170

33 to 72 .5

16 to 17

144.5 to 170.5

34.8 to 73

17 to 18

146 to 171

36 to 74

 

ಬ್ಯಾನರ್ ಚಿತ್ರದ ಮೂಲ: Lazada-Taobao

 

ಡಿಸ್ಕಿಲೈಮರ್ : ಈ  ಲೇಖನದಲ್ಲಿರುವ ಮಾಹಿತಿ ವೈದ್ಯಕೀಯ ತಪಾಸಣೆಗೆ , ಚಿಕಿತ್ಸೆಗೆ ಬದಲಿಯಲ್ಲ. ಯಾವಾಗಲು ವೈದ್ಯರ ಸಲಹೆ ಪಡೆಯಿರಿ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.