• Home  /  
  • Learn  /  
  • ಗರ್ಭಧರಿಸಿರುವಾಗ ತೂಕ ಹೆಚ್ಚಳ ಮತ್ತು ಒಂದು ಆರೋಗ್ಯಕರ ತೂಕ ಹೆಚ್ಚಳವನ್ನು ನಿರ್ವಹಿಸಲು ಆಹಾರಗಳು
ಗರ್ಭಧರಿಸಿರುವಾಗ ತೂಕ ಹೆಚ್ಚಳ ಮತ್ತು ಒಂದು ಆರೋಗ್ಯಕರ ತೂಕ ಹೆಚ್ಚಳವನ್ನು ನಿರ್ವಹಿಸಲು ಆಹಾರಗಳು

ಗರ್ಭಧರಿಸಿರುವಾಗ ತೂಕ ಹೆಚ್ಚಳ ಮತ್ತು ಒಂದು ಆರೋಗ್ಯಕರ ತೂಕ ಹೆಚ್ಚಳವನ್ನು ನಿರ್ವಹಿಸಲು ಆಹಾರಗಳು

14 Jun 2019 | 1 min Read

Dr Trupti Kaji

Author | 7 Articles

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಕ್ರಮೇಣ ಮತ್ತು ನಿರೀಕ್ಷಿತ ಪ್ರಕ್ರಿಯೆ. ನಿಮ್ಮ ಮಗುವಿನ ಬೆಳವಣಿಗೆಯೊಂದಿಗೆ ನಿಮ್ಮ ದೇಹವು ಬೆಳೆಯುತ್ತಿದೆ ಮತ್ತು ಬದಲಾಗುತ್ತಿದೆ. ಪ್ರತಿ ತ್ರೈಮಾಸಿಕದಲ್ಲಿ ಎಷ್ಟು ತೂಕ ಹೆಚ್ಚಾಗಬೇಕು   ಎಂದು ತಿಳಿಯುವುದು ನಿರೀಕ್ಷಿಸುತ್ತಿರುವ ತಾಯಿಗೆ ಮುಖ್ಯವಾಗಿದೆ.

ಗರ್ಭಧಾರಣೆಯ ತೂಕ ಹೆಚ್ಚಳ ತಾಯಿ ಮತ್ತು ಬೆಳೆಯುತ್ತಿರುವ ಮಗುವಿನ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಹೊಂದಿದೆ. ನಿಮ್ಮ ಗರ್ಭಧಾರಣೆಯ ಆರಂಭದಲ್ಲಿ ನಿಮ್ಮ ಬಾಡಿ ಮಾಸ್ ಇಂಡೆಕ್ಸ್ (ಬಿಎಂಐ) ಪರಿಶೀಲಿಸಿ ಎಂದು ಸಲಹೆ ನೀಡಲಾಗುತ್ತದೆ ಮತ್ತು ನೀವು ಇದಕ್ಕೆ     ಅನುಗುಣವಾಗಿ ತಕ್ಕ ತೂಕವನ್ನು ಗಳಿಸಿ.

ಗರ್ಭಧಾರಣೆಯ ತೂಕ ಕ್ಯಾಲ್ಕುಲೇಟರ್ ರಲ್ಲಿ ಕೆಜಿ

ಗರ್ಭಧಾರಣೆಯ ತೂಕವನ್ನು ಲೆಕ್ಕಹಾಕಲು, ನಾವು ಮೊದಲು BMI ಅನ್ನು ಲೆಕ್ಕಾಚಾರ ಮಾಡಬೇಕಾಗಿದೆ. ನಿಮ್ಮ BMI (kg / m 2) ಲೆಕ್ಕ ಮಾಡಿ:

  • ಮೊದಲು, ಮೀಟರ್ (ಮೀ) ನಲ್ಲಿ ನಿಮ್ಮ ಎತ್ತರದಿಂದ ಕಿಲೋಗ್ರಾಮ್ (ಕೆ.ಜಿ.) ಯಲ್ಲಿ ನಿಮ್ಮ ತೂಕವನ್ನು ಭಾಗಿಸಿ.

  • ನಂತರ ನಿಮ್ಮ ಬಿಎಂಐ ಪಡೆಯಲು ನಿಮ್ಮ ಎತ್ತರದಿಂದ ಮತ್ತೆ ಉತ್ತರವನ್ನು ಭಾಗಿಸಿ.

ಆರಂಭಿಕ ಗರ್ಭಾವಸ್ಥೆಯಲ್ಲಿ BMI ಯ ಆಧಾರದ ಮೇಲೆ ನಿರೀಕ್ಷಿತ ಪ್ರಮಾಣದಲ್ಲಿ ಗರ್ಭಧಾರಣೆಯ ತೂಕ ಹೆಚ್ಚಾಗುತ್ತದೆ:

 

ಆರಂಭಿಕ ಪ್ರೆಗ್ನೆನ್ಸಿ BMI (

ಒಟ್ಟಾರೆ ಗರ್ಭಾವಸ್ಥೆಯಲ್ಲಿನ ತೂಕ ಹೆಚ್ಚಳ ಶ್ರೇಣಿ

ಕಡಿಮೆ ತೂಕ  

12.5ಕೆಜಿ – 18 ಕೆಜಿ

ಸಾಧಾರಣ ತೂಕ (18.5 – 24.9 ಕೆಜಿ / ಮೀ 2)

11.5ಕೆಜಿ – 16 ಕೆಜಿ

ಅಧಿಕ ತೂಕ (25.0 – 29.9 ಕೆಜಿ / ಮೀ 2)

7ಕೆಜಿ – 11.5 ಕೆಜಿ

ಸ್ಥೂಲಕಾಯ(> 30.0 ಕೆಜಿ / ಮೀ 2)

5 ಕೆಜಿ – 9 ಕೆಜಿ

 

 

ಗರ್ಭಾವಸ್ಥೆಯಲ್ಲಿ ಸರಾಸರಿ ತೂಕ ಹೆಚ್ಚಾಗುವುದು BMI ಆಧಾರದಲ್ಲಿ 12 ಕೆಜಿ (8-16 ಕೆಜಿ). ಇದು ಮಗುವಿನ ತೂಕದ ಲೆಕ್ಕ ಮಾತ್ರವಲ್ಲ, ಆಮ್ನಿಯೋಟಿಕ್ ದ್ರವ, ಜರಾಯು(ಪ್ಲಾಸೆಂಟಾ), ಅಧಿಕಗೊಂಡ ಕೊಬ್ಬು ಶೇಖರಣೆ , ರಕ್ತ ಮುಂತಾದವುಗಳನ್ನು ಒಳಗೊಂಡಿದೆ. ಸೂಕ್ತ ಗರ್ಭಧಾರಣೆಯ ತೂಕವನ್ನು ಹೇಗೆ ವಿತರಿಸಲ್ಪಡುತ್ತದೆ ಎಂಬುದು ಇಲ್ಲಿದೆ:

 

ಒಂದೇ ರೀತಿಯ ದೇಹ ಮತ್ತು ಒಂದೇ ತೂಕವನ್ನು ಇತರ ಜನರು ಹೊಂದಿರದಂತೆ, ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಾಗುವುದು ಪ್ರತ್ಯೇಕ ಗರ್ಭಿಣಿ ತಾಯಂದಿರೊಂದಿಗೆ ಬದಲಾಗುತ್ತದೆ. ಗರ್ಭಾವಸ್ಥೆಯಲ್ಲಿ ಸಾಧಾರಣ ತೂಕ ಹೆಚ್ಚಾಗುವುದು ಮೊದಲ 20 ವಾರಗಳಲ್ಲಿ 2-3 ಕೆ.ಜಿ ಜಾಸ್ತಿ, ನಂತರ ಮಗು ಹುಟ್ಟುವವರೆಗೆ ಪ್ರತಿ ವಾರ 0.5 ಕೆ.ಜಿ. ಗರ್ಭಧಾರಣೆಯ ಪೂರ್ಣಾವಧಿಯಲ್ಲಿ 12-16 ಕೆಜಿಗಳ  ತೂಕ ಹೆಚ್ಚಳವನ್ನು ನಿರೀಕ್ಷಿಸಬಹುದು. ಆದರೆ, ಇದು ಗರ್ಭಧಾರಣೆಯ ರೋಗಲಕ್ಷಣಗಳು, ದೇಹ ಪ್ರಕಾರ, ವ್ಯಕ್ತಿಯ ಜೀವನಶೈಲಿ, ಸಾಂಸ್ಕೃತಿಕ ವ್ಯತ್ಯಾಸಗಳು, ಇತ್ಯಾದಿಗಳಿಂದಾಗಿ ವಾಸ್ತವದಲ್ಲಿ ಭಿನ್ನವಾಗಿರುತ್ತದೆ.

ತ್ರೈಮಾಸಿಕಗಳು

ವಾರಗಳು

ತೂಕ ಹೆಚ್ಚಳ (ಕೆಜಿಗಳು)

ಮೊದಲ ತ್ರೈಮಾಸಿಕದಲ್ಲಿ

0-10 ವಾರಗಳು

ತೂಕ ಹೆಚ್ಚಾಗುವುದಿಲ್ಲ

10-14 ವಾರಗಳು

1.5 ಕೆಜಿ

ಎರಡನೇ ತ್ರೈಮಾಸಿಕದಲ್ಲಿ

14-20 ವಾರಗಳು

2.5 ಕೆಜಿಗಳು

20-30 ವಾರಗಳು

4.5 ಕೆಜಿಗಳು

ಮೂರನೇ ತ್ರೈಮಾಸಿಕದಲ್ಲಿ

30-36 ವಾರಗಳು

2.7 ಕೆಜಿಗಳು

36-38 ವಾರಗಳು

1.0 ಕೆಜಿ

38-40 ವಾರಗಳು

ಯಾವುದೇ ತೂಕ ಹೆಚ್ಚಾಗುವುದಿಲ್ಲ

 

ಒಟ್ಟು

12-14 ಕೆಜಿಗಳು

ಗರ್ಭಾವಸ್ಥೆಯಲ್ಲಿ ಮಗು ತೂಕ ಹೆಚ್ಚಳ ಚಾರ್ಟ್

ನಿರೀಕ್ಷಿತ ತಾಯಿಯಂತೆಯೇ ಬೆಳೆಯುತ್ತಿರುವ ಮಗು ಕೂಡಾ ವಿವಿಧ ದರಗಳಲ್ಲಿ ತೂಕವನ್ನು ಪಡೆಯುತ್ತದೆ. ಆದಾಗ್ಯೂ,  ಭ್ರೂಣದ ಜೀವಿತಾವಧಿಯಲ್ಲಿ ಮಗುವಿನ ಮಾದರಿ ತೂಕ ಈ ರೀತಿ ಹೆಚ್ಚಾಗುತ್ತದೆ:

 

ಗರ್ಭಧಾರಣೆಯ ವಾರ

ಕಿರೀಟದಿಂದ ರಂಪ್ಗೆ ಸರಾಸರಿ ಉದ್ದ (cm)

ಸರಾಸರಿ ತೂಕ (g)

8 ವಾರಗಳು

1.6cm

1g

9 ವಾರಗಳು

2.3cm

2g

10 ವಾರಗಳು

3.1cm

4g

11 ವಾರಗಳು

4.1cm

7g

12 ವಾರಗಳು

5.4cm

14g

13 ವಾರಗಳು

7.4cm

23g

14 ವಾರಗಳು

8.7cm

43g

15 ವಾರಗಳು

10.1cm

70g

16 ವಾರಗಳು

11.6cm

100g

17 ವಾರಗಳು

13cm

140g

18 ವಾರಗಳು

14.2cm

190g

19 ವಾರಗಳು

15.3cm

240g

 

ಕಿರೀಟದಿಂದ ಹಿಮ್ಮಡಿ ವರೆಗೆ

 

20 ವಾರಗಳು

25.6cm

300g

21 ವಾರಗಳು

26.7cm

360g

22 ವಾರಗಳು

27.8cm

430g

23 ವಾರಗಳು

28.9cm

501g

24 ವಾರಗಳು

30cm

600g

25 ವಾರಗಳು

34.6cm

660g

26 ವಾರಗಳು

35.6cm

760g

27 ವಾರಗಳು

36.6cm

875g

28 ವಾರಗಳು

37.6cm

1kg

29 ವಾರಗಳು

38.6cm

1.2kg

30 ವಾರಗಳು

39.9cm

1.3kg

31 weeks

41.1cm

1.5kg

32 ವಾರಗಳು

42.4cm

1.7kg

33 ವಾರಗಳು

43.7cm

1.9kg

34 ವಾರಗಳು

45cm

2.1kg

35 ವಾರಗಳು

46.2cm

2.4kg

36 ವಾರಗಳು

47.4cm

2.6kg

37 ವಾರಗಳು

48.6cm

2.9kg

38 ವಾರಗಳು

49.8cm

3.1kg

39 ವಾರಗಳು

50.7cm

3.3kg

40 ವಾರಗಳು

51.2cm

3.5kg

 

ಗರ್ಭಾವಸ್ಥೆಯಲ್ಲಿ ಆರೋಗ್ಯಕರವಾಗಿ ತೂಕ ಹೆಚ್ಚಾಗುವುದು

ಸಮತೋಲಿತ ಆಹಾರವನ್ನು ಸೇವಿಸುವುದು ಮತ್ತು ನಿಯಮಿತ ಸೌಮ್ಯ ವ್ಯಾಯಾಮವು ಆರೋಗ್ಯಕರ ಗರ್ಭಧಾರಣೆಯ ತೂಕವನ್ನು ಸಾಧಿಸುವುದಕ್ಕೆ ಮುಖ್ಯವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ ಗರ್ಭಾವಸ್ಥೆಯಲ್ಲಿ ಆರೋಗ್ಯಪೂರ್ಣ ಆಹಾರಕ್ರಮವು ದಿನಕ್ಕೆ ಸಾಮಾನ್ಯ ಕ್ಯಾಲೋರಿ ಸೇವನೆಯಿಂದ 200-300 ಕ್ಯಾಲರಿಗಳಷ್ಟು ಹೆಚ್ಚು ಸೇವಿಸುವ ಅಗತ್ಯವಿದೆ. ಇದಲ್ಲದೆ, ಗರ್ಭಾವಸ್ಥೆಯಲ್ಲಿ ಆಹಾರವು ಸಾಕಷ್ಟು ಶಕ್ತಿ, ಪ್ರೋಟೀನ್, ಫೋಲಿಕ್ ಆಮ್ಲ, ಕಬ್ಬಿಣ, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿರಬೇಕು, ಇವುಗಳು ಹಸಿರು ತರಕಾರಿಗಳು, ಹಣ್ಣುಗಳು, ಮಾಂಸ ಮತ್ತು ಮೀನುಗಳಂತಹ ವೈವಿಧ್ಯಮಯವಾದ ಆಹಾರಗಳ ಮೂಲಕ ಪಡೆಯಲ್ಪಡುತ್ತವೆ.

ಗರ್ಭಾವಸ್ಥೆಯಲ್ಲಿ ಮಗು ತೂಕ ಹೆಚ್ಚಿಸಲು 7 ಆರೋಗ್ಯಕರ ಆಹಾರಗಳು

  • ಹಾಲು ಮತ್ತು  ಹಾಲಿನ ಇತರ ಉತ್ಪನ್ನಗಳು

  • ಬೇಳೆಕಾಳುಗಳು, ದವಸ, ಧಾನ್ಯಗಳು, ಬೀಜಗಳು ಮತ್ತು ಕಾಳುಗಳು

  • ಮೀನು, ಮಾಂಸ ಮತ್ತು ಕೋಳಿ

  • ಕಿತ್ತಳೆ, ಸೇಬು, ದ್ರಾಕ್ಷಿ ಮತ್ತು ಆವಕಾಡೊಗಳಂತಹ ಹಣ್ಣುಗಳು

  • ಹಸಿರು ಎಲೆ ಮತ್ತು ಕಿತ್ತಳೆ ಬಣ್ಣದ ತರಕಾರಿಗಳು

  • ದ್ರವ ಪದಾರ್ಥಗಳು (ಪ್ಯಾಕ್ಡ್ ಜ್ಯೂಸ್ ಅವಾಯ್ಡ್ ಮಾಡಿ)

  • ಕೊಬ್ಬುಗಳು (ಸ್ಯಾಚುರೇಟೆಡ್ ಕೊಬ್ಬನ್ನು ಅವಾಯ್ಡ್ ಮಾಡಿ)

ಗರ್ಭಾವಸ್ಥೆಯಲ್ಲಿ ಹೆಚ್ಚು ತೂಕವಿರುವ ಮಹಿಳೆಯರು ಅವರು ಗಳಿಸುವ ತೂಕದ ಪ್ರಮಾಣವನ್ನು ಮಿತಿಗೊಳಿಸಲು  ಪ್ರಯತ್ನಿಸಬೇಕು. ಆದಾಗ್ಯೂ, ನಿಮ್ಮ ಆಹಾರವನ್ನು ನಿರ್ಬಂಧಿಸಲು ನೀವು ಒತ್ತು ನೀಡಬೇಕು. ಮೊದಲ ತ್ರೈಮಾಸಿಕದಲ್ಲಿ ಅತಿಯಾದ ತೂಕವಿರುವ ಗರ್ಭಿಣಿಯರಿಗೆ ಕಡಿಮೆ ಕ್ಯಾಲೋರಿ ಆಹಾರವು ತಾಯಿ ಅಥವಾ ಮಗುವಿಗೆ ಸಹಾಯ ಮಾಡುವುದಿಲ್ಲ ಎಂದು ಸಂಶೋಧಕರು ತೋರಿಸಿದ್ದಾರೆ. ಬದಲಿಗೆ, ಮಾದರಿ ಗರ್ಭಾವಸ್ಥೆಯ ಆಹಾರದೊಂದಿಗೆ ಯೋಗ ಅಥವಾ ಧ್ಯಾನಗಳಂತಹ ವ್ಯಾಯಾಮವು ಆರೋಗ್ಯಕರ ಗರ್ಭಧಾರಣೆಯ ತೂಕವನ್ನು ಸಾಧಿಸಲು ಮತ್ತು ಆರೋಗ್ಯಕರ ಮಗುವನ್ನು ಹೆರಲು ಸಹಾಯ ಮಾಡುತ್ತದೆ. ಗರ್ಭಾವಸ್ಥೆಯ ಮೊದಲ ತ್ರೈಮಾಸಿಕದಲ್ಲಿ ನಿಮ್ಮ ತೂಕ ಕಡಿಮೆ ಇದ್ದರೆ, ಗರ್ಭಾವಸ್ಥೆಯಲ್ಲಿ ಶಿಫಾರಸು ಮಾಡಿದ ಸಾಮಾನ್ಯ ತೂಕ ಹೆಚ್ಚಳವನ್ನು ಸಾಧಿಸಲು ಪ್ರಯತ್ನಿಸಿ.

ಗರ್ಭಾವಸ್ಥೆಯಲ್ಲಿ ನೀವು ಪಡೆದುಕೊಳ್ಳುವ ಕೆಲವು ಹೆಚ್ಚುವರಿ ಕಿಲೋಗಳ ಬಗ್ಗೆ ಚಿಂತೆ ಮಾಡಬೇಡಿ! ಇದನ್ನು ನಿರೀಕ್ಷಿಸಲಾಗಿದೆ ಮತ್ತು ಇದು ನಿಮಗೆ ಮತ್ತು ಮಗುವಿಗೆ ಆರೋಗ್ಯಕರವಾಗಿರುತ್ತದೆ. ಹೇಗಾದರೂ, ನೀವು ತುಂಬಾ ಜಾಸ್ತಿ ತೂಕ ಹೆಚ್ಚಾಗುವುದು ಅಥವಾ  ಕಡಿಮೆ ಯಾಗುವುದರ ಬಗ್ಗೆ ಚಿಂತಿತರಾಗಿದ್ದರೆ, ಕಾರಣ ಗುರುತಿಸಲು ಮತ್ತು ಅದನ್ನು ನಿರ್ವಹಿಸಲು ನಿಮ್ಮ ವೈದ್ಯರನ್ನು  ಸಂಪರ್ಕಿಸಿ.

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.