• Home  /  
  • Learn  /  
  • ಮಕ್ಕಳಲ್ಲಿ ವೈರಸ್ ನಿಂದ ಉಂಟಾಗುವ ಕೆಂಪು ಗುಳ್ಳೆಗಳು
ಮಕ್ಕಳಲ್ಲಿ ವೈರಸ್ ನಿಂದ ಉಂಟಾಗುವ ಕೆಂಪು ಗುಳ್ಳೆಗಳು

ಮಕ್ಕಳಲ್ಲಿ ವೈರಸ್ ನಿಂದ ಉಂಟಾಗುವ ಕೆಂಪು ಗುಳ್ಳೆಗಳು

14 Jun 2019 | 1 min Read

Medically reviewed by

Author | Articles

ನಿಮ್ಮ ಮಕ್ಕಳ ಚರ್ಮದ ಮೇಲೆ ಕೆಂಪು ಗುರುತುಗಳು ಅಥವಾ ಗುಳ್ಳೆ ಏಳುವುದು ಸಾಮಾನ್ಯ ಆದರೆ ಎಲ್ಲಾ ಕೆಂಪು ಗುರುತುಗಳು ಒಂದೇ ರೀತಿಯಲ್ಲ. ಕೆಲವು ಸಣ್ಣ ಸೊಳ್ಳೆ ಕಚ್ಚಿದ ಗುರುತಾಗಿರಬಹುದು, ಇನ್ನು ಕೆಲವು ದದ್ಧುಗಳಾಗಿರಬಹುದು.

 

ದದ್ದುಗಳು ಚರ್ಮಕ್ಕೆ ಕಿರಿಕಿರಿ ಉಂಟು ಮಾಡುವುದು ಎಂದು ವ್ಯಾಖ್ಯಾನಿಸಲಾಗಿದೆ, ಇದರ ಜೊತೆಗೆ ಕೆಂಪಾಗುವುದು, ಉಬ್ಬಿಕೊಳ್ಳುವುದು ಅಥವಾ ಕೋಶವಾಗುದವುದು. ದದ್ದುಗಳಾಗುವುದ್ದಕ್ಕೆ ಬಹಳ ಕಾರಣಗಳಿರುತ್ತವೆ. ಮಕ್ಕಳಲ್ಲಿ, ವೈರಾಣು ಸೋಂಕುವಿನಿಂದ ಬಹಳ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ದದ್ದುಗಳು. ವೈರಾಣು ಸೋಂಕು ಕಾರಣದಿಂದಲೇ ಮಕ್ಕಳಿಗೆ ನೆಗಡಿ ಅಥವ ದಡಾರವಾಗಬಹುದು. ವೈರಾಣು ಸೋಂಕುಗಳು ಯಾವುದೇ ಅಲರ್ಜಿಯು ತಾಗುವುದಿಲ್ಲ ಹಾಗೂ ಯಾವುದೇ ರೀತಿಯ ನೋವು ಅಥವಾ ಕೆರೆತ ಉಂಟು ಮಾಡುವುದಿಲ್ಲ.

 

ಇದು ಸಂಪೂರ್ಣವಾಗಿ ಗುಣವಾಗಲು ಕೆಲವು ದಿನಗಳನ್ನು ತೆಗೆದುಕೊಳ್ಳುತ್ತದೆ.  ವೈರಾಣು ರೋಗಗಳಿಗೆ ಸಾಮಾನ್ಯ ಚಿಕಿತ್ಸೆಯು ಪ್ರತಿರೋಧಕತೆಯನ್ನು ಉಂಟು ಮಾಡುವುದಿಲ್ಲ.

 

ಮಕ್ಕಳಲ್ಲಿ ವೈರಾಣು ಸೋಂಕು ಕಾಣುವ ಲಕ್ಷಣಗಳು

 

ನೀವು ಕೆಲವು ಅಂಶಗಳನ್ನು ಗಮನಿಸಿದರೆ, ಕೆಳಗೆ ಕೊಟ್ಟಿರುವ ಲಕ್ಷಣಗಳಲ್ಲಿ, ನಿಮ್ಮ ಮಕ್ಕಳು ವೈರಾಣು ಸೋಂಕುವಿನಿಂದ ಹೇಗೆ ಬಳಲುತ್ತಿದ್ದಾರೆ ಎಂದು ತಿಳಿಯುತ್ತದೆ.

  • ಜ್ವರ
  • ಶಕ್ತಿಯನ್ನು ಕಳೆದುಕೊಳ್ಳುವುದು
  • ಹಸಿವು ಕಡಿಮೆ ಮಾಡುವುದು
  • ತಲೆ ನೋವು
  • ಸ್ನಾಯು ನೋವು
  • ಹೊಟ್ಟೆ ನೋವು

 

ಪ್ರಾರಂಭದ ದಿನಗಳಲ್ಲಿ ತುಂಬಾ ಸಲ ಬಹಳ ದೊಡ್ಡ ಸೋಂಕಿನಿಂದ ವೈರಾಣು ಸೋಂಕಾಗುವ ಸಾಧ್ಯತೆಗಳಿರುತ್ತವೆ. ಆದ್ದರಿಂದ, ನೀವು ಇದನ್ನು ಪ್ರಾರಂಭದ ದಿನದಲ್ಲೇ ಗಮನಿಸಿಕೊಳ್ಳಬೇಕು.

 

ನಿಮ್ಮ ಮಗು ವೈರಾಣು ಸೋಂಕಿನಿಂದ ಬಳಲುತ್ತಿದ್ದರೆ ಅದನ್ನು ಹೇಗೆ ಕಾಪಾಡಬೇಕು?

 

ನಿಮ್ಮ ಮಕ್ಕಳಲ್ಲಿ ವೈರಾಣು ಸೋಂಕಿನಿಂದ ಹೇಗೆ ಕಾಪಾಡಿಕೊಳ್ಳಬೇಕೆಂದು ಕೆಳಗೆ ಕೆಲವು ಸೂಚನೆಗಳನ್ನು ಕೊಡಲಾಗಿದೆ.

 

ಹೆಚ್ಚಿನ ದ್ರವವನ್ನು ಕೊಡುತ್ತಿರಿ.

 

ಜ್ವರವು ದೇಹದಲ್ಲಿರುವ ನೀರಿನ ಅಂಶವಾನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಎಳೆ ಮಕ್ಕಳು, ಅಂದರೆ ಒಂದು ವರ್ಷಕ್ಕಿಂತ ಕಡಿಮೆ ಇರುವ ಮಗುವಿಗೆ ಆಗಾಗ್ಗೆ ತಾಯಿಯ ಹಾಲನ್ನು ಕುಡಿಸುತ್ತಿರಬೇಕು. ಆರ್ ಎಸ್ ಕೂಡ ಕೊಡಬಹುದು. ನೀವು ಬಹಳಷ್ಟು ಬೇರೆ ರೀತಿಯ ದ್ರವಗಳನ್ನು ಸ್ವಲ್ಪ ದೊಡ್ಡ ಮಕ್ಕಳಿಗೆ ಕೊಡಬಹುದು ಅದಾವುದೆಂದರೆ, ನೀರು, ಹಣ್ಣಿನ ರಸ ಮುಂತಾದವು.

 

ಗಟ್ಟಿಯಾದ ಆಹಾರವನ್ನು ತಿನ್ನಲು ಬಲವಂತ ಪಡಿಸಬೇಡಿ.

 

ಮಕ್ಕಳಲ್ಲಿ ವೈರಾಣು ಸೋಂಕು ಸಾಮಾನ್ಯವಾಗಿ ಘನವಸ್ತುಗಳಿಗೆ ನಿವಾರಣೆ ಮಾಡುವುದರಿಂದ ಬರಬಹುದು, ಆದರೆ ಅದು ಪರವಾಗಿಲ್ಲ. ನಿಮ್ಮ ಮಗು ಎಷ್ಟು ದ್ರವವನ್ನು ಸೇವಿಸುತ್ತದೋ, ಅಷ್ಟು ಸೇವಿಸಲಿ, ಗಟ್ಟಿಯಾದ ಪದಾರ್ಥವನ್ನು ತಿನ್ನಲು ಬಲವಂತ ಪಡಿಸುವ ಅವಶ್ಯವಿಲ್ಲ.

 

ಸಾಕಷ್ಠು ಆರಾಮವಾಗಿರಲು ಸಹಾಯ ಮಾಡಿ.

 

ನಿಮ್ಮ ಮಗುವಿಗೆ  ವೈರಾಣು ಸೋಂಕು ತಗುಲಿದೆ. ಅವರಿಗೆ ಆರಾಮವಾಗಿ ಮನೆಯಲ್ಲಿರುವುದು ಅಥವಾ ಮನೆಯಲ್ಲೇ ಸಮಾಧಾನವಾಗಿ ಆಟವಾಡುವುದು ಒಳ್ಳೆಯದು. ಅನಿಯಮಿತ ಮಲಗುವ ಮಧ್ಯಂತರಗಳು ಮತ್ತು ಕಸಿವಿಸಿಗೊಳ್ಳುವುದು ಸೋಂಕಿನ ಜೊತೆ ಸೇರಿಕೊಳ್ಳುತ್ತದೆ. ಮರುಕಳಿಸುವ ನಿದ್ದೆ ಅವರಿಗೆ ಸಾಕಷ್ಟು ಆರಾಮವಾಗಿರಲು ಸಹಾಯ ಮಾಡುತ್ತದೆ. ನೀವು ಮಗುವನ್ನು ಮೇಲ್ಭಾಗದ ದೇಹವನ್ನು ಮೇಲೆ ಮಾಡಿ ಮಲಗಿಸಬೇಕು ಆದ್ದರಿಂದ ಅವರಿಗೆ ಸುಖವಾಗಿ ಆರಾಮವಾಗಿಡಲು ಮತ್ತು ಚೆನ್ನಾಗಿ ನಿದ್ದೆ ಮಾಡಲು ಸಹಾಯ ಮಾಡುತ್ತದೆ.

 

ಜ್ವರದ ಔಷಧವನ್ನು ಕೊಡವುದಕ್ಕೆ ವೈದ್ಯರ ಸಲಹೆ ಪಡೆಯಿರಿ.

 

ಜ್ವರ ಮತ್ತು ಕಂತುಗಳ ಕಸಿವಿಸಿತನ ವೈರಾಣು ಸೋಂಕಿನೊಂದಿಗೆ ಸೇರಿಕೊಳ್ಳುತ್ತದೆ. ಆಗ ನೀವು ನಿಮ್ಮ ವೈದ್ಯರನ್ನು ಕಂಡು ಅದಕ್ಕೆ ಸೂಕ್ತ ಔಷಧಗಳನ್ನು ಪಡೆದುಕೊಳ್ಳುವುದು ಅತ್ಯವಶ್ಯಕ.

 

ಯಾವಾಗ ವೈದ್ಯಕೀಯದ ಸಹಾಯಬೇಕಾಗುತ್ತದೆ

 

ಕೆಳಕಂಡ ಲಕ್ಷಣಗಳಿಗೆ ವೈದ್ಯಕೀಯ ಮಧ್ಯಸ್ಥಿಕೆಗಳು ಅತ್ಯವಶ್ಯಕ, ಹಾಗೂ ಇದನ್ನು ಕಂಡ ಕೂಡಲೇ ನಿಮ್ಮ ವೈದ್ಯರನ್ನು ಕಾಣುವುದು ಒಳಿತು.

  • ದದ್ದುಗಳು ಕಣ್ಣಿನ ಮೇಲೆ, ಬಾಯಿಯ ಮೇಲೆ ಅಥವಾ ಜನನಾಂಗಳ ಮೇಲೆ ಬರುತ್ತದೆ.
  • ಸೋಂಕಿನ ತೀವ್ರತೆ ಕಡಿಮೆಯಾಗುವುದಕ್ಕಿಂತ ಹೆಚ್ಚಾಗುತ್ತಾ ಹೋಗುತ್ತದೆ.
  • ಹೆಚ್ಚಿನ ತಾಪಮಾನ
  • ತುಂಬಾ ಜೋರಾಗಿ ಉಸಿರಾಡುವುದು.
  • ಉಸಿರು ಎಳೆತ/ಉಬ್ಬಸ
  • ಕಿವಿ ನೋವು
  • ಮೂಗಿನಲ್ಲಿ ನೋವು
  • ಕತ್ತಿನಲ್ಲಿ ನೋವು
  • ಭೇದಿ ಅಥವಾ ವಾಕರಿಕೆ
  • ದದ್ಧುಗಳಲ್ಲಿ ಕೆಂಪಿನಿಂದ ನೇರಳೆ ಬಣ್ಣಕ್ಕೆ ತಿರುಗುವುದು.
  • ನೀರಿಳಿತವಾಗಬಹುದು, ಅದರಿಂದ ಅಳುವಾಗ ಕಣ್ಣಿನಿಂದ ಸಾಕಷ್ಟು ನೀರು ಬರದಿರುವುದು, ಕಣ್ಣು ಚಿಕ್ಕದಾಗಿ ಕಾಣುವುದು, ಬಾಯಿ ಒಣಗಿರುವುದು ಮುಂತಾದವು.

 

ಯಾವಾಗ ತುರ್ತುಪರಿಸ್ಥಿತಿಗೆ ಹೋಗಬಹುದು.

 

ಕೆಳಗೆ ಕೊಟ್ಟಿರುವ ಲಕ್ಷಣಗಳಿದ್ದಲ್ಲಿ ನೀವು ತುರ್ತುಪರಿಸ್ಥಿತಿಯ ಕೋಣೆಗೆ ಹೋಗಬೇಕಾಗುತ್ತದೆ.

 

  • ಉಸಿರಾಡಲು ತೊಂದರೆಯಾದಾಗ
  • ತೂಕಡಿಕೆ ಅಥವಾ ಎಚ್ಚರವಾಗುವುದು ಕಷ್ಟವಾದಲ್ಲಿ
  • ತಲೆ ಸುತ್ತುವುದು
  • ಹೃದಯ ಬಡಿತ ಜೋರಾಗುವುದು
  • ರೋಗಗ್ರಸ್ತವಾಗುವಿಕೆ
  • ನೇರವಾಗಿರುವ ಕತ್ತು

 

ವೈರಾಣು ಸೋಂಕು ಮಕ್ಕಳಲ್ಲಿ ಸಾಮಾನ್ಯವಾದ ಅಂಶವದರೂ, ಮಕ್ಕಳಿಂದ ಮಕ್ಕಳಿಗೆ ಅದರ ತೀವ್ರತೆ ಬೇರೆ ಇರುತ್ತದೆ. ಮಕ್ಕಳನ್ನು  ಯಾವಾಗಲೂ ಹೈಡ್ರೇಟ್ ಆಗಿಡವುದು ತುಂಬಾ ಮುಖ್ಯ ಮತ್ತು ಅದು ಬರದಿರುವ ರೀತಿಯಲ್ಲಿ ನೋಡಿಕೊಳ್ಳುವುದು ಒಳ್ಳೆಯದು. ಇದ್ಯಾವುದಾದರು ಕಂಡು ಬಂದಲ್ಲಿ ನಿಮ್ಮ ವೈದ್ಯರನ್ನು ಕಾಣುವುದು ಅತ್ಯವಶ್ಯಕ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.