• Home  /  
  • Learn  /  
  • ಗರ್ಭಿಣಿಯಾದಾಗ ಒಬ್ಬ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಒಂದು ಮಾರ್ಗಸೂಚಿ
ಗರ್ಭಿಣಿಯಾದಾಗ ಒಬ್ಬ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಒಂದು ಮಾರ್ಗಸೂಚಿ

ಗರ್ಭಿಣಿಯಾದಾಗ ಒಬ್ಬ ವೈದ್ಯರನ್ನು ಆಯ್ಕೆ ಮಾಡಿಕೊಳ್ಳುವುದರ ಬಗ್ಗೆ ಒಂದು ಮಾರ್ಗಸೂಚಿ

17 Jun 2019 | 1 min Read

Medically reviewed by

Author | Articles

ಒಮ್ಮೆ ನೀವು ನಿಮ್ಮ ಮುಟ್ಟಿನ ಅವಧಿಯನ್ನು ತಪ್ಪಿಸಿಕೊಂಡರೆ ಮತ್ತು ಗರ್ಭಧಾರಣೆಯ ಸೂಚನೆ ಹಾಗೂ ಲಕ್ಷಣಗಳನ್ನು ಅನುಭವಿಸುತ್ತಾ ಬಂದರೆ, ಒಂದು ಗರ್ಭಧಾರಣೆಯ ಪರೀಕ್ಷೆ ಕಿಟ್ ತಂದು ಮನೆಯಲ್ಲಿ ಮೊದಲ ಹಂತದ ಪರೀಕ್ಷೆ ಮಾಡಬಹುದು. ಆದರೆ ಮುಂದಿನ ಹಂತದಲ್ಲಿ ನೀವು ಬಹುಶಃ ಒಂದು ಪ್ರಾಥಮಿಕ ಆರೋಗ್ಯ ವೈದ್ಯರು ಅಥವಾ ಕುಟುಂಬ ವೈದ್ಯರನ್ನು ಕಂಡು ಗರ್ಭಾಧಾರಣೆಯನ್ನು ಖಚಿತಪಡೆಸಿಕೊಳ್ಳುವುದಕ್ಕಾಗಿ ಒಂದು ಅಡ್ವಾನ್ಸ್ಡ್ ರಕ್ತ ಪರೀಕ್ಷೆ ಮಾಡಿಸಿಕೊಳ್ಳುತ್ತೀರಿ.  ಇದು ಕೇವಲ ಆರಂಭ ಮತ್ತು  ನೀವು ನಿಮ್ಮ ಮಗುವು ಈ ಭೂಮಿಗೆ ಬರುವ ತನಕ ಸಾಕಷ್ಟು ದೂರದ ದಾರಿಯಿದೆ. ನಿಮ್ಮ ಮತ್ತು ನಿಮ್ಮ ಮಗುವಿನ ಒಂಭತ್ತು ತಿಂಗಳ ಮತ್ತು ಇನ್ನು ಸ್ವಲ್ಪ ಹೆಚ್ಚಿನ ದಿನಗಳ ಅರೋಗ್ಯ ಮೇಲ್ವಿಚಾರಣೆ ಮಾಡಲು ನಿಮಗೆ ವೈದ್ಯರ ಅವಶ್ಯಕತೆ ಇರುತ್ತದೆ. ವೈದ್ಯರನ್ನು ಹುಡುಕುವುದು ಅನೇಕ ಅಂಶಗಳ ಮೇಲೆ ಅವಲಂಬಿತವಾಗಿದೆ:

 

-ನಿಮ್ಮ ವೈದ್ಯಕೀಯ ಇತಿಹಾಸ

  • ನಿಮ್ಮ ಆರ್ಥಿಕ ಸಾಮರ್ಥ್ಯ

-ನಿಮ್ಮ ಆರೋಗ್ಯದ ವಿಮೆ

-ನಿಮ್ಮ ಸೌಕರ್ಯ ಮತ್ತು ಅನುಕೂಲ

ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಕೆಳಗಿನ ವೈದ್ಯರಲ್ಲಿ ಒಬ್ಬರ ಬಳಿ ಹೋಗಲು ಆಯ್ಕೆ ಮಾಡಬಹುದು:

 

೧. ಸಾಮಾನ್ಯ ವೈದ್ಯರು ಅಥವಾ ಪ್ರಾಥಮಿಕ ಅರೋಗ್ಯ ವೈದ್ಯರು:

ಸಾಕಷ್ಟು ಮಹಿಳೆಯರು ಮೇಲೆ ತಿಳಿಸಿದ ಅಂಶಗಳ ಪೈಕಿ ಒಂದಕ್ಕಿಂತ ಹೆಚ್ಚು ಅಂಶಗಳ ತೊಂದರೆಯಿದ್ದಲ್ಲಿ, ಅವರು ಸಾಮಾನ್ಯ ತಜ್ಞರನ್ನು ಭೇಟಿಯಾಗುತ್ತಾರೆ. ಸಾಮಾನ್ಯ ವೈದ್ಯರು ಆಂತರಿಕ ಔಷಧಿ ಅಥವಾ ಸಾಮಾನ್ಯ ಆರೋಗ್ಯ ಸಮಸ್ಯೆಗಳಲ್ಲಿ ಪರಿಣಿತರಾಗಿರುತ್ತಾರೆ ಆದರೆ ಗರ್ಭಧಾರಣೆ ಅಥವಾ ಜನನದ ವಿಷಯದಲ್ಲಲ್ಲ. ನಿಮಗೆ ಯಾವುದಾದರೂ ಚಿಂತಿಸುವ ಆರೋಗ್ಯ ತೊಂದರೆಯ ಇತಿಹಾಸವಿದ್ದಲ್ಲಿ ಸಾಮಾನ್ಯ ವೈದ್ಯರು ಒಬ್ಬರು ಮಾತ್ರ ಉತ್ತಮ ಆಯ್ಕೆಯಲ್ಲ. ಒಬ್ಬ ಸಾಮಾನ್ಯ ವೈದ್ಯರು ಗರ್ಭಧಾರಣೆಯ ಸಮಯದಲ್ಲಿ ನಿಮಗೆ ಹವಾವಾನದಿಂದ ಆರೋಗ್ಯ ತೊಂದರೆಯಾದಲ್ಲಿ ಅಥವಾ ಅನಾರೋಗ್ಯವಿದ್ದಲ್ಲಿ ಮಾತ್ರ ಒಳ್ಳೆಯ ಸಹಾಯವಾಗಬಹುದು.

 

೨. ಸೂಲಗಿತ್ತಿ :

ಸಮುದಾಯ ಸೂಲಗಿತ್ತಿಯರು ವಿಶೇಷವಾಗಿ ತಾಯಿ ಮತ್ತು ಮಗುವಿನ ಆರೈಕೆಯಲ್ಲಿ ತರಬೇತಿ ಪಡೆದ ವೃತ್ತಿಪರರಾಗಿರುತ್ತಾರೆ . ಅವರಿಗೆ ಗರ್ಭಾವಸ್ಥೆ, ಹೆರಿಗೆ ಮತ್ತು ಮಗುವಿನ ಜನನದ ಸಮಯದಲ್ಲಿ ಕಾಳಜಿ ವಹಿಸಲು ತರಬೇತಿ ನೀಡುತ್ತಾರೆ. ಅದರಲ್ಲಿ ಹೆಚ್ಚಿನವರು ಪ್ರಸವಾನಂತರದ ಆರೈಕೆಗಾಗಿ ಕೂಡ ತರಬೇತಿ ಪಡೆಯುತ್ತಾರೆ . ನಿಮ್ಮ ಮನೆಯ ಸೌಕರ್ಯದಲ್ಲಿ ಹೆರಿಗೆ ಮತ್ತು ಪ್ರಸವದೊಂದಿಗೆ ನೂಲಗಿತ್ತಿಯರು ಸಹಾಯ ಮಾಡುತ್ತಾರೆ ಮತ್ತು ಬಜೆಟ್ ಸ್ನೇಹಿಯಾಗಿರುತ್ತಾರೆ . ನೀವು ಆರೋಗ್ಯಕರ ಗರ್ಭಾವಸ್ಥೆಯನ್ನು ಹೊಂದಿದ್ದರೆ, ನೀವು ಸೂಲಗಿತ್ತಿಗೆ ಆಯ್ಕೆ ಮಾಡಬಹುದು, ಆದರೆ ಪ್ರಸವ ಸಮಯದಲ್ಲಿ ಅಥವಾ ನಂತರದ ತೊಂದರೆಗಳು ಉಂಟಾದರೆ, ನೀವು ಹತ್ತಿರದ ಆಸ್ಪತ್ರೆಗೆ ಹೋಗಬೇಕಾಗುತ್ತದೆ.

 

೩. ಪ್ರಸೂತಿಶಾಸ್ತ್ರಜ್ಞರು:

ಬೊರ್ಡು ಪ್ರಮಾಣೀಕರಿಸಲಾದ  ಗರ್ಭಧಾರಣೆ, ಪ್ರಸವ ಮತ್ತು ಜನನಕ್ಕಾಗಿ ವೈದ್ಯಕೀಯವಾಗಿ ಪರಿಣತಿ ಪಡೆದ ವೈದ್ಯರಾಗಿರುತ್ತಾರೆ. ಇವರು ಸಾಮಾನ್ಯವಾಗಿ ಕೆಲವು ಕ್ಲಿನಿಕ್ ಅಥವಾ ಆಸ್ಪತ್ರೆಗಳಲ್ಲಿ ನಿಮ್ಮ ಗರ್ಭದಾರಣೆಯ ಉದ್ದಕ್ಕೂ ಪ್ರಸವಪೂರ್ವ ಪರೀಕ್ಷೆಗಳ ಮಾಡಿಸಿಕೊಳ್ಳುವ ಪ್ರಯತ್ನವನ್ನು ಸುಲಭ ಮಾಡಿಸುತ್ತಾರೆ . ನಿಮಗೆ ವೈದ್ಯಕೀಯ ತೊಡಕಿನ ಇತಿಹಾಸವಿದ್ದರೆ ಅಥವಾ ಗರ್ಭಾಧಾರಣೆ ಕಷ್ಟವಿದ್ದಲ್ಲಿ, ನೀವು ಈ ವೈದ್ಯರ ಬಳಿ ಹೋಗುವುದು ಒಳಿತು. ನೀವು ಪ್ರಸೂತಿಶಾಸ್ತ್ರಜ್ಞರ ಆಯ್ಕೆ ಮಾಡುವ ಮುನ್ನ ಈ ಕೆಳಗಿನ ಪರಿಶೀಲನಪಟ್ಟಿಯನ್ನು ನೋಡ ಬೇಕಾಗುತ್ತದೆ.

– ಒಬ್ಬ ಅನುಭವಿ ಗರ್ಭಿಣಿ ವೈದ್ಯರನ್ನು  ಹೆಚ್ಚಾಗಿ ಶಿಫಾರಸು ಮಾಡಬೇಕು

– ನಿಮ್ಮ ಅಥವಾ ಅವರ ಸಂಬಂಧಿಸಿರುವ ಆಸ್ಪತ್ರೆ ನಿಮ್ಮ ವಿಮಾ ಯೋಜನೆಯಲ್ಲಿರುವ ಆಸ್ಪತ್ರೆಗಳ ಪಟ್ಟಿಗೆ ಸೇರಿದೆಯಂದು ನಿಮ್ಮ ವಿಮಾ ಕಂಪೆನಿಯೊಂದಿಗೆ ಪರಿಶೀಲಿಸಿ

-ನೀವು ಆಯ್ಕೆ ಮಾಡಿದ ವೈದ್ಯರು ನಿಮ್ಮ ವಿಮೆ ಕಂಪನಿಯ ವೈದ್ಯರ ನೆಟ್ವರ್ಕ್ ವ್ಯವಸ್ಥೆಯಲ್ಲಿದ್ದಾರ ಎಂದು ಪರಿಶೀಲಿಸಿ.

-ನಿಮ್ಮ ಸಂಕೀರ್ಣ ವ್ಯವಸ್ಥೆಯ ಹೊರಗಿನ ವೈದ್ಯರನ್ನು ನೀವು ಆಯ್ಕೆ ಮಾಡಿದಲ್ಲಿ ನಿಮ್ಮ ವಿಮೆಯ ಅನುಭವ ಕಷ್ಟವಾಗಬಹುದು .

-ನಿಮ್ಮ ಆರೋಗ್ಯ ವಿಮೆ ಯೋಜನೆಯು ಎಲ್ಲಾ  ಪ್ರಮುಖ ಪ್ರಸವಪೂರ್ವ ಸ್ಕ್ಯಾನ್ ಮತ್ತು ಪರೀಕ್ಷೆಗಳ ಜೊತೆಗೆ ಪ್ರಸವನೋವು ಮತ್ತು ಹೆರಿಗೆಯ ರಕ್ಷಣೆ ಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.

  • ವೈದ್ಯರು ಸಂಬಂಧಿಸಿದ ಆಸ್ಪತ್ರೆಯಲ್ಲಿ ಉತ್ತಮ ನವಜಾತ ಶಿಶು ಆರೈಕೆ ಸೌಕರ್ಯವಿದೆ ಎಂದು ಖಚಿತಪಡಿಸಿಕೊಳ್ಳಿ. ಇದು ಸಾಮಾನ್ಯವಾಗಿ ಸಂಕೀರ್ಣವಾದ ಗರ್ಭಾವಸ್ಥೆಯಲ್ಲಿರುವ ಮಹಿಳೆಯರಿಗೆ ಮುಖ್ಯವಾಗಿದೆ.

 

೪. ಸ್ತ್ರೀರೋಗತಜ್ಞರು:

ಒಬ್ಬ ಸ್ತ್ರೀರೋಗತಜ್ಞರೆಂದರೆ ನಿಮ್ಮ ಸಂತಾನೋತ್ಪತ್ತಿ ವ್ಯವಸ್ಥೆಯ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವವರು. ನಾವು ಸ್ತ್ರೀರೋಗತಜ್ಞರನ್ನು ಅಪರೂಪವಾಗಿ ಕಾಣಬಹುದು. ಬಹುತೇಕ ವೈದ್ಯರು ಪ್ರಮಾಣೀಕರಿಸಲಾದ ಪ್ರಸೂತಿ ತಜ್ಞರು. ಒಬ್ಬ ಸ್ರೀರೋಗತಜ್ಞರು ಪ್ರಸೂತಿತಜ್ಞರ ಸಹಕಾರದೊಂದಿಗೆ ಪ್ರಸೂತಿ ಮತ್ತು ಹೆರಿಗೆ ಕೆಲಸ ಮಾಡುತ್ತಾರೆ.

 

೫. ಮಕ್ಕಳ ತಜ್ಞರು:

ಶಿಶು ತಜ್ಞರು ಮಕ್ಕಳ ವೈದ್ಯರು. ಇವರು ನಿಮ್ಮ ಗರ್ಭಾವಸ್ಥೆಯಲ್ಲಿ ಸಹಾಯ ಮಾಡುವ ವೈದ್ಯರಲ್ಲ ಆದರೆ ಅಪರೂಪದ ಸನ್ನಿವೇಶಗಳಲ್ಲಿ ಇವರ ಹಸ್ತಕ್ಷೇಪ ಅಗತ್ಯವಿರುತ್ತದೆ  . ನವಜಾತ ಶಿಶುವನ್ನು ಪರೀಕ್ಷಿಸಲು ಜನನ ಸಮಯದಲ್ಲಿ ಪ್ರಸವ ಕೋಣೆಯಲ್ಲಿ ಇವರ ಅಗತ್ಯವಿರುತ್ತದೆ. ನಿಮ್ಮ ಮಗುವು ಹುಟ್ಟಿದ ಮೇಲೆ ನೀವು ತುಂಬಾ ಹೆಚ್ಚಾಗಿ ಇವರನ್ನು ಭೇಟಿಯಾಗುವಿರಿ . ಗರ್ಭಾವಸ್ಥೆಯ ನಂತರದ ದಿನಗಳಲ್ಲಿ ಈ ವೈದ್ಯರನ್ನು ಆಯ್ಕೆ ಮಾಡುವುದು ಬುದ್ಧಿವಂತ ವಿಷಯವಾಗಿದೆ.

 

ನೀವು ಈ ಮೇಲಿನ ಯಾವುದೇ ಆರೋಗ್ಯ ವೃತ್ತಿಪರರನ್ನು ಆಯ್ಕೆ ಮಾಡಬಹುದು.  ನೀವು ನಿಮ್ಮ ವೈದ್ಯರ ಜೊತೆ ಆರಾಮವಾಗಿರುತ್ತೀರ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ನೀವು ಒಂದು ಹೊಸ ಪ್ರಯಾಣದಲ್ಲಿ ತೊಡಗಲಿದ್ದೀರಿ, ಅಲ್ಲಿ ನೀವು ನಿಮ್ಮ ನಾಚಿಕೆ ಮತ್ತು ಸಂಕೋಚವನ್ನು ಬಿಟ್ಟು ಹಾಯಾಗಿರಿ ಏಕೆಂದರೆ ನೀವು ಹೊಸ ಜೀವ ಪಡೆಯಲು ಪಣ ತೊಟ್ಟಿದ್ದೀರಿ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.