ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 34 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 34 ನೇ ವಾರ

ನಿಮ್ಮ ಮಗು ಈಗ ಹೊರ ಜಗತ್ತಿಗೆ ಬರಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ನಿಮ್ಮ ಗರ್ಭಾವಸ್ಥೆ ಪರಿಪೂರ್ಣವಾಗಿದೆ. ನಿಮ್ಮ ಮಗು ಈಗ  18 ಇಂಚು ಉದ್ದ ಮತ್ತು 2200 ಗ್ರಾಮ ತೂಕವನ್ನು ಹೊಂದಿದೆ. ಮಗುವಿನ ಶ್ವಾಸಕೋಶ ಮತ್ತು ಕೇಂದ್ರ ನರ ಮಂಡಲ ವ್ಯವಸ್ಥೆ ಬಹುತೇಕ ಪ್ರಬುದ್ಧವಾಗಿದೆ.

ನಿಮ್ಮ ಮಗು 34-37 ನೇ ವಾರಗಳ ನಡುವೆ ಜನಿಸಿದರೂ ಸಹ ಅದು ಅಕಾಲಿಕ ಜನನವೆಂದೇ ಪರಿಗಣಿಸಲ್ಪಡುತ್ತದೆ. ಆದರೆ ಅತಿ ಹೆಚ್ಚು ಸಮಸ್ಯೆಗಳನ್ನು ಎದುರಿಸುವುದಿಲ್ಲ. ಆದಾಗ್ಯೂ ನೀವು ನಿಯೋನಾಟಲ್ ಇಂಟೆನ್ಸಿವ್ ಕೇರ್ ಯುನಿಟ್ (NICU) ನಲ್ಲಿ ಸ್ವಲ್ಪ ದಿನಗಳ ಕಾಲ ಇರಬೇಕಾಗಬಹುದು.

ಮಾತ್ರತ್ವ ರಜೆಯನ್ನು ಯಾವಾಗ ತೆಗೆದುಕೊಳ್ಳಬೇಕು? ಇದಕ್ಕೆ ಸರಿಯಾದ ಸಮಯ ಯಾವುದು? ಎಂಬ ಚಿಂತೆ ನಿಮಗೆ ಕಾಡುತ್ತಿರುಬಹುದು. ನೀವು ಉದ್ಯೊಗಸ್ಥರಾಗಿದ್ದರೇ, ಕೆಲಸದಲ್ಲಿ ಮುಂದುವರೆಯಿರಿ. ನಿಮ್ಮ ವೈದ್ಯರು ನಿಮಗೆ ವಿಶ್ರಾಂತಿತೆಗೆದುಕೊಳ್ಳಿ ಎಂದು ಹೇಳುವರೆಗೂ ಮುಂದುವರೆಯಿರಿ. ನಿಮ್ಮ ಉದ್ಯೋಗವು ನಿಮಗೆ ಪ್ರಸವ ವೇದನೆಯ ಕುರಿತು ಹೆಚ್ಚು ಚಿಂತಿಸದಂತೇ ಮಾಡುತ್ತದೆ. ನೀವು ಇಲ್ಲಿ ಸಂಗ್ರಹಿಸುವ ರಜೆಗಳು ನಿಮ್ಮ ಪ್ರಸವದ ನಂತರ ಉಪಯೋಗಕ್ಕೆ ಬರುತ್ತವೆ

ನೀವು ಕಾರ್ಡ್ ಬ್ಲಡ್ ಬ್ಯಾಂಕಿಂಗ್‌ಗೆ ಸಹಿ ಮಾಡಬೇಕೆಂದು ಇಚ್ಛಿಸುವಿರಾದರೇ, ಇದನ್ನು ಮಾರ್ಕ್ ಮಾಡಿ.  ಈ ವಾರದ ನಿಮ್ಮ ಆಯ್ಕೆಗಳನ್ನು ಪರಿಶೀಲಿಸಲು ದಯವಿಟ್ಟು ನಿಮ್ಮ ಗರ್ಭಾವಸ್ಥೆಯಲ್ಲಿ ವಾರದಿಂದ ವಾರಕ್ಕೆ ಅದನ್ನು ಗುರುತಿಸಿ. ನೀವು ಆಯ್ಕೆ ಮಾಡುವ ಮೊದಲು ನಿಮ್ಮ ವೈದ್ಯರೊಂದಿಗೆ ಚರ್ಚಿಸಿ ಮತ್ತು ಬೇಬಿಚಕ್ರದಲ್ಲಿ ವಿಮರ್ಶೆಗಳನ್ನು ಓದಿ.

ಪ್ರಸ್ತುತ ಸಮಯದಲ್ಲಿ ನೀವು ಬ್ಯಾಂಕಗಳಿಗೆ ಯಾವ ಪ್ರಶ್ನೆಗಳನ್ನು ಕೇಳಬೇಕೆಂದು ನಿಮಗೆ ತಿಳಿದಿರಬೇಕು ಮತ್ತು ಅವರು ನೀಡುವ ಫ್ರಿಬೀಸ್‍ಗಳ ಮೇಲೆ ಆಕರ್ಷಿತರಾಗಬೇಡಿ. ನಿಮ್ಮ ಕಾರ್ಡ್ ಬ್ಲಡ್ ಬ್ಯಾಂಕ್ ಆರ್ಥಿಕವಾಗಿ ಸದೃಢವಾಗಿರಬೇಕು ಮತ್ತು ಅಗತ್ಯ ಪ್ರಮಾಣಿಕರಣಗಳನ್ನು ಹೊಂದಿರಬೇಕು.

 

ಚಿಹ್ನೆಗಳು ಮತ್ತು ಲಕ್ಷಣಗಳು

ಈ ಸಮಯದಲ್ಲಿ ನಿಮಗೆ ರಾತ್ರಿ ಮಲಗುವುದು, ಹೊರಳುವುದು, ಮತ್ತು ಭಂಗಿಗಳನ್ನು  ಬದಲಿಸುವುದು ಸಂಪೂರ್ಣವಾಗಿ ಕಷ್ಟವಾಗಬಹುದು. ನಿಮ್ಮ ಮಗು ವಾರದಿಂದ ವಾರಕ್ಕೆ ಬೆಳೆಯುತ್ತಿದೆ. ನಿಮಗೆ ಪದೇ ಪದೇ ಮೂತ್ರ  ಮಾಡಬೇಕು ಎಂದೆನಿಸಬಹುದು. ಇದು ಸಹ ನಿಮ್ಮ ನಿದ್ರೆಗೆ ಭಂಗ ತರಲಿದೆ. ಇನ್ನೂ ಮುಂದೆ ನೀವು ನಿಮ್ಮ ಮಗುವಿಗಾಗಿ ನಿದ್ರೆಗಳೀಲ್ಲದ ರಾತ್ರಿ ಕಳೆಯಬೇಕಾಗಿದೆ. ಆದ್ದರಿಂದ ಪ್ರಕೃತಿ ನಿಮ್ಮನ್ನು ಬಹುಶಃ ಈಗಲೇ ಸಿದ್ಧಗೊಳಿಸುತ್ತಿದೆ.

ಅತಿಯಾದ್ ದಣಿವು ನಿಮ್ಮನ್ನು ಕಾಡಬಹುದು. ನಿಮಗೆ ಮೇಲಿಂದ ದಣಿವು ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಕಿಬ್ಬೊಟ್ಟೆ ಕೆಳಗಿನ ನೋವು ನಿಮಗೆ ಆಲಾರಾಮ್ ಇದ್ದಂತೆ. ನಿಮಗೆ ಯಾವುದೇ ಸಮಯದಲ್ಲಿ ಹೆರಿಗೆ ನೋವು ಕಾಣಿಸಿಕೊಳ್ಳಬಹುದು ಎಂಬುದನ್ನು ಇದು ಸೂಚಿಸುತ್ತದೆ.

 

ದೈಹಿಕ ಬೆಳವಣಿಗೆ

ಪ್ಯಾಂಟ್ ಮತ್ತು  ಲೆಗ್ಗಿಂಗ್ ಧರಿಸುವುದು ನಿಮಗೆ ತೊಂದರೆ ಎನಿಸಿದರೇ, ಈಗ ನೀವು ಸರಳವಾದ ಸ್ಕರ್ಟ್ ಮತ್ತು ಡ್ರೆಸ್ಸುಗಳನ್ನು ಧರಿಸಿ. ನೀವು ನಿಮಗೆ ಆರಾಮದಾಯಕ ಎನಿಸಬೇಕು.

 

ಭಾವನಾತ್ಮಕ ಬದಲಾವಣೆಗಳು

ಈ ಸಮಯದಲ್ಲಿ ಹೆದರಿಕೆ ಮತ್ತು ಉತ್ಸಾಹ ಭಾವನೆಗಳು ಏಕ ಕಾಲದಲ್ಲಿ ಉಂಟಾಗಬಹುದು. ನಿಮ್ಮನ್ನು ಕ್ರೇಜಿಯನ್ನಾಗಿ ಮಾಡಬಹುದು. ನಿಮ್ಮ ಮಗುವನ್ನು ಸ್ವಾಗತಿಸಲು ನೀವು ಉತ್ಸಾಹವನ್ನು ಹೊಂದಿದ್ದೀರಿ. ನೀವು ಮೊದಲ ಬಾರಿಗೆ ತಾಯಿಯಾಗುತ್ತಿದ್ದರೇ ನಿಮಗೆ ಆತಂಕ ಕಾಡುತ್ತದೆ. ನಿಮಗೆ ಹೆರಿಗೆ ನೋವು ಅನುಭವವಾಗಿಲ್ಲ. ಇದು ನಿಮ್ಮಲ್ಲಿ ಹೆದರಿಕೆಯನ್ನು ಉಂಟು ಮಾಡುತ್ತದೆ. ಒಂದು ಹೊಸ ಮಗುವಿನೊಂದಿಗೆ ಮತ್ತು ಹೊಸ ಜವಾಬ್ದಾರಿಗಳನ್ನು ನಿಭಾಯಿಸುವ ಬಗ್ಗೆ ನೀವು ಆತಂಕ ವ್ಯಕ್ತಪಡಿಸಬಹುದು. ತಾಯಿಯ ಪ್ರವೃತ್ತಿಗಳು ನಿಮಗೆ ಸಹಾಯ ಮಾಡುತ್ತವೆ ಮತ್ತು ನೀವು ಚೆನ್ನಾಗಿಯೇ ಮಾಡುತ್ತೀರಿ ಎಂದು ನೆನಪಿಡಿ.

 

ರೆಡ್ ಫ್ಲಾಗ್ಸ್

ಕೆಲವು ಅಮ್ಮಂದಿರು ಹೊಟ್ಟೆ ಮತ್ತು ದೇಹದ ಇತರ ಭಾಗಗಳ ಮೇಲೆ ದದ್ದುಗಳು ಉಂಟಾಗಬಹುದು. ಇದು PUPPP (ಪ್ರುರಿಟಿಕ್ ಅರ್ಟಿಕೇರಿಯಲ್ ಪಾಪಲ್ ಮತ್ತು ಪ್ರೆಗ್ನೆನ್ಸಿ ಪ್ಲ್ಯಾಕ್ಸ್) ಎಂಬ ಸ್ಥಿತಿ. ಇದನ್ನು ಕೂಡ 'ಪ್ರೆಗ್ನೆನ್ಸಿ ಪ್ರೇರಿತ ದದ್ದು' ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಜನನದ ನಂತರ ಕಣ್ಮರೆಯಾಗುತ್ತದೆ ಆದರೆ ನಿಮ್ಮ ಯಕೃತ್ತಿನ ಕಾರ್ಯಚಟುವಟಿಕೆಯೊಂದಿಗೆ ಸಮಸ್ಯೆಯನ್ನು ಸೂಚಿಸುತ್ತದೆ ಮತ್ತು ಈಗ ನಿಮಗೆ ಕೆಲವು  ಔಷಧಿಗಳು ಅಗತ್ಯವಾಗಬಹುದು. ಇದನ್ನು ವೈದ್ಯರಿಗೆ ವರದಿ ಮಾಡಬೇಕಾಗುತ್ತದೆ.

 

ಹಳೆಯ ಹೆಂಡತಿಯರ ಕಥೆಗಳು

ನಿಮಗೆ ಈ ವಾರದಲ್ಲಿ ನೆಲ ಒರೆಸಲು ಮತ್ತು ಗುಡಿಸಲು ಹೇಳಬಹುದು. ಇದರಿಂದ ನಿಮಗೆ ಹೆರಿಗೆ ಪ್ರಕ್ರಿಯೆ ಸಹಜವಾಗುತ್ತದೆ ಎಂಬ ನಂಬಿಕೆ ಅವರದಾಗಿದೆ. ನೆಲ ಒರೆಸುವುದು ಮತ್ತು ಗುಡಿಸುವುದರಿಂದ ನಿಮ್ಮ ಕಾಲುಗಳಿಗೆ ವ್ಯಾಯಾಮವಾಗಿ ಹೆರಿಗೆ ಪ್ರಕ್ರಿಯೆ ಸಹಜವಾಗುತ್ತದೆ ಎಂಬ ನಂಬಿಕೆ ಇದೆ. ಆದರೆ ಇದು ನಿಜವಲ್ಲ. ಕೆಲಸ ಮಾಡುವುದು ಅನಿವಾರ್ಯವಲ್ಲ.  ಇದರಿಂದ ನಿಮ್ಮ ಮಗುವಿನ ತಲೆಯನ್ನು ನಿಮ್ಮ ತೊಡೆಯಿಂದ ತಳ್ಳುವುದು ಕೊನೆಗೊಳ್ಳಬಹುದು ಮತ್ತು ಇದು ತಲೆಗೆ ತೊಡಗಿಕೊಳ್ಳುವುದರಿಂದ ತಡೆಯಬಹುದು.

 

#babychakrakannada
logo

Select Language

down - arrow
Personalizing BabyChakra just for you!
This may take a moment!