17 Jun 2019 | 1 min Read
Medically reviewed by
Author | Articles
ಬೇರ್ಪಡಿಸುವ ಆತಂಕವನ್ನು ಅರ್ಥಮಾಡಿಕೊಳ್ಳುವುದು
ಆರು ತಿಂಗಳ ಮಗು ತನ್ನ ತಾಯಿಯನ್ನು ಅಥವಾ ತನ್ನ ದಾದಿಯನ್ನು, ಅದು ಯಾರ ಮೇಲೆ ಅವಲಂಬಿಸಿರುತ್ತದೋ ಅವರನ್ನು ಗುರುತಿಸಲು ಆರಂಭಿಸುತ್ತದೆ. ಮಗುವಿಗೆ ತನ್ನ ತಾಯಿ ಅಥವಾ ದಾದಿ ಯಾರಾದರು ತನ್ನ ಕಣ್ನ ಮುಂದೆ ಕಾಣದೆ ಹೋದರೆ ಅದನ್ನು ಬೇರೆ ಮಾಡಿರಬಹುದೆಂದು ತಿಳಿದು ಅಳತೊಡಗುತ್ತದೆ. ಇದನ್ನು ಬೇರ್ಪಪಡಿಸುವ ಆತಂಕ ಎನ್ನುತ್ತಾರೆ. ಬೇರ್ಪಡಿಸುವ ಆತಂಕವು 8-10 ತಿಂಗಳ ವಯಸ್ಸಿನ ಮಕ್ಕಳಲ್ಲಿ ಈ ಲಕ್ಷಣಗಳು ಅಧಿಕವಾಗಿರುತ್ತದೆ.
ಅಪರಿಚಿತರ ಆತಂಕವು ಈ ಹಂತದ ಮಕ್ಕಳಲ್ಲಿ ಸಾಮಾನ್ಯ. ಮಕ್ಕಳು ಹೊಸ ಜಾಗಕ್ಕೆ ಹೋದರೆ ಅಥವಾ ಹೊಸ ವ್ಯಕ್ತಿಗಳನ್ನು ಭೇಟಿ ಮಾಡಿದಾಗ ಭಯಗೊಳ್ಳುತ್ತಾರೆ.
ಬೇರ್ಪಡಿಸುವ ಆತಂಕವು ಮಕ್ಕಳು ಒಂದುವರೆ ವರ್ಷದಿಂದ ಎರಡು ವರ್ಷದಲ್ಲಿ ಪರಿಹಾರವಾಗುತ್ತದೆ. ಮಗುವಿಗೆ ತನ್ನ ತಾಯಿ ಅಥವಾ ದಾದಿಯಿಂದ ದೂರವಿದ್ದರೂ ಸ್ವಲ್ಪ ಸಮಯವಾದ ಮೇಲೆ ಮತ್ತೆ ಬರುತ್ತಾರೆ ಎಂದು ಅರ್ಥಮಾಡಿಕೊಳ್ಳುತ್ತಾರೆ.
ಕೆಲವು ಸಂದರ್ಭಗಳಲ್ಲಿ ಅಂಬೆಗಾಲಿಡುವ ಮತ್ತು ದೊಡ್ಡ ಮಕ್ಕಳು ಒತ್ತಡದ ಪರಿಸ್ಥಿತಿಯಾದ ಪೋಷಕರಿಂದ ಶಾಲೆಯ ಪ್ರಯಾಣಕ್ಕೆ ಅಥವಾ ರಾತ್ರಿ ಕ್ಯಾಂಪಿಂಗೆ ಹೋದಾಗ ಈ ಬೇರ್ಪಡಿಕೆಯ ಆತಂಕವನ್ನು ಅನುಭವಿಸುತ್ತಾರೆ. ಮಗುವಿನ ಆತಂಕವು ಅತಿಯಾದ ಅನುಪಾತದಲ್ಲಿ ಮಕ್ಕಳಿಗೆ ಯಾವುದು ತೊಂದರೆಯಾಗುತ್ತಿದೆ ಎಂದು ಏನು ನಿಜವಾದ ಪರಿಸ್ಥಿತಿಯನ್ನು ತಿಳಿಸಿಕೊಡುತ್ತದೆ. ಈ ಸ್ಥಿತಿಯನ್ನು ಬೇರ್ಪಡಿಕೆಯ ಆರಂಕದ ಖಾಯಿಲೆ (ದುಃಖ) ಎಂದು ಕರೆಯುತ್ತಾರೆ.
ಸಂಶೋಧನೆಯ ಅಧ್ಯಯನಗಳ ಪ್ರಕಾರ, ಬಾಲ್ಯದಲ್ಲಿ ಆತಂಕವು ಪೂರ್ವಗಾಮಿಯಾಗಿ ವಯಸ್ಕರ ಆತಂಕ ಮತ್ತು ಖಿನ್ನತೆಯ ಅಸ್ವಸ್ಥತೆ ಇರುತ್ತದೆ.
ಮಕ್ಕಳಲ್ಲಿ ಬೇರ್ಪಡಿಕೆಯ ಆತಂಕದ ಲಕ್ಷಣಗಳು
ಬೇರ್ಪಡಿಕೆಯ ಆತಂಕವು ಒಂದು ರೀತಿಯ ಬಾಲ್ಯದ ಆತಂಕ ಮತ್ತು ವಯಸೀನ ಪ್ರಸ್ತುತಿ ಲಕ್ಷಣಗಳು ಬೇರೆಯಾಗಿರುತ್ತವೆ.
-ಪುಟ್ಟ ಮಕ್ಕಳಲ್ಲಿ ಆತಂಕದ ಚಿಹ್ನೆಗಳು ಸಂಬಂಧ ಪಡದ ಭಯವನ್ನು ಉಂಟುಮಾಡಿ ಅದು ತನಗೆ ಗಾಯ ಅಥವಾ ಯಾವುದಾದರು ತೊಂದರೆ ಮಾಡಬಹುದು ಎಂದು ಹೆದರುತ್ತಾರೆ.
-ಬೇರ್ಪಡಿಕೆಯ ಆತಂಕದಿಂದ ಮಕ್ಕಳು ಶಾಲೆಗೆ ಹೋಗಲು ಅವನು/ಅವಳು ನಿರಾಕರಿಸುತ್ತಾರೆ.
ಮಗುವು ಅನಪೇಕ್ಷಿತ ಘಟನೆಗಳ ಬಗ್ಗೆ ಯೋಚಿಸಿ ಅದರಲ್ಲೇ ಚಿಂತೆಗೀಡಾಗುತ್ತದೆ, ಇದು ಅವನ/ಅವಳ ಮನೆಯನ್ನು ಬಿಟ್ಟು ಹೋಗವುದರಿಂದ, ತಾಯಿ ಅಥವಾ ದಾದಿ ಅವರಿಂದ ದೂರ ಉಳಿಯಬೇಕಾಗಬಹುದೆಂಬ ಚಿಂತೆಗೀಡು ಮಾಡುತ್ತದೆ.
-ಇನ್ನು 9 ರಿಂದ 12 ವರ್ಷದ ಮಕ್ಕಳಲ್ಲಿ ಬೇರ್ಪಡಿಕೆಯ ಆತಂಕವು ಪ್ರತ್ಯೇಕತೆಯ ಯಾತನೆ ಅಥವಾ ಭಾಂದವ್ಯವನ್ನು ಹೊಂದಿದವರಿಂದ ಬೇರೆಯಾಗುತ್ತಿದ್ದೇನೆ ಎಂದು ಬೇಸರಗೊಳ್ಳುತ್ತಾರೆ, ಯಾವುದೆಂದರೆ ರಾತ್ರಿ ಕ್ಯಾಂಪಿಂಗ್, ರಾತ್ರಿ ಶಾಲೆಯ ಪ್ರವಾಸ ಇತ್ಯಾದಿ.
-ದೊಡ್ಡ ಮಕ್ಕಳಾದ 12 ರಿಂದ 16 ವರ್ಷದವರಲ್ಲಿ ಸಹ ಪ್ರಸ್ತುತವಾಗಿ ಆಗಾಗ್ಗೆ ಶಾಲೆಯಲ್ಲಿ ಹಾಜರಾತಿ ಕಡಿಮೆ ಇರುವುದರಿಂದ.
ಪ್ರತ್ಯೇಕತೆಯ ಆತಂಕವು ಹದಿಹರೆಯ ಮಕ್ಕಳಲ್ಲಿ ದೈಹಿಕ ಲಕ್ಷಣಗಳೊಂದಿಗೆ ನಿರೂಪಿತಗೊಳ್ಳುತ್ತದೆ, ಇದರ ಜೊತೆಗೆ ಶಾಲೆಗೆ ಹೋಗಲು ನಿರಾಕರಿಸುತ್ತಾರೆ. ಇದಕ್ಕೆ ತಲೆನೋವು, ತಲೆ ಸುತ್ತುವುದು, ಹೊಟ್ಟೆ ನೋವು, ಬೆನ್ನು ನೋವು, ವಾಕರಿಕೆ ಇತ್ಯಾದಿ ಸೇರಿರುತ್ತದೆ.
-ಪುಟ್ಟ ಮಕ್ಕಳಲ್ಲಿ ಪ್ರತ್ಯೇಕತೆಯ ಆತಂಕದ ಇತರೆ ಲಕ್ಷಣಗಳು ಯಾವುದೆಂದರೆ ರಾತ್ರಿಯ ಭಯಾನಕ ಕನಸುಗಳು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದು, ಮಕ್ಕಳು ಒಬ್ಬರೇ ಮಲಗಲು ಹೆದರಿ ತನ್ನ ತಾಯಿ ಅಥವಾ ದಾದಿಯೊಂದಿಗೆ ಮಲಗಲು ಇಚ್ಚಿಸುವುದು.
ಬೇರ್ಪಡಿಕೆಯ ಆತಂಕವು ಯಾವ ಕಾರಣಗಳಿಂದ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ?
ಮಕ್ಕಳ ಪ್ರತ್ಯೇಕದ ಆತಂಕದ ಸಮಯದಲ್ಲಿ ಕುಟುಂಬವು ಅವರ ಅಭಿವೃದ್ಧಿಗಾಗಿ ಒಂದು ಮುಖ್ಯ ಪ್ರಾತ್ರ ವಹಿಸಬೇಕಾಗುತ್ತದೆ. ಅನಾರೋಗ್ಯಕರ ಪರಿಸರ ಕುಟುಂಬದಲ್ಲಿ ಮಕ್ಕಳನ್ನು ಹೆಚ್ಚು ಖಿನ್ನತೆಯನ್ನುಂಟು ಮಾಡುತ್ತದೆ ಅದಾವುವೆಂದರೆ ಮನೆಯಲ್ಲಿ ಮದ್ಯಪಾನ ಮಾಡುವುದು ಅಥವಾ ಹೆಚ್ಚು ಆತಂಕ ಪಡುವ ತಾಯಂದಿರು, ಒಂದು ಹೊಸ ಕಿರಿಯ ಸಹೋದರ/ಸಹೋದರಿಯ ಆಗಮನ ಇತ್ಯಾದಿ. ಕುಟುಂಬದಲ್ಲಿ ಸಾಕ್ಷಿಯಾದ ಆತಂಕ ಅಥವಾ ಖಿನ್ನತೆಯ ಖಾಯಿಲೆಗಳು ಪ್ರತ್ಯೇಕವಾದ ಆತಂಕವು ಮಕ್ಕಳನ್ನು ಕಾಡುತ್ತದೆ.
ಮಕ್ಕಳಲ್ಲಿ ಬೇರ್ಪಡಿಕೆಯ ಆತಂಕದಿಂದ ಹೊರಬರಲು ತಂತ್ರಗಳು.
ಪ್ರತ್ಯೇಕವಾದ ಆತಂಕದಿಂದ ದೊಡ್ಡ ಮಕ್ಕಳಿಗಿಂತ ಚಿಕ್ಕ ಮಕ್ಕಳಲ್ಲಿ ಹೆಚ್ಚು ಅಪಾಯದೊಂದಿಗೆ ಬಳಲುತ್ತಾರೆ. ಈ ಆತಂಕವನ್ನು ಎದುರಿಸಲು ಮಕ್ಕಳನ್ನು ಪೋಷಕರು ಅವರು ಇಲ್ಲದಿರುವ ಸಮಯದಲ್ಲಿ ಕುಟುಂಬದ ಬೇರೆಯವರೊಂದಿಗೆ ಬೆರೆಯಲು ಪ್ರೇರೇಪಿಸಬೇಕು. ಮಕ್ಕಳು ಅವನ/ಅವಳ ತಾಯಿಯ ಅನುಪಸ್ಥಿತಿಯಲ್ಲಿ ಸ್ವಲ್ಪ ಹೊತ್ತಿನ ಬಳಿಕ ಮತ್ತೆ ಬರುತ್ತಾರೆ ಎಂದು ಒಪ್ಪಿಕೊಳ್ಳಬೇಕು.
ಬೇರ್ಪಡಿಕೆಯ ಆತಂಕದಿಂದ ಬಳಲುತ್ತಿರುವ ಮಕ್ಕಳಿಗೆ ಕೆಲವು ಉಪಯುಕ್ತ ವಿವಿಧ ವಿಧಾನಗಳು ನಿರ್ಮಿಸುವುದು ಒಳ್ಳೆಯದು.
ಹಕ್ಕುತ್ಯಾಗ: ಈ ಲೇಖನದ ಮಾಹಿತಿಯು ಯಾವ ಉದ್ದೇಶವನ್ನು ಅಥವಾ ಪರೋಕ್ಷವಾಗಿ ಅಥವಾ ಪರ್ಯಾಯವಾಗಿ ವೃತ್ತಿಪರ ವೈದ್ಯಕೀಯ ಸಲಹೆ, ರೋಗ ಅಥವಾ ಚಿಕೆತ್ಸೆ ಹೊಂದಿರುವುದಿಲ್ಲ. ಯಾವಾಗಲು ನಿಮ್ಮ ವೈದ್ಯರ ಸಲಹೆಯನ್ನು ಪಡೆಯಿರಿ.
A