ಪೋಸ್ಟ್ ಪಾರ್ಟಮ್ ಖಿನ್ನತೆಯ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು

cover-image
ಪೋಸ್ಟ್ ಪಾರ್ಟಮ್ ಖಿನ್ನತೆಯ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವುದು

ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ) ಎಂದರೇನು?

 

ಹೆರಿಗೆಯ ನಂತರ, ಸಾಮಾನ್ಯವಾಗಿ ಮಹಿಳೆಯು ಖಿನ್ನತೆಯನ್ನು ಅನುಭವಿಸುತ್ತಾಳೆ. ಇದು ಹೆರಿಗೆಯಾದ ಮೊದಲ ೨ ತಿಂಗಳಲ್ಲೇ ಕಾಣಿಸಬಹುದು. ಈ ಖಿನ್ನತೆಯು , ಶೇಕಡಾ ೯೦% ಮಹಿಳೆಯರಲ್ಲಿ ಆಗುವ ಬೇಬಿ ಬ್ಲೂಸ್ ಗಿಂತ ವಿಭಿನ್ನ. 'ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರೆವೆಂಟಿವ್ನ್' ಪ್ರಕಾರ, ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ)ಯು ಶೇಕಡಾ ೧೫% ತಾಯಿಯರಿಗೆ ಹೆರಿಗೆಯ ನಂತರ ಸುಮಾರು ೧ ವರ್ಷದ ತನಕ ಕಾಡುತ್ತದೆಯಂತೆ. ಆದರೆ ಹಲವಾರು ಮಹಿಳೆಯರು ತಾವು ಖಿನ್ನತೆಯನ್ನು ಅನುಭವಿಸುತ್ತಿಲ್ಲ ಎನ್ನುತ್ತಾರೆ ಹಾಗೆ ಹಲವರಿಗೆ ತಾವು ಖಿನ್ನತೆಯನ್ನು ಅನುಭವಿಸುತ್ತಿದ್ದೇವೆ ಎಂದು ತಿಳಿಯುವುದೇ ಇಲ್ಲ. ವೈದ್ಯರ ಹಾಗು ಕುಟುಂಬದ ಸಹಾಯ ಹಾಗು ಸಲಹೆಯಿಂದ , ಈ ರೀತಿಯ ಖಿನ್ನತೆಯಿಂದ ಸಂಪೂರ್ಣವಾಗಿ ಹೊರಬರಲು ಸಾಧ್ಯವಾಗುತ್ತದೆ.

 

ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ) ಗು ಹಾಗು ಹಾರ್ಮೋನಲ್ ವ್ಯತ್ಯಾಸದಿಂದ ಆಗುವ ಖಿನ್ನತೆಗೂ ಏನು ವ್ಯತ್ಯಾಸ ?

 

ಸಾಮಾನ್ಯವಾಗಿ, ಈಸ್ಟ್ರೋಜೆನ್ ಹಾಗು ಪ್ರೊಜೆಸ್ಟ್ರೊನ್ ಗಳ ಮಟ್ಟ ಕಡಿಮೆಯಾಗುವುದರಿಂದ ಬೇಬಿ ಬ್ಲೂಸ್ ಉಂಟಾಗುತ್ತದೆ. ಆದರೆ ಹೆರಿಗೆಯ ಮೊದಲನೆಯ ತಿಂಗಳ ನಂತರ ಇದರ ಮಟ್ಟ ಹೆಚ್ಚುತ್ತಾ ಹೋಗುತ್ತದೆ. ಹಾಗೆಯೇ ಇದರಿಂದ ಉಂಟಾಗುವ ಖಿನ್ನತೆಯ ಮಟ್ಟವು ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ) ಯಾ ಖಿನ್ನತೆಗೆ ಹೋಲಿಸಿದರೆ ಕಡಿಮೆಯೇ. ಬೇಬಿ ಬ್ಲೂಸ್  ಆಗುವ ಖಿನ್ನತೆ ಯ ಲಕ್ಷಣಗಳೆಂದರೆ ಪದೇ ಪದೇ ಅಳುವುದು, ಒತ್ತಡ, ಭಾವನಾತ್ಮಕ ಪ್ರಕೋಪಕ್ಕೊಳಗಾಗುವುದು. ಈ ಲಕ್ಷಣಗಳು ಮೊದಲನೆಯ ತಿಂಗಳ ನಂತರವೂ ಮುಂದುವರಿದರೆ, ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ) ಯಾ ಅನುಭವವಾಗಬಹುದು. ಈ ಖಿನ್ನತೆಯು ಹೆರಿಗೆಯಾದ ೧ ವರ್ಷದವರೆಗೂ ಇರಬಹುದು ಹಾಗು ಕೆಲಮೊಮ್ಮೆ ಬಹಳ ಹೆಚ್ಚಾಗಬಹುದು. ಆದರೆ ಇದಕ್ಕೆ ಯಾವ ಸಹಾಯ ಪಡೆಯದಿದ್ದರೆ, ಇದರಿಂದ  ಮುಂದಕ್ಕೆ ಬಹಳ ತೊಂದರೆಯಾಗಬಹುದು.

 

ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ) ಗೆ ಕಾರಣಗಳೇನು?

 

ಇದಕ್ಕೆ ಯಾವುದೇ ಖಚಿತವಾದ ಕಾರಣವಿಲ್ಲ . ಆದರೆ ಕೆಲವೊಂದು ಅಂಶಗಳಾದ ಹಾರ್ಮೋನಿನಲ್ಲಿ ವ್ಯತ್ಯಾಸ, ನಿದ್ರಾಹೀನತೆ, ಅಸ್ಥಿರ ವಾತಾವರಣ ಹಾಗು ಅನುವಂಶಿಕ ಅಂಶಗಳಿಂದ ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ)ಯಾಗಬಹುದು. ಕೆಲವೊಮ್ಮೆ ಈ ಮೇಲಿನ ಯಾವ ಕಾರಣವೂ ಇಲ್ಲದೆಯೇ , ನಿಮಗೆ ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ) ಉಂಟಾಗಬಹುದು. ಆದ್ದರಿಂದ , ಮುಖ್ಯವಾದುದು ಏನೆಂದರೆ , ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ)ಯನ್ನು ಕಡೆಗಣಿಸಬೇಡಿ ಹಾಗು ಸರಿಯಾದ ಸಮಯಕ್ಕೆ ಸಹಾಯ ವನ್ನು ಪಡೆಯಿರಿ.

 

ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ)ಯ ಲಕ್ಷಣಗಳೇನು?

 

ಕೆಲುವು ಸಾಮಾನ್ಯ ಲಕ್ಷಣಗಳೆಂದರೆ:

ದುಃಖ ಭಾವನೆ ಉಂಟಾಗವುದು

ಕೆಲಮೊಮ್ಮೆ ಅಸಹಾಯಕತೆ ಮೂಡುವುದು

ಪದೇ ಅದೇ ಅಳುವುದು

ಕೋಪ , ಒತ್ತಡ ಗಳಿಂದ ಗಂಡ , ಕುಟುಂಬದವರ ಅಥವಾ ಮಕ್ಕಳ ಮೇಲೆ ಕಿರುಚಾಡುವುದು.

ನಿದ್ರಾಹೀನತೆ , ಸರಿಯಾಗಿ ಊಟಮಾಡದಿರುವುದು ಅಥವಾ ದೈಹಿಕ ಶಕ್ತಿ ಕಡಿಮೆಯಾಗುವುದು ಅಥವಾ ಯಾವುದರಲ್ಲೂ ಆಸಕ್ತಿ ತೋರಿಸದಿರುವುದು  - ಹೊರಗೆ ಹೋಗದಿರುವುದು ಹಾಗು ಯಾರನ್ನು ಭೇಟಿಯಾಗದಿರುವುದು.

ನಿಮ್ಮ ಹಾಗು ನಿಮ್ಮ ಮಗುವಿಗೆ ಹಾನಿಕಾರಕವಾದ ಯೋಚನೆಗಳು ಬರುವುದು , ಕೆಲವೊಮ್ಮೆ ಭಯಬೀತರಾಗುವುದು.

ಭಯ ಪಡುವುದು ಹಾಗು ಗಾಬರಿಯಾಗುವುದು.

 

ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ)ಯ ದಿಂದ ಯಾರಿಗೆ  ಹೆಚ್ಚು ತೊಂದರೆ?

 

ಇವೆಲ್ಲವೂ ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ)ಯ ಲಕ್ಷಣಗಳಾದರೂ , ಕೆಲವೊಮ್ಮೆ ನಿಮಗೆ ಪ್ರಸವ ನಂತರದ ಖಿನ್ನತೆ(ಪಿ ಪಿ ಡಿ) ಇರುವುದಿಲ್ಲ.

ಗರ್ಭಧಾರಣೆಯ ಕೊನೆಯ ತ್ರೈಮಾಸಿಕದಲ್ಲಿ ಖಿನ್ನತೆ  ಉಂಟಾಗುವುದು

ಅನುವಂಶಿಕ ಅಥವಾ ಹಿಂದೆಂದಾದರೂ ಖಿನ್ನತೆ ಉಂಟಾಗಿದ್ದರೆ

ಒತ್ತಡದ ಪರಿಸರ (ಕುಟುಂಬ , ಹಣಕಾಸಿನ , ವೈವಾಹಿಕ)

ನಿಮಗೆ ಇಷ್ಟವಿಲ್ಲದ ಗರ್ಭದಾರಣೆ

ಕಷ್ಟಕರವಾದ ಸಾಮಾಜಿಕ ಪರಿಸ್ಥಿತಿ, ಇದರಿಂದ ನಿಮ್ಮ ಮಗುವನ್ನು ಬೆಳೆಸುವುದು ಕಷ್ಟ ಎನಿಸಿದರೆ

 

#babychakrakannada
logo

Select Language

down - arrow
Personalizing BabyChakra just for you!
This may take a moment!