• Home  /  
  • Learn  /  
  • ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 33 ನೇ ವಾರ
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 33 ನೇ ವಾರ

ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 33 ನೇ ವಾರ

26 Jun 2019 | 1 min Read

Sonali Shivlani

Author | 213 Articles

ಈಗ ನಿಮ್ಮ ಮಗು ಜನನ ಸಮಯದಲ್ಲಿ ಹೇಗೆ ಕಾಣಿಸುತ್ತದೆಯೇ ಹಾಗೆ ಕಾಣಿಸುತ್ತದೆ. ಮಗುವಿನ ಎಲ್ಲ ರಚನೆಗಳು ಸಂಪೂರ್ಣಗೊಂಡಿವೆ. ನಿಮ್ಮ ಮಗುವಿನ ತೂಕ 2 ಕೀಲೊ ಮತ್ತು ಉದ್ದ 17 ಇಂಚು ಇದೆ. ನಿಮ್ಮ ಮಗುವಿನ ತೂಕ ವೇಗವಾಗಿ ಏರುತ್ತಿದೆ. ನಿಮ್ಮ ಮಗು ಪೂರ್ಣವಾಗಿ ರೂಪಗೊಂಡಿದೆ. ನಿಮ್ಮ ಗರ್ಭವು ವಾರದಿಂದ ವಾರಕ್ಕೆ  ಹೆಚ್ಚು ಪರಿಪೂರ್ಣವಾಗಿ ಕಾಣಿಸುತ್ತದೆ.

 

ನಿಮ್ಮ ಮಗು ಈಗ ಜನ್ಮ ಸ್ಥಾನ ಬರಬಹುದು ಮತ್ತು ತಲೆ  ಕೆಳಗಿರುವ ಸ್ಥಾನದಲ್ಲಿರುತ್ತದೆ. ತಲೆ ಭಾರವಾಗಿರುತ್ತದೆ ಮತ್ತು ಆದ್ದರಿಂದ ನೈಸರ್ಗಿಕ ಪ್ರಕ್ರಿಯೆಯಾಗಿ, ಗುರುತ್ವಾಕರ್ಷಣೆಯ ಕಡೆಗೆ ತಿರುಗುವಂತೆ ಮಾಡುತ್ತದೆ.

 

ಈ ವಾರ ದಿಂದ ನೀವು  ನಿಮ್ಮ ವೈದ್ಯರೊಂದಿಗೆ ಪ್ರಸವ  ನೋವು ನಿರ್ವಹಣೆ ಆಯ್ಕೆಗಳನ್ನು ಚರ್ಚಿಸಲು ನೀವು ಪ್ರಾರಂಭಿಸಬಹುದು, ನಿಮ್ಮ ವೈದ್ಯಕೀಯ ಕೇಂದ್ರದಲ್ಲಿ ಲಭ್ಯವಿರುವ ಆಯ್ಕೆಗಳು ಮತ್ತು ಸೌಲಭ್ಯಗಳ ಸಾಧನೆಗಳನ್ನು ಅರ್ಥಮಾಡಿಕೊಳ್ಳಲು ನೀವು ಪ್ರಾರಂಭಿಸಬಹುದು.

 

ಉಸಿರಾಟ, ಪ್ರಸವ ಭಂಗಿಗಳು, ಧನಾತ್ಮಕ ದೃಢೀಕರಣಗಳು, ದೃಶ್ಯೀಕರಣ, ಸುಗಂಧ ಚಿಕಿತ್ಸೆ, ಮಸಾಜ್ ಅಥವಾ ಸರಳ ವ್ಯಾಕುಲತೆ ಮುಂತಾದ ನೈಸರ್ಗಿಕ ನೋವು ಪರಿಹಾರ ಆಯ್ಕೆಗಳನ್ನು ಪ್ರಯತ್ನಿಸಿ ಮತ್ತು ಅನ್ವೇಷಿಸಿ. ಹೆಚ್ಚಿನ ಸ್ವಾಭಾವಿಕ ನೋವು ಪರಿಹಾರ ಆಯ್ಕೆಗಳು ಪ್ರಸವ ಸಮಯದಲ್ಲಿ  ಬಹಳ ಪರಿಣಾಮಕಾರಿಯಾಗಬಲ್ಲವು; ಅವರಿಗೆ ಸ್ವಲ್ಪ ಅಭ್ಯಾಸ ಬೇಕು!

 

ಚಿಹ್ನೆಗಳು ಮತ್ತು ಲಕ್ಷಣಗಳು

ತಲೆ ಕೆಳಗಾಗಿರುವ ಭಂಗಿಯು ನಿಮ್ಮ ಪೆಲ್ವಿಸನಲ್ಲಿ ಹೆಚ್ಚು ಒತ್ತಡವನ್ನು ಉಂಟು ಮಾಡಿರಬಹುದು. ಈಗ ನಿಮ್ಮ ಕಿಬ್ಬೊಟ್ಟೆಯಲ್ಲಿ ಹಿಗ್ಗಿದ ಸಂವೇದನೆಯನ್ನು ನೀವು ಅನುಭವಿಸಬಹುದು

ಕೆಲವು ನಿರೀಕ್ಷಿತ ಮಹಿಳೆಯರಿಗೆ, ಸ್ತನಗಳನ್ನು ಅಥವಾ ಕೊಲೋಸ್ಟ್ರಮ್‍ ನಿಂದ ಜಿಗುಟಾದ  ಬಿಳಿ ಡಿಸ್ಚಾರ್ಜ್ ಈಗ ಕಾಣಿಸಿಕೊಳ್ಳಬಹುದು.

ನೀವು ಪೂರ್ಣಾವಧಿಯನ್ನು ಕಳೆದಿರುವುದರಿಂದ ನೀವು  ಹೆಚ್ಚು ದಣಿದಿರಬಹುದು ಮತ್ತು ದಣೀವು ನಿಮಗೆ ನಿರಾಶೆಯಾಗುವಂತೆ ಮಾಡುತ್ತದೆ. ಮುಂಬರುವ ವಾರಗಳಲ್ಲಿ ನೀವು ಮಾಡಬಹುದಾದ  ಕೆಲಸಗಳಿಗೆ ಎಲ್ಲ ಶಕ್ತಿಯ ಅಗತ್ಯವಿರುವುದರಿಂದ ನೀವು ಎಷ್ಟು ಸಾಧ್ಯವೋ ಅಷ್ಟು ವಿಶ್ರಾಂತಿ ತೆಗೆದುಕೊಳ್ಳಿ.

 

ದೈಹಿಕ ಬೆಳವಣಿಗೆ

ನಿಮ್ಮ ಮಗುವಿನ ತ್ಲೆ ಪೆಲ್ವಿಸ್‍ನಲ್ಲಿರುವ ಕಾರಣದಿಂದ ನಿಮ್ಮ ನಡಿಗೆಗೆ ತೊಂದರೆ ಆಗಬಹುದು. ನೀವು ಕಾಲನ್ನು ಆಗಲಿಸಿ ನಡೆಯಲು ಪ್ರಾರಂಭ ಮಾಡಬಹುದು. ಯಾವಾಗಲೂ ಸುರಕ್ಷಿತ, ದೃಢವಾದ ಫುಟವೇರ್ ಧರಿಸಿ ಮತ್ತು ಮೆಟ್ಟಿಲುಗಳನ್ನು ಏರುವಾಗ ಹೆಚ್ಚು ಜಾಗರೂಕರಾಗಿರಿ.

 

ಭಾವನಾತ್ಮಕ ಬೆಳವಣಿಗೆ

ಈ ಸಮಯದಲ್ಲಿ ನಿಮಗೆ ಸಹಜ ಹೆರಿಗೆಯನ್ನು ಹೊಂದಬೇಕೆಂಬ ಒತ್ತಡ  ಹೆಚ್ಚಾಗುವುದು. ಮತ್ತು  ಮೂರನೇ ತ್ರೈಮಾಸಿಕದಲ್ಲಿ ಈ ಭಾವನೆ ಹೆಚ್ಚಾಗುತ್ತದೆ. ಸಹಜ ಹೆರಿಗೆಯಲ್ಲಿನ ನೋವು ನಿಮ್ಮನ್ನು ಭಯಭೀತಗೊಳಿಸಬಹುದು. ನೀವು ಈ ಸಮಯದಲ್ಲಿ ನೋವಿನಿಂದ ದೂರವಿರಲು ಸಿ-ಸೆಂಕ್ಷನ್ ಹೆರಿಗೆಯನ್ನು ಸಹ ಮಾಡಿಸಿಕೊಳ್ಳಬಹುದು.

ನೆನೆಪಿಡಿ. ಸಿ-ಸೆಂಕ್ಷನ್ ಪ್ರಸವದ ನಂತರ ಚೇತರಿಸಿಕೊಳ್ಳುವುದು ಸಹ ನೋವುದಾಯಕವಾಗಿದೆ. ಸಹಜ ಹೆರಿಗೆಯನ್ನು ಎಲ್ಲರೂ ಶಿಫಾರಸ್ಸು ಮಾಡುತ್ತಾರಾದರೂ, ಅಂತಿಮವಾಗಿ  ಈ ಆಯ್ಕೆಯು ನಿಮಗೆ ಬಿಟ್ಟಿದ್ದು. ನೀವು ಸಕಾರಾತ್ಮಕವಾಗಿರುವುದು ಅವಶ್ಯಕವಾಗಿದೆ. ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ವೈದ್ಯರು ನಿಮಗೆ ಸಿ-ಸೆಂಕ್ಷನ್ ಅವಶ್ಯಕತೆ ಇದ್ದರೆ ಶಿಫಾರಸ್ಸು ಮಾಡುತ್ತಾರೆ.

 

ರೆಡ್ ಫ್ಲಾಗ್ಸ್

ತೊಡೆಸಂದು ಪ್ರದೇಶದಲ್ಲಿ ನೀವು ನೋವನ್ನು ಅನುಭವಿಸಿದರೆ,  ವಿಶೇಷವಾಗಿ ನಿದ್ದೆ ಮಾಡುವಾಗ ಮಗ್ಗುಲಿಗಳಿಗೆ ಹೊರಳಿದರೇ , ಅದನ್ನು ನಿಮ್ಮ ವೈದ್ಯರಿಗೆ ವರದಿ ಮಾಡಿ ಮತ್ತು ನಿಮ್ಮ ಪ್ರಸವಪೂರ್ವ ವ್ಯಾಯಾಮ ತರಬೇತುದಾರರಿಗೆ ಈ ಕುರಿತು ಮಾಹಿತಿ ನೀಡಿ.  ಕೆಲವು ಮಹಿಳೆಯರಲ್ಲಿ, ಪ್ಯೂಬಿಕ್ ಎಲುಬುಗಳು ಸಾಮಾನ್ಯಕ್ಕಿಂತ ಸ್ವಲ್ಪ ಹೆಚ್ಚು ವಿಸ್ತರಿಸುತ್ತವೆ ಮತ್ತು ಇದು ಬಹಳಷ್ಟು ಅಸ್ವಸ್ಥತೆಗೆ ಕಾರಣವಾಗಬಹುದು. ಇದು ಚಿಂತಿಸುವ ಕಾರಣವಲ್ಲ ಆದರೆ ನಿಮ್ಮ ವಾಡಿಕೆಯಲ್ಲಿ ಬದಲಾವಣೆ ಅಗತ್ಯವಿರುತ್ತದೆ.

 

ಹಳೆಯ ಹೆಂಡತಿಯರ ಕಥೆಗಳು

ಕೆಲವು ಸಂಸ್ಕೃತಿಯಲ್ಲಿ  ಗರ್ಭಿಣೆಯು ಪ್ರಸವ ವೇದನೆ ಅಥವಾ ಪ್ರಸವವನ್ನು ಅನುಭವಿಸುತ್ತಿರುವಾಗ ಅವಳ ತಾಯಿಯೂ  ಜೊತೆಗಿರಬಾರದೆಂದು ಹೇಳಲಾಗುತ್ತದೆ. ಇದು ಗರ್ಭಿಣೆಗೆ ಕೆಟ್ಟ ಅದೃಷ್ಟವನ್ನು ತರುತ್ತದೆಂದು ನಂಬಲಾಗಿದೆ. ಆದರೆ ಇದು ಸತ್ಯವಲ್ಲ. ನಿಮ್ಮ ಗರ್ಭಾವಸ್ಥೆಯ ಕೊನೆಯ ವಾರಗಳಲ್ಲಿ ಇಂತಹ ಕಟ್ಟು ಕಥೆಗಳು ನಿಮ್ಮ ಕಿವಿಗೆ ಬೀಳುತ್ತವೆ. ಅದರ ಕುರಿತು ತಲೆ ಕೆಡಿಸಿಕೊಳ್ಳಬೇಡಿ. ಇದು ಯಾವುದೂ ಸತ್ಯವಿಲ್ಲ.  ಪ್ರಸವ ವೇದನೆ ಸಮಯದಲ್ಲಿ  ನಿಮ್ಮೊಂದಿಗೆ ನೀವು ಇಷ್ಟ ಪಡುವ ವ್ಯಕ್ತಿಗಳನ್ನು ಕರೆದುಕೊಂಡು ಹೋಗಿ.

 

#babychakrakannada

A

gallery
send-btn

Related Topics for you