ಗರ್ಭಾವಸ್ಥೆಯಲ್ಲಿ ಬೆನ್ನು ನೋವು

ಗರ್ಭಾವಸ್ಥೆಯಲ್ಲಿ ಬೆನ್ನು ನೋವು

14 Jun 2019 | 1 min Read

Medically reviewed by

Author | Articles

ಗರ್ಭಿಣಿ ಮಹಿಳೆಯರಿಗೆ ಏಕೆ ಬೆನ್ನುನೋವು?

ಗರ್ಭಧಾರಣೆಯ ಎಲ್ಲಾ ರೋಗಲಕ್ಷಣಗಳಲ್ಲಿ, ಬೆನ್ನುನೋವು ಗರ್ಭಿಣಿ ಮಹಿಳೆಯ ಒಟ್ಟಾರೆ  ಚಟುವಟಿಕೆಯ ಮೇಲೆ ನಿರ್ಬಂಧಗಳನ್ನು ತರುತ್ತದೆ. ಬೆನ್ನು ನೋವು ಭಾರೀ ಉಪದ್ರವಕರ ಮತ್ತು ಗರ್ಭಿಣಿ ಮಹಿಳೆಯ ಮೇಲೆ ಭಾವನಾತ್ಮಕ ಪರಿಣಾಮ ಬೀರುತ್ತದೆ.

ಬೆಳೆಯುತ್ತಿರುವ ಭ್ರೂಣಕ್ಕೆ ಹೊಂದಿಕೊಳ್ಳಲು ದೇಹದಲ್ಲಿ ಸಂಭವಿಸುವ ಹಲವಾರು ಬದಲಾವಣೆಗಳಿಂದಾಗಿ ಬೆನ್ನುನೋವು ಗರ್ಭಧಾರಣೆಯ 50% ಪ್ರಕರಣಗಳಲ್ಲಿ ತಪ್ಪಿಸಿಕೊಳ್ಳಲಾಗುವುದಿಲ್ಲ. ಕೆಲವೇ ಮಹಿಳೆಯರು ಗರ್ಭಾವಸ್ಥೆಯಲ್ಲಿ ಬೆನ್ನು ನೋವು ಅನುಭವಿಸುವುದಿಲ್ಲ.

ಹೆಚ್ಚಿನ ಸಂದರ್ಭಗಳಲ್ಲಿ ಬೆನ್ನು ನೋವು ಕೆಳ ಬೆನ್ನುನೋವಿನ ರೂಪದಲ್ಲಿ ಕಾಡುತ್ತದೆ. ಕೆಳ ಬೆನ್ನುನೋವಿನ ಎರಡು ವಿಧಗಳು ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಕಂಡುಬರುತ್ತವೆ: ಶ್ರೋಣಿ ಕುಹರದ(ಪೆಲ್ವಿಕ್ ರ್ಗಿಡಲ್) ನೋವು ಮತ್ತು ಸೊಂಟದ ನೋವು. ಇವುಗಳಲ್ಲಿ, ಗರ್ಭಾವಸ್ಥೆಯಲ್ಲಿ ಶ್ರೋಣಿ ಕುಹರದ ನೋವು ಹೆಚ್ಚು ಸಾಮಾನ್ಯವಾಗಿದೆ. ಇದು ನಿರಂತರ ಅಥವಾ ಅನಿಯಮಿತವಾದ ಆಳವಾದ ಚುಚ್ಚುವಂತಾ  ನೋವು, ಒಂದು ಬದಿಯಲ್ಲಿ ಅಥವಾ ಎರಡೂ ಬದಿಗಳಲ್ಲಿ ಕೆಳಭಾಗದಲ್ಲಿ ಪೃಷ್ಠಕ್ಕೆ, ತೊಡೆಗೆ ಮತ್ತು ಮಂಡಿಗೆ ವಿಸ್ತರಿಸುವುದು ಆದರೆ ಪಾದಕ್ಕೆ ಅಲ್ಲ. ಸೊಂಟ ನೋವು ಸಾಮಾನ್ಯವಾಗಿ ಕೆಳ ಬೆನ್ನುಮೂಳೆಯ ಪ್ರದೇಶದಲ್ಲಿ ಟೆಲ್ಬೊನ್ ಮೇಲೆ ಕಂಡುಬರುತ್ತದೆ. ನೋವು ಪಾದಕ್ಕೆ ವಿಸ್ತರಿಸಬಹುದು.

ಕೆಲವೊಂದು ಮಹಿಳೆಯರು  ಬೆನ್ನಿನ ಮೇಲ್ಭಾಗದಲ್ಲಿ ನೋವು ಅನುಭವಿಸುತ್ತಾರೆ, ಆದರೆ ಕೆಲವರು ಕೆಳ ಬೆನ್ನಿನಲ್ಲಿ ನೋವು ಅನುಭವಿಸುತ್ತಾರೆ  ರಾತ್ರಿ ನಿದ್ರೆ ಮಾಡುವಾಗ ಮಾತ್ರ(ರಾತ್ರಿಯ ನೋವು).

ಗರ್ಭಾವಸ್ಥೆಯಲ್ಲಿ ಬೆನ್ನು ನೋವು ಸಾಮಾನ್ಯವಾಗಿ ಸೀಮಿತ ಚಿಕಿತ್ಸೆಯ  ಆಯ್ಕೆಗಳ ಕಾರಣ ನಿರ್ಲಕ್ಷಿಸಲಾಗುತ್ತದೆ. ಮಗುವಿನ ಮೇಲೆ ಸಂಭವನೀಯ ನಕಾರಾತ್ಮಕ ಪರಿಣಾಮಗಳನ್ನು ಉಂಟುಮಾಡುವ ಕಾರಣದಿಂದಾಗಿ ಗರ್ಭಾವಸ್ಥೆಯಲ್ಲಿ ಬೆನ್ನುನೋವಿನ ಉಪಶಮನಕ್ಕಾಗಿ ಔಷಧಿಗಳನ್ನು ಸಾಮಾನ್ಯವಾಗಿ ತಡೆಗಟ್ಟಲಾಗುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ, ಗರ್ಭಾವಸ್ಥೆಯಲ್ಲಿ ಉಂಟಾಗುವ ಬೆನ್ನುನೋವು ಹೆರಿಗೆಯ ನಂತರ ಕಡಿಮೆಯಾಗುತ್ತದೆ. ಸಾಕಷ್ಟು ವಿಶ್ರಾಂತಿ, ಸರಳ ವ್ಯಾಯಾಮಗಳು ಮತ್ತು ಪರ್ಯಾಯ ಚಿಕಿತ್ಸೆಗಳು ಸುರಕ್ಷಿತವಾಗಿರುತ್ತವೆ ಮತ್ತು ಗರ್ಭಾವಸ್ಥೆಯಲ್ಲಿ ಬೆನ್ನುನೋವು ನಿವಾರಿಸಲು ಸಾಮಾನ್ಯವಾಗಿ ಬಳಸಲಾಗುತ್ತದೆ.

ಗರ್ಭಾವಸ್ಥೆಯಲ್ಲಿ ಬೆನ್ನುನೋವಿಗೆ ಅಪಾಯಕಾರಿ ಅಂಶಗಳು

ಗರ್ಭಾವಸ್ಥೆಗಿಂತ ಮೊದಲು ಬೆನ್ನುನೋವಿನಿಂದ ಬಳಲುತ್ತಿರುವ ಮಹಿಳೆಯರು ಗರ್ಭಧಾರಣೆಯ ಸಮಯದಲ್ಲಿ ಅದರಿಂದ ಬಳಲುವ ಸಾಧ್ಯತೆ ಜಾಸ್ತಿ.. ಜೀವನಶೈಲಿ ಪ್ರಮುಖ ಪಾತ್ರ ವಹಿಸುತ್ತದೆ; ಗರ್ಭಾವಸ್ಥೆಯ ಮೊದಲು  ಕುಳಿತು ಕೆಲಸಮಾಡುವ ಜೀವನಶೈಲಿ ಅಥವಾ ಆಕ್ರಮಣಶೀಲ ದೈಹಿಕ ಪ್ರಯತ್ನವನ್ನು ಒಳಗೊಂಡಿರುವ ಮಿತಿಮೀರಿದ ಚಟುವಟಿಕೆ ಗರ್ಭಾವಸ್ಥೆಯ ನಂತರ ಬೆನ್ನು ನೋವಿನ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.

ಅತಿಯಾದ ತೂಕ ಮತ್ತು ಸ್ಥೂಲಕಾಯತೆಯು ಗರ್ಭಾವಸ್ಥೆಯಲ್ಲಿ ಬೆನ್ನುನೋವಿನ ಬೆಳವಣಿಗೆಗೆ ಪ್ರಮುಖವಾದ ಅಪಾಯಕಾರಿ ಅಂಶಗಳಾಗಿವೆ. ಎರಡನೆಯ ಅಥವಾ ಮೂರನೆಯ ಬಾರಿಗೆ ಗರ್ಭಿಣಿಯಾದ ಮಹಿಳೆಯರು ಮೊದಲ ಬಾರಿಗೆ ಗರ್ಭಿಣಿಯಾದ  ಮಹಿಳೆಯರಿಗಿಂತ ಗರ್ಭಧಾರಣೆಯ ಬೆನ್ನುನೋವಿನಿಂದ ಬಳಲುವ ಸಾಧ್ಯತೆ ಜಾಸ್ತಿ ಇರುತ್ತದೆ.

ಗರ್ಭಾವಸ್ಥೆಯಲ್ಲಿ ಬೆನ್ನುನೋವಿಗೆ  ಕಾರಣವೇನು?

ವಿವಿಧ ಕಾರಣಗಳಿಂದ ಗರ್ಭಾವಸ್ಥೆಯಲ್ಲಿ ಬೆನ್ನುನೋವು ಉಂಟಾಗುತ್ತದೆ.

  1. ಬೆನ್ನಿನ ಸ್ನಾಯುಗಳ ಮೇಲೆ ಒತ್ತಡ: ಬೆಳೆಯುತ್ತಿರುವ ಮಗು ಬೆನ್ನಿನ ಬೆನ್ನುಮೂಳೆಯ ಮತ್ತು ಸ್ನಾಯುಗಳ ಮೇಲೆ ಒತ್ತಡವನ್ನುಂಟುಮಾಡುತ್ತದೆ. ಹೆಚ್ಚುವರಿಯಾಗಿ, ಗರ್ಭಾಶಯದ ಗಾತ್ರ ಹೆಚ್ಚುತ್ತಿರುವ ಕಾರಣ ಸೊಂಟದ ಬೆನ್ನುಹುರಿಯ ಸಾಮಾನ್ಯ ರೇಖೆಯು ಗರ್ಭಾವಸ್ಥೆಯಲ್ಲಿ ಹೆಚ್ಚಾಗುತ್ತದೆ. ಗರ್ಭಾವಸ್ಥೆಯಲ್ಲಿ ಹೆಚ್ಚಿದ ದೇಹದ ತೂಕ ಮತ್ತು ಹೊಟ್ಟೆಯ ಸುತ್ತಳತೆ ಸಮತೋಲನ ಮಾಡಲು ಗುರುತ್ವಾಕರ್ಷಣೆಯ ಕೇಂದ್ರವು ಮುಂದೆ ಬರುತ್ತದೆ.

  2. ಹಾರ್ಮೋನುಗಳ ಕಾರಣ: ಗರ್ಭಧಾರಣೆಯ ಸಮಯದಲ್ಲಿ ರಿಲ್ಯಾಕ್ಸಿನ್ ಹಾರ್ಮೋನು ಸ್ರವಿಸುವಿಕೆಯು ಹೆಚ್ಚಾಗುತ್ತದೆ. ಹಾರ್ಮೋನ್  ದೇಹವನ್ನು ಹೆರಿಗೆಗೆ ತಯಾರಿಗೊಳಿಸಲು ,ಬೆನ್ನಿನ ಮತ್ತು ಸೊಂಟದ ಅಸ್ಥಿರಜ್ಜು ಮತ್ತು ಸ್ನಾಯುಗಳನ್ನು ಸಡಿಲ ಮತ್ತು ದುರ್ಬಲಗೊಳಿಸುತ್ತದೆ. ಇದು ವಿವಿಧ ಚಟುವಟಿಕೆಗಳ ಸಮಯದಲ್ಲಿ ಬೆನ್ನಿನ ಸಣ್ಣ ಕೀಲುಗಳ ಕಾರ್ಯದಲ್ಲಿ ಸಮಸ್ಯೆಯನ್ನು ಉಂಟುಮಾಡುತ್ತದೆ (ಸ್ಯಾಕ್ರೊಲಿಯಾಕ್ ಜಂಟಿ)  ಮತ್ತು ಬೆನ್ನಿನ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟುಮಾಡುತ್ತದೆ. ಹಾರ್ಮೋನುಗಳ ಬದಲಾವಣೆ ಆರಂಭಿಕ ಗರ್ಭಾವಸ್ಥೆಯಲ್ಲಿ ಕೆಳ ಬೆನ್ನುನೋವಿಗೆ ಮುಖ್ಯ ಕಾರಣವಾಗಿದೆ.

  3. ಗರ್ಭಾಶಯದ ಗಾತ್ರವು ಹೆಚ್ಚುವುದರಿಂದ ಗರ್ಭಾವಸ್ಥೆಯಲ್ಲಿ ಹೊಟ್ಟೆಯ ಸ್ನಾಯುಗಳು ಹಿಗ್ಗುತ್ತದೆ. ಇದು ಬೆನ್ನಿನ ಸ್ನಾಯುಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ ಮತ್ತು ಬೆನ್ನುನೋವಿಗೆ ಕಾರಣವಾಗುತ್ತದೆ.

  4. ಗರ್ಭಾವಸ್ಥೆಯ ಮಾನಸಿಕ ಒತ್ತಡ ಸಹ  ಕೆಲವು ಗರ್ಭಿಣಿ ಮಹಿಳೆಯರಲ್ಲಿ ಬೆನ್ನುನೋವಿಗೆ ಕಾರಣವಾಗುತ್ತದೆ.

ಗರ್ಭಾವಸ್ಥೆಯಲ್ಲಿ ಬೆನ್ನುನೋವನ್ನು ತಡೆಗಟ್ಟುವುದು ಹೇಗೆ?

ಗರ್ಭಾವಸ್ಥೆಯಲ್ಲಿ ಬೆನ್ನುನೋವು ತಡೆಯಲು ಮತ್ತು ನಿವಾರಿಸಲು ಸಹಾಯ ಮಾಡುವ ಕೆಲವು ಸಲಹೆಗಳು ಕೆಳಗಿನವುಗಳನ್ನು ಒಳಗೊಂಡಿವೆ:

  • ಗರ್ಭಿಣಿಯಾಗುವುದಕ್ಕೆ ಮುಂಚಿತವಾಗಿ ವಾಕಿಂಗ್ ನಂತಹ ಸಾಮಾನ್ಯ ಮಧ್ಯಮ ವ್ಯಾಯಾಮವನ್ನು ಪ್ರಾರಂಭಿಸಬೇಕು ಮತ್ತು ಇದನ್ನು ಗರ್ಭಿಣಿಯಾದ ನಂತರ ಮುಂದುವರಿಸಬೇಕು. ಇದು ಬಲವಾದ ಸ್ನಾಯುವನ್ನು ಉಳಿಸಿಕೊಳ್ಳುವಲ್ಲಿ ಮತ್ತು  ಬೆನ್ನುನೋವು ತಡೆಗಟ್ಟುವಲ್ಲಿ ಮಹತ್ತರವಾದ ಸಹಾಯ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಬೆನ್ನುನೋವನ್ನು ತಡೆಗಟ್ಟುವಲ್ಲಿ ಈಜುಗಾರಿಕೆಯನ್ನು ಉತ್ತಮ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ.

  • ಸೊಂಟ ಬಗ್ಗಿಸುವುದನ್ನು ತಪ್ಪಿಸಿ. ಬದಲಾಗಿ ನೆಲದಿಂದ ವಸ್ತುಗಳನ್ನು ಎತ್ತಿಕೊಳ್ಳುವಾಗ ಬೆನ್ನನ್ನು ನೇರವಾಗಿ ಇಟ್ಟುಕೊಳ್ಳಿ ಮತ್ತು ಮೊಣಕಾಲಿನಲ್ಲಿ ಕುಳಿತು ಅಥವಾ ಬಾಗಿ.

  • ಮೊಣಕಾಲುಗಳ ಮಧ್ಯದಲ್ಲಿ ಮೆತ್ತೆ ಇಟ್ಟುಕೊಂಡು ಭದ್ರವಾದ ಹಾಸಿಗೆ ಮೇಲೆ ಒಂದು ಪಕ್ಕಕ್ಕೆ ಹೊರಳಿ ಮಲಗಿ. ಇದು ಕಿಬ್ಬೊಟ್ಟೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.

  • ಗರ್ಭಾವಸ್ಥೆಯಲ್ಲಿ ಕುಳಿತ ಭಂಗಿಯಲ್ಲಿ ಕೆಲಸ ಮಾಡುವಾಗ ದಿಂಬಿನಿಂದ  ಅಥವಾ ಕುರ್ಚಿಗೆ ಜೋಡಿಸಲಾದ ಬ್ಯಾಕ್ ರೆಸ್ಟ್ನಿಂದ ಹಿಂಬದಿಗೆ ಬೆಂಬಲ ನೀಡಿ.

  • ಬೆನ್ನಿಗೆ ಬಿಸಿ ಮತ್ತು ಶೀತದ ಕಾವು ಕೊಡುವುದರಿಂದ  ನೋವು ಮತ್ತು ಬಿಗಿತ ಕಡಿಮೆಯಾಗುತ್ತದೆ.

  • ಅಕ್ಯುಪಂಕ್ಚರ್ ಮತ್ತು ಚಿರೋಪ್ರಾಕ್ಟಿಕ್ ಚಿಕಿತ್ಸೆಗಳು ಬೆನ್ನುನೋವು ನಿವಾರಣೆಯಲ್ಲಿ ಒಂದು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ ಮತ್ತೆ ಔಷಧಿಗಳ ಬಳಕೆಯನ್ನು ಸೀಮಿತಗೊಳಿಸುತ್ತದೆ.

ಬ್ಯಾನರ್ ಚಿತ್ರದ ಮೂಲ: ಪ್ರಾಯೋಗಿಕ ನಿರ್ವಹಣೆ

ಹಕ್ಕುತ್ಯಾಗ: ಲೇಖನದಲ್ಲಿನ ಮಾಹಿತಿಯು ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗಾಗಿ ಪರ್ಯಾಯವಾಗಿ ಉದ್ದೇಶಿಸಿಲ್ಲ ಅಥವಾ ಸೂಚಿಸಲ್ಪಟ್ಟಿಲ್ಲ. ನಿಮ್ಮ ವೈದ್ಯರ ಸಲಹೆಯನ್ನು ಯಾವಾಗಲೂ ಪಡೆಯಿರಿ.

 

#babychakrakannada

A

gallery
send-btn

Related Topics for you