• Home  /  
  • Learn  /  
  • ಗರ್ಭ ಸಂಸ್ಕಾರ’ ದ ಬಗ್ಗೆ ನೀವು ತಿಳಿದುಕೊಳ್ಳಬೇಕಾದುದು
ಗರ್ಭ ಸಂಸ್ಕಾರ’ ದ ಬಗ್ಗೆ ನೀವು ತಿಳಿದುಕೊಳ್ಳಬೇಕಾದುದು

ಗರ್ಭ ಸಂಸ್ಕಾರ’ ದ ಬಗ್ಗೆ ನೀವು ತಿಳಿದುಕೊಳ್ಳಬೇಕಾದುದು

12 Jun 2019 | 1 min Read

Muskan Parmar

Author | 6 Articles

ಗರ್ಭಎಂದರೆ ಬಸಿರು , ‘ಸಂಸ್ಕಾರಎಂದರೆ ಮೌಲ್ಯ ಶಿಕ್ಷಣ. ‘ಗರ್ಭ ಸಂಸ್ಕಾರಎಂದರೆ ಗರ್ಭ  ಮೌಲ್ಯ ಶಿಕ್ಷಣ.

ಇದರ ಹಿಂದಿನ ನಿಜಾಂಶ:

 

ಭಾರತದ ಇತಿಹಾಸ :

 

ನಮ್ಮ ಆಯುರ್ವೇದದಲ್ಲಿ, ಇದನ್ನುಸುಪ್ರಜಾ ಜನಂಎಂದು ಕರೆಯುತ್ತಾರೆ. ಇದರ ಪ್ರಕಾರ ದಂಪತಿಯು, ಮಗುವಿಗೆ ಯಾವ ರೀತಿಯ ಶಿಕ್ಷಣ ನೀಡಬೇಕೆಂದು ಮುಂಚಿತವಾಗಿಯೇ ಯೋಜನೆ ಮಾಡಿಕೊಳ್ಳಬಹುದು ( ಮೂರು ತಿಂಗಳ ಮುಂಚಿತವಾಗಿ ). ‘ಗರ್ಭ ಸಂಸ್ಕಾರವು ಮನಸ್ಸನ್ನು ಉತ್ತಮ ಸ್ಥಿತಿಯಲ್ಲಿಟ್ಟುಕೊಳ್ಳುವುದುಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಹಾಗು ದೈಹಿಕವಾಗಿ ಯೋಗ್ಯವಾಗಿರುವುದು.

 

ಇದರ ಹಿಂದಿರುವ ವೈಜ್ಞಾನಿಕ ವಿವರ :

 

ತಾಯಿಯ ಗರ್ಭದಲ್ಲಿರುವಾಗಲೇ, ಮಗುವಿನ ಮೆದುಳಿನ ಶೇಕಡಾ ೬೦% ಬೆಳವಣಿಗೆಯಾಗುತ್ತದೆ. ವಿಜ್ಞಾನಿಗಳ ಪ್ರಕಾರ, ಮಗುವಿನ ಮೆದುಳಿನ ಬೆಳವಣಿಗೆಯು ತಾಯಿಯ ಮಾನಸಿಕ ಆರೋಗ್ಯದ ಮೇಲೆ ಅವಲಂಬಿಸುತ್ತದೆ. ತಾಯಿಯು ಸಂತೋಷವಾಗಿದ್ದರೆ ಹಾಗು ಬುದ್ದಿಯನ್ನು ಪುಷ್ಟಿಕರಿಸುವ ಕಾರ್ಯದಲ್ಲಿ ತೊಡಗಿದ್ದರೆ , ಉದಾಹರಣೆಗೆ ಓದುವುದು , ಆಗ ಗರ್ಭದಲ್ಲಿರುವ ಮಗುವಿಗೂ ಸಹಾ ಜ್ಞಾನ ತಲುಪುತ್ತದೆ.

 

ಪೌರಾಣಿಕ ಕಥೆಗಳು :

 

ಗರ್ಭ ಸಂಸ್ಕಾರಕ್ಕೆ ಸಂಬಂಧಿಸಿದ ಹಲವಾರು ಭಾರತೀಯ ಪೌರಣಿಕ ಕಥೆಗಳಿವೆ. ಇವುಗಳಲ್ಲಿ ಬಹಳ ಪ್ರಸಿದ್ಧವಾದುದ್ದು , ಮಹಾಭಾರತದ ಅಭಿಮನ್ಯುವಿನ ಕಥೆ. ಅಭಿಮನ್ಯುವಿನ ತಾಯಿ ಅರ್ಜುನನ ಹೆಂಡತಿ. ಅಭಿಮನ್ಯುವು ತಾಯಿಯ ಗರ್ಭದಲ್ಲಿರುವಾಗ , ಒಮ್ಮೆ ಅರ್ಜುನನುಚಕ್ರವ್ಯೂಹವನ್ನು (ಯುದ್ಧದಲ್ಲಿ ಎದುರಾಳಿ ತನ್ನ ಸೈನಿಕರನ್ನು ನಿಲ್ಲಿಸುವ ರೀತಿ) ಹೇಗೆ ಭೇದಿಸುವುದು ಹಾಗು ಅದರಿಂದ ಹೇಗೆ ಹೊರಗೆ ಬರುವುದು ಎಂದು ತನ್ನ ಹೆಂಡತಿಗೆ ಹೇಳುತ್ತಿರುವಾಗ , ಅವಳು ಮಲಗಿಬಿಡುತ್ತಾಳೆ. ಮುಂದೊಮ್ಮೆ , ಯುದ್ದದಲ್ಲಿ , ಅಭಿಮನ್ಯುವು ಯಾವುದೇ ರೀತಿಯ ತರಬೇತಿಯನ್ನು ಪಡೆಯದೆಯೇ , ‘ಚಕ್ರವ್ಯೂಹವನ್ನು ಭೇದಿಸುತ್ತಾನೆ. ಆದರೆ ಅವನಿಗೆ ಅದರಿಂದ ಹೊರಗೆ ಬರಲು ಸಾಧ್ಯವಾಗುವುದಿಲ್ಲ.  ( ತಾಯಿಯ ಗರ್ಭದಲ್ಲಿರುವಾಗ ಅವನು ಕೇವಲ ಭೇದಿಸುವುದನ್ನು ಮಾತ್ರ ಕೇಳಿಸಿಕೊಂಡಿರುತ್ತಾನೆ ).

 

ಇದು ಹೇಗೆ ಸಾಧ್ಯ ?

ಗರ್ಭದಲ್ಲಿರುವ ಮಗುವಿನೊಂದಿಗೆ  ಸಂಪರ್ಕ :

 

ತಾಯಿ ಹಾಗು ಮಗುವಿನ ನಡುವೆ ಇರುವ ನೇರ ಸಂಪರ್ಕವೆಂದರೆ, ಕರುಳು ಬಳ್ಳಿ. ತಿಂಗಳುಗಳೂ ಮಗುವಿನ ಮಾನಿಸಿಕ ಬೆಳವಣಿಗೆಗೆ ಬಹಳ ಮುಖ್ಯ. ಭಾವನೆಗಳು, ಹಸಿವು , ಒತ್ತಡ , ಇವುಗಳನ್ನು ತಾಯಿ ಎಷ್ಟು ಅನುಭವಿಸುತ್ತಾಳೋ , ಗರ್ಭದಲ್ಲಿರುವ ಮಗುವು ಸಹಾ ಅಂಶಗಳ ಒಂದು ಭಾಗವನ್ನು ಅನುಭವಿಸುತ್ತದೆ. ತಾಯಿಯು ತನ್ನ ಹೊಟ್ಟೆಯನ್ನು ಸವರುತ್ತಾ ಮಾತನಾಡಿದರೆ , ಅದು ಗರ್ಭದಲ್ಲಿರುವ ಮಗುವಿಗೆ ತಲುಪುತ್ತದೆ. ನಂಬಿ, ಇದೊಂದು ಅದ್ಭುತವೇ ಸರಿ. ನಾನು ಇದನ್ನುಅಮ್ಮಮಗುವಿನ ಬಾಂದವ್ಯ ಎಂದು ಕರೆಯುತ್ತೇನೆ.

 

ಸತ್ವಗುಣ :

ತಾಯಿಯು ಮಗುವು ಗರ್ಭದಲ್ಲಿರುವಾಗಲೇ , ಅದಕ್ಕೆ ಒಳ್ಳೆಯ ಗುಣಗಳನ್ನು ( ಸತ್ವ ಗುಣ ) ತಿಳಿಸಿಕೊಡಬಹುದು.  ಗರ್ಭದಲ್ಲಿರುವ ಮಗುವಿನೊಂದಿಗೆ ಪ್ರತಿದಿನ ಮಾತನಾಡುವುದು, ಮಗುವಿನ್ನಲ್ಲಿ ಯಾವ ಒಳ್ಳೆ ಗುಣಗಳನ್ನು ಕಾಣಬೇಕು ಎಂದು ಬಯಸುತ್ತೀರೋ, ಅವುಗಳ ಬಗ್ಗೆ ಹೇಳಬಹುದು. ಉದಾರಹಣೆಗೆ , ಎಲ್ಲರನ್ನು ಪ್ರೀತಿಯಿಂದ ನೋಡುವುದು, ಸಹಾಯ ಮಾಡುವುದು, ಹಂಚಿಕೊಳ್ಳುವುದು, ಸೌಮ್ಯವಾಗಿರುವುದು ಇತ್ಯಾದಿ.

 

ಗರ್ಭ ಸಂಸ್ಕಾರ ಮೂರುಎಂಗಳು :

ಸಂಗೀತ, ಶ್ಲೋಕ ಹಾಗು ಧ್ಯಾನ. ಸಂಗೀತವನ್ನು ಕೇಳುವುದರಿಂದ ಮಗುವನ್ನು ಶಾಂತವಾಗಿರಿಸುತ್ತದೆ. ಇದು ತಾಯಿಗು ಹಾಗು ಗರ್ಭದಲ್ಲಿರುವ ಮಗುವಿಗು ನೆಮ್ಮದಿಯನ್ನು ನೀಡುತ್ತದೆ. ಶ್ಲೋಕವನ್ನು ಹೇಳುವುದರಿಂದ, ಜಪಿಸುವುದರಿಂದ ಹಾಗು ಪೂಜೆಗಳಿಂದಸತ್ವ ಗುಣಸಹಜವಾಗಿಯೇ ಮಗುವಿಗೆ ತಲುಪುತ್ತದೆ. ಇದರಿಂದ ತಾಯಿಯ ಮನಸಿನಲ್ಲಿ ಯಾವುದಾದರು ಕೆಟ್ಟ ಆಲೋಚನೆಗಳಿದ್ದರೆ , ಅವುಗಳನ್ನು ದೂರ ಮಾಡುತ್ತದೆ.  ಕೆಟ್ಟ ಆಲೋಚನೆಗಳು ಗರ್ಭದಲ್ಲಿರುವ ಮಗುವಿಗೆ ಒಳ್ಳೆಯದಲ್ಲಇವು ಮಗುವಿನಲ್ಲಿ ಭಯ ಹಾಗು ಗಾಬರಿ ಭಾವನೆಯನ್ನು ಮೂಡಿಸುತ್ತದೆ ಹಾಗು ಮಗುವು ಹುಟ್ಟಿದ ಮೇಲೆ , ಇವು ಮಗುವಿನ ಜೀವನದುದ್ದಕ್ಕೂ ಉಳಿದುಬಿಡುತ್ತದೆ.  ಧ್ಯಾನವು ದೇಹವನ್ನು ಹಾಗು ಮನಸ್ಸನ್ನು ಶಾಂತವಾಗಿಡಿಸುತ್ತದೆ , ಮಗು ಹಾಗು ತಾಯಿಯಲ್ಲಿ ಏಕಾಗ್ರತೆಯನ್ನು ಮೂಡಿಸುತ್ತದೆ ಹಾಗು   ತಾಯಿಯಲ್ಲಿ ಧೈರ್ಯವನ್ನು ಮೂಡಿಸುತ್ತದೆ.

 

#babychakrakannada

A

gallery
send-btn

Related Topics for you