• Home  /  
  • Learn  /  
  • ನಿಮ್ಮ ಮಗುವಿನ ನೆಗಡಿ ಮತ್ತು ಕೆಮ್ಮಿಗೆ ಉಪಶಮನ ನೀಡುವ 15 ಸ್ವಾಭಾವಿಕ ಪರಿಹಾರಗಳು
ನಿಮ್ಮ ಮಗುವಿನ ನೆಗಡಿ ಮತ್ತು ಕೆಮ್ಮಿಗೆ ಉಪಶಮನ ನೀಡುವ 15 ಸ್ವಾಭಾವಿಕ ಪರಿಹಾರಗಳು

ನಿಮ್ಮ ಮಗುವಿನ ನೆಗಡಿ ಮತ್ತು ಕೆಮ್ಮಿಗೆ ಉಪಶಮನ ನೀಡುವ 15 ಸ್ವಾಭಾವಿಕ ಪರಿಹಾರಗಳು

12 Jun 2019 | 1 min Read

DrBhavi Mody

Author | 16 Articles

ತಾಯಿಗೆ ತನ್ನ ಚಿಕ್ಕ ಮಗುವಿಗೆ ಬರುವ ಶೀತ , ಕೆಮ್ಮಿನದೇ ಚಿಂತೆ. ನಾವು ಆದುನಿಕ ಔಷಧಿಯ ಮೇಲೆ ಅವಲಂಬಿಸಿದರೂ, ಕೆಲವೊಮ್ಮೆ ಮನೆ ಮದ್ದೇ ನಿಧಾನವಾಗಿಯಾದರೂ , ಪರಿಣಾಮಕಾರಿಯಾಗಿ ಹಾಗು ಸುರಕ್ಷಿತವಾಗಿ ಈ ಶೀತ ಹಾಗು ಕೆಮ್ಮನ್ನು ನಿವಾರಿಸುತ್ತದೆ.

 

ಚಿಕಿತ್ಸೆಗಿಂತ ತಡೆಗಟ್ಟುವುದೇ ಮೇಲು ಎಂಬಂತೆ, ಮೊದಲು ಶೀತವನ್ನು ಹೇಗೆ ತಡೆಗಟ್ಟುವುದೆಂದು ತಿಳಿದುಕೊಳ್ಳೋಣ:

 

೧. ಬಿಸಿಯಾದ ಹಾಗು ಪೌಷ್ಟಿಕಾಂಶದ ಸೌಪ್ಸ್ ಮತ್ತು ಹೆಚ್ಚಾಗಿ ದ್ರವ ಪದಾರ್ಥ ಉದಾಹರಣೆಗೆ ಹಣ್ಣಿನ  ರಸಗಳನ್ನು ನಿಮ್ಮ ಮಗುವಿಗೆ ನೀಡಿ (೬ ತಿಂಗಳ ಮೇಲ್ಪಟ್ಟ ಮಗುವಿಗೆ)

೨. ಕಿತ್ತಳೆ ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಿ . ಇದರಲ್ಲಿ ವಿಟಮಿನ್ ಸಿ ಇರುತ್ತದೆ. ಇದು ಶೀತದ ತೀವ್ರತೆಯನ್ನು ಕಡಿಮೆ ಮಾಡುತ್ತದೆ ಹಾಗು ದೇಹದಲ್ಲಿರುವ ಪ್ರತಿಕಾಯಗಳನ್ನು ಸಕ್ರಿಯಗೊಳಿಸುತ್ತದೆ. (೬ ತಿಂಗಳ ಮೇಲ್ಪಟ್ಟ ಮಗುವಿಗೆ)

೩. ಕಾದಿರಿಸಿದ  ನೀರನ್ನೇ ನೀಡಿ.(೬ ತಿಂಗಳ ಮೇಲ್ಪಟ್ಟ ಮಗುವಿಗೆ)

೪. ಸಾಕಷ್ಟು ಆರಾಮ ಮುಖ್ಯ. ನಿಮ್ಮ ಮಗುವು ಚೆನ್ನಾಗಿ ನಿದ್ದೆ ಮಾಡುವಂತೆ ನೋಡಿಕೊಳ್ಳಿ.

೫. ನಿಮ್ಮನ್ನು ಹಾಗು ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಆಗಾಗ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳಿ. ಇದು ಶೀತ ಹಾಗು ಕೆಮ್ಮನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

ನಿಮ್ಮ ಮಗುವಿಗೆ ಈಗಾಗಲೇ ಶೀತವಾಗಿದ್ದಲ್ಲಿ, ಸ್ವಲ್ಪ ಉಪಶಮನ ಸಿಗಲು ಈ ಕೆಳಗೆ ನೀಡಿರುವ ಮನೆ ಮದ್ದುಗಳನ್ನು ಪ್ರಯತ್ನಿಸಿ:

೧. ಈರುಳ್ಳಿಯನ್ನು ಸಣ್ಣ ಕಾವಿನಲ್ಲಿ ಹುರಿಯಿರಿ. ಅದರ ರಸವನ್ನು ತೆಗೆದು ಬೆನ್ನಿನ ಹಿಂದೆ ಹಾಗು ಹಣೆಗೆ ಸವರಿ.

೨.ಒಂದು ಪ್ಯಾನ್ನಲ್ಲಿ  ಓಂಕಾಳು ಮತ್ತು ಉಪ್ಪನ್ನು ಹುರಿದು , ಅದರ ಮೇಲೆ ಒಂದು ಬಟ್ಟೆಯನ್ನು ಹಾಕಿ ಅಥವಾ ಅದರಿಂದ ಒಂದು ಪೊಟ್ಲಿಯನ್ನು ಮಾಡಿ. ನಂತರ ಅದನ್ನು ಪಾನಿನಲ್ಲಿ ಬಿಸಿ ಮಾಡಿ, ಶಾಖವನ್ನು ಪರೀಕ್ಸಿಸಿ ಹಾಗು ಅದ್ದನ್ನು ಎದೆ, ಹಿಂದೆ ಅಥವಾ ಹಣೆಯ ಮೇಲೆ ಸವರಿ.

೩. ೫-೧೦ ನೀಲ್ಗಿರಿ ತೈಲದ ಹನಿಗಳು , ಪುದೀನಾ, ಪೀನೇ, ಲ್ಯಾವೆಂಡರ್ , ಥೈಮ್ , ಚಹಾ ಮರದ ತೈಲ , ಇದೆಲ್ಲವನ್ನು ಒಂದು ಬಟ್ಟಲು ಬಿಸಿ ನೀರಿನಲ್ಲಿ ಹಾಕಿ. ಇದನ್ನು ನಿಮ್ಮ ಮಗುವಿನ ಹತ್ತಿರ ಇಡಿ ಅಥವಾ ಇದರ ಹನಿಗಳನ್ನು ಮಗುವಿನ ಬಟ್ಟೆ ಹಾಗು ದಿಂಬಿನ ಮೇಲೆ ಚಿಮುಕಿಸಿ.

೪. ಸ್ವಲ್ಪ ಪುದೀನಾ ಹಾಗು ನೀಲ್ಗಿರಿ ಎಲೆಗಳನ್ನು ನೀರಿನಲ್ಲಿ ಕುದಿಸಿ. ಇದನ್ನು ನಿಮ್ಮ ಮಗುವಿನ ಬಳಿ ಇಡಿ. ಇದು ಶೀತ ಹಾಗು ಕೆಮ್ಮಿನಿಂದ ಆರಾಮ ನೀಡುತ್ತದೆ. ಆದರೆ ಅದನ್ನು ಮಗುವಿನ ಹತ್ತಿರ ಇಟ್ಟರೂ , ಅದನ್ನು ಮಗುವು ಮುಟ್ಟದಂತೆ ನೋಡಿಕೊಳ್ಳಿ. ಬಿಸನೀರಿನ ಹಬೆ ಒಳ್ಳೆಯದು ಆದರೆ ಎಚ್ಚರದಿಂದ ಬಳಸಬೇಕು.

೫. ಶೀತ ಮತ್ತು  ಕೆಮ್ಮನ್ನು ನೈಸರ್ಗಿಕವಾಗಿ ಹೋಗಲಾಡಿಸಲು, ಸ್ನಾನ ಮಾಡುವ ನೀರಿನಲ್ಲಿ ಚೆಕ್ಕೆಯ ಕೆಲವು ಹನಿಗಳನ್ನು ಹಾಕಿದರೆ , ಶೀತ ಕಡಿಮೆಯಾಗುತ್ತದೆ.

೬. ಮತ್ತೊಂದು ಪರಿಣಾಮಕಾರಿ ಮದ್ದೆಂದರೆ, ತುಳಸಿ ಎಲೆಗಳು ಹಾಗು ಕರಿಮೆಣಸನ್ನು ನೀರಿನಲ್ಲಿ ಕುದಿಸಿ ,ಮಿಶ್ರಣವನ್ನು ಮಾಡಿಕೊಳ್ಳಿ. ಶುಂಠಿ ರಸದ ಕೆಲವು ಹನಿಗಳನ್ನು ಸೇರಿಸಿ.  ೧ ಚಮಚದಷ್ಟು ಈ ಮಿಶ್ರಣವನ್ನು ಮಗುವಿಗೆ ದಿನಕ್ಕೆ ೩ ಬಾರಿ ನೀಡಿರಿ. ಈ ಮಿಶ್ರಣವನ್ನು ೬ ತಿಂಗಳು ಮೇಲ್ಪಟ್ಟ ಮಕ್ಕಳಿಗೆ ನೀಡಬಹುದು.

೭. ೫ಎಮ್ ಎಲ್  ತಾಜಾ ತುಳಸಿ ರಸ ಹಾಗು ೧೦ ಎಮ್ ಎಲ್  ಶುದ್ಧ ಜೇನಿನ ಮಿಶ್ರಣ ಮಾಡಿ. ಇದನ್ನು ದಿನಕ್ಕೆ ಕನಿಷ್ಠ ೨ ಬಾರಿ ಕೊಡಿ.

೮. ೧/೨ ಚಮಚ ಶುಂಠಿ ರಸ ಹಾಗು ೧/೨ ಚಮಚ ಜೇನುತುಪ್ಪವನ್ನು ದಿನ್ನಕ್ಕೆ ೩ ಬಾರಿ ಸೇವಿಸಿ. ಬೆಚ್ಚನೆಯ ನೀರಿನ ಒಂದು ಚಮಚ ಈ ಮಿಶ್ರಣಕ್ಕೆ ಸೇರಿಸಿ ಹಾಗು ಬೆಚ್ಚಗೆ ಇದುನ್ನು ಸೇವಿಸಿ.

೯. ೧-೨ ಗ್ರಾಂ ಒಣಗಿದ ಹರಿಶಿಣದ ಪುಡಿಯನ್ನು ಜೇನುತುಪ್ಪದೊಂದಿಗೆ ದಿನಕ್ಕೆ ೩ ಬಾರಿ ಸೇವಿಸಿ. ಇದು ಬಹಳ ಪರಿಣಾಮಕಾರಿ ಮದ್ದು. ಒಂದು ವರ್ಷದೊಳಗಿನ ಮಗುವಿಗೆ , ಜೇನುತುಪ್ಪವನ್ನು ನೀಡಬೇಡಿ.

೧೦. ಮೂಗನ್ನು ಶುಚಿಗೊಳಿಸಲು ಉಪ್ಪಿನ ಹನಿಗಳನ್ನು ಬಳಸಿ. ಕಟ್ಟಿದ ಮೂಗನ್ನು ಶುಚಿಗೊಳಿಸಿದರೆ , ಮಗುವಿನ ಆರಾಮವಾಗುತ್ತದೆ.

ಈ ಎಲ್ಲಾ ಮದ್ದುಗಳು ನಿಮಗೆ ಹಾಗು ನಿಮ್ಮ ಮಗುವಿಗೆ ಉಪಯೋಗವಾಲಿವೆ   ಎಂದು  ಭಾವಿಸುತ್ತೇವೆ.

 

#babychakrakannada

A

gallery
send-btn

Related Topics for you