• Home  /  
  • Learn  /  
  • ನಿಮ್ಮ ಅಂಬೆಗಾಲಿಡುವ ಮಗು ಊಟ ಮಾಡಿ ಮುಗಿಸಲು ಕೆಲವು ಸಲಹೆಗಳು
ನಿಮ್ಮ ಅಂಬೆಗಾಲಿಡುವ ಮಗು ಊಟ ಮಾಡಿ ಮುಗಿಸಲು ಕೆಲವು ಸಲಹೆಗಳು

ನಿಮ್ಮ ಅಂಬೆಗಾಲಿಡುವ ಮಗು ಊಟ ಮಾಡಿ ಮುಗಿಸಲು ಕೆಲವು ಸಲಹೆಗಳು

17 Jun 2019 | 1 min Read

Medically reviewed by

Author | Articles

ನಮ್ಮ ಮಕ್ಕಳು ಚೆನ್ನಾಗಿ ತಿನ್ನಬೇಕು, ಸ್ವತಂತ್ರವಾಗಿ ತಿನ್ನಬೇಕು ಹಾಗೂ ಆರೋಗ್ಯಕರ ಊಟ ಮಾಡಬೇಕೆಂದು ಬಯಸುತ್ತೇವೆ. ಈ ಕೆಲಸವನ್ನು ಹೇಗೆ ಮಾಡಬೇಕೆಂದು ನಮ್ಮ ಮೇಲೆ ಅವಲಂಬಿಸಿರುತ್ತದೆ. ನಮ್ಮಲ್ಲಿ ಎಷ್ಟು ಜನ ನಮ್ಮ ಮಕ್ಕಳು ನಿಜವಾಗಲು ತಾನಾಗಿಯೇ ಊಟ ಮಾಡುತ್ತಾರೆ ಹಾಗೂ ಮುಗಿಸುತ್ತಾರೆ ಎಂದು ನಂಬುತ್ತೇವೆ. ಮಕ್ಕಳು ಊಟವನ್ನು ಯಾವುದೇ ಗದ್ದಲ ಅಥವಾ ಸರಿಯಾಗಿ ತಿಂದರೆ ಎಂದು ನಮಗೆ ಅನಿಸುತ್ತದೆ, ಇದು ಅವರ ಬೆಳವಣಿಗೆ ಮತ್ತು ಅಭಿವೃಧಿಗೆ ಅಡೆತಡೆ ಮಾಡಬಹುದು. ಆದರೆ ನಾವು ಈ ಸಂಧಿಗ್ದ ಪರಿಸ್ಥಿತಿಯಿಂದ ಹೊರಬಂದು ಮಕ್ಕಳು ತಾವಾಗಿಯೇ ಊಟ ಮಾಡುವುದರಲ್ಲಿ ಸಾಕಷ್ಟು ಅನುಕೂಲಗಳಿವೆ ಎಂದು ತಿಳಿಯಬೇಕು. ಮಕ್ಕಳಿಗೆ ಊಟವನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ಹಾಗೂ ರುಚಿ ಕಡೆ ಆಸಕ್ತಿ ಬರುವಂತೆ ಮತ್ತು ಸ್ವತಂತ್ರವಾಗಿ ತಿನ್ನುವ ಕೆಲಸವನ್ನು ಮಾಡುತ್ತಾ, ಎಷ್ಟು ತಿನ್ನಬೇಕು? ಎಂದು ತಿಳಿಯುತ್ತದೆ. ಸರಿಯಾದ ಬಯಸಿದ ಫಲಿತಾಂಶಗಳನ್ನು ಪಡೆಯಲು ಅದನ್ನು ಹೇಗೆ ಜಾರಿಗೆ ತರಬೇಕೆಂದು ಸವಾಲಾಗುತ್ತದೆ. ಸಂಪೂರ್ಣ ಸವಲೆಂದರೆ “ಮಕ್ಕಳಿಗೆ ಊಟವನ್ನು ಮುಗಿಸಲು ಹೇಗೆ ತಯಾರಿಸಬಹುದು?”

 

ಈ ಸವಾಲನ್ನು ಸೋಲಿಸಲು ನಾವು ಕೆಲವು ಸರಳ ನಿಯಮಗಳನ್ನು ಮತ್ತು ತಂತ್ರಗಳನ್ನು ಅನ್ವೇಷಿಸೋಣ:

 

ಊಟದ ನಿಯಮಗಳು:

ಮಕ್ಕಳು ಘನ ಆಹಾರವನ್ನು ತಿನ್ನಲು ಶುರು ಮಾಡಿದ ತಕ್ಷಣ ಅವರನ್ನು “ಒಂದು ಕಡೆ ಕುಳಿತು ಊಟ ಮಾಡುವ” ನಿಖರವಾದ ನಿಯಮಮಾಡುವುದು ತುಂಬಾ ಮುಖ್ಯ. ಈ ಬಾಜಿಯು ನಿಮಗೆ ದೊಡ್ಡ ಸವಾಲು ಆದರೆ ತಾಳ್ಮೆ ಮತ್ತು ಸ್ಥಿರತೆಯಿಂದಿದ್ದು ಮಾಯದ ರೀತಿ ಮಾತನಾಡಬೇಕು. ಆರಂಭಗೊಂಡಾಗ ಮೊದಲು ದೊಡ್ಡ ಕುರ್ಚಿ, ಕಾರ್ ನ ಸೀಟ್ ಅಥವ ಬೂಸ್ಟರ್ ಸೀಟ್ ಒಳ್ಳೆಯ ಉಪಾಯ. ಇದು ಪ್ರಯಾಣದ ಸಮಯದಲ್ಲಿ ಕೂಡ ಸಹಾಯವಾಗುತ್ತದೆ. ಒಂದು ಭಾರಿ ಈ ನಿಯಮ ಅನುಸರಿಸಲು ಶುರುವಾದರೆ, ನಿಮ್ಮ ಅರ್ಧ ಕೆಲಸ ಮುಗಿದಂತೆ. ನಿಮ್ಮ ಮಗುವು ದಿನಕ್ಕೆ ಎರಡು ಭಾರಿಯಾದರು ತನ್ನ ಕುಟುಂಬದವರೊಂದಿಗೆ ಊಟದ ಮೇಜಿನ ಮೇಲೆ ಕುಳಿತು ಊಟ ಮಾಡಿದರೆ ಅದು ಒಂದು ದೊಡ್ಡ ಸಹಾಯವಾದಂತೆ.

 

ಊಟದ ವೇಳಾಪಟ್ಟಿಯನ್ನು  ನಿಗದಿಪಡೆಸುವುದು:

ಚಿಕ್ಕ ಮಕ್ಕಳು ಆಗ್ಗಾಗೆ ಸಣ್ಣ ಅಂತರಗಳಲ್ಲಿ ತಿನ್ನುತ್ತಾರೆ. ಅವರ ಊಟದ ವೇಳಾಪಟ್ಟಿಯನ್ನು ನಿಗದಿ ಪಡೆಸುವುದು ತುಂಬಾ ಮುಖ್ಯ ಹಾಗೂ ಅದನ್ನು ಸ್ಥಿರವಾಗಿ ಅನುಸರಿಸುವುದು ಅವಶ್ಯಕ. ಈ ರೀತಿ ಮಾಡುವುದರಿಂದ ಅವರ ದೇಹದ ಗಡಿಯಾರ ಊಟಮಾಡಲಿಕ್ಕೆ ಆ ಸಮಯದಲ್ಲಿ ಕೇಳುತ್ತದೆ ಹಾಗೂ ನಮಗೆ ಯೋಜನೆ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮಕ್ಕಳಿಗೆ ಸಾಂದರ್ಭಿಕವಾಗಿ ತಿನ್ನಿಸುತ್ತಿಲ್ಲವೆಂದು ಖಚಿತಪಡೆಸಿಕೊಳ್ಳಿ. ಸಾಮಾನ್ಯವಾಗಿ ಅವರು ಎರಡು ವರ್ಷದವರಾದಾಗ, ಆರು ಸಣ್ಣ ಊಟವನ್ನು ಮಾಡುತ್ತಾರೆ.

 

ಊಟದ ವೇಳೆ ಕೇವಲ ಊಟದ ವೇಳೆಯಾಗಿರಬೇಕು:

ನಾವು ಸುಲಭ ರೀತಿಯಲ್ಲಿ ಅಡ್ಡಿಯಾಗುವ ಫೋನ್ ಅಥವಾ ಟಿ.ವಿ ಯಾನ್ನು ತೋರಿಸಿ ಊಟವನ್ನು ಮಾಡಿಸುವ ಸುಲಭದ ಕೆಲಸವನ್ನು ಮಾಡುತ್ತೇವಲ್ಲವೆ? ಊಟದ ಸಮಯವನ್ನು ನಿಷ್ಕ್ರಿಯಗೊಳಿಸುವುದಕ್ಕಿಂತ ಸಕ್ರಿಯಗೊಳ್ಳುವುದು ಒಂದು ಮುಖ್ಯವಾದ ಕೆಲಸವಾಗುತ್ತದೆ. ಇದು ಮಕ್ಕಳನ್ನು ಊಟದ ಮೇಲೆ ಗಮನವಿಡುವಂತೆ, ಅನ್ವೇಷಿಸುವಂತೆ, ಗಮನ ಸೆಳೆಯುವಂತೆ ಮಾಡುತ್ತದೆ. ಕೆಲವು ಹಾಡು ಹಾಗೂ ಆಟದಲ್ಲಿ ತೊಡಗುವುದರಿಂದ ಒಳ್ಳೆ ರೀತಿಯ ಪರಸ್ಪರ ಕ್ರಿಯೆ ಬೆಳೆಯುತ್ತದೆ.

 

ವಿಧ ವಿಧವಾದ ಊಟವು ಪ್ರಮುಖವಾಗುತ್ತದೆ:

ಮಕ್ಕಳು ಬಣ್ಣವನ್ನು ಮತ್ತು ಆಕಾರಗಳನ್ನು ಪ್ರೀತಿಸುತ್ತಾರಲ್ಲವೇ? ಹಾಗಾದರೆ ಮಕ್ಕಳಿಗೆ ಬಣ್ಣಗಳ ಹಾಗೂ ವಿವಿಧ ಆಕಾರಗಳನ್ನೊಳಗೊಂಡ ಊಟವನ್ನು ತಯಾರಿಸಬಹುದಲ್ಲವೇ? ಮಕ್ಕಳಿಗೆ ಆರೊಗ್ಯಕರವಾದ ರಚನೆ, ಬಣ್ಣ ಹಾಗೂ ರುಚಿಯಾದ ಊಟವನ್ನು ೩-೪ ವರ್ಷದ ಬೆಳವಣಿಗೆಗೆ ಮುಖ್ಯ ಕಾರಣವಾಗುತ್ತದೆ. ಇದು ಅವರಿಗೆ ಕುತೂಹಲವನ್ನು ಉತ್ಪಾದಿಸಿ ರುಚಿಯನ್ನು ಹಾಗೂ ರಚನೆಯನ್ನು ಅನ್ವೇಷಿಸುತ್ತದೆ. ಅವ್ಯವಸ್ಥೆಯನ್ನು ಗಮನದಲ್ಲಿಡಬೇಡಿ. ಇದು ಊಟವನ್ನು ಅನ್ವೇಷಿಸುವ ಅವರ ದಾರಿ. ಇದು ಅವರನ್ನು ರುಚಿಯಿಂದ ಅಭಿವೃದ್ಧಿ ಹೊಂದಲು ಮತ್ತು ಕಡಿಮೆ ಗಲೀಜು ಮಾಡಲು ಸಹಾಯ ಮಾಡುತ್ತದೆ.

 

ಭಾಗಗಳ ಬಗ್ಗೆ ಗಮನವಿಡಿ:

ಮಕ್ಕಳಿಗೆ ಸಣ್ಣ ಹೊಟ್ಟೆ ಇರುತ್ತದೆ. ಒಂದು ಆರೋಗ್ಯ ಹಾಗೂ ಸಕ್ರಿಯ ಮಗು ಯಾವಾಗಲೂ ಹಸಿವಿದ್ದರೆ ಮಾತ್ರ ತಿನ್ನುತ್ತಾರೆ ಮತ್ತು ಸಾಕೆನಿಸಿದರೆ ಬೇಡವೆನ್ನುತ್ತಾರೆ. ಸರಿಯಾದ ಪ್ರಮಾಣದ ಊಟವನ್ನು ಕೊಡುವುದು ಮುಖ್ಯ. ಹೆಚ್ಚುವರಿ ಊಟ ಮಾಡುವುದರಿಂದ ಮಕ್ಕಳಿಗೆ ಹಿಂಸೆಯಾಗುವುದಲ್ಲದೆ ಗಡಿಬಿಡಿಯಾಗಿ ಮುಗಿಯದಂತಾಗುತ್ತದೆ. ನಾವು ಯಾವಾಗಲೂ ಅವರು ಕೇಳಿದಾಗ ಕೊಡಬಹುದು.

 

ಯಾವುದೇ ಶಕ್ತಿ ಆಟ ಅಥವಾ ಲಂಚವನ್ನು ಇಲ್ಲ ಎಂದು ಹೇಳಿ:

“ನೀನು ಊಟವನ್ನು ಮುಗಿಸಿದರೆ, ನಿನಗೆ ಟಿ.ವಿ ನೋಡಲು ಬಿಡುತ್ತೇನೆ”. ಈ ಧ್ವನಿಯು ಪರಿಚಿತವೇ? ಮಕ್ಕಳಿಗೆ ಲಂಚ ಕೊಟ್ಟು ಊಟ ಮಾಡಿಸುವುದರಿಂದ ಕೇವಲ ಕಡಿಮೆ ಅವಧಿಯ ವಿಧಾನವಾಗಿರುತ್ತದೆ. ಇದಕ್ಕಾಗಿ ದೊಡ್ಡದಾಗಿ ಇಲ್ಲವೆಂದು ಹೇಳಿ. ತಾಳ್ಮೆ ಕಳೆದುಕೊಳ್ಳುವುದರಿಂದ ಅಥವ ಊಟವನ್ನು ಮುಗಿಸುವ ಹೋರಾಟದಿಂದ ನೀವು ಬೇಗ ಮುಕ್ತರಾಗಲು ಸಾಧ್ಯವಿಲ್ಲ. ನಾವು ಸಹನೆಯಿಂದಿರಲು ಕಲಿಯೋಣ. ಇದನ್ನು ಸುಲಭವಾಗಿ ತೆಗೆದುಕೊಳ್ಳಿ, ನಿಧಾನವಾಗಿ ಮತ್ತು ಸ್ಥಿರವಾಗಿ ಇದನ್ನು ಊಟದ ವೇಳೆಯಲ್ಲಿ ಅನುಸರಿಸುತ್ತಾ ಹೋಗಿ.

 

ನೋಡು ಮತ್ತು ಕಲಿ:

ಚಿಕ್ಕ ಮಕ್ಕಳು ನಿಮ್ಮನ್ನು ಅನುಕರಣೆ ಮಾಡುವುದರಲ್ಲಿ ಅತ್ಯಂತ ಅತ್ಯುತ್ಯಮವಾದವರು. ಅದಕ್ಕಾಗಿ ಕುಟುಂಬದ ಎಲ್ಲಾ ಸದಸ್ಯರು ಅವರ ಊಟವನ್ನು ಮಾಡಿ ಮುಗಿಸುವುದು ತುಂಬಾ ಮುಖ್ಯವಾಗಿರುತ್ತದೆ. ಚಿಕ್ಕ ಮಕ್ಕಳು ತಮ್ಮ ಗೆಳೆಯರನ್ನು ಹಾಗೂ ಒಡಹುಟ್ಟಿದವರು ಊಟ ಮಾಡಿ ಮುಗಿಸುವುದನ್ನು ನೋಡಿ ತಾನು ಮುಗಿಸಬೇಕೆಂದು ಅವರನ್ನು ಅರ್ಥ ಮಾಡಿಕೊಳ್ಳುತ್ತಾರೆ.

 

ಸ್ವೀಕೃತಿ ಮತ್ತು ಪ್ರಶಂಸೆ:

ಪ್ರತಿಯೊಂದು ಮಗುವು ವಿವಿಧ ಗಮನದ ಅವಧಿ ಮತ್ತು ಮನೋಧರ್ಮದವರಾಗಿರುತ್ತಾರೆ. ಒತ್ತಡ ಮಾಡಿಕೊಳ್ಳಬೇಡಿ! ಮಕ್ಕಳನ್ನು ಊಟ ಮಾಡಿದ ಮೇಲಿ ಉತ್ತೇಜಿಸುವುದು ಒಳ್ಳೆಯದು ಹೇಗೆಂದರೆ “ಒಳ್ಳೆ ಕೆಲಸ”, “ನೀನು ಮಾಡುತ್ತಿರುವುದು ಉತ್ತಮ” ಅಥವಾ “ಉತ್ತಮವಾಗಿತ್ತು” ಎಂದು. ಅವರು ಊಟವನ್ನು ಸ್ವಲ್ಪ ಬಿಟ್ಟಿದ್ದರೆ ಅವರನ್ನು ಪ್ರೇರೇಪಿಸಿ ಹೇಳಬೇಕು ” ನೀನು ಉತ್ತಮವಾಗಿ ಮಾಡಿದ್ದೀಯ ಮತ್ತು ಇನ್ನೂ ಚೆನ್ನಾಗಿ ಮಾಡಬಲ್ಲೆ” ಎಂದು. ಇದು ಅವರನ್ನು ಪ್ರೇರೇಪಿಸುತ್ತದೆ. ನೀವು ಅವರಿಂದ 10ಕ್ಕೆ 10 ಫಲಿತಾಂಶವನ್ನು ನಿರೀಕ್ಷಿಸುವುದು ಒಳ್ಳೆಯದಲ್ಲ, ಅಲ್ಲವೇ?

 

ಎಲ್ಲಾ ದಿನಗಳು ಒಂದೇ ರೀತಿ ಇರುವುದಿಲ್ಲ:

ಯಾವುದಾದರು ಕೆಲವು ದಿನಗಳು ಮಕ್ಕಳು ತುಂಬಾ ದಣಿದಾಗ ಅಥವಾ ಸುಸ್ತಾಗಿದಾಗ ಅವರು ಸರಿಯಾಗಿ ಊಟ ಮಾಡದಿರಬಹುದು ಅಥವಾ ಮುಗಿಸದಿರಬಹುದು. ಕೆಲವು ಸಂದರ್ಭಗಳಲ್ಲಿ ಅವರು ಕಡಿಮೆ ತಿಂದರೆ ಅಥವಾ ಊಟವನ್ನು ಮಾಡದಿದ್ದರೆ ಬಿಟ್ಟು ಬಿಡಿ ಅವರಿಗೆ ಆರಾಮವಿರಬೇಕಾಗುತ್ತದೆ. ವಿಷಯಗಳು ಮತ್ತೆ ವಾಪಸ್ಸು ಬಂದು ಅವರ ದೇಹದ ಗಡಿಯಾರ ಹೇಳಿದಂತೆ ಕೇಳಬೇಕಾಗುತ್ತದೆ. ವಿಶ್ರಾಂತಿ ಮಾಡಿ.

 

ಸ್ಥಿರವಾಗಿ ಮತ್ತು ಸಮಾಧಾನವಾಗಿರಿ:

ನಮಗೆಲ್ಲಾ ಗೊತ್ತು ಮಕ್ಕಳನ್ನು ಬೆಳೆಸುವುದು ಒಂದು ರಾತ್ರಿಯ ಕೆಲಸವಲ್ಲ. ಇದು ಯಾವಾಗಲೂ ಪ್ರಗತಿಯಲ್ಲಿರುವ ಕೆಲಸ. ಒಂದು ಸ್ಥಿರ ಊಟದ ವೇಳೆಯನ್ನು ಪ್ರಗತಿಯಲ್ಲಿಡುವುದು ಅರ್ಧ ಯುದ್ಧ ಗೆದ್ದಂತೆ. ಗಮನದಲ್ಲಿಡಿ ಚಿಕ್ಕ ಮಕ್ಕಳು ಅತ್ಯಂತ ಶಿಸ್ತಿನ ಮನುಷ್ಯರಾಗಿರುತ್ತಾರೆ. ಜ್ಞಾಪಕವಿರಲಿ ತಾಳ್ಮೆ ಎಂಬುದು ಪರಿಶ್ರಮದ ಕೀಲಿಕೈ ಮತ್ತು ಪರಿಶ್ರಮವು ಪಾಲನೆಯ ಪ್ರಮುಖ ಗುಣಲಕ್ಷಣದ ಕೀಲಿಕೈ.

 

ನಮ್ಮ ಮಕ್ಕಳು ಚೆನ್ನಾಗಿ ತಿನ್ನಬೇಕು, ಸ್ವತಂತ್ರವಾಗಿ ತಿನ್ನಬೇಕು ಹಾಗೂ ಆರೋಗ್ಯಕರ ಊಟ ಮಾಡಬೇಕೆಂದು ಬಯಸುತ್ತೇವೆ. ಈ ಕೆಲಸವನ್ನು  ಹೇಗೆ ಮಾಡಬೇಕೆಂದು ನಮ್ಮ ಮೇಲೆ ಅವಲಂಬಿಸಿರುತ್ತದೆ. ನಮ್ಮಲ್ಲಿ ಎಷ್ಟು ಜನ ನಮ್ಮ ಮಕ್ಕಳು ನಿಜವಾಗಲು ತಾನಾಗಿಯೇ ಊಟ ಮಾಡುತ್ತಾರೆ ಹಾಗೂ ಮುಗಿಸುತ್ತಾರೆ ಎಂದು ನಂಬುತ್ತೇವೆ. ಮಕ್ಕಳು ಊಟವನ್ನು ಯಾವುದೇ ಗದ್ದಲ ಅಥವಾ ಸರಿಯಾಗಿ ತಿಂದರೆ ಎಂದು ನಮಗೆ ಅನಿಸುತ್ತದೆ, ಇದು ಅವರ ಬೆಳವಣಿಗೆ ಮತ್ತು ಅಭಿವೃಧಿಗೆ ಅಡೆತಡೆ ಮಾಡಬಹುದು. ಆದರೆ ನಾವು ಈ ಸಂಧಿಗ್ದ ಪರಿಸ್ಥಿತಿಯಿಂದ ಹೊರಬಂದು ಮಕ್ಕಳು ತಾವಾಗಿಯೇ ಊಟ ಮಾಡುವುದರಲ್ಲಿ ಸಾಕಷ್ಟು ಅನುಕೂಲಗಳಿವೆ ಎಂದು ತಿಳಿಯಬೇಕು. ಮಕ್ಕಳಿಗೆ ಊಟವನ್ನು ಅನ್ವೇಷಿಸಲು ಸಹಾಯ ಮಾಡುತ್ತದೆ ಹಾಗೂ ರುಚಿ ಕಡೆ ಆಸಕ್ತಿ ಬರುವಂತೆ ಮತ್ತು ಸ್ವತಂತ್ರವಾಗಿ ತಿನ್ನುವ ಕೆಲಸವನ್ನು ಮಾಡುತ್ತಾ, ಎಷ್ಟು ತಿನ್ನಬೇಕು? ಎಂದು ತಿಳಿಯುತ್ತದೆ. ಸರಿಯಾದ ಬಯಸಿದ ಫಲಿತಾಂಶಗಳನ್ನು ಪಡೆಯಲು ಅದನ್ನು ಹೇಗೆ ಜಾರಿಗೆ ತರಬೇಕೆಂದು ಸವಾಲಾಗುತ್ತದೆ. ಸಂಪೂರ್ಣ ಸವಲೆಂದರೆ “ಮಕ್ಕಳಿಗೆ ಊಟವನ್ನು ಮುಗಿಸಲು ಹೇಗೆ ತಯಾರಿಸಬಹುದು?”

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.