ಗ್ರಹಣ ಕಾಲದಲ್ಲಿ ಒಬ್ಬ ಗರ್ಭಿಣಿ ಸ್ತ್ರೀ ಹೊರಗೆ ಹೋದಲ್ಲಿ ಏನಾದರೂ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದೆ?

cover-image
ಗ್ರಹಣ ಕಾಲದಲ್ಲಿ ಒಬ್ಬ ಗರ್ಭಿಣಿ ಸ್ತ್ರೀ ಹೊರಗೆ ಹೋದಲ್ಲಿ ಏನಾದರೂ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದೆ?

ಗರ್ಭಿಣಿಯರು ಗ್ರಹಣವನ್ನು ನೋಡಿದರೆ ಕೆಡುಕಾಗುತ್ತದೆಯೇ?


ಹಿಂದಿನ ಕಾಲದಿಂದಲು, ಭಾರತದಲ್ಲಿ ಗರ್ಭಿಣಿ ಸ್ತ್ರೀಯರು ಗ್ರಹಣದ ಸಮಯದಲ್ಲಿ ಮನೆಯಿಂದ ಹೊರಗೆ ಹೋಗಬಾರದು ಅಥವಾ ಗ್ರಹಣವನ್ನು ನೋಡಬಾರದು ಎಂದು ಎಚ್ಚರಿಸಲಾಗುತ್ತದೆ. ಹಾಗೇನಾದರು ನೋಡಿದರೆ, ಹುಟ್ಟುವ ಮಗುವಿನಲ್ಲಿ ಜನ್ಮ ದೋಷಗಳಾದ ಸೀಳು ತುಟಿ, ಸೀಳು ಅಂಗುಳ ಇತ್ಯಾದಿ ಉಂಟಾಗುವ ಸಾಧ್ಯತೆಗಳಿರುತ್ತವೆ ಎಂದು ಭಾವಿಸುತ್ತಾರೆ. ಆದರೆ ಇದು ನಿಜವೇ?ಗ್ರಹಣವನ್ನು ಗರ್ಭಿಣಿಯರು ನೋಡಿದರೆ ಅಪಾಯವೇ?


ಗರ್ಭಿಣಿಯರಲ್ಲಿ ಗ್ರಹಣದಿಂದ ಆಗುವ ಕೆಲವು ಪರಿಣಾಮಗಳೇನು?


ಭಾರತದಲ್ಲಿ , ಸೂರ್ಯಗ್ರಹಣ ಹಾಗು ಚಂದ್ರಗ್ರಹಣಗಳ ಬಗ್ಗೆ ಕೆಳಕಂಡ ಕೆಲವು ನಂಬಿಕೆಗಳಿವೆ.


  • ಸೂರ್ಯ ಅಥವಾ ಚಂದ್ರನನ್ನು ಬರಿಗಣ್ಣಿನಿಂದ ನೋಡಬಾರದು


  • ಮನೆಯೊಳಗೆ  ಇರಬೇಕು.


  • ಗ್ರಹಣದ ಸಂದರ್ಭದಲ್ಲಿ, ಏನನ್ನೂ ತಿನ್ನಬಾರದು, ಕುಡಿಯಬಾರದು ಮತ್ತು ಅಡಿಗೆ ಮಾಡಬಾರದು.


  • ಸಾದ್ಯವಾದರೆ ಯಾವ ಕೆಲಸವನ್ನೂ ಮಾಡಬಾರದು


  • ಚೂಪಾದ ವಸ್ತುಗಳ ಬಳಕೆಯನ್ನು ಮಾಡಬಾರದು. ಇದರಿಂದ ಹುಟ್ಟುವ ಮಗುವಿಗೆ ತೊಂದರೆಯಾಗಬಹುದು.


  • ಗ್ರಹಣದ ಕಿರಣಗಳು ಮನೆಯೊಳಗೆ ಬಾರದಂತೆ ಬಾಗಿಲು ಹಾಗು ಕಿಟಕಿಗಳನ್ನು ಮುಚ್ಚಬೇಕು.


  • ಗ್ರಹಣದ ನಂತರ ಸ್ನಾನ ಮಾಡಬೇಕು.


ಗರ್ಭಿಣಿಯರಲ್ಲಿ ಗ್ರಹಣವು ಪರಿಣಾಮಬೀರುತ್ತದೆ ಎಂಬುದು ಕಟ್ಟುಕಥೆಯೇ?


ಗರ್ಭಧಾರಣೆಯ ಮೇಲೆ ಗ್ರಹಣ ಪರಿಣಾಮಗಳ ಬಗ್ಗೆ ವಿಜ್ಞಾನ ಮತ್ತು  ವೈದ್ಯಕೀಯಗಳು ಏನು ಹೇಳುತ್ತದೆ ಎಂಬುದನ್ನು ನೋಡೋಣ.


  • ಸೂರ್ಯನನ್ನು ಬರಿಗಣ್ಣಿನಲ್ಲಿ ನೋಡುವುದು


ಹೌದು, ಸೂರ್ಯನನ್ನು ಬರಿಗಣ್ಣಿನಲ್ಲಿ ನೋಡಬಾರದು. ಇದು ಕೇವಲ ಗರ್ಭಿಣಿಯರಿಗೆ ಮಾತ್ರವಲ್ಲ, ಎಲ್ಲರಿಗೂ ಅನ್ವಯವಾಗುತ್ತದೆ. ಸೂರ್ಯನ ಕಿರಣಗಳನ್ನು ಬರಿಗಣ್ಣಿನಲ್ಲಿ ನೋಡುವುದರಿಂದ, ಕಣ್ಣಿನ ರೇಟಿನ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಕಣ್ಣು ಉರಿಯಬಹುದು ಹಾಗು ಕಣ್ಣಿನ ಜೀವಕೋಶಗಳಿಗೆ ಹಾನಿಯಾಗಬಹುದು. ಕಣ್ಣಿನ ಜೀವಕೋಶಗಳು ಬಹಳ ಸೂಕ್ಷ್ಮ. ಆದ್ದರಿಂದ , ಗರ್ಭಿಣಿಯರು ಮಾತ್ರವಲ್ಲ , ಯಾರೇ ಸಹಾ ಸೂರ್ಯನನ್ನು ಕನ್ನಡಕವಿಲ್ಲದೆ ನೋಡಿದರೆ, 'ಎಕ್ಲಿಪ್ಸ್ ಬ್ಲೈಂಡ್ ನೆಸ್ ' ಎಂಬ ತೊಂದರೆ ಉಂಟಾಗಬಹುದು.


  • ಗ್ರಹಣದ ಸಂದರ್ಭದಲ್ಲಿ , ಏನನ್ನೂ ಸೇವಿಸಬಾರದು.


ಇದೂ ಸಹ ಸತ್ಯ , ಏಕೆಂದರೆ :


೧. ಸೂರ್ಯನ ಕಿರಣಗಳು ಬದುಕುಳಿಯುವುದಕ್ಕೆ ಬಹಳ ಮುಖ್ಯ. ಸೂರ್ಯನ ಕಿರಣಗಳ ಕೊರತೆಯಿಂದ , ಪರಿಸರದಲ್ಲಿ ಬ್ಯಾಕ್ಟೀರಿಯಾ ಹಾಗು ಕೀಟಾಣುಗಳ ಸಂಖ್ಯೆ ಹೆಚ್ಚುತ್ತದೆ. ಇದು ಹೆಚ್ಚಾಗಿ ಆಹಾರದಲ್ಲಿ ಕಂಡುಬರುತ್ತದೆ. ಗ್ರಹಣದ ಸಂದರ್ಭದಲ್ಲಿ , ಸೂರ್ಯನ ಕಿರಣಗಳು ಭೂಮಿಯ ಮೇಲೆ ಬೀಳುವುದಿಲ್ಲ ಏಕೆಂದರೆ , ಸೂರ್ಯನಿಗೆ ಚಂದ್ರ ಅಡ್ಡವಾಗಿರುತ್ತದೆ.


೨. ಇದರಿಂದ ಉಷ್ಣಾಂಶ ಕಡಿಮೆಯಾಗುತ್ತದೆ ಹಾಗು ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚುತ್ತದೆ.ಇದರಿಂದ ಆಹಾರ ಕೆಡುವ ಸಾಧ್ಯತೆಗಳಿರುತ್ತದೆ.


೩. ಆದ್ದರಿಂದ, ಸೂರ್ಯ ಗ್ರಹಣದ ವೇಳೆ , ಆಹಾರ ಸೇವನೆ, ಕುಡಿಯುವುದು ಅಥವಾ ಅಡಿಗೆ ಮಾಡಬಾರದು. ಇದರಿಂದ ಹೊಟ್ಟೆಯಲ್ಲಿ ಇನ್ಫೆಕ್ಷನ್ ಆಗಬಹುದು. ಸೂರ್ಯನ ಕಿರಣಗಳು ಮನುಶ್ಯನಿಗೆ ಹಾನಿ ಮಾಡುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.


ಹಲವಾರು ಜನರು ಗ್ರಹಣದ ಮುಂಚೆ ಮಾಡಿದ ಆಹಾರವನ್ನು ಎಸೆದುಬಿಡುತ್ತಾರೆ. ಏಕೆಂದರೆ , ಆ ಆಹಾರವು ಬ್ಯಾಕ್ಟೀರಿಯಾಗಳ ಹೆಚ್ಚಳದಿಂದ ಕೆಡಬಹುದು.


ಇನ್ನಿತರೇ ನಂಬಿಕೆಗಳನ್ನು ವಿಜ್ಞಾನವು ಬೆಂಬಲಿಸುವುದಿಲ್ಲ, ಅವು ಯಾವುದೇ ನೈಜ ವೈಜ್ಞಾನಿಕ ಬೆಂಬಲವನ್ನು ಆಧರಿಸಿಲ್ಲ. ನೀವು ಹೊರಗಡೆ ಹೋಗಬಹುದು, ಕೆಲಸ ಮಾಡಬಹುದು, ಚೂಪಾದ ವಸ್ತುಗಳನ್ನು ಬಳಸಬಹುದು. ಇವು ಯಾವುವು ನಿಮ್ಮ ಮಗುವಿಗೆ ಹಾನಿ ಉಂಟುಮಾಡುವುದಿಲ್ಲ. ನೀವು ಏನು ಮಾಡಬೇಕಾದರೂ ನಿಮ್ಮ ಸುತ್ತಾ  ಮುತ್ತ ಸಾಕಷ್ಟು ಬೆಳಕು ಇರುವಂತೆ ನೋಡಿಕೊಳ್ಳಿ.


ಚಂದ್ರ ಗ್ರಹಣ ಹಾಗು ಸೂರ್ಯ ಗ್ರಹಣ ವೇಳೆ , ಗರ್ಭಿಣಿಯರು ತೆಗೆದುಕೊಳ್ಳಬೇಕಾದ ಕೆಲವು ಮುನ್ನೆಚ್ಚರಿಕೆ ಕ್ರಮಗಳು ಯಾವುವು?


ಈ ಎಲ್ಲಾ ನಂಬಿಕೆ ಹಾಗು ಕಟ್ಟುಕತೆಗಳ ಮದ್ಯೆ, ಕೆಲವು ಹಾನಿಕಾರಕವಲ್ಲದ ಸಂಪ್ರದಾಯಗಳನ್ನು ಅನುಸರಿಸಬಹುದು. ಹಾಗು ಎಷ್ಟೋ ಕಟ್ಟುಕಥೆಗಳು , ವೈಜ್ಞಾನಿಕವಾಗಿ ನಿರೂಪಿಸಿಲ್ಲವಾದುದರಿಂದ, ಗರ್ಭಿಣಿಯು ಗ್ರಹಣವನ್ನು ನೋಡಬಹುದು. ಗ್ರಹಣದ ವೇಳೆ ರಕ್ತದಲ್ಲಿ ಗ್ಲುಕೋಸ್ ನ ಕೊರತೆಯಾಗದಿರಲು, ಗರ್ಭಿಣಿಯು ಪ್ಯಾಕೇಜ್ ಮಾಡಲಾದ ಆಹಾರವನ್ನು ಸೇವಿಸಬಹುದು.


ಗ್ರಹಣವು ಗರ್ಭಿಣಿಯರ ಮೇಲೆ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯಾವ ವೈಜ್ಞಾನಿಕ ಆಧಾರಗಳು ಇಲ್ಲ. ಆದರೆ ಗ್ರಹಣವು ಯಾವ ಪರಿಣಾಮವನ್ನೂ ಬೀರುವುದಿಲ್ಲ ಎಂಬುದಕ್ಕೂ ಯಾವುದೇ ವೈಜ್ಞಾನಿಕ ಆಧಾರವಿಲ್ಲ.


ಡಿಸ್ಕ್ಲೈಮರ್ : ಈ ಲೇಖನದಲ್ಲಿ ನೀಡಿರುವ ವಿಷಯ ವೈದ್ಯರ ಸಲಹೆಗೆ ಬದಲಿಯಲ್ಲ.  ಎಂದಿಗೂ ವೈದ್ಯರನ್ನು ಸಂಪರ್ಕಿಸಿ.

 

#babychakrakannada
logo

Select Language

down - arrow
Personalizing BabyChakra just for you!
This may take a moment!