• Home  /  
  • Learn  /  
  • ಗರ್ಭಾವಸ್ಥೆಯಲ್ಲಿ ಉಂಟಾಗುವ ಮಧುಮೇಹ ಮತ್ತು ಹೈಪರ್ ಟೆನ್ಷನ್ ಗಳನ್ನು ತಡೆಯಲು ಈ ಆಹಾರಗಳನ್ನು ಸೇವಿಸಿ.
ಗರ್ಭಾವಸ್ಥೆಯಲ್ಲಿ ಉಂಟಾಗುವ ಮಧುಮೇಹ ಮತ್ತು ಹೈಪರ್ ಟೆನ್ಷನ್ ಗಳನ್ನು ತಡೆಯಲು ಈ ಆಹಾರಗಳನ್ನು ಸೇವಿಸಿ.

ಗರ್ಭಾವಸ್ಥೆಯಲ್ಲಿ ಉಂಟಾಗುವ ಮಧುಮೇಹ ಮತ್ತು ಹೈಪರ್ ಟೆನ್ಷನ್ ಗಳನ್ನು ತಡೆಯಲು ಈ ಆಹಾರಗಳನ್ನು ಸೇವಿಸಿ.

26 Jun 2019 | 1 min Read

Medically reviewed by

Author | Articles

ಗರ್ಭಾವಸ್ಥೆಯಲ್ಲಿ –  ಬೆಳೆಯುತ್ತಿರುವ ಹೊಟ್ಟೆ, ದಣಿಯುವುದು, ಮೂಡ್ ಸ್ವಿಂಗ್ ಗಳು, ನಿರ್ದಿಷ್ಟ ಆಹಾರಕ್ಕಾಗಿ ಕಡುಬಯಕೆಗಳು ಮತ್ತು ಇಷ್ಟಗಳು  ಎಲ್ಲಾ ಸಾಮಾನ್ಯ, ತಾತ್ಕಾಲಿಕ ಮತ್ತು ಹಾನಿಕಾರಕವಲ್ಲದ ಬದಲಾವಣೆಗಳಾಗಿವೆ. ಆದಾಗ್ಯೂ ನಿಮ್ಮ ಹೃದಯದ ಮೇಲೆ ದೀರ್ಘಕಾಲೀನ ಪರಿಣಾಮ ಬೀರುವ ಇತರ ಎರಡು ಬದಲಾವಣೆಗಳಿವೆ; ಅದು: ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡವಾಗುವ ಸಾಧ್ಯತೆ ಮತ್ತು ಮಧುಮೇಹ.

ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ ಬೆಳವಣಿಗೆಯನ್ನು ಪ್ರಿಕ್ಲಾಂಪ್ಸಿಯಾ ಮತ್ತು ಗರ್ಭಧಾರಣೆಯ ಸಂಬಂಧಿತ ಮಧುಮೇಹವನ್ನು ಗರ್ಭಾವಸ್ಥೆಯ ಮಧುಮೇಹ ಎಂದು ಕರೆಯಲಾಗುತ್ತದೆ.  ಇವೆರಡೂ ನಿಯಮಿತ ಅಧಿಕ ರಕ್ತದೊತ್ತಡ ಮತ್ತು ನಿಯಮಿತ ಮಧುಮೇಹಕ್ಕಿಂತ ವಿಭಿನ್ನವಾಗಿವೆ ಏಕೆಂದರೆ ಅವುಗಳು ಹೆರಿಗೆಯ ನಂತರ “ಗುಣಹೊಂದುತ್ತವೆ”

ಗರ್ಭಾವಸ್ಥೆಯಲ್ಲಿ ಪ್ರಿಕ್ಲಾಂಪ್ಸಿಯ ಅಥವಾ ಗರ್ಭಾವಸ್ಥೆಯ ಮಧುಮೇಹ ಕಾಣಿಸಿಕೊಂಡರೆ, ನಿಮ್ಮ ವೈದ್ಯರು ನಿಮ್ಮ ರಕ್ತದೊತ್ತಡ ಮತ್ತು ರಕ್ತದ ಸಕ್ಕರೆಯನ್ನು ನಿಯಮಿತವಾಗಿ ಟ್ರ್ಯಾಕ್ ಮಾಡುತ್ತಾರೆ ಮತ್ತು ಅದೇ ರೀತಿ ಮಾಡಲು ನಿಮ್ಮನ್ನು ಕೇಳುತ್ತಾರೆ.

ಆದಾಗ್ಯೂ, ಹೇಳಿದ ಎರಡೂ ಅಪಾಯಗಳನ್ನು ನಿರ್ವಹಿಸಲು ನಿಮಗೆ ಸಹಾಯ ಮಾಡುವಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ನೋಡೋಣ ಮತ್ತು ಹೇಗೆ ಎಂದು ಕಂಡುಹಿಡಿಯೋಣ ..

ಆಹಾರ ಮತ್ತು ಅಧಿಕ ರಕ್ತದೊತ್ತಡ

ಕ್ಯಾಲ್ಸಿಯಂ

ಗರ್ಭಧಾರಣೆಯ ಪ್ರೇರಿತ ಅಧಿಕ ರಕ್ತದೊತ್ತಡವನ್ನು ಹೊಂದಿರುವ ಮಹಿಳೆಯರಲ್ಲಿ ದಿನಕ್ಕೆ 1,000 ಮಿಲಿಗ್ರಾಂಗಳಷ್ಟು ಕ್ಯಾಲ್ಸಿಯಂ ಪೂರೈಕೆಯು ಡಯಾಸ್ಟೊಲಿಕ್ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಗರ್ಭಾವಸ್ಥೆಯಲ್ಲಿ ಕ್ಯಾಲ್ಸಿಯಂ ಪೂರಕಗಳು ಗರ್ಭಧಾರಣೆಯ ಅಧಿಕ ರಕ್ತದೊತ್ತಡ ಮತ್ತು ಪ್ರಿಕ್ಲಾಂಪ್ಸಿಯವನ್ನು ಕಡಿಮೆಗೊಳಿಸುತ್ತದೆ. ನಿಮ್ಮಆಹಾರ ಪದ್ಧತಿಯೊಂದಿಗೆ ಕ್ಯಾಲ್ಸಿಯಂಪೂರಕಗಳನ್ನು ತೆಗೆದು ಕೊಳ್ಳುವ ಐ ಮೊದಲು ನಿಮ್ಮ ವೈದ್ಯರೊಂದಿಗೆ ಮಾತನಾಡಿ.

ಸೋಡಿಯಂ ಮಾರ್ಗಸೂಚಿಗಳು

ನೀವು ಎಡಿಮಾವನ್ನು ಹೊಂದಿದ್ದರೆ ಮತ್ತು ಪ್ರಿಕ್ಲಾಂಪ್ಸಿಯಾ ಅಥವಾ ಎಕ್ಲಾಂಪ್ಸಿಯ ಎಂದು  ರೋಗನಿರ್ಣಯ ಮಾಡಿದರೆ, ನಿಮ್ಮ ಉಪ್ಪಿನ ಸೇವನೆಯನ್ನು ದಿನಕ್ಕೆ 2 ಗ್ರಾಂಗೆ ಸೀಮಿತಗೊಳಿಸುವುದು ಊತಕ್ಕೆ ಸಹಾಯ ಮಾಡಬಹುದು.

ಕ್ಯಾಲೋರಿಗಳು, ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್ ಮತ್ತು ಫ್ಯಾಟ್

ನಿಮ್ಮ ಗರ್ಭಧಾರಣೆಯ ಉದ್ದಕ್ಕೂ ಸಾಕಷ್ಟು ಕ್ಯಾಲೋರಿಗಳು ಮತ್ತು ಪ್ರೋಟೀನ್ಗಳ ಸಮತೋಲಿತ ಆಹಾರವನ್ನು ಸೇವಿಸುವುದು ಮುಖ್ಯ.

ತಿನ್ನಬಾರದಂತಹ ಆಹಾರಗಳು

ಗರ್ಭಾವಸ್ಥೆಯಲ್ಲಿ, ಮಹಿಳೆಯರು ಆಹಾರದಿಂದ ಉಂಟಾಗುವ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ. ಲಿಸ್ಟಿರಿಯಾದೊಂದಿಗೆ ಕಲುಷಿತವಾಗಿರುವಂತಹ ಆಹಾರಗಳನ್ನು ಸೇವಿಸಬೇಡಿ, ಉದಾಹರಣೆಗೆ ಮೃದುವಾದ ಚೀಸ್ಗಳಾದ ಬ್ರೀ, ಫೆಟಾ ಮತ್ತು ಮೆಕ್ಸಿಕನ್ ಮೃದುವಾದ ಚೀಸ್ ಮತ್ತು ಡೆಲಿ ಮಾಂಸಗಳು.

ಸಾಲ್ಮೊನೆಲ್ಲಾವನ್ನು ತಡೆಗಟ್ಟಲು ಕಚ್ಚಾ ಅಥವಾ ಅರ್ಧಂಬರ್ಧ ಬೆಂದ ಮೊಟ್ಟೆಗಳು, ಮಾಂಸ, ಕೋಳಿ ಮತ್ತು ಮೀನುಗಳನ್ನು ತಿನ್ನಬೇಡಿ. ಶಾರ್ಕ್,ಸ್ವಾರ್ಡ ಫಿಶ್ ಮತ್ತು ಮಕ್ಕೆರೆಲ್ ನಂತಹ  ಪಾದರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಮೀನುಗಳನ್ನು ಸೇವಿಸಬೇಡಿ ಏಕೆಂದರೆ ಪಾದರಸವು ಮಗುವಿನ ಬೆಳವಣಿಗೆಯ ನರವ್ಯೂಹವನ್ನು ಹಾನಿಗೊಳಿಸುತ್ತದೆ.

ಪಾಶ್ಚರೀಕರಿಸದ ರಸಗಳು ಮತ್ತು ಕಚ್ಚಾ ಮೊಳಕೆ ಬರಿಸಿದ ಕಾಳುಗಳು ಕೂಡ ಆಹಾರದಿಂದ ಉಂಟಾಗುವ ಕಾಯಿಲೆಗೆ ಕಾರಣವಾಗಬಹುದು.

ಗರ್ಭಾವಸ್ಥೆಯ ಮಧುಮೇಹದಲ್ಲಿ ತೆಗೆದುಕೊಳ್ಳಬೇಕಾದ ಆಹಾರ

ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಮೂಲಕ ಅಪಾಯಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಸಮತೋಲಿತ ಊಟವನ್ನು ರಚಿಸಲು ಸರಿಯಾದ ಊಟ ಯೋಜನೆ ನಿಮಗೆ ಸಹಾಯ ಮಾಡುತ್ತದೆ. ಪೌಷ್ಟಿಕಾಂಶದ ವಿಷಯಗಳಲ್ಲಿ ಹೋಲಿಕೆಗಳನ್ನು ಆಧರಿಸಿ ಪರಿಚಿತ ಗುಂಪುಗಳಾಗಿ ಆಹಾರವನ್ನು ವಿಭಜಿಸಿ, ಮತ್ತು ಪ್ರತಿ ಗುಂಪಿನಿಂದ ನಿರ್ದಿಷ್ಟ ಸಂಖ್ಯೆಯ ಪ್ರಮಾಣದಲ್ಲಿ ಬಿಡಿಸಿಕೊಂಡು ನಿಮ್ಮ ಕ್ಯಾಲೋರಿ ಅಗತ್ಯಗಳನ್ನು ಆಧರಿಸಿ ಪ್ರತಿ ದಿನವೂ ತಿನ್ನಿರಿ.

ಕಾರ್ಬೋಹೈಡ್ರೇಟ್ಗಳು

ಉತ್ತಮ ರಕ್ತದ ಸಕ್ಕರೆಯ ನಿಯಂತ್ರಣಕ್ಕಾಗಿ, ನಿಮ್ಮ ಒಟ್ಟು ಕ್ಯಾಲೋರಿ ಅಗತ್ಯಗಳಲ್ಲಿ ಶೇಕಡಾ 35 ರಿಂದ 40 ರಷ್ಟು ನಿಮ್ಮ ಕಾರ್ಬೋಹೈಡ್ರೇಟ್ ಸೇವನೆಯನ್ನು ಮಿತಿಗೊಳಿಸಿ.  ನೆನಪಿಟ್ಟುಕೊಳ್ಳಿ ಕಾರ್ಬೋಹೈಡ್ರೇಟ್ ಗಳು ಕೇವಲ ಸಂಸ್ಕರಿಸಿದ ಸಕ್ಕರೆಗಳಿರುವ ಪಾನೀಯಗಳಾದ ಸಾಫ್ಟ್ ಡ್ರಿಂಕ್ ಗಳಂತಹದರಲ್ಲಿ ಮಾತ್ರವಲ್ಲದೇ ಹಾಲು, ಹಣ್ಣುಗಳು, ಮೊಸರು ಮುಂತಾದ ನೈಸರ್ಗಿಕ ಸಕ್ಕರೆಗಳನ್ನು ಒಳಗೊಂಡಿರುವ ಆಹಾರದಲ್ಲಿಯೂ ಕಂಡುಬರುತ್ತವೆ.

ಬಿಳಿ ಬ್ರೆಡ್ ಅಥವಾ ನೂಡಲ್ಸ್ ನಂತಹ ಸಂಸ್ಕರಿಸಿದ ಹಿಟ್ಟಿನ ಮೂಲಗಳನ್ನು ತಿನ್ನುವುದನ್ನು ತಪ್ಪಿಸಿ. ಬದಲಿಗೆ, ಈ ಆಹಾರಗಳನ್ನು ಸಂಪೂರ್ಣ-ಧಾನ್ಯ ಮತ್ತು ಧಾನ್ಯಗಳೊಂದಿಗೆ ಬದಲಾಯಿಸಿ. ವಿವಿಧ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಿ.

ಹಣ್ಣು ಮತ್ತು ತರಕಾರಿ ರಸದ ಸೇವನೆಯನ್ನು ಮಿತಿಗೊಳಿಸಿ, ಇವುಗಳಲ್ಲಿ ಬಹಳಷ್ಟಕ್ಕೆ ಹೆಚ್ಚುಸಕ್ಕರೆಯನ್ನು ಸೇರಿಸಲಾಗಿರುತ್ತದೆ.

ನೀವು ಗರ್ಭಾವಸ್ಥೆಯ ಮಧುಮೇಹವನ್ನು ಹೊಂದಿರುವಾಗ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಲು ಹಾಲು ಮತ್ತು ಹಾಲಿನ ಉತ್ಪನ್ನಗಳು ಉತ್ತಮ ಕಾರ್ಬೋಹೈಡ್ರೇಟ್ಗಳು. ಹೆಚ್ಚಿನ ಪ್ರಮಾಣದ ಫ್ರಕ್ಟೋಸ್ ಕಾರ್ನ್ ಸಿರಪ್ನೊಂದಿಗೆ ರುಚಿ ಬೆರೆಸಿದ ಹಾಲು ಮತ್ತು ಮೊಸರು ಮುಂತಾದ ಹೆಚ್ಚಿನ ಸಕ್ಕರೆಯೊಂದಿರುವ ಆಹಾರದ ಬದಲಾಗಿ ಬೆಣ್ಣೆ, ಹೊಸದಾಗಿ ಸೆಟ್ ಮಾಡಿದ ಮೊಸರುಗಳು ಅಥವಾ ಹಣ್ಣಿನ ಸ್ಮೂಥಿಗಳಂಥ ಈ ಆಹಾರಗಳ ಆರೋಗ್ಯಕರ ಕಡಿಮೆ-ಕೊಬ್ಬು ಪ್ರಭೇದಗಳನ್ನು ಆರಿಸಿ.

ಪ್ರೋಟೀನ್ಗಳು

ಮೊಟ್ಟೆ, ಬೀನ್ಸ್, ಸೋಯಾ ಮತ್ತು ತೋಫುಗಳ ಜೊತೆಗೆ ತೆಳುವಾದ ಮಾಂಸ, ಕೋಳಿ ಮತ್ತು ಮೀನುಗಳನ್ನು ಆಯ್ಕೆ ಮಾಡಿ  ಅವು ಉತ್ತಮ ಪ್ರೋಟೀನ್ ಆಯ್ಕೆಗಳು. ಹಾಲು ಉತ್ಪನ್ನಗಳು ಮತ್ತು ಗಿಣ್ಣು ಸಹ ಸೇರಿಸಿಕೊಳ್ಳಬಹುದು. ನಿಮ್ಮ ವೈದ್ಯರು ನಿಮ್ಮ ಅತಿ ತೂಕದ ಹೆಚ್ಚಳದ ಬಗೆಗಾಗಿ ಹೆಚ್ಚು ಕಾಳಜಿಯನ್ನು ಹೊಂದಿದ್ದರೆ ಕಡಿಮೆ ಕೊಬ್ಬಿನ ಆವೃತ್ತಿಗಳನ್ನು ಆರಿಸಿ. ಪ್ರೋಟೀನ್ ಆಹಾರಗಳಾದ ಕೊಬ್ಬಿನಾಂಶ ಜಾಸ್ತಿ ಇರುವ ಮಾಂಸ ಮತ್ತು ಮೀನು ಮತ್ತು  ಹೆಚ್ಚಿನ ಪಾದರಸದ ಮಟ್ಟಗಳಿರುವ ಸಮುದ್ರಾಹಾರಗಳಾದ ಕತ್ತಿಮೀನು ಮತ್ತು ರಾಜ ಮ್ಯಾಕೆರೆಲ್ನೊ.

ಕೊಬ್ಬುಗಳು ಮತ್ತು ಎಣ್ಣೆಗಳು

ಗರ್ಭಧಾರಣೆಯ ಮಧುಮೇಹಕ್ಕೆ ಆಹಾರವು ಶೇಕಡಾ 35 ರಿಂದ 40 ರಷ್ಟು ಕೊಬ್ಬನ್ನು ಒಳಗೊಂಡಿರಬೇಕು. ಆಹಾರದಲ್ಲಿನ ಹೆಚ್ಚಿನ ಕೊಬ್ಬಿನಾಂಶದಿಂದಾಗಿ, ಒಟ್ಟಾರೆ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಹೆಚ್ಚು ಆರೋಗ್ಯಕರ ಮೊನೊ ಮತ್ತು ಪಾಲಿಅನ್ಸಾಚುರೇಟೆಡ್ ಕೊಬ್ಬುಗಳನ್ನು ಸೇರಿಸಿಕೊಳ್ಳುವ ಗುರಿಯನ್ನು ಹೊಂದಿ. ನಟ್ಸ್, ಆವಕಾಡೋಸ್, ಕ್ಯಾನೋಲ ಮತ್ತು ಆಲಿವ್ ಎಣ್ಣೆ ಇವೆಲ್ಲವೂ ಈ ಆರೋಗ್ಯಕರ ಕೊಬ್ಬಿನ  ಮೂಲಗಳಾಗಿವೆ.

ಒಟ್ಟು ಕ್ಯಾಲೋರಿಗಳಲ್ಲಿ 10 ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಸ್ಯಾಚುರೇಟೆಡ್ ಕೊಬ್ಬನ್ನು ಮಿತಿಗೊಳಿಸಿ. ಈ ರೀತಿಯ ಕೊಬ್ಬು  ಸಿಹಿತಿಂಡಿ, ಹಾಲು, ಬೇಕನ್, ಸಾಸೇಜ್, ಕೆನೆ ಮತ್ತು ಬೆಣ್ಣೆಯಲ್ಲಿ ಕಂಡುಬರುತ್ತದೆ. ಲೇಬಲ್ಗಳನ್ನು ಓದುವುದು ಕೂಡಾ ಮುಖ್ಯವಾಗಿದೆ – ನಿಮ್ಮ ಆಹಾರದಲ್ಲಿ ಅನಾರೋಗ್ಯಕರ ಟ್ರಾನ್ಸ್ ಕೊಬ್ಬನ್ನು ಕಡಿಮೆ ಮಾಡಲು ಘಟಕಾಂಶವಾಗಿ “ಭಾಗಶಃ ಹೈಡ್ರೋಜನೀಕರಿಸಿದ ಎಣ್ಣೆ” ಹೊಂದಿರುವ ಆಹಾರವನ್ನು ತಪ್ಪಿಸಿ.

ಊಟದ ಸಮಯಗಳು

ನೀವು ಗರ್ಭಾವಸ್ಥೆಯ ಮಧುಮೇಹವನ್ನು ಹೊಂದಿರುವಾಗ, ನಿಮ್ಮ ರಕ್ತದ ಸಕ್ಕರೆಗಳನ್ನು ನಿಯಂತ್ರಿಸುವುದು ಊಟದ ಸಮಯದಿಂದ ಪ್ರಭಾವಿತವಾಗಿರುತ್ತದೆ. ಉತ್ತಮ ರಕ್ತದ ಸಕ್ಕರೆ ನಿಯಂತ್ರಣಕ್ಕಾಗಿ, ದಿನಕ್ಕೆ ಮೂರು ಸಾಮಾನ್ಯ ಊಟ ಮತ್ತು ನಾಲ್ಕರಿಂದ ಐದು ಬಾರಿ ಲಘು ತಿಂಡಿಗಳನ್ನು ತಿನ್ನಿ. ದಿನದಲ್ಲಿ ಊಟವನ್ನು ತಪ್ಪಿಸಬೇಡಿ. ತಾತ್ತ್ವಿಕವಾಗಿ, ಪ್ರತಿ ಊಟ ಅಥವಾ ಲಘು ತಿಂಡಿಗಳು ಕಾರ್ಬೊಹೈಡ್ರೇಟ್, ಪ್ರೋಟೀನ್ ಮತ್ತು ಕೊಬ್ಬುಗಳನ್ನು ಸಮತೋಲಿತ ಪ್ರಮಾಣದಲ್ಲಿ ಹೊಂದಿರಬೇಕು, ಬರೀ ಕಾರ್ಬೋಹೈಡ್ರೇಟ್ಗಳು ಅಥವಾ ಬರೀ ಪ್ರೋಟೀನ್ ಗಳು  ಮಾತ್ರವಲ್ಲ, ನಿಮ್ಮ ರಕ್ತದ ಸಕ್ಕರೆ ಮಟ್ಟವನ್ನು ಸಮತೋಲನದಲ್ಲಿರಿಸಲು ಸಹಾಯ ಮಾಡುತ್ತದೆ.

ಗರ್ಭಾವಸ್ಥೆಯ ಮಧುಮೇಹದಿಂದ ಆಗಾಗ್ಗೆ ಬೆಳಿಗ್ಗೆ ರಕ್ತದ ಸಕ್ಕರೆ ಹೆಚ್ಚಿದೆ ಎಂದು ನೆನಪಿಡಿ, ಆದ್ದರಿಂದ ನಿಮ್ಮ ವೈದ್ಯರು ಅಥವಾ ಆಹಾರ ತಜ್ಞರೊಂದಿಗೆ ಉಪಹಾರ ಮತ್ತು ಬೆಳಿಗ್ಗೆಯ ಲಘು ತಿಂಡಿ ಯಲ್ಲಿ ಕಾರ್ಬೊಹೈಡ್ರೇಟ್ ಪ್ರಮಾಣವನ್ನು ಸೀಮಿತಗೊಳಿಸಬೇಕೆ ಎಂದು ಪರೀಕ್ಷಿಸಿ.

ಮಾದರಿ ಮೆನು

ಬೆಳಗಿನ ತಿಂಡಿ: ಒಂದು ಟೋಸ್ಟ್ ಮಾಡಿದ ಗೋಧಿ ಟೋಸ್ಟ್,2 ಟೀಸ್ಪೂನ್ ಮಾರ್ಗರೀನ್ ಜೊತೆ, ಎರಡು ಸ್ಕ್ರಾಂಬಲ್ಡ್ ಮೊಟ್ಟೆಯ ಬಿಳಿ ಬಾಗ / ಹಸಿರು ಬಟಾಣಿ, ಕ್ಯಾರೆಟ್, ಟೊಮ್ಯಾಟೊ, ಈರುಳ್ಳಿಗಳಿಂದ ಕೂಡಿದೆ ಒಂದು ಬಟ್ಟಲು ಅವಲಕ್ಕಿಮತ್ತು ಕೆನೆ ತೆಗೆದ ನಾನ್ಫ್ಯಾಟ್ ಹಾಲು 1 ಕಪ್.

ಭೋಜನ:   ಒಂದು ಬೌಲ್ ಗಟ್ಟಿಯಾದ ದಾಲ್ / ಮಸೂರ ಅಥವಾ ಚಿಕನ್ / ಮಟನ್ ಕರಿ, ಎರಡು ಗೋಧಿ ಚಪಾತಿಗಳು / ಯಾವುದೇ ಧಾನ್ಯದ ರೊಟ್ಟಿಗಳು, ತರಕಾರಿ ಪಲ್ಯ, ಸಲಾಡ್, ಸಣ್ಣ ಬೌಲ್ ಫ್ಯಾಟಿಲ್ಲದ , ಸಕ್ಕರೆಯ ಮುಕ್ತ ಮೊಸರುಗಳನ್ನು ಸೇರಿಸಿ

ಮಧ್ಯಾಹ್ನ ಸ್ನ್ಯಾಕ್: ಕಡಿಮೆ ಕೊಬ್ಬಿನ ಮೊಸರು, 2 ಟೀಸ್ಪೂನ್ ಒಣದ್ರಾಕ್ಷಿ ಹಾಗು ಕೊಬ್ಬು ಮುಕ್ತ ಖಕ್ರಾ ತಿನ್ನಿರಿ.

ಭೋಜನ: ದಾಲ್ ಜೊತೆ ಬೇಯಿಸಿದ ಕಂದು ಅಕ್ಕಿ ಅನ್ನ 2 ಕಪ್ಗಳು, ಬೇಯಿಸಿದ ಪಾಲಕ 1 ಕಪ್, ಸಣ್ಣ ಕಿತ್ತಳೆ ,ಸಣ್ಣ ತುಂಡು ಸುಟ್ಟ ಮೀನು / ಕೋಳಿ .

ಸಂಜೆ ಸ್ನ್ಯಾಕ್: 1 ಕಪ್ ಹಾಲು ಮತ್ತು ಒಂದು ಹಣ್ಣು

ಮನೆಯಲ್ಲಿ ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು  ನಿಯಮಿತ ಮಧ್ಯಂತರಗಳಲ್ಲಿ ಸೇವಿಸುವುದು ನಿಮ್ಮ ರಕ್ತದಲ್ಲಿನ ಸಕ್ಕರೆ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.