ಬೆಳವಣಿಗೆಯ ಮೈಲಿಗಲ್ಲುಗಳು – 31 – 36 ತಿಂಗಳು

ಬೆಳವಣಿಗೆಯ ಮೈಲಿಗಲ್ಲುಗಳು – 31 – 36 ತಿಂಗಳು

21 Jun 2019 | 1 min Read

Medically reviewed by

Author | Articles

ಅವರಿಗೆ ಮೂರು ವರ್ಷವಾಗುವ ಮೊದಲು ನಿಮ್ಮ ಮಗುವಿನ ಸಾಮಾನ್ಯ ಮೈಲಿಗಲ್ಲುಗಳ ಬಗ್ಗೆ ತಿಳಿಯಿರಿ.

ನಿಮ್ಮ ಮಗು ಈಗ ಸುಮಾರು 3 ವರ್ಷ ವಯಸ್ಸಿನ ಕುತೂಹಲಕಾರಿ ಎಲ್ಲವನ್ನೂ ತಿಳಿಯಲು ಬಯಸುವ ಮಗು. ಮಗುವಿಗೆ ನಿರಂತರ ಗಮನ ಮತ್ತು ಸ್ವಾತಂತ್ರ್ಯದ ಅವಶ್ಯಕತೆ ಇದೆ. ತನ್ನ 3 ನೇ ಅರ್ಧ ವರ್ಷದ ನಂತರದ ಅದ್ಭುತವಾದ ಕ್ಷಣಗಳೊಂದಿಗೆ ಅವರ ಕಲ್ಪನಾ ಶಕ್ತಿಯು ಹೊರಬರಲು ಪ್ರಾರಂಭವಾಗುತ್ತದೆ ಮತ್ತು ಹೆಚ್ಚು ಸ್ವತಂತ್ರವಾಗುವುದನ್ನು ತಿಳಿದುಕೊಳ್ಳುತ್ತದೆ. 3 ನೇ ವಯಸ್ಸಿನ ಮಕ್ಕಳಲ್ಲಿ ಕಂಡುಬರುವ ಕೆಲವು ಬೆಳವಣಿಗೆಯ ಮೈಲಿಗಲ್ಲುಗಳು ಕೆಳಕಂಡವು.

 

31 ರಿಂದ 36 ತಿಂಗಳುಗಳ ನಡುವಿನ ಮಕ್ಕಳಲ್ಲಿ ಸಾಮಾಜಿಕ ಅಭಿವೃದ್ಧಿ.

ಪ್ರತಿ ಮಗುವೂ ವಿಭಿನ್ನವಾಗಿದೆ ಮತ್ತು ಇತರ ಮಕ್ಕಳೊಂದಿಗೆ ಸ್ನೇಹ ಬೆಳೆಸಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು ಎಂದು ನೆನಪಿಡಿ. ಅಂತಹ ಕೌಶಲ್ಯಗಳು ಸಮಯದೊಂದಿಗೆ ಸುಧಾರಣೆಯಾಗುತ್ತವೆ ಮತ್ತು ಮಗುವಿನ ಪರಸ್ಪರ ಸಂವಹನ ನಡೆಸಲು ಕಲಿಯುವ ಮೂಲಕ ಅದು ಗುಂಪಿನೊಳಗೆ ಎರಡು ರೀತಿಯಲ್ಲಿ ಸಂವಹನ ನಡೆಸುವುದನ್ನು ಪ್ರಾರಂಭಿಸುತ್ತದೆ.

 

ಸಮಯದಲ್ಲಿ 2 ವರ್ಷ ವಯಸ್ಸಿನ ಮಗುವು ಪ್ರವೀಣರಾಗುವ ವಿಶಿಷ್ಟ ಕೌಶಲ್ಯಗಳು ಕೆಳಕಂಡಂತಿವೆ:

  • ಧನ್ಯವಾದಗಳು‘, ‘ದಯವಿಟ್ಟುಮತ್ತು ಇತರ ಜನರನ್ನು ಸ್ವಾಗತಿಸಲು ಕೆಲವು ಪದಗಳನ್ನು ಬಳಸುತ್ತಾರೆ
  • ಪ್ರೀತಿಯ ಅಭಿವ್ಯಕ್ತಿಯನ್ನು ಬಹಿರಂಗವಾಗಿಸುತ್ತಾರೆ
  • ಇತರ ಮಕ್ಕಳೊಂದಿಗೆ ಆರಾಮವಾಗಿ ಆಟವಾಡುತ್ತಾರೆ
  • ಆಟಗಳಲ್ಲಿ ಸಹಕರಿಸಿಕೊಳ್ಲಲು ತೊಡಗಿಕೊಳ್ಳುತ್ತಾರೆ
  • ನಟಿಸುತ್ತಾ ಆಡುವುದನ್ನು ಇಷ್ಟ ಪಡುತ್ತಾರೆ

 

 

ವಯಸ್ಸಿನ ಅರ್ಧದಷ್ಟು ಮಕ್ಕಳಲ್ಲಿ ಕಂಡುಬರುವ ಉದಯೋನ್ಮುಖ ಕೌಶಲ್ಯಗಳು ಕೆಳಗಿನವುಗಳನ್ನು ಒಳಗೊಂಡಿವೆ:

  • ದೊಡ್ಡವರು ಕಿರಾಣಿ ಅಂಗಡಿಯಲ್ಲಿ ಖರೀದಿ ಮಾಡುವುದು, ಸ್ನೇಹಿತನನ್ನು ಊಹಿಸುಕೊಂಡು ಮಾತನಾಡುವುದನ್ನು  ಮುಂತಾದವುಗಳನ್ನು ಅನುಕರಿಸುತ್ತಾನೆ
  • ಅಪರಿಚಿತರೊಂದಿಗೆ ಆರಾಮದಾಯಕವಾಗಿರುತ್ತಾರೆ
  • ಇತರ ಮಕ್ಕಳಿಗೆ ಸಹಾಯ ಮಾಡುವುದರಲ್ಲಿ ಆನಂದ ಪಡುತ್ತಾರೆ
  • ಇತರ ಮಕ್ಕಳೊಂದಿಗೆ ಅವರು ಸಹಕರಿಸದಿದ್ದರು ಸಹ ಅವನು ಅವರೊಂದಿಗೆ ಸಹಕರಿಸುತ ಆಟವಾಡುತ್ತಾನೆ

ಸಂಘರ್ಷಗಳನ್ನು ಪರಿಹರಿಸಲು ಪದಗಳ ಬಳಕೆ, ಹಂಚಿಕೊಳ್ಳುವುದು, ಆಟದಲ್ಲಿ ತಂಡದೊಂದಿಗೆ ಬದಲಾವಣೆಗಳನ್ನು  ತೆಗೆದುಕೊಳ್ಳುವಂತಹ ಸಾಮಾಜಿಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿರುತ್ತಾರೆ

 

31 ರಿಂದ 36 ತಿಂಗಳ ನಡುವಿನ ಮಗುವಿನ ಭಾವನಾತ್ಮಕ ಕೌಶಲ್ಯಗಳು

3 ನೇ ವಯಸ್ಸಿನಲ್ಲಿ ಭಾವನೆಗಳ ಆರೋಗ್ಯದ ಅಭಿವ್ಯಕ್ತಿ ಮತ್ತು ಇತರರಿಗೆ ಅನುಭೂತಿಯನ್ನು ಬೆಳೆಸಿಕೊಳ್ಳುವಲ್ಲಿ ಅಸಹಜ ಭಾವನೆಗಳನ್ನು ನಿಯಂತ್ರಿಸುವುದು ಪ್ರಮುಖವಾಗಿದೆ. ಇದು ವ್ಯಕ್ತಿತ್ವದ ಬೆಳವಣಿಗೆಯನ್ನು ಒಳಗೊಂಡಿದೆ. ಗುರುತಿನ ರಚನೆಯು ಹೆಚ್ಚಾಗುವುದರಿಂದ ಮಗುವು ತಮ್ಮನ್ನು ಕನ್ನಡಿಯಲ್ಲಿ ಗುರುತಿಸಲು ಪ್ರಾರಂಭಿಸುತ್ತಾರೆ ಮತ್ತು ತಮ್ಮದೇ ಆದ ದೇಹದ ಭಾಗಗಳನ್ನು ಸೂಚಿಸುತ್ತಾರೆ.

 

 

ವಿಶಿಷ್ಟ ಕೌಶಲ್ಯಗಳು:

  • ನಿಯಮಿತ ವಾಡಿಕೆಯು ಬದಲಾದರೆ ಇಷ್ಟ ಪಡುವುದಿಲ್ಲ.
  • ಇತರ ಮಕ್ಕಳ ಭಾವನೆಗಳನ್ನು ಗುರುತಿಸಲು ಮತ್ತು ಪ್ರತಿಕ್ರಿಯಿಸಲು ಸಾಧ್ಯವಾಗುತ್ತದೆ.
  • ಹೊಸ ಜನರೊಂದಿಗೆ ಹೆಚ್ಚು ಆರಾಮದಾಯಕವಾಗಲು ಕಲಿಯುತ್ತಾನೆ.
  • ಸ್ವತಂತ್ರವಾಗಿರಲು ಇಷ್ಟಪಡುತ್ತಾರೆ ಆದರೆ ಹೊಸ ಅನುಭವಗಳ ಬಗ್ಗೆ ಆಸಕ್ತಿ ತೋರಿಸಬಹುದು.
  • ಅನುಮೋದನೆ ಮತ್ತು ಮೆಚ್ಚುಗೆ ಬಯಸುತ್ತಾರೆ.

 

ಉದಯೋನ್ಮುಖ ಕೌಶಲ್ಯಗಳೆಂದರೆ:

  • ಕೇಳಿದಾಗ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ.
  • ಇತರ ಜನರ ಭಾವನೆಗಳ ಕುರಿತು ಮಾತನಾಡುತ್ತಾರೆ.
  • ಹೊಸ ಚಟುವಟಿಕೆಗಳ ಬಗ್ಗೆ ಉತ್ಸುಕನಾಗುತ್ತಾನೆ.
  • ನಿರಾಶೆಗೊಂಡಾಗ ನೆಲ ತುಳಿಯುತ್ತಾನೆ.

 

31 ರಿಂದ 36 ತಿಂಗಳುಗಳ ನಡುವೆ ಮಕ್ಕಳಿಗೆ ಬೌದ್ಧಿಕ ಮತ್ತು ಮೋಟಾರು ಅಭಿವೃದ್ಧಿ ಮೈಲಿಗಲ್ಲುಗಳು

ವಯಸ್ಸಿನಲ್ಲಿ ಮೋಟಾರು ಬೆಳವಣಿಗೆ ವೇಗವಾಗಿ ಮುಂದುವರೆದಂತೆ, ಚೆಂಡು, ಬ್ಯಾಟ್ ಮುಂತಾದ ಕ್ರೀಡಾ ವಸ್ತುಗಳನ್ನು ಅರ್ಥಮಾಡಿಕೊಳ್ಳಲು ಮಕ್ಕಳು ಪ್ರಾರಂಭಿಸುತ್ತಾರೆ ಮತ್ತು ಅವುಗಳನ್ನು ಹೇಗೆ ಉಪಯೋಗಿಸಬೇಕು ಎಂದು ತಿಳಿಯುತ್ತಾರೆ.

 

ವಿಶಿಷ್ಟ ಕೌಶಲ್ಯಗಳೆಂದರೆ:

  • ಗಾತ್ರ ಮತ್ತು ಆಕಾರಗಳ ನಡುವಿನ ವ್ಯತ್ಯಾಸವನ್ನು ಹೇಳಬಲ್ಲ
  • ಕಲ್ಪನೆಗಳು ಮತ್ತು ಆಲೋಚನೆಗಳನ್ನು ನಟಿಸುತ್ತಾರೆ
  • ಮೂರು ವಸ್ತುಗಳವರೆಗೆ ಲೆಕ್ಕ ಮಾಡಬಹುದು
  • ಸದೃಶವಾದ ವಸ್ತುಗಳು ಹೊಂದಿಸುತ್ತಾರೆ ಮತ್ತು ವಿವಿಧ ರೀತಿಯ ವಸ್ತುಗಳನ್ನು ವಿಂಗಡಿಸುತ್ತಾರೆ
  • ಗುಂಪು ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಇಷ್ಟಪಡುತ್ತಾರೆ
  • ಸಮತೋಲನ ಕಂಬದ ಮೇಲೆ ನಡೆಯುತ್ತಾರೆ, ಏಣಿಯನ್ನು ಏರುತ್ತಾರೆ, ಸೈಕಲ್ ಅನ್ನು ತುಳಿಯಬಹುದು
  • ಪೆನ್ಸಿಲ್ ಅನ್ನು ಬರೆಯುವಂತೆ ಹಿಡಿಯಬಹುದು
  • ಕತ್ತರಿಗಳಿಂದ ಕಾಗದವನ್ನು ಕತ್ತರಿಸಬಹುದು
  • ಪುಸ್ತಕದ ಪುಟಗಳನ್ನು ತಿರುಗಿಸುತ್ತಾರೆ

 

ಉದಯೋನ್ಮುಖ ಕೌಶಲ್ಯಗಳು:

  • ಸಮಯಕ್ಕೆ ಸಂಬಂಧಿಸಿದ ಪದಗಳ ಬಳಕೆ (ಉದಾ: ನಿದ್ರೆಯ ಸಮಯ, ತಿನ್ನುವ ಸಮಯ)
  • ಗಾತ್ರದ ಆಧಾರದ ಮೇಲೆ ವಸ್ತುಗಳನ್ನು ಪ್ರತ್ಯೇಕಿಸಬಹುದು
  • ಉತ್ತಮ ನಿಖರತೆಯೊಂದಿಗೆ ಚೆಂಡನ್ನು ಅತಿಕ್ರಮಣವಾಗಿ ಎಸೆಯುತ್ತಾರೆ
  • ವೃತ್ತದ ಆಟಗಳಲ್ಲಿ ಅನೇಕ ಜನರೊಂದಿಗೆ ಭಾಗವಹಿಸುವಲ್ಲಿ ಆನಂದ ಪಡುತ್ತಾರೆ
  • ಅಂಕುಡೊಂಕಾದ ರೇಖಾಚಿತ್ರವನ್ನು ಬರೆದು ಅದು ಅವನ / ಅವಳ ಹೆಸರು ಎಂದು ಹೇಳುವ
  • ಬೆರಳು ಹಾಡುಗಳಲ್ಲಿ ಭಾಗವಹಿಸಲು ಇಷ್ಟಪಡುತ್ತಾರೆ
  • ಸ್ಥಾನ ಮತ್ತು ದಿಕ್ಕಿಗಳನ್ನು ಅರ್ಥ ಮಾಡಿಕೊಂಡು ಸರಳ ವಿನಂತಿಗಳಿಗೆ ಪ್ರತಿಕ್ರಿಯಿಸುತ್ತಾರೆ
  • 1000 ಪದಗಳ ಶಬ್ದಕೋಶವನ್ನು ಹೊಂದಿದೆ

 

3 ವರ್ಷ ವಯಸ್ಸಿನ  ಅಭಿವೃದ್ಧಿಯ ಚಾರ್ಟ್ ಮಗುವು ವೇಗವಾಗಿ ಬೆಳೆಯುವ  ಕಲಿಯುವಿಕೆ ಮತ್ತು ಪ್ರವೀಣರಾಗುವ ಕೌಶಲ್ಯಗಳನ್ನು ಹೊಂದಿದೆ. ಬೆಳವಣಿಗೆ ಚಾರ್ಟ್ ಅನ್ನು ಬಳಸಿಕೊಂಡು ನಿಮ್ಮ ಮಗು ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುದರ ಟ್ರ್ಯಾಕ್ ಅನ್ನು ಇರಿಸಿ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.