13 Jun 2019 | 1 min Read
Dr Seemi Siddiqui
Author | 8 Articles
ಎರಡು ಮಕ್ಕಳಿನ ನಡುವೆ ವಯಸ್ಸಿನ ಅಂತರ ಎಷ್ಟು ಇರಬೇಕು?
ನೀವು ಮತ್ತೊಂದು ಮಗುವಿನ ಬಗ್ಗೆ ಚಿಂತಿಸುತ್ತಿದ್ದರೆ, ಮಕ್ಕಳ ಮದ್ಯೆ ಸರಿಯಾದ ಅಂತರವಿರುವುದು ಬಹಳ ಮುಖ್ಯ. ಇದು ಮಗು ಹಾಗು ತಾಯಿ ಇಬ್ಬರಿಗೂ ಒಳ್ಳೆಯದು.
ಇಬ್ಬರು ಮಕ್ಕಳ ನಡುವೆ ಎರಡು ವರ್ಷ ಅಂತರವಿದ್ದರೆ ಸಾಕೆ?
ತಜ್ಞರ ಪ್ರಕಾರ , ಎರಡು ಗರ್ಭಧಾರಣೆಗಳ ಮದ್ಯೆ , ಕನಿಷ್ಠ ೧೮ ರಿಂದ ೨೪ ತಿಂಗಳ ಅಂತರವಿದ್ದರೆ ಒಳ್ಳೆಯದು. ಗರಿಷ್ಠ , ೫ ವರ್ಷಕ್ಕಿಂತ ಹೆಚ್ಚಿನ ಅಂತರವಿರಬಾರದು ಎಂದು ಎಲ್ಲಿಯೂ ಸೂಚಿಸಿಲ್ಲ. ನಿಮ್ಮ ಮೊದಲನೆಯ ಗರ್ಭಧಾರಣೆ ಹಾಗು ಎದೆಹಾಲು ಕುಡಿಸುವುದರಿಂದ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಹಾಗು ಐರನ್ ಮಟ್ಟ ಕಡಿಮೆಯಾಗಿರುತ್ತದೆ. ಆದ್ದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಲು ಈ ಅಂತರ ಸಹಾಯ ಮಾಡುತ್ತದೆ.
ನಿಮ್ಮ ವಯಸ್ಸು ೩೫ವರ್ಷ ಮೇಲ್ಪಟ್ಟಿದ್ದರೆ, ಎರಡು ಗರ್ಭಧಾರಣೆಯ ನಡುವೆ ೧೨ ತಿಂಗಳ ಅಂತರವಿರಲಿ. ಏಕೆಂದರೆ, ವಯಸ್ಸು ಹೆಚ್ಚುತ್ತಿದ್ದರೆ , ಗರ್ಭಧರಿಸುವುದು ಕಷ್ಟವಾಗುತ್ತದೆ.
ನಿಮ್ಮ ಕುಟುಂಬದಲ್ಲಿ, ಮಕ್ಕಳ ನಡುವೆ ವಯಸ್ಸಿನ ಅಂತರ ಎಷ್ಟು ಇರಬೇಕು?
ಮಕ್ಕಳ ನಡುವಿನ ಅಂತರವು , ಹಲವು ಅಂಶಗಳ ಮೇಲೆ ಅವಲಂಬಿಸುತ್ತದೆ. ನಿಮ್ಮ ವೈಯಕ್ತಿಕ ಆಯ್ಕೆ ಕೂಡ ಒಂದು ಅಂಶವಾಗಿರಬಹುದು. ಮೊದಲನೆಯ ಮಗುವಿಗು, ಎರಡನೆಯ ಗರ್ಭಧಾರಣೆಗೂ ೬ ತಿಂಗಳ ಅಂತರಕ್ಕಿಂತ ಕಡಿಮೆ ಇದ್ದರೆ, ಅಕಾಲಿಕ ಮಗುವಿನ ಜನನವಾಗುವ ಸಾಧ್ಯತೆ ಇರುತ್ತದೆ. ಅಕಾಲಿಕ ಮಗುವಿನಲ್ಲಿ ಕಡಿಮೆ ತೂಕ, ಶ್ಚಿಝೋಫ್ರೆನಿಯಾ ಅಥವಾ ಇನ್ಯಾವುದಾದರೂ ತೊಡಕುಗಳು ಉಂಟಾಗುವ ಸಾಧ್ಯತೆಗಳಿರುತ್ತವೆ. ಕೆಲವು ಅಧ್ಯಯನಗಳ ಪ್ರಕಾರ, ೨ ಗರ್ಭಧಾರಣೆಗಳ ನಡುವೆ ಅಂತರ ೨ವರ್ಷದೊಳಗಿದ್ದರೆ , ಹುಟ್ಟುವ ಮಗುವಿನಲ್ಲಿ ಆಟಿಸಂ ಕಾಣಿಸುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ಎರಡು ಗರ್ಭಧಾರಣೆಯ ನಡುವೆ ಕನಿಷ್ಠ ೨ ವರ್ಷಗಳ ಅಂತರವಿರುವುದು ಎಂದಿಗೂ ಉತ್ತಮವಾಗಿದೆ.
ಎರಡು ಮಕ್ಕಳಲ್ಲಿ ಸಾಕಷ್ಟು ವಯಸ್ಸಿನ ಅಂತರವಿದ್ದರೆ , ಅದರಿಂದಾಗುವ ಅನುಕೂಲಗಳೇನು?
ಎರಡು ಮಕ್ಕಳಿನ ನಡುವೆ ಸರಿಯಾದ ವಯಸ್ಸಿನ ಅಂತರವಿದ್ದರೆ, ಮಕ್ಕಳು ಹಾಗು ತಾಯಿ, ಇಬ್ಬರಿಗೂ ಅನುಕೂಲವಾಡುತ್ತದೆ. ಮಕ್ಕಳ ಅರೋಗ್ಯ ಚೆನ್ನಾಗಿರುತ್ತದೆ ಏಕೆಂದರೆ , ಗರ್ಭದಲ್ಲಿರುವಾಗ ಸರಿಯಾದ ಪೋಷಣೆ ಸಿಗುತ್ತದೆ. ಹಾಗೆಯೇ , ತಾಯಿಗೂ ಸಹಾ ಎರಡು ಗರ್ಭಧಾರಣೆಗಳ ನಡುವೆ ಸಾಕಷ್ಟು ಅಂತರವಿರುವುದರಿಂದ , ತನ್ನ ಅರೋಗ್ಯ ಸುಧಾರಿಸಿಕೊಳ್ಳಲು ಸಹಾಯವಾಗುತ್ತದೆ. ಇಬ್ಬರು ಮಕ್ಕಳು ಒಟ್ಟಿಗೆ ಬೆಳೆಯುತ್ತಾರೆ, ಒಟ್ಟಿಗೆ ಆಡುತ್ತಾರೆ , ಇಬ್ಬರಲ್ಲಿ ಒಳ್ಳೆಯ ಬಾಂದವ್ಯ ಬೆಳೆಯುತ್ತದೆ. ಇಬ್ಬರಲ್ಲಿ ಸಾಮಾನ್ಯ ಆಸಕ್ತಿಯಿರುವುದರಿಂದ, ರಜೆ ದಿನಗಳನ್ನು ಯೋಜಿಸಲು ಸುಲಭವಾಗುತ್ತದೆ. ಆದಾಗ್ಯೂ, ಯಾವ ಎರಡು ಕುಟುಂಬಗಳು ಒಂದೇ ರೀತಿ ಇರುವುದಿಲ್ಲ. ಒಂದು ಕುಟುಂಬಕ್ಕೆ ಹೊಂದುವುದು , ಮತ್ತೊಂದು ಕುಟುಂಬಕ್ಕೆ ಹೊಂದದೇ ಇರಬಹುದು. ಆದ್ದರಿಂದ , ನಿಮ್ಮ ಮಕ್ಕಳಿನ ನಡುವಿನ ಅಂತರವನ್ನು ನೀವೇ ನಿರ್ಧರಿಸಿ , ಅದರಿಂದ ನಿಮ್ಮ ಹಾಗು ನಿಮ್ಮ ಮಕ್ಕಳ ಬೆಳವಣಿಗೆಯ ಸಮಯ ಸುಖಮಯವಾಗಿರಲಿ.
A