ನಿರೀಕ್ಷಿಸುತ್ತಿರುವಾಗ, ಪ್ರೆಗ್ನೆನ್ಸಿ, ಲೇಬರ್ ಮತ್ತು ಬರ್ತ್ ಕುರಿತು ಬಹಳಷ್ಟು ಮಾಹಿತಿಯನ್ನು ಪಡೆಯಲು ಅವಕಾಶವಿದೆ. ಕುಟುಂಬ, ಸ್ನೇಹಿತರು ಮತ್ತು ಅಪರಿಚಿತರಿಂದ ಕೂಡಾ ಬಹಳಷ್ಟು ಕಥೆಗಳನ್ನು ನೀವು ಕೇಳಬಹುದು. ಪ್ರಸವಪೂರ್ವ ಅಥವಾ ಶಿಶು ಜನನ ತರಗತಿಗಳು ಈ ಮಾಹಿತಿಯನ್ನು ಜರಡಿ ಹಿಡಿಯಲು ನಿಮಗೆ ಸಹಾಯ ಮಾಡುತ್ತವೆ, ನಿಮ್ಮ ಪ್ರಶ್ನೆಗಳನ್ನು ಪರಿಹರಿಸುತ್ತವೆ, ಮತ್ತು ಹೆರಿಗೆ, ಜನನ ಮತ್ತು ಆರಂಭಿಕ ಪೇರೆಂಟ್ಹುಡ್ಗಾಗಿ ತಯಾರಾಗಲು ನಿಮಗೆ ಸಹಾಯ ಮಾಡುತ್ತದೆ.
ಒಂದು ಪ್ರಸವಪೂರ್ವ ತರಗತಿಯಲ್ಲಿ ನಿಮಗೆ ವೈಯಕ್ತಿಕವಾಗಿ ಅಭ್ಯಾಸವನ್ನು ಮಾಡಿಸುತ್ತಾರೆ . ಮೊದಲಿನಿಂದಲೂ ಏನನ್ನು ನಿರೀಕ್ಷಿಸಬಹುದು ಎಂದು ನಿಮಗೆ ತಿಳಿದಿದ್ದರೆ, ಹೆರಿಗೆ ಮತ್ತು ಜನನ ಪ್ರಕ್ರಿಯೆಯ ಸಮಯದಲ್ಲಿ, ನಿಮ್ಮ ನವಜಾತ ಮಗುವಿನ ಆರೈಕೆಯಲ್ಲಿ ಅಥವಾ ಹಾಲುಣಿಸುವುದರಲ್ಲಿ ನೀವು ಉತ್ತಮ ತಯಾರಿ ಮತ್ತು ಕಡಿಮೆ ಆತಂಕ ಹೊಂದಿರುತ್ತೀರ. ಶಿಶು ಜನನ ತರಗತಿಯು ಎಲ್ಲವುದಕ್ಕಾಗಿ ನಿಮ್ಮನ್ನು ಸಿದ್ಧಪಡಿಸುತ್ತದೆ.
ವಿಶಿಷ್ಟವಾಗಿ, ಒಬ್ಬ ಅನುಭವಿ ಪ್ರಸವಪೂರ್ವ ಬೋಧಕ ಈ ಕೆಳಗಿನ ವಿಷಯಗಳ ಬಗ್ಗೆ ತಿಳಿಸಿಕೊಡುತ್ತಾರೆ:
- ಪ್ರಸವಪೂರ್ವ ಮತ್ತು ಪ್ರಸವಪೂರ್ವ ಆಹಾರ ಮತ್ತು ವ್ಯಾಯಾಮ: ಗರ್ಭಿಣಿ ತಾಯಿ ಏನು ತಿನ್ನಬೇಕು ಮತ್ತು ಏನನ್ನು ತಿನ್ನಬಾರದು ಎಂದು ತಿಳಿಯಲು ಸಹಾಯ ಮಾಡುತ್ತದೆ, ವ್ಯಾಯಾಮವನ್ನು ಪ್ರಾರಂಭಿಸಲು ಉತ್ತಮ ಸಮಯ, ಗರ್ಭಾವಸ್ಥೆಯಲ್ಲಿ ಮತ್ತು ಹೆರಿಗೆಯ ನಂತರ ಸುರಕ್ಷಿತ ವ್ಯಾಯಾಮ ಇದನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
- ಹೆರಿಗೆ ಮತ್ತು ಜನನದ ಬಗ್ಗೆ ಎಲ್ಲವನ್ನೂ ತಿಳಿದುಕೊಳ್ಳಿ: ಹೆರಿಗೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು ನಿಮ್ಮನ್ನು ತಯಾರಿಗೊಳಿಸಲಾಗುತ್ತದೆ, ಅದು ಹೇಗೆ ಪ್ರಾರಂಭವಾಗುತ್ತದೆ, ಯಾವಾಗ ಪ್ರಾರಂಭವಾಗುತ್ತದೆ, ನೀವು ಆಸ್ಪತ್ರೆಗೆ ಯಾವಾಗ ಹೋಗಬೇಕು, ನೀವು ಆಸ್ಪತ್ರೆಗೆ ಹೋಗಬೇಕಾದರೆ ನಿಮ್ಮ ಆಸ್ಪತ್ರೆ ಚೀಲದಲ್ಲಿ ಏನು ತೆಗೆದುಕೊಳ್ಳಬೇಕು, ಹೆರಿಗೆಯ ಹಂತಗಳು, ಹೇಗೆ ಉಸಿರಾಡುವಿಕೆ ಮತ್ತು ವಿಶ್ರಾಂತಿ ಮೂಲಕ ಹೆರಿಗೆಯ ಹಂತಗಳನ್ನು ಉತ್ತಮವಾಗಿ ನಿರ್ವಹಿಸುವುದು. ನೀವು ಹೆರಿಗೆಯ ಸಮಯದಲ್ಲಿ ಮಾಡಬೇಕಾದ ನಿಗದಿತ ವ್ಯಾಯಾಮ ಮತ್ತು ಆಸನಗಳು ಕಲಿಯುತ್ತೀರ , ಅದು ಮಗು ಸರಿಯಾಗಿ ನಿಮ್ಮ ಪೆಲ್ವಿಸ್ ನಲ್ಲಿ ಸಾಲುಗಟ್ಟಲು ಸಹಾಯ ಮಾಡುತ್ತದೆ, ನಿಮ್ಮ ಪ್ರಸವವನ್ನು ವೇಗಗೊಳಿಸುತ್ತದೆ ಮತ್ತು ನೋವನ್ನು ನಿವಾರಿಸುತ್ತದೆ.
- ವೈದ್ಯಕೀಯ ಕಾರ್ಯವಿಧಾನಗಳು ಮತ್ತು ಮಧ್ಯಸ್ಥಿಕೆಗಳು: ಹೆರಿಗೆಯನ್ನು ಪ್ರಚೋದಿಸುವ ಬಗ್ಗೆ ನಿಮ್ಮ ಸತ್ಯಾಂಶಗಳನ್ನು ಮತ್ತು ಯೋನಿ ಜನನ ಮತ್ತು ಸಿಸೇರಿಯನ್ ಜನ್ಮ (ಸಿ-ಸೆಕ್) ನಡುವಿನ ವ್ಯತ್ಯಾಸವನ್ನು ನೀವು ತಿಳಿಯುವಿರಿ. ಲಭ್ಯವಿರುವ ನೋವು ಪರಿಹಾರ ಆಯ್ಕೆಗಳ ಬಗ್ಗೆ ಮತ್ತು ಅವುಗಳನ್ನು ಯಾವಾಗ ಕೇಳಬೇಕು ಎಂದು ನೀವು ತಿಳಿಯುವಿರಿ.
- ಸ್ತನ್ಯಪಾನ: ಹೆರಿಗೆಯ ನಂತರ ಇದು ಹೆಚ್ಚಿನ ಮೌಲ್ಯದ್ದಾಗಿದೆ. ನಿಮ್ಮ ಮಗುವಿಗೆ ಜನನವಾದ ತಕ್ಷಣವೇ ಹಾಲುಣಿಸುವುದು ಹೇಗೆ, ನಿಮ್ಮ ಮಗುವಿಗೆ ಸರಿಯಾಗಿ ಮೊಲೆಯನ್ನು ಚೀಪಲು ಸಹಾಯ ಮಾಡುವುದು, ನಿಮ್ಮ ಮಗುವನ್ನು ಹೇಗೆ ಹಿಡಿದುಕೊಳ್ಳುವುದು, ಹಾಲುಣಿಸುವ ಸಮಯದಲ್ಲಿ ಹೇಗೆ ವಿಶ್ರಾಂತಿ ಮಾಡುವುದು, ಸ್ತನ್ಯಪಾನಕ್ಕಾಗಿ ವಿಭಿನ್ನ ಭಂಗಿಗಳು ಮುಂತಾದವುಗಳ ಬಗ್ಗೆ ನೀವು ಮೊದಲೇ ತಿಳಿದಿರಬಹುದು.
- ನಿಮ್ಮ ನವಜಾತ ಮಗುವಿನ ಮೂಲಭೂತ ಆರೈಕೆ: ಪ್ರಸವೋತ್ತರ ಮಗುವಿನ ಆರೈಕೆ, ನಿಮ್ಮ ನವಜಾತ ಶಿಶುವಿಗೆ ವ್ಯಾಕ್ಸಿನೇಷನ್ ಮತ್ತು ನಿಮ್ಮ ಮಗುವಿನ ಅಗತ್ಯತೆಗಳ ಬಗ್ಗೆ ತಿಳಿಯಬೇಕಾದದ್ದು ಹೇಗೆ ಎಂದು ನಿಮಗೆ ತಿಳಿಸಿಕೊಡುತ್ತಾರೆ.
- ಪ್ರಸವಪೂರ್ವ ತಾಯಿಯ ಆರೈಕೆ: ಪ್ರಸವಪೂರ್ವದ ಅವಧಿಯಲ್ಲಿ, ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಬಗ್ಗೆ ತಿಳಿಸುತ್ತಾರೆ, ಪ್ರಸವದ ನಂತರದ ಖಿನ್ನತೆಯೊಂದಿಗೆ ಹೇಗೆ ವ್ಯವಹರಿಸುವುದು , ಕೌಟುಂಬಿಕ ಯೋಜನೆ ಆಯ್ಕೆಗಳು, ನಿಮ್ಮ ಮೊದಲಿನ ಆಕಾರಕ್ಕೆ ಮರಳುವುದು ಮತ್ತು ನೀವು ತೆಗೆದುಕೊಳ್ಳಬೇಕಾದ ಇತರ ಕ್ರಮಗಳನ್ನು ತಿಳಿಸಿಕೊಡುತ್ತಾರೆ .
ಶಿಶು ಜನನ ತರಗತಿಗಳಿಗೆ ಹಾಜರಾಗುವುದರ ಇತರ ಪ್ರಯೋಜನಗಳು ಹೀಗಿವೆ:
- ಗರ್ಭಧಾರಣೆ ಮತ್ತು ಹೆರಿಗೆಯ ನಿಮ್ಮ ಪ್ರಯಾಣದ ಕುರಿತು ನಿಮ್ಮ ಅನುಮಾನಗಳನ್ನು ತೆರವುಗೊಳಿಸಲು ಮತ್ತು ನಿಮ್ಮ ಭಯವನ್ನು ಎದುರಿಸಲು ಇದು ಸಹಾಯ ಮಾಡುತ್ತದೆ.
- ನೀವು ನಿರೀಕ್ಷಿಸುತ್ತಿರುವ ಇತರ ದಂಪತಿಗಳನ್ನು ಭೇಟಿ ಮಾಡುತ್ತೀರಿ ಮತ್ತು ಅವರೊಂದಿಗೆ ಒಳ್ಳೆಯ ಬಂಧವನ್ನು ಹೊಂದುತ್ತೀರಿ.
- ಇತರ ತಾಯಂದಿರು ಮತ್ತು ಬೋಧಕರೊಂದಿಗೆ ನಿಮ್ಮ ಆತಂಕಗಳು ಭಾವನೆಗಳನ್ನು ಚರ್ಚಿಸಲು ಮತ್ತು ಹಂಚಿಕೊಳ್ಳಲು ನಿಮಗೆ ಸಾಧ್ಯವಾಗುತ್ತದೆ.
- ಎಲ್ಲಕ್ಕಿಂತ ಹೆಚ್ಚಾಗಿ, ಅದರ ಬಗ್ಗೆ ಜ್ಞಾನ ಮತ್ತು ಅನುಭವವನ್ನು ನೀವು ಪಡೆದುಕೊಳ್ಳುವ ಮೂಲಕ, ಹೆಚ್ಚು ತೃಪ್ತಿ ನೀಡುವ ಮಗುವಿನ ಜನನ ಅನುಭವಕ್ಕಾಗಿ ವಿಶ್ವಾಸವನ್ನು ನೀಡುತ್ತದೆ.
ಈ ಸುಂದರ ಪ್ರಯಾಣವನ್ನು ಆನಂದಿಸಿ, ನೀವು ಎಷ್ಟು ಒಳ್ಳೆಯ ರೀತಿಯಲ್ಲಿ ತಯಾರಾಗಿದ್ದರೂ, ಮಗುವಿನ ಜನನವು ಸರ್ಪ್ರೈಸಸ್ ನಿಂದ ತುಂಬಿದೆ, ಆದ್ದರಿಂದ ನಿಮ್ಮ ಪ್ರಯಾಣದಲ್ಲಿ ಅದನ್ನು ಧನಾತ್ಮಕವಾಗಿ ತೆಗೆದುಕೊಳ್ಳಲು ಸಿದ್ಧರಾಗಿರಿ.
#babychakrakannada