ಮಕ್ಕಳಲ್ಲಿ ತೊದಲುವಿಕೆ

ಮಕ್ಕಳಲ್ಲಿ ತೊದಲುವಿಕೆ

17 Jun 2019 | 1 min Read

Medically reviewed by

Author | Articles

ತೊದಲು ಎಂದರೇನು?

ತೊದಲುದನಿ ಎಂದರೆ ಸರಿಯಾಗಿ ಮಾತು ಬಾರದಿರುವುದು, ಸಾಮಾನ್ಯವಾಗಿ ಇದು 2 ರಿಂದ 5 ವರ್ಷದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಒಂದು ತೊದಲುದನಿಯ ಮಗು ಮಾತನಾಡುವುದಕ್ಕಾಗಿ ತೊಂದರೆ ಅನುಭವಿಸುತ್ತದೆ. ತೊದಲುದನಿಯ ಆರಂಭಿಕ ಚಿಹ್ನೆಗಳು ಪುನರಾವರ್ತನೆಯ ಒಂದು ಪದದ ಧ್ವನಿಯಾಗಿರುತ್ತದೆ, ವಿಶೇಷವಾಗಿ ಸ್ಥಿರತೆಯಿಂದ ಆರಂಭಗೊಳ್ಳುವ ಪದಗಳು ಅವಾವುವೆಂದರೆ ಕೆ, ಜಿ ಮತ್ತು ಟಿ (ಉದಾ: ಟು-ಟು-ಟಮ್ಮಿ). ಕ್ರಮೇಣವಾಗಿ ಮಗುವು ಒಂದು ಪದ ಮಾತನಾಡಲು ಬಹಳ ಸಮಯ ತೆಗೆದುಕೊಳ್ಳುತ್ತದೆ (ಉದಾ:ಮಮ್ಮಿ).

ಕೆಲ ಸಮಯಗಳಲ್ಲಿ ಅವರಿಂದ ಪದಗಳನ್ನು ಜೋರಾದ ಸ್ಪೋಟಕ ಧ್ವನಿಯಲ್ಲಿ ಎಸೆಯುವಂತೆ ಅವರ ಬಾಯಿಯಲ್ಲಿ ಸಿಕ್ಕಿಹಾಕಿಕೊಂಡಂತೆ ಮತ್ತು ಮಗು ಮಾತನಾಡಲು ಸಾಧ್ಯವಾಗದಂತೆ ಮಾಡುತ್ತದೆ. ಇವೆಲ್ಲಾ ಅಡೆ-ತಡೆಗಳು ಮಾತನಾಡುವಾಗ ಅಂಬೆಗಾಲಿಡುವ ಮಕ್ಕಳಲ್ಲಿ ತಡವರಿಸುವಂತೆ ಮಾಡುತ್ತದೆ. ಇಂತಹ ಮಕ್ಕಳು ಸಾಮಾನ್ಯವಾಗಿ ಉಪಯೋಗಿಸುವ ಪದಗಳಾದ ‘ಮ್’, ‘ಆಹ್’ ಎಂದು ಮಾತನಾಡುವಾಗ ಶುರುಮಾಡುತ್ತದೆ. ತೊದಲುದನಿಯ ಸಮಸ್ಯೆಯು 2 ರಿಂದ 5 ವರ್ಷದ ಮಕ್ಕಳು ಮಾತನಾಡಲು ಕಲಿಯುವಾಗ ಶುರುವಾಗುತ್ತದೆ.

 

ತೊದಲುದನಿ ಹಾಗೂ ಬಿಕ್ಕಲುದನಿ ನಡುವಿನ ವ್ಯತ್ಯಾಸವೇನು?

ಈ ಹಿಂದೆ, ಬಿಕ್ಕಲು ದನಿಯನ್ನು ಪದಗಳ ಒತ್ತಡದ ನಿರೋಧವನ್ನು ಸೂಚಿಸುತ್ತಿತ್ತು ಹಾಗೂ ತೊದಲು ದನಿಯನ್ನು ಪದಗಳ ಪುನರಾವರ್ತನೆಗಾಗಿ ಬಳಸಲಾಗುತ್ತಿತ್ತು. ಪ್ರಸ್ತುತವಾಗಿ ಬಿಕ್ಕಲು ದನಿಯನ್ನು ಮಾತಿನ ವೈಫಲ್ಯತೆಯನ್ನು ವಿವರಿಸಲು ಬಳಸಲಾಗುವುದಿಲ್ಲ. ಬದಲಿಗೆ, ತೊದಲು ಎಂಬ ಒಂದೇ ಪದವನ್ನು ವಿವರಿಸಲು ಎರಡೂ ರೂಪಗಳಲ್ಲಿ ಹೇಳಲಾಗುತ್ತದೆ.

 

ಅಂಬೆಗಾಲಿಡುವ ಮಕ್ಕಳು ಏಕೆ ತೊದಲುತ್ತಾರೆ?

ಚಿಕ್ಕ ಮಕ್ಕಳು ತೊದಲು ದನಿಯಲ್ಲಿ ಮಾತನಾಡುವುದನ್ನು ಯಾವುದೇ ನಿರ್ದಿಷ್ಟ ಕಾರಣಗಳನ್ನು ಗುರುತಿಸಲಾಗಿಲ್ಲ. ಸಂಶೋಧನಾ ವರದಿಗಳ ಪ್ರಕಾರ ತೊದಲು ದನಿ ಅಥವಾ ಬಿಕ್ಕಲು ದನಿ ಕುಟುಂಬದಿಂದ ಸಾಗುತ್ತದೆ, ಇದು ವಂಶ ಪಾರಂಪರ್ಯವಾಗಿ ಬರುವುದು ಎಂದು ಹೇಳಲಾಗುತ್ತದೆ.

ಬಿಕ್ಕಲು ದನಿಯು ಮಕ್ಕಳಲ್ಲಿ ಸಾಮಾನ್ಯವಾಗಿದ್ದು, ತನ್ನ ತಂದೆ-ತಾಯಿ ಯಾರಿಗಾದರು ಅವರು ಚಿಕ್ಕವರಿದ್ದಾಗ ಈ ಸಮಸ್ಯೆ ಅನುಭವಿಸಿದ್ದರೆ ಮಕ್ಕಳಿಗೂ ಬರುತ್ತದೆ. ಭಾವನಾತ್ಮಕ ಒತ್ತಡ ಹೆಚ್ಚಾದಂತೆ ಮಕ್ಕಾಳಲ್ಲಿ ತೊದಲುವುದು ಹೆಚ್ಚಾಗುತ್ತದೆ, ಇದು ಪ್ರಾಬಲ್ಯ ಕುಟುಂಬದವರಾದರೆ ತೊದಲುವಿದೆ ಮತ್ತಷ್ಟು ಹೆಚ್ಚುತ್ತದೆ. ಹೆಣ್ಣು ಮಕ್ಕಳಿಗಿಂತ ಗಂಡು ಮಕ್ಕಳು ಈ ಸಮಸ್ಯೆಯನ್ನು ಎದುರಿಸುತ್ತಾರೆ. ತೊದಲುವಿಕೆ ಅಥವಾ ಬಿಕ್ಕಲುವಿಕೆ ಸಾಮಾನ್ಯವಾಗಿ ಮಕ್ಕಳು ದೊಡ್ಡವರಾಗುತ್ತಿದ್ದಂತೆ ಕಡಿಮೆಯಾಗುತ್ತದೆ. ಇನ್ನು ಕೆಲವು ಸಂಧರ್ಭಗಳಲ್ಲಿ ಇದು ದೊಡ್ಡವರಾದ ಮೇಲೂ ಪರಿಣಾಮವಾಗಬಹುದು. 2 ರಿಂದ 5 ವರ್ಷದ ಮಕ್ಕಳಲ್ಲಿ ತೊದಲುವಿಕೆ ಅಥವಾ ಬಿಕ್ಕಲುವಿಕೆಯನ್ನು ಅಭಿವೃದ್ಧಿಯ ತೊದಲು ಎಂದು ಮಾತನಾಡುವ ಅಭಿವೃದ್ಧಿಯ ಹಂತ ಎಂದು ಕರೆಯುತ್ತಾರೆ.

ಮಾತು ಎನ್ನುವುದು ವಿವಿಧ ಸಂಪರ್ಕಗಳು ವಿವಿಧ ಜಾಗಗಳಲ್ಲಿ ವಾದ್ಯವೃಂಧವವು  ಸ್ನಾಯುಗಳು ಮತ್ತು ಉಸಿರಾಟದ, ಗಂಟಲಿನ, ತುಟಿಗಳ, ರುಚಿಯ ಮತ್ತು ಧ್ವನಿ ತಂತುಗಳ ಚಲನವಲನವನ್ನು ಅಭಿವೃದ್ಧಿ ಮಾಡುತ್ತದೆ. ಒಂದು ಸಮಸ್ಯೆಯೆಂದರೆ ಸ್ಪಷ್ಟ ಮಾತು ಯಾವುದೇ ಹಂತದ ಮಾತಿನ ಉತ್ಪಾದನೆಯ ಸಹಕಾರ ಮಾಡುವುದರಲ್ಲಿ ತೊಂದರೆಯುಂಟು ಮಾಡುತ್ತದೆ. ಸಂಶೋಧನಾ ಅಧ್ಯಯನಗಳು ಭಾಷೆಯ ಅಭಿವೃದ್ಧಿಯು ತೊದಲುವ ಮಕ್ಕಳಲ್ಲಿ ಕಡಿಮೆ ಎಂದು ಹೇಳಿದ್ದಾರೆ.

ಸ್ವಾಧೀನ ಪಡಿಸಿಕೊಂಡ ತೊದಲು ದನಿ ಅಥವಾ ನರಜನಕದ ತೊದಲುದನಿ ಯಾವಾಗ ಉದ್ಭವಿಸುತ್ತದೆ ಎಂದರೆ ಮೆದುಳಿಗೆ ಲಕ್ವ ಹೊಡೆದು ಗಾಯವಾದಾಗ, ತಲೆಗೆ ಪೆಟ್ಟು ಬಿದ್ಧಾಗ, ನರಮಂಡಲದ ಖಾಯಿಲೆಗಳು, ಅಥವಾ ಕೆಲವು ಔಷಧಗಳಿಂದ ಆಗಬಹುದು.

ತೊದಲುದನಿಯ ಚಿಹ್ನೆಗಳು ಮತ್ತು ಲಕ್ಷಣಗಳು

-ಒಂದು ದಟ್ಟಗಾಲಿಡುವ ಮಗು ತೊದಲುದನಿಯನ್ನು ಕ್ರಮೇಣವಾಗಿ ಕಾಲಾಂತರದಲ್ಲಿ ಆರಂಭಿಸಬಹುದು. ಕೆಲವೊಮ್ಮೆ ಅವನು/ಅವಳು ಕೆಲವು ಪದಗಳು ಮಾತನಾಡುವಾಗ ಅಥವಾ ಒಂದು ದಿನದಲ್ಲಿ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ತೊದಲ ಬಹುದು.

-ಬಿಕ್ಕಲು ದನಿ ಅಥವಾತೊದಲು ದನಿಯು ಮಕ್ಕಳಿಗೆ ಹರ್ಷವಾದಾಗ ಮತ್ತು ಅವರಲ್ಲಿ ಬಹಳಷ್ಟು ವಿಷಯವನ್ನು ಹೇಳಲು ಇರುವಾಗ, ಅಥವಾ ಯಾವುದಾದರು ಪ್ರಶ್ನೆ ಕೇಳಬೇಕೆನಿಸಿದರೆ, ಅಥವಾ ಏನನ್ನಾದರು ಮುಖ್ಯವಾದುದನ್ನು ಮಾತನಾಡಬೇಕೆನಿಸಿದರೆ ಗಮನಿಸಬೇಕಾಗುತ್ತದೆ.

-ಶಿಕ್ಷಕರೊಂದಿಗೆ ಮುಂದೆ ಮಾತನಾಡುವಾಗ ಅಥವಾ ಶಾಲೆಯ ವರ್ಗದಲ್ಲಿ ಎಲ್ಲರ ಮುಂದೆ ಜೋರಾಗಿ ಓದಬೇಕಾದರೆ, ಎತರ್., ಈ ತೊದಲು ಮಕ್ಕಳಲ್ಲಿ ಜಾಸ್ತಿಯಾಗುತ್ತದೆ.

-ಅಂಬೆಗಾಲಿಡುವ ಮಕ್ಕಳಲ್ಲಿ ತೊದಲು ದನಿಯು ಇದ್ದಕ್ಕಿದ್ದಂತೆ ಸಾಮಾನ್ಯವಾಗಿ ಕಂಡು ಬರುತ್ತದೆ. 2 ರಿಂದ 3 ವರ್ಷದ ಮಗುವು ರಾತ್ರಿಯಲ್ಲಿ ಇದ್ದಕ್ಕಿದ್ದ ಹಾಗೆ ಯಾವುದೇ ಕಾರಣವಿಲ್ಲದೆ ತೊದಲುದನಿಯಲ್ಲಿ ಮಾತನಾಡಲು ಶುರುಮಾಡುತ್ತದೆ.

–ತೊದಲುದನಿಯು ಕೆಲವೊಮ್ಮೆ ನಿರಂತರ ಅಥವಾ ನಿಯತಕಾಲಿಕವಾಗಿ, ಅಥವಾ ಕೆಲವು ದಿನಗಳ ಕಾಲ ಬಿಟ್ಟು ಬರಬಹುದು.

-ತೊದಲುದನಿ ಅಥವಾ ಬಿಕ್ಕಲು ಸಾಮಾನ್ಯವಾಗಿ ಕೆಲವು ಅನುದ್ಧಿಶ್ಟ ಲಕ್ಷಣಗಳೊಂದಿಗೆ ಜೊತೆಗೂಡಿರುತ್ತದೆ, ಇದನ್ನು ಹೋರಾಟದ ನಡವಳಿಕೆಗಳು ಎಂದು ಕರೆಯುತ್ತಾರೆ.

  1. ಕಣ್ಣನ್ನು ಮಿಟುಕಿಸುವುದು ಅಥವಾ ಮಾತನಾಡುವಾಗ ಕಣ್ಣಿನ ಸಂಪರ್ಕ ತಪ್ಪಿಸುವುದು
  2. ನಡುಗುವ ತುಟಿಗಳು
  3. ಕಿರಿಕಿರಿ
  4. ಕಾಲು ತುಳಿಯುವುದು
  5. ಬೆರಳಾಡಿಸುವುದು

-ಒಂದು ತೊದಲುದನಿಯಿರುವ ಹುಡುಗ ಅಥವಾ ಹುಡುಗಿ ಕೆಲವು ಸಂದರ್ಭಗಳಲ್ಲಿ ಮಾತನಾಡುವಾಗ ತಪ್ಪಿಸಿಕೊಳ್ಳುತ್ತಾರೆ, ಯಾವುದೆಂದರೆ ಸಾಮಾಜಿಕ ಕೂಟಗಳಲ್ಲಿ, ಅಂಗಡಿಗೆ ಹೋಗುವಾಗ ಮತ್ತು ವೇದಿಕೆ ಪ್ರಸ್ತುತಿಗಳಲ್ಲಿ.

-ಮಗುವು ಅವನು/ಅವಳು, ಅವರಿಗೆ ಗೊತ್ತಿರುವ ಕೆಲವು ಪದಗಳನ್ನು ಉಪಯೋಗಿಸುವುದರಿಂದ ತೊದಲು ಧ್ವನಿಯುಂಟಾಗುತ್ತದೆ ಎಂದು ತಪ್ಪಿಸಲು ಪ್ರಯತ್ನಿಸುತ್ತಾರೆ ಅಥವಾ ಸಣ್ಣ ಮತ್ತು ಮೆದು ಧ್ವನಿಯಲ್ಲಿ ಮಾತನಾಡುತ್ತಾರೆ.

-ಭಯ, ಕಿರಿಕಿರಿ ಮತ್ತು ಹತಾಶೆ ಮಗುವನ್ನು ಸಮಾಜದಿಂದ ದೂರ ಉಳಿದು ಅವರಿಂದ ಮಾತುಕತೆಯನ್ನು ತಪ್ಪಿಕೊಳ್ಳುತ್ತಾರೆ.

ತೊದಲುದನಿ ಮತ್ತು ಬಿಕ್ಕಲುದನಿಗೆ ಚಿಕಿತ್ಸೆ

ಮಕ್ಕಳಿಗೆ ಯಾವುದೇ ರೀತಿಯ ತೊದಲು ದನಿಗೆ ನೇರ ಚಿಹಿತ್ಸೆ ಇರುವುದಿಲ್ಲ, ಆದರೆ ಈ ತೊಂದರೆಯಿಂದ ಹೊರಬರಲು ಕೆಲವು ವಿವಿಧ ಕ್ರಮಗಳನ್ನು ಅನುಸರಿಸಿದರೆ ಗುಣವಾಗುವುದು.

ತೊದಲುದನಿಯ ಚಿಕಿತ್ಸೆಯನ್ನು ಮಕ್ಕಳಿಗೆ ವಾಕ್ ಥೆರಪಿಯೊಂದಿಗೆ ಒಳಗೊಂಡಿರುತ್ತದೆ. ವಾಕ್ ಥೆರಪಿಯು ತೊದಲುದನಿಯ ಮಕ್ಕಳಿಗೆ 3 ರಿಂದ 6 ತಿಂಗಳ ಕೊಡಲಾಗುತ್ತದೆ, ತೊದಲುದನಿಯು ವರ್ತನೆಗಳ ಹೋರಾಟದ ಅಭಿವೃದ್ಧಿಯಾಗುತ್ತಿರಲಿಲ್ಲ ಮತ್ತು ತೊದಲು ದನಿಯು ಬಲವಾದ ಕುಟುಂಬದ ಇತಿಹಾಸ ಹೊಂದಿರುತ್ತದೆ. ವಾಕ್ ಥೆರಪಿಯನ್ನು ಆರಂಭಿಕ ಹಂತದಲ್ಲೇ ಚಿಕೆತ್ಸೆ ಕೊಡುವುದರಿಂದ ತೊದಲು ಅಭಿವೃಉದ್ಧಿಯಾಗುವುದನ್ನು ತಡೆಯಬಹುದು.

ವಾಕ್ ಥೆರಪಿಯು ಪರಿಣಾಮಕಾರಿಯಾಗಲು ಕೆಲವು ತೊದಲು ದನಿ ಸಲಹೆಗಳನ್ನು ಪೋಷಕರು ಮನೆಯಲ್ಲಿ ಅನುಸರಿಸಬೇಕಾಗುತ್ತದೆ.

  1. ಪೋಷಕರು ಮಕ್ಕಳನ್ನು ಆದಷ್ಟು ಮಾತನಾಡಲು ಪ್ರೇರೇಪಿಸಬೇಕು. ನೇರವಾಗಿ ಒಂದರಿಂದ ಒಂದು ಸಂವಹನೆಯನ್ನು ಪ್ರೇರೇಪಿಸಿದರೆ ಮಕ್ಕಳು ಹೆಚ್ಚು ಮಾತನಾಡಬಹುದು.
  2. ಗಮನ ಕೊಟ್ಟು ಕೇಳಿ ಮತ್ತು ಮಗು ಸಂಪೂರ್ಣವಾಗಿ ಮಾತನಾಡುವುದನ್ನು ಮುಗಿಸಲಿ, ಅದರಲ್ಲೂ ಅವನು/ಅವಳು ಹರ್ಷದಿಂದ ಅಥವ ಏನಾದರು ಮುಖ್ಯವಾದುದ್ದನ್ನು ಹೇಳಬೇಕೆನಿಸಿರುವಾಗ.
  3. ಮಕ್ಕಳನ್ನು ಮಾತನಾಡುವಾಗ ಸರಿಯಾಗಿ ಮಾತನಾಡುವುದಕ್ಕೆ ಅಥವಾ ಪದದ ಉಚ್ಚರಣೆ ಮಾಡುವಾಗ ಮಧ್ಯೆ ಅಡ್ಡಿಪಡಿಸಬೇಡಿ.
  4. ಮಕ್ಕಳ ಜೊತೆ ಮಾತನಾಡುವಾಗ ನಿಧಾನ ಮತ್ತು ಮೆದು ಧ್ವನಿಯಲ್ಲಿ ಮಾತನಾಡುವುದು ಒಳಿತು. ಇದು ಅವನು/ಅವಳು ಅಲ್ಪಾವಧಿಯಲ್ಲಿ ಮಾತನಾಡುವಾಗ ಒತ್ತಡ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  5. ಮಾತನಾಡಲು ಮಕ್ಕಳು ಸಮಯ ತಗೆದುಕೊಂಡರೆ ಯಾವುದೇ ತಪ್ಪಿಲ್ಲ ಎಂದು ಹೇಳಬೇಕು ಅಥವಾ ಮಾತನಾಡುವ ಪದಗಳನ್ನು ಮಧ್ಯ ತುಂಡರಿಸಿ ಮಾತನಾಡಿದರೆ ಮಗುವಿಗೆ ನಾವು ಯಾವುದೇ ತಪ್ಪಿಲ್ಲ ಎಂದು ಅರ್ಥಮಾಡಿಸಬೇಕು,
  6. ಮಗುವಿಗೆ ತೊದಲಿನ ದನಿಯ ಬಗ್ಗೆ ತಿಳಿದುಕೊಳ್ಳಬೇಕು ಎಂದುಕೊಂಡಾಗ ಅದರ ಬಗ್ಗೆ ಸರಿಯಾದ ಮಾಹಿತಿ ಕೊಡಿ.
  7. ಮನೆಯಲ್ಲಿ ಶಾಂತ ಮತ್ತು ಸಮಾಧಾನಕರ ಪರಿಸರವನ್ನು ನಿರ್ವಹಿಸಬೇಕು, ಇದು ಮಗುವನ್ನು ಮಾತನಾಡಲು ಆರಾಮದಾಯಕವಾಗಿಡುತ್ತದೆ. ಒಂದು ಒತ್ತಡದ ಪರಿಸರವು ತೊದಲುದನಿಯನ್ನು ಹೆಚ್ಚಿಸುತ್ತದೆ.

ದೊಡ್ಡವರಲ್ಲಿ ಮತ್ತು ದೊಡ್ಡ ಮಕ್ಕಳಲ್ಲಿ ತೊದಲುದನಿಯ ಚಿಕಿತ್ಸೆಯು ಇತರೆ ಕ್ರಮಗಳನ್ನು ಈ ಕೆಳಗೆ ಕೊಟ್ಟಿದ್ದಾರೆ.

-ತೊದಲುದನಿಯ ಚಿಕೆತ್ಸೆ: ಈ ಚಿಕೆತ್ಸೆಯಲ್ಲಿ ಹದಿಹರೆಯರು ಅಥವಾ ವಯಸ್ಕರರಲ್ಲಿ ತೊದಲುದನಿಯನ್ನು ನಿಯಂತ್ರಣಗೊಳಿಸಲು ಉಸಿರಾಟದ ವಿಧಾನಗಳು, ನಿಧಾನವಾಗಿ ಮಾತನಾಡುವುದು, ಒಂದು ಪದದ ಪ್ರತಿಕ್ರೀಯೆ ಎತರೆ.

-ವಿದ್ಯುನ್ಮಾನ ಸಾಧನೆಗಳನ್ನು ಬಳಸುವುದು: ವಿದ್ಯುನ್ಮಾನ ಸಾಧನಗಳನ್ನು (ಕಿವಿಗೆ) ಧರಿಸುವುದು, ಇದು ಮಾತಿನ ಸ್ಪಷ್ಟತೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಮೂಲ ಬ್ಯಾನರ್ ಚಿತ್ರ: ಎಡುಹೆಲ್ತ್ ಕೇರ್

ಹಕ್ಕುತ್ಯಾಗ: ಈ ಮಾಹಿತಿಯ ಲೇಖನದ  ಉದ್ದೇಶವು ಪರೋಕ್ಷವಾಗಿ ವೃತ್ತಿಪರ ವೈದ್ಯಕೀಯ ಸಲಹೆ, ರೋಗ,  ಅಥವಾ ಚಿಕೆತ್ಸೆ ಯಾವುದೇ ಉದ್ದೇಶವನ್ನು ಹೊಂದಿಲ್ಲ. ಯಾವಾಗಲು ನಿಮ್ಮ ವೈದ್ಯರ ಸಲಹೆ ಪಡೆಯಿರಿ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.