ಈ ವಾರ ನಿಮ್ಮ ಮಗು ಎಷ್ಟು ದೊಡ್ಡದಾಗಿದೆ?

ಈ ವಾರ ನಿಮ್ಮ ಮಗು ಎಷ್ಟು ದೊಡ್ಡದಾಗಿದೆ?

26 Jun 2019 | 1 min Read

Priya Iyer

Author | 4 Articles

ನಿಮ್ಮ ಮಗುವಿನ ಗಾತ್ರವನ್ನು ಸುಲಭವಾಗಿ ಗುರುತಿಸಬಹುದಾದ ಹಣ್ಣುಗಳು, ದ್ವಿದಳ ಧಾನ್ಯಗಳು ಮತ್ತು ತರಕಾರಿಗಳಿಗೆ ಹೋಲಿಸಿ ನಾವು ಒಂದು ಪಟ್ಟಿಯನ್ನು ತಯಾರಿಸಿದ್ದೇವೆ. ಈ ಫೋಟೋಗಳು ನಿಮ್ಮ ಮಗುವಿನ ಗಾತ್ರವನ್ನು ಕಂಡುಹಿಡಿಯಲು ನಿಮಗೆ ಸಹಾಯ ಮಾಡುತ್ತದೆ.

ಪ್ರೆಗ್ನೆನ್ಸಿ ವೀಕ್ 4:

ಅದು 32 ಜೀವಕೋಶಗಳ ಒಂದು ಚೆಂಡು, ಗಸಗಸೆ ಬೀಜ (ಖುಸ್ ಖುಸ್) ಗಾತ್ರವಿರುತ್ತದೆ. ಈ ಹಂತದಲ್ಲಿ ಕೋಶಗಳು ನಿಮ್ಮ ಮಗುವಿನ ಆಂತರಿಕ ಅಂಗಗಳು ಮತ್ತು ಚರ್ಮ ಅಭಿವೃದ್ಧಿಗೊಳ್ಳುವ ಮೂರು ವಿಭಿನ್ನ ಪದರಗಳಾಗಿ ವಿಭಜಿಸುತ್ತವೆ.

ಪ್ರೆಗ್ನೆನ್ಸಿ ವೀಕ್ 5:

ಕೋಶಗಳ ಚೆಂಡು ಈಗ ಟ್ಯಾಡ್ಪೋಲ್ ಅನ್ನು ಹೋಲುತ್ತದೆ ಮತ್ತು ಆಪಲ್ ಬೀಜದಷ್ಟು ದೊಡ್ಡದಾಗಿದೆ. ಮೆದುಳು,  ಬೆನ್ನುಹುರಿ, ಹೃದಯ, ಮತ್ತು ರಕ್ತನಾಳಗಳ ಸೃಷ್ಟಿ ಈಗಾಗಲೇ ಉತ್ತಮವಾಗಿ ನಡೆಯುತ್ತಿದೆ.

ಪ್ರೆಗ್ನೆನ್ಸಿ ವೀಕ್ 6:

ಆರು ವಾರಗಳವರೆಗೆ, ನಿಮ್ಮ ಮಗು ಹಸಿ ಬಟಾಣಿ ಗಾತ್ರವನ್ನು ಹೊಂದಿದೆ

ಪ್ರೆಗ್ನೆನ್ಸಿ ವೀಕ್ 7:

ಕಳೆದ ವಾರಕ್ಕೆ ಹೋಲಿಸಿದರೆ ನಿಮ್ಮ ಮಗುವಿನ ಗಾತ್ರವು ದ್ವಿಗುಣ ವಾಗಿದ್ದು, ಇದೀಗ ಅದು ಬ್ಲೂಬೆರ್ರಿ ಗಾತ್ರದಲ್ಲಿದೆ.

ಪ್ರೆಗ್ನೆನ್ಸಿ ವೀಕ್ 8:

ಈಗ ನಿಮ್ಮ ಮಗು ರಾಸ್ಪ್ಬೆರಿಗಿಂತ ದೊಡ್ಡದಾಗಿದೆ. ಸುಮಾರು 1 ಗ್ರಾಂ ತೂಗುತ್ತದೆ.

ಪ್ರೆಗ್ನೆನ್ಸಿ ವೀಕ್ 9:

9ನೇ ವಾರದ ಹೊತ್ತಿಗೆ, ನಿಮ್ಮ ಮಗು ಹಸಿರು ಆಲಿವ್ನ ನಿಖರವಾದ ಗಾತ್ರದಲ್ಲಿರುತ್ತದೆ .

ಪ್ರೆಗ್ನೆನ್ಸಿ ವೀಕ್ 10:

ನಿಮ್ಮ ಮಗುವು ಈಗ 4ಗ್ರಾಂ ತೂಕವಿರುತ್ತದೆ ಮತ್ತು ಗಾತ್ರವನ್ನು ಕುಮ್ವ್ಕಾಟ್ಗೆ ಹೋಲಿಸಬಹುದು.

ಪ್ರೆಗ್ನೆನ್ಸಿ ವೀಕ್ 11:

ನಿಮ್ಮ ಮಗು ಈಗ ನಿಂಬೆ ಕಾಯಿಯಷ್ಟು  ದೊಡ್ಡದಾಗಿದೆ ಮತ್ತು ಸುಮಾರು 7 ಗ್ರಾಂ ತೂಗುತ್ತದೆ.

ಪ್ರೆಗ್ನೆನ್ಸಿ ವೀಕ್ 12:

ನಿಮ್ಮ ಮಗುವು ಪ್ಲಮ್ ನ ಗಾತ್ರದಷ್ಟು ಸುಮಾರು 14 ಗ್ರಾಂ ತೂಗುತ್ತದೆ.

ಪ್ರೆಗ್ನೆನ್ಸಿ ವೀಕ್ 13:

ನಿಮ್ಮ ಮಗುವು ಈ ವಾರ ಒಂದು ನಿಂಬೆ ಹಣ್ಣಿನ ಗಾತ್ರ ಮತ್ತು ಅವರ ವೋಕಲ್ ಕಾರ್ಡ್ ಅಭಿವೃದ್ಧಿಹೊಂದಲು ಪ್ರಾರಂಭಿಸುತ್ತದೆ.

ಪ್ರೆಗ್ನೆನ್ಸಿ ವೀಕ್ 14:

ನೀವು ಎರಡನೇ ತ್ರೈಮಾಸಿಕಕ್ಕೆ  ಪ್ರವೇಶಿಸುವಾಗ, ನಿಮ್ಮ ಮಗು ನೆಕ್ಟರಿನ್ ಗಾತ್ರದಲ್ಲಿರುತ್ತದೆ.

ಪ್ರೆಗ್ನೆನ್ಸಿ ವೀಕ್ 15:

ನಿಮ್ಮ ಮಗು ಈಗ ಆಪಲ್ನ ಗಾತ್ರವಾಗಿದ್ದು, ಚಲಿಸಲು ಪ್ರಾರಂಭಿಸುತ್ತದೆ, ಆದರೆ ಮುಂದಿನ ಕೆಲವು ವಾರಗಳವರೆಗೆ ಇದನ್ನು ನೀವು ಅನುಭವಿಸಲಾಗದೆ ಇರಬಹುದು.

ಪ್ರೆಗ್ನೆನ್ಸಿ ವೀಕ್ 16:

ಈ ವಾರ ನಿಮ್ಮ ಮಗು ಒಂದು ಆವಕಾಡೊವನ್ನು ಅಳೆಯುತ್ತದೆ ಮತ್ತು ಸುಮಾರು 100 ಗ್ರಾಂ ತೂಗುತ್ತದೆ.

ಪ್ರೆಗ್ನೆನ್ಸಿ ವೀಕ್ 17:

ನಿಮ್ಮ ಮಗುವು 140 ಗ್ರಾಂ ತೂಗುತ್ತದೆ ಮತ್ತು ಈಗ ಪಿಯರ್ ಹಣ್ಣಿನ ಗಾತ್ರವಿದೆ.

ಪ್ರೆಗ್ನೆನ್ಸಿ ವೀಕ್ 18:

ನಿಮ್ಮ ಮಗು ಈಗ ದೊಣ್ಣೆ ಮೆಣಸಿನಕಾಯಿ ಗಾತ್ರವಾಗಿದೆ ಮತ್ತು ಅವಳ ಬೆರಳುಗಳು ಈಗ ಬೆರಳ ಅಚ್ಚುಗಳನ್ನು ಹೊಂದಿರುತ್ತದೆ.

ಪ್ರೆಗ್ನೆನ್ಸಿ ವೀಕ್ 19:

ನಿಮ್ಮ ಮಗುವು ಈಗ ಸುಮಾರು 240 ಗ್ರಾಂ ತೂಕ ಮತ್ತು ಟೊಮೆಟೊದಂತೆ ದೊಡ್ಡದಾಗಿದೆ.

ಪ್ರೆಗ್ನೆನ್ಸಿ ವೀಕ್ 20:

ನಿಮ್ಮ ಮಗು ಈಗ ಆರ್ಟಿಚೋಕ್ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 21:

ನಿಮ್ಮ ಮಗು ಈಗ ಕ್ಯಾರೆಟ್ ಗಾತ್ರ ಮತ್ತು 360 ಗ್ರಾಂ ತೂಕವಿರುತ್ತದೆ.

ಪ್ರೆಗ್ನೆನ್ಸಿ ವೀಕ್ 22:

ನಿಮ್ಮ ಮಗು ಈಗ ಪಪ್ಪಾಯದ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 23:

ನಿಮ್ಮ ಮಗು ಈಗ ಚಕೋತ ಹಣ್ಣಿನ ಗಾತ್ರವಾಗಿದೆ, ಮಗುವಿನ ಶ್ವಾಸಕೋಶಗಳು ಈ ಹಂತದಲ್ಲಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತವೆ.

ಪ್ರೆಗ್ನೆನ್ಸಿ ವೀಕ್ 24:

ನಿಮ್ಮ ಮಗು ಈಗ ಜೋಳದ ಕಿವಿಯ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 25:

ನಿಮ್ಮ ಮಗು ಈಗ ರುಟಬಾಗಾದ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 26:

ನಿಮ್ಮ ಮಗು ಈಗ ಲೆಟ್ಯೂಸ್ನ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 27:

ನಿಮ್ಮ ಮಗು ಈಗ ಹೂಕೋಸಿನ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 28:

ನಿಮ್ಮ ಮಗು ಈಗ ದಪ್ಪ ಬದನೆಕಾಯಿ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 29:

ನಿಮ್ಮ ಮಗು ಈಗ ಆಕ್ರಾನ್ ಸ್ಕ್ವ್ಯಾಷ್ನ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 30:

ನಿಮ್ಮ ಮಗು ಈಗ ಎಲೆಕೋಸು ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 31:

ನಿಮ್ಮ ಮಗು ಈಗ ತೆಂಗಿನಕಾಯಿ ಗಾತ್ರವಾಗಿದೆ.

 

ಪ್ರೆಗ್ನೆನ್ಸಿ ವೀಕ್ 32:

ನಿಮ್ಮ ಮಗು ಈಗ ಜಿಕಮಾದ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 33:

ನಿಮ್ಮ ಮಗು ಈಗ ಅನಾನಸ್ನ ಗಾತ್ರವಾಗಿದೆ ಮತ್ತು ಸುಮಾರು 1.9 ಕೆಜಿ ತೂಕವಿರುತ್ತದೆ

ಪ್ರೆಗ್ನೆನ್ಸಿ ವೀಕ್ 34:

ನಿಮ್ಮ ಮಗು ಈಗ ಬಟರ್ ನಟ್  ಸ್ಕ್ವ್ಯಾಷ್ನ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 35:

ನಿಮ್ಮ ಮಗು ಈಗ ನಿಮ್ಮ ಗರ್ಭಕೋಶದಲ್ಲಿ ತಲೆಕೆಳಗಾಗಿ, ಒಂದು ಹನಿ ಡ್ಯೂ ಮೆಲನ್ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 36:

ನಿಮ್ಮ ಮಗು ಈಗ ಸ್ವಿಸ್ ಚಾರ್ಡ ಗಾತ್ರವಾಗಿದೆ ಮತ್ತು 2.6 ಕಿ.ಗ್ರಾಂ ತೂಗುತ್ತದೆ.

ಪ್ರೆಗ್ನೆನ್ಸಿ ವೀಕ್ 37:

ನಿಮ್ಮ ಮಗು ಈಗ ಚಳಿಗಾಲದ ಕಲ್ಲಂಗಡಿ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 38:

ನಿಮ್ಮ ಮಗು ಈಗ ರೂಬರ್ಬ ಹಣ್ಣುಗಳ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 39:

ನಿಮ್ಮ ಮಗು ಈಗ ಮಿನಿ ಕಲ್ಲಂಗಡಿ ಗಾತ್ರವಾಗಿದೆ.

ಪ್ರೆಗ್ನೆನ್ಸಿ ವೀಕ್ 40:

ನಿಮ್ಮ ಮಗು ಈಗ ಕುಂಬಳಕಾಯಿಯ ಗಾತ್ರವಾಗಿದೆ ಮತ್ತು 3ಕೆಜಿ ಗಿಂತ ಕಡಿಮೆ ತೂಕವಿರುತ್ತದೆ.

ಗಮನಿಸಿ: ಆರೋಗ್ಯಕರ ಭಾರತೀಯ ಶಿಶುಗಳ ಜನನ ತೂಕವು 2.5ಕೆಜಿ  ಮತ್ತು 2.9ಕೆಜಿ ನಡುವೆ  ಇರುತ್ತದೆ.

 

#babychakrakannada

A

gallery
send-btn

Related Topics for you