14 Jun 2019 | 1 min Read
Medically reviewed by
Author | Articles
ಕಾರ್ಬೋಹೈಡ್ರೇಟ್ಗಳು ಏಕೆ ಮುಖ್ಯ?
ಕಾರ್ಬೋಹೈಡ್ರೇಟ್ಗಳು ಸಾಮಾನ್ಯ ಬೆಳವಣಿಗೆಗಾಗಿ ನಮ್ಮ ದೇಹಕ್ಕೆ ತುಂಬಾ ಮುಖ್ಯ. ಇದು ಚಿಕ್ಕ ಮಕ್ಕಳು ಹಾಗೂ ಎಳೆಮಕ್ಕಳಿಗೂ ಕೂಡ ತುಂಬಾ ಮುಖ್ಯ ನಿಜ. ನಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್ಗಳು ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಈ ಶಕ್ತಿಯು ಕಾರ್ಬೋಹೈಡ್ರೇಟ್ಗಳು ಉತ್ಪಾದಿಸಿರುವುದರಿಂದ ಅದು ನಿಮ್ಮನ್ನು ಸಕ್ರಿಯವಾಗಿರಲು ಹಾಗೂ ಬೆಂಬಲ ನೀಡಿ ನಿಮ್ಮ ದೇಹದ ಬೆಳವಣಿಗೆಗಾಗಿ ಸಹಾಯ ಮಾಡುತ್ತದೆ. ಒಂದು ಒಳ್ಳೆಯ ಕಾರ್ಬ್ ತೆಗೆದುಕೊಳ್ಳುವುದರಿಂದ ಅಂಗಗಾಳ ಹಾಗೂ ಜೀರ್ಣಾಂಗ ವ್ಯವಸ್ಥೆಯು ಚಿಕ್ಕ ಮಕ್ಕಳಲ್ಲಿ ಬೆಳವಣಿಗೆ ತುಂಬಾ ವೇಗವಾಗಿ ಆಗುತ್ತದೆ.
ಕಾರ್ಬೋಹೈಡ್ರೇಟ್ಗಳು ದೇಹದೊಳಗೆ ಪೋಟೀನ್ ಅನ್ನು ಕೂಡ ತೆಗೆದುಕೊಳ್ಳಲು ಅನುಮತಿ ನೀಡಿ ಪರಿಣಾಮಕಾರಿಯಾಗಿ ಅಂಗಾಂಶಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಆದ್ದರಿಂದ, ಕಾರ್ಬೋಹೈಡ್ರೇಟ್ಗಳಿಂದ ಮಕ್ಕಳಿಗೆ ಹಲವಾರು ಪ್ರಯೋಜನಗಳಾಗುತ್ತವೆ, ಆದರೆ ಮುಖ್ಯ ಕೀಲಿಕೈ ಎಂದರೆ ಮಕ್ಕಳಿಗೆ ಆರೋಗ್ಯಕರ ಕಾರ್ಬ್ ಕೊಡಬೇಕು.
ಒಳ್ಳೆಯ ಕಾರ್ಬೋಹೈಡ್ರೇಟ್ ಊಟ ಎಂದರೇನು?
ಒಳ್ಳೆಯ ಕಾರ್ಬೋಹೈಡ್ರೇಟ್ ಊಟವು ಸಂಕೀರ್ಣ ಕಾರ್ಬೋಹೈಡ್ರೇಟ್ಗಳು ಜೊತೆಗೆ ಸೇರಿಕೊಳ್ಳುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸದ್ಯಕ್ಕೆ ಜಾಸ್ತಿ ಮಾಡುವುದಿಲ್ಲ. ಕೆಟ್ಟ ಕಾರ್ಬ್ ಗಳಲ್ಲಿ ಯಾವುದೇ ಕ್ಯಾಲರಿ ಇಲ್ಲದಿರುವ ಕಾರಣ ಬೇಗ ಜೀರ್ಣವಾಗುತ್ತದೆ ಹಾಗೂ ಸಾಮಾನ್ಯ ಕಾರ್ಬೋಹೈಡ್ರೇಟ್ ಎಂದು ಕರೆಯುತ್ತಾರೆ. ಇದನ್ನು ಚಿಕ್ಕ ಮಕ್ಕಳಿಗೆ ಅಥವಾ ದೊಡ್ಡ ಮಕ್ಕಳಿಗೂ ಕೂಡ ಕೊಡಬಾರದು ಏಕೆಂದರೆ ಇದರಲ್ಲಿ ಪೌಷ್ಟಿಕತೆಯ ಮೌಲ್ಯ ಕಡಿಮೆ ಇದ್ದು ಇದು ವೇಗವಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ.
ಕಾರ್ಬ್ ನ ಆರೋಗ್ಯಕರ ಮೂಲಗಳು ಯಾವುವು?
ಎಳೆ ಮಕ್ಕಳಿಗೆ ತಾಯಿಯ ಹಾಲು ಕಾರ್ಬೋಹೈಡ್ರೇಟ್ ನ ಮುಖ್ಯ ಮೂಲವಾಗಿದೆ, ಅದರಲ್ಲಿ ಲಾಕ್ ಟೋಸ್ ಎಂಬ ಅಂಶವು ಇರುತ್ತದೆ, ಇದು ಒಂದು ರೀತಿಯ ಸಕ್ಕರೆ. ಇದು ತುಂಬಾ ಮುಖ್ಯ ಮೂಲವಾಗಿದ್ದು ಹಲವಾರು ಕ್ಯಾಲ್ ಶಿಯಂ, ಪೋಟೀನ ಮತ್ತು ಕಾರ್ಬೋಹೈಡ್ರೇಟ್ ಗಳಿಗೆ ಪೌಷ್ಠಿಕಾಂಶವಾಗಿದೆ.
ಸ್ವಲ್ಪ ದೊಡ್ಡ ಮಕ್ಕಳು ತಮ್ಮ ದೈನಂದಿನ ಉಪಹಾರದ ಮೂಲದೊಂದಿಗೆ ಧಾನ್ಯಗಳು, ಹಣ್ಣು ಹಾಗೂ ತರಕಾರಿಯಂತಹ ಕಾರ್ಬೋಹೈಡ್ರೇಟ್ ತೆಗೆದುಕೊಳ್ಳಬಹುದು. ಉತ್ತಮ ಆಯ್ಕೆಯ ಸಂಕ್ರೀರ್ಣ ಕಾರ್ಬೋಹೈಡ್ರೇಟ್ ಗಳು ಸೇರಿರುವಂತಹ ಊಟವೆಂದರೆ ಆಲೂಗೆಡ್ಡೆ, ಕುಂಬಳಕಾಯಿ, ಗೆಣಸು, ಧಾನ್ಯಗಳು ಹಾಗೂ ಹುರಳಿ. ಎಲ್ಲಾ ಹುರಳಿಯಲ್ಲಿ ಸಂಕ್ರೀರ್ಣ ಕಾರ್ಬೋಹೈಡ್ರೇಟ್, ಹೆಚ್ಚು ಫೈಬರ್ ಮತ್ತು ಹೆಚ್ಚು ಪ್ರೋಟೀನ್ ಇರುತ್ತದೆ. ಬಿಳಿಯ ಬ್ರೆಡ್ ಗಿಂತ ಓಟ್ಸ್, ರೇ ಮತ್ತು ಬಾರ್ಲಿ ಯಿಂದ ಮಾಡಿರುವ ಬ್ರೆಡ್ ಗಳನ್ನು ಬಳಸುವುದು ಒಳ್ಳೆಯದು. ಹಣ್ಣುಗಳಾದ ಪೀಚ್, ಮರಸೇಬು, ಸೇಬು ಮತ್ತು ಬೆರ್ರಿಗಳು ಕೊಡುವುದು ಉತ್ತಮ. ಎಳೆ ಮಕ್ಕಳು ಹೆಚ್ಚಾಗಿ ಆರೋಗ್ಯಕರ ತಾಯಿಯ ಹಾಲು ಮತ್ತು ಊಟವನ್ನು ತಗೆದುಕೊಳ್ಳುವುದರಿಂದ ಕಾರ್ಬೋಹೈಡ್ರೇಟ್ ಕಡಿಮೆಯಾಗುವುದಿಲ್ಲ.
A