ಈಗ ತಾನೇ ನಡೆಯಲಾರಂಭಿಸಿರುವ ಪ್ರತಿ ಮಗುವಿನ 5 ಜವಾಬ್ದಾರಿಗಳು

cover-image
ಈಗ ತಾನೇ ನಡೆಯಲಾರಂಭಿಸಿರುವ ಪ್ರತಿ ಮಗುವಿನ 5 ಜವಾಬ್ದಾರಿಗಳು

ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಜವಾಬ್ದಾರಿ ಬಗ್ಗೆ ತಿಳಿಸಬೇಕು ಎಂದು ಪೋಷಕರು ಕೇಳುತ್ತಿರುತ್ತಾರೆ. ನನ್ನ ಪ್ರಕಾರ ಎಷ್ಟು ಬೇಗವೋ ಅಷ್ಟು ಉತ್ತಮ. ೧೮ ತಿಂಗಳ ಮಗುವು ಸುಲಭವಾದ ಆದೇಶಗಳನ್ನು ಅರ್ಥಮಾಡಿಕೊಳ್ಳಬಹುದು ಹಾಗು ಅದನ್ನು ನೆರವೇರಿಸಬಹುದು.  ಚಿಕ್ಕ ಕೆಲಸಗಳನ್ನು ಮಾಡಲು ಗಮನದ ಅವಧಿಯಿರುತ್ತದೆ. ಇದರ ಅರ್ಥವೇನೆಂದರೆ , ನೀವು ನಿಮ್ಮ ಮಗುವಿಗೆ ಅದರ ವಯಸ್ಸಿಗೆ ತಕ್ಕಂತೆ ಕೆಲಸಗಳನ್ನು ನೀಡಬಹುದು. ಇದು ಆ ಮಗುವಿನ ಜವಾಬ್ದಾರಿಯನ್ನು ಕಲಿಸುತ್ತದೆ.

 

ಪ್ರತಿಯೊಂದು ಮಗುವು ಕಲಿಯಬೇಕಾದ ಕೆಲವು ಜವಾಬ್ದಾರಿಗಳು ಹೀಗಿವೆ:

 

ತಮ್ಮ ದೇಹದ ಜವಾಬ್ದಾರಿಯನ್ನು ತಾವೇ ತೆಗೆದುಕೊಳ್ಳುವುದು. ಮೊದಲನೆಯದಾಗಿ , ಮಕ್ಕಳು ತಮ್ಮ ದೇಹವನ್ನು ಹಾಗು ಅದರ ಅಗತ್ಯಗಳನ್ನು ಅರಿತುಕೊಳ್ಳಬೇಕು. ತಾನು ಡೈಪರ್ ನಲ್ಲಿ ಮೂತ್ರ ಅಥವಾ ಮಲ ವಿಸರ್ಜನೆ ಮಾಡಿರುವುದನ್ನು ತಿಳಿಸುವುದು , ಮಗುವು ಕಲಿಯುವ ಮೊದಲ ಸಾಮಾಜಿಕ ಜವಾಬ್ದಾರಿ. ಶೌಚಾಲಯಕ್ಕೆ ಹೋಗಬೇಕಾದರೆ ಮಗುವು ನಿಮಗೆ ತಿಳಿಸಬೇಕು ಎಂದು ಆ ಮಗುವಿಗೆ ನೀವು ಕಲಿಸಬೇಕು. ಶೌಚಾಲಯಕ್ಕೆ ಹೋಗಿ ಬಂದಮೇಲೆ , ಮೈದಾನದಲ್ಲಿ ಆಡಿ ಬಂದ ಮೇಲೆ ಹಾಗೂ  ತಿನ್ನುವ ಮೊದಲು ಕೈಗಳನ್ನು ಚೆನ್ನಾಗಿ ತೊಳಿಯಬೇಕು ಎಂದು ಮಗುವು ಅರಿಯಬೇಕು.

 

ಸ್ವಚ್ಛಗೊಳಿಸುವುದು: ಮಗುವು ಆಟಿಕೆಗಳನ್ನು,ಪುಸ್ತಕಗಳನ್ನು ತೆಗೆದು ತೆಗೆದು ಅದರ ಜಾಗಗಳಲ್ಲಿ ಇಡುವುದು. ನನ್ನ ಮಗಳು ಶಿಶುವಿಹಾರಕ್ಕೆ ಸೇರಿದ ನಂತರ ತಾನು ಆಡಿದ ವಸ್ತುಗಳನ್ನು, ಆಡಿದ ನಂತರ ಅದರ ಜಾಗದಲ್ಲಿ ಇಡುವುದನ್ನು ಕಂಡು ಆಶ್ಚರ್ಯಗೊಂಡೆನು.ಇದು ನಡೆದಿದ್ದು ಶಾಲೆಯ ಮೊದಲನೆಯ ದಿನ ಹಾಗು ಇದು ಶಾಲೆಯ ನಿಯಮವಾಗಿತ್ತು. ಆದ್ದರಿಂದ ನಿಮ್ಮ ಮಗುವಿಗೆ ಸ್ವಚ್ಛಮಾಡಲು ಬರುವುದಿಲ್ಲ ಎಂದು ನೀವು ಭಾವಿಸಿದ್ದರೆ, ಮತ್ತೊಮ್ಮೆ ಆಲೋಚಿಸಿ.

 

ಕೆಲಸವನ್ನು ಮೋಜಿನ ಚಟುವಟಿಕೆಯನ್ನಾಗಿಸಿ. ನನಗೆ ನೆನಪಿದೆ. ನಾನು ನನ್ನ ಮಗಳ ಜೊತೆ ಹಾಡುತ್ತಿದ್ದೆ. ಅದನ್ನೇ ಅವಳು ಹಾಡುತ್ತಿದ್ದಳು ಹಾಗು ನೆಲದ ಮೇಲೆ ಹರಡಿದ ಆಟಿಕೆ , ಪುಸ್ತಕಗಳನ್ನು ತೆಗೆಯುತ್ತಿದಳು.

 

ಸಾಮಾಜಿಕ ಜವಾಬ್ದಾರಿಯುಳ್ಳವರು: ಎಲ್ಲರು ಸಾಮಾಜಿಕ ಜೀವಿಗಳು. ಮಕ್ಕಳು ಕೂಡ. ಆದ್ದರಿಂದ ನಿಮ್ಮ ಮಕ್ಕಳಿಗೆ ಇತರೆ ಜೀವಿ ಗಳನ್ನು  ಪ್ರೀತಿಸಲು ಹಾಗು ಪೋಷಿಸಲು ಕಲಿಸಿಕೊಡಬೇಕು. ಹೂವನ್ನು ಕೇಳದಿರುವುದು, ಗಿಡಗಳನ್ನು ಹಾಳುಮಾಡದಿರುವುದು, ರಸ್ತೆಯನ್ನು ಗಲೀಜು ಮಾಡದಿರುವುದು , ಸಾಕು ಪ್ರಾಣಿಗಳನ್ನು ಅಥವಾ ಬೇರೆ ಮಕ್ಕಳನ್ನು ಹೊಡೆಯದಿರುವುದು , ಇವೆಲ್ಲವನ್ನು ತಿಳಿಸಿಕೊಡಬೇಕು. ಹಾಗು ಬೇರೆಯವರಿಗೆ ತೊಂದರೆ ಮಾಡಿದರೆ, ಕ್ಷೆಮೆ ಕೇಳಬೇಕು. ಅವಳು ತನ್ನ ಬೋಂಬೆಗೆ ತೊಂದರೆ ಮಾಡಿದಾಗ , ಅದ್ದನ್ನು ಕ್ಷಮೆಯಾಚಿಸುವುದನ್ನು ಕಲಿತರೆ, ಅದೇ ಅಭ್ಯಾಸ ವಾಗುತ್ತದೆ.

 

ಸತ್ಯವಾದದ್ದು : 'ಜೊನ್ನಿ ಜೊನ್ನಿ ಯಸ್ ಪಾಪಾ' ಎಂಬುದು ತಮಾಷೆಯ ರೈಮ್ ಆಗಿರಬಹುದು , ಆದರೆ ಯಾವ ಪೋಷಕರು ತಮ್ಮ ಮಗು ಸುಳ್ಳು ಹೇಳಬೇಕೆಂದು ಬಯಸುವುದಿಲ್ಲ. ಚಿಕ್ಕ ಮಗುವು ಸತ್ಯ ಹೇಳಲು ಕಲಿಯಬೇಕು ಹಾಗು ಸತ್ಯ ಹೇಳಲು ಭಯಪಡಬಾರದು.  ನಿಮ್ಮ ಮಗುವು ಪ್ಯಾಂಟಿನಲ್ಲಿ ಮೂತ್ರ ವಿಸರ್ಜನೆ ಮಾಡಿದಾಗ ಅಥವಾ ನಿಮ್ಮ ಯಾವುದಾದರು ಬೆಲೆಬಾಳುವ ವಸ್ತುವನ್ನು ಮುರಿದುಹಾಕಿದರೆ , ಆ ಮಗುವನ್ನು ಬೈಯ್ಯ ಬೇಡಿ. ಇದರಿಂದ ಮಗುವು ಯಾವಾಗಲು ನಿಜವನ್ನು ಹೇಳುತ್ತದೆ. ನಿಮಗೆ ಬೇಜಾರಾದರೂ ಸರಿ, ಆದರೆ ಅವನ ಪ್ರಾಮಾಣಿಕತೆಯನ್ನು ಹೊಗಳಿ ಹಾಗು ಪ್ರೋತ್ಸಾಹಿಸಿ.

 

ಮನೆ ಕೆಲಸಗಳಲ್ಲಿ ಸಹಾಯ ಮಾಡುವುದು: ಮಕ್ಕಳು ಅನುಕರಿಸುವ ಮೂಲಕ ಕಲಿಯುತ್ತಾರೆ. ನಿಮ್ಮ ಚಿಕ್ಕ ಮಗು ನೀವು ಕೆಲಸ ಮಾಡುವುದನ್ನು ನೋಡಿದರೆ, ತಾನು ಸಹ ಬಂದು ಸಹಾಯ ಮಾಡುತ್ತದೆ. ಆ ಮಗುವಿಗೆ ಚಿಕ್ಕ ಚಿಕ್ಕ ಕೆಲಸಗಳನ್ನು ವಹಿಸುವುದು ಉದಾಹರಣೆಗೆ , ವಾಷಿಂಗ್ ಮಷೀನ್ ನಲ್ಲಿ ಬಟ್ಟೆ ಹಾಕುವುದು , ಗಿಡಗಳಿಗೆ ನೀರು ಹಾಕುವುದು, ಬಟಾಣಿ ಬಿಡಿಸುವುದು , ಟೇಬಲ್ ನನ್ನು ಒರೆಸುವುದು. ಇದರಿಂದ ನಿಮ್ಮ ಕೆಲಸ ಜಾಸ್ತಿಯಾದರೂ ಪರವಾಗಿಲ್ಲ , ಆದರೆ ಇವೆಲ್ಲವೂ ಮಗುವಿನಲ್ಲಿ ಜವಾಬ್ದಾರಿಯನ್ನು ತರಲು ಸಹಾಯ ಮಾಡುತ್ತವೆ.

 

ಪೋಷಕರು ಮಕ್ಕಳನ್ನು ಮುದ್ದು ಮಾಡಬೇಕು. ಆದರೆ , ಅವರಿಗೆ ಜವಾಬ್ದಾರಿಯನ್ನು ಸಹ ಕಲಿಸಿಕೊಡಬೇಕು. ಇದು ಅವರ ಜೀವನಕ್ಕೆ ಸಕಾರಾತ್ಮಕ ಕೊಡುಗೆಯಾಗುತ್ತದೆ. ಹದಿಹರಯದ ಹುಡುಗ ತನ್ನ ತಾಯಿಗೆ ಅಡುಗೆ ಮನೆಯಲ್ಲಿ ಸಹಾಯ ಮಾಡುವುದನ್ನು ಅಥವಾ ಚಿಕ್ಕ ಹುಡುಗ ತನ್ನ ಕೊಠಡಿಯನ್ನು  ಸ್ವಚ್ಛ ಗೊಳಿಸುವುದನ್ನು ,ನೀವು ನೋಡಿದಾಗ ಅದು ಒಂದೇ ರಾತ್ರಿಯಲ್ಲಿ ಅಥವಾ ತಂತಾನಗೆ  ಆಗಿದ್ದಲ್ಲ. ಅವರ ಪೋಷಕರು ಆ ಮಕ್ಕಳಿಗೆ ಸಣ್ಣ ವಯಸ್ಸಿನಿಂದಲೇ ಜವಾಬ್ದಾರಿಗಳನ್ನೂ ಹೇಳಿಕೊಟ್ಟ ಪರಿಣಾಮವದು.

 

ಬ್ಯಾನರ್ ಚಿತ್ರದ ಮೂಲ : ಫ್ರೀಕ್ಲಿಪ್ಆರ್ಟ್ಇಮೇಜ್

 

#babychakrakannada
logo

Select Language

down - arrow
Personalizing BabyChakra just for you!
This may take a moment!