26 Jun 2019 | 1 min Read
Sonali Shivlani
Author | 213 Articles
ಇದು ನಿಮ್ಮ 35 ನೇ ವಾರ. ನಿಮ್ಮ ಮಗು 2500 ಗ್ರಾಂ ತೂಕ ಮತ್ತು 18 ಇಂಚು ಉದ್ದವಾಗಿದೆ. ನಿಮ್ಮ ಮಗುವಿಗೆ ಈಗ ಗರ್ಭಾಶಯದ ಸ್ಥಳ ಸಾಕಾಗುತ್ತಿಲ್ಲ. ಆದ್ದರಿಂದ ಅದಕ್ಕೆ ಚಲಿಸಲು ಸಾಧ್ಯವಾಗುತ್ತಿಲ್ಲ. ನಿಮ್ಮ ಮಗು ಈಗ ಚೆನ್ನಾಗಿ ಬೆಳೆದಿದೆ.
ನಿಮ್ಮ ಮಗು ವಾರದಿಂದ ವಾರಕ್ಕೆ ಬೆಳೆಯುತ್ತಿದೆ. ತನಗೆ ಲಭ್ಯ ಇರುವ ಸ್ಥಳದ ಉಪಯೋಗವನ್ನು ಮಾಡಿಕೊಳ್ಳುತ್ತಿದೆ. ನಿಮ್ಮ ಮಗು ಈಗ ತನ್ನ ತಲೆಯನ್ನು ಪೆಲ್ವಿಕ್ ಕೆವಿಟಿಯಲ್ಲಿ ಇಡಲು ಪ್ರಯತ್ನಿಸುತ್ತದೆ. ಇದು ತಲೆ ಭಾರ ಮತ್ತು ಗುರುತ್ವಾಕರ್ಷಣೆಯ ಕಡೆಗೆ ಚಲಿಸುವ ಪ್ರವೃತ್ತಿಯ ಕಾರಣದಿಂದ ಉಂಟಾಗುತ್ತದೆ.
ಒಮ್ಮೆ ತಲೆಗೆ ಕೆಳಗಿರುವಾಗ, ನಿಮ್ಮ ಮಗುವಿನ ತಿರುವಿನ ಸಾಧ್ಯತೆ ತುಂಬಾ ಕಡಿಮೆ. ಯೋನಿ ಹುಟ್ಟಿನ ಪ್ರಮುಖ ಅಂಶವೆಂದರೆ ತಲೆಯ ಎಂಗೇಜ್‍ಮೆಂಟ್ ಜೊತೆ ಪರಿಗಣಿಸಲಾಗುತ್ತದೆ.
ನಿಮ್ಮ ಮಗುವಿನ ಶ್ವಾಸಕೋಶಗಳು ಈಗ ಸಂಪೂರ್ಣವಾಗಿ ರೂಪಗೊಂಡಿವೆ. ಹೊರ ಜಗತ್ತಿಗೆ ಹೊಂದಿಕೊಳ್ಳಲು ಸಂಪೂರ್ಣವಾಗಿ ಸಿದ್ಧಗೊಂಡಿದೆ. ಆದಾಗ್ಯೂ ನಿಮ್ಮ ಮಗು ಇನ್ನೂ ಕೆಲವು ವಾರ ನಿಮ್ಮ ಗರ್ಭಾಶಯದಲ್ಲಿರುತ್ತದೆ. ಈ ಸಮಯದಲ್ಲಿ ಅದರ ದೇಹದ ಮೇಲೆ ಹೆಚ್ಚುವರಿ ಕೊಬ್ಬಿನ ಪದರುಗಳು ಉಂಟಾಗುತ್ತವೆ.
ಈ ವಾರದ ನಂತರ ನೀವು ಪ್ರತಿ ವಾರ ನಿಮ್ಮ ವೈದ್ಯರನ್ನು ಭೇಟಿ ಮಾಡಬೇಕಾಗುತ್ತದೆ. ನಿಮ್ಮ ವೈದ್ಯರು ನಿಮ್ಮ ಹೊಟ್ಟೆಯನ್ನು ಮಗುವಿನ ನಿಖರ ಸ್ಥಿತಿಯನ್ನು ಖಚಿತಪಡಿಸಿಕೊಳ್ಳಲು ಹೆಚ್ಚು ಉತ್ಸಾಹದಿಂದ ಪರಿಶೀಲಿಸುತ್ತಾರೆ. ಮಗುವಿನ ಸ್ಥಿತಿಯನ್ನು ತಿಳಿಯಲು ಅಲ್ಟ್ರಾಸೌಂಡ್ ಅನಿವಾರ್ಯವಲ್ಲ.
ಹೆಚ್ಚಿನ ಜನನ ಸೌಲಭ್ಯಗಳು ಎಚ್ಐವಿ ಮತ್ತು ಇತರ ಸಾಂಕ್ರಾಮಿಕ ಕಾಯಿಲೆಗಳಂತಹ ಕೆಲವು ರಕ್ತ ಪರೀಕ್ಷೆಗಳನ್ನು ತೆಗೆದುಕೊಳ್ಳಬೇಕಾಗಬಹುದು. ಏಕೆಂದರೆ ಇವುಗಳು ಜನನದ ಸಮಯದಲ್ಲಿ ಪಾಲನೆದಾರರಿಗೆ ಹರಡಬಹುದು.
ಚಿಹ್ನೆಗಳು ಮತ್ತು ಲಕ್ಷಣಗಳು
ನಿಮ್ಮ ಮಗು ಈಗ ಪೆಲ್ವಿಸ್‍ನಲ್ಲಿ ಹೆಚ್ಚು ಒತ್ತಡ ಹೇರಲು ಆರಂಭಿಸುತ್ತದೆ. ಇದರಿಂದ ನಿಮಗೆ ಬೆನ್ನು ನೋವು ಹೆಚ್ಚು ಕಾಣಿಸಬಹುದು. ಬೆನ್ನು ಹಿಂದುಗಡೆ ನಿಮ್ಮ ಸಂಗಾತಿಯಿಂದ ಮಸಾಜ್ ಮಾಡಿಸಿಕೊಳ್ಳಿ. ಇದು ನಿಮಗೆ ಆರಾಮ ಮತ್ತು ಆನಂದ ನೀಡುತ್ತದೆ.
ವಿಶೇಷವಾಗಿ ಕಣಕಾಲುಗಳು ಮತ್ತು ಕಾಲುಗಳ ಸುತ್ತಲೂ ಕೆಲವು ಊತವನ್ನು ನೀವು ಗಮನಿಸಬಹುದು. ನಿಮ್ಮ ರಕ್ತದೊತ್ತಡ ಸಾಮಾನ್ಯವಾಗಿದ್ದರೆ ಚಿಂತೆ ಇಲ್ಲ ಇದು ನಿಮ್ಮ ಕಾಲುಗಳಿಗೆ ನಿರ್ಬಂಧಿತ ರಕ್ತದ ಹರಿವಿನ ಕಾರಣದಿಂದಾಗಿ ಉಂಟಾಗಿರಬಹುದು. ಆದ್ದರಿಂದ ನೀವು ವಿಶ್ರಾಂತಿಗಾಗಿ ಆಗಾಗ ನಿಮ್ಮ ಕಾಲುಗಳನ್ನು ಮೇಲುಗಡೆ ಎತ್ತಿ, ಇಳಿಸಿ. ಇದರಿಂದ ನಿಮ್ಮ ಕಾಲಿನ ಊತ ಕಡಿಮೆ ಆಗಬಹುದು.
ಪ್ರಸವ ಮತ್ತು ಜನನ ಸಮಯದಲ್ಲಿ ನಿಮ್ಮೊಂದಿಗೆ ಇರಲು ಡೌಲಾ ನೇಮಿಸಿಕೊಳ್ಳಿ ( ಜನನ ಬೆಂಬಲ ವೃತ್ತಿಪರರು) ಡೌಲಾ ಇವರು ಪ್ರಸವ ಸಮಯದಲ್ಲಿ ಉತ್ತಮ ಭಂಗಿಗಳಿಗಾಗಿ ನಿಮಗೆ ಮಾರ್ಗದರ್ಶನ ನೀಡುತ್ತಾರೆ. ನಿಮಗೆ ಭಾವನಾತ್ಮಕ ಬೆಂಬಲವನ್ನು ಸಹ ಒದಗಿಸುತ್ತಾರೆ. ಆದಾಗ್ಯೂ ಡೌಲಾ ನಿಮಗೆ ವೈದ್ಯಕೀಯ ಸಲಹೆ ನೀಡುವುದಿಲ್ಲ. ನಿಮಗೆ ಸಂಬಂಧಿತ ವೈದ್ಯಕೀಯ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಜನನ ಸಮಯದಲ್ಲಿ ಡೌಲಾ ನಿಮ್ಮೊಂದಿಗೆ ಇರುವುದು ಒಳ್ಳೆಯದು. ಇದು ಸಿ-ಸೆಂಕ್ಷನ್ ದರವನ್ನು ಕಡಿಮೆಗೊಳಿಸುತ್ತದೆ.
ದೈಹಿಕ ಬೆಳವಣಿಗೆ
ನೀವು ಭಾರೀ ಭಾವನೆ ಹೊಂದಿರಬಹುದು ಮತ್ತು ಹೆರಿಗೆಯ ನಂತರ ತೂಕ ಕಳೆದುಕೊಳ್ಳುವ ಬಗ್ಗೆ ಸ್ವಲ್ಪ ಚಿಂತಿಸುತ್ತಿರಬಹುದು,ಹೆರಿಗೆಯ ನಂತರ ತೂಕ ಇಳಿಕೆಯು ಕ್ರಮೇಣವಾಗಿರಬೇಕು. ಹೆರಿಗೆಯ ನಂತರ ವಿಪರೀತ ವ್ಯಾಯಾಮ ಅಥವಾ ಪಥ್ಯವು ಒಳ್ಳೆಯದಕ್ಕಿಂತ ಹೆಚ್ಚು ಹಾನಿಯನ್ನು ಉಂಟು ಮಾಡುತ್ತದೆ.
ಭಾವನಾತ್ಮಕ ಬದಲಾವಣೆಗಳು
ಜನನ ಸಮಯ ಹತ್ತಿರವಾದಂತೇ ನೀವು ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಕಳೆಯಲು ಬಯಸಿ. ಈ ಕುರಿತು ನಿಮ್ಮ ಸಂಗಾತಿಗೆ ಹೇಳಿ. ಇದು ನಿಮ್ಮ ಮಗುವಿನ ಆಶಯವೂ ಹೌದು. ಶ್ರೇಷ್ಟ ಅಪ್ಪಂದಿರು ಮಗುವಿನ ಭಾವನೆಗಳನ್ನು ಖಂಡಿತವಾಗಿಯೂ ಗೌರವಿಸುತ್ತಾರೆ.
ಹಲವು ನಿರೀಕ್ಷಿತ ಅಪ್ಪಂದಿರು ಈ ಸಮಯದಲ್ಲಿ ಆಸ್ಪತ್ರೆಯಲ್ಲಿ ಇರಲು ಹೆದರುತ್ತಾರೆ. ಅವರ ಹೆಂಡತಿ ಹೆರಿಗೆ ನೋವು ಅನುಭವಿಸುವುದನ್ನು ನೋಡಲು ಅವರಿಗೆ ಆಗುವುದಿಲ್ಲ. ಹೊಸ ಜವಾಬ್ದಾರಿಯನ್ನು ಹೊರಲು ಅವರಿಗೆ ಆತಂಕ ಮತ್ತು ಸಂತೋಷ ಎರಡು ಉಂಟಾಗಿರಬಹುದು. ಆದ್ದರಿಂದ ಈ ಸಮಯದಲ್ಲಿ ಇಬ್ಬರೂ ಒಟ್ಟಾಗಿ ಚಿಂತಿಸಿ ಮತ್ತು ಜವಾಬ್ದಾರಿಯನ್ನು ಹೊಂದಿರಿ. ಸಂತೋಷದಿಂದ ಕಾಲವನ್ನು ಕಳೆಯಿರಿ.
ರೆಡ್ ಫ್ಲಾಗ್ಸ್
ನೀವು ಈಗ ಪ್ರತಿವಾರ ತಪಾಸಣೆಗೆ ಒಳಗಾಗುತ್ತಿದ್ದೀರಿ. ಅಲ್ಟ್ರಾಸೌಂಡ್ ಪರೀಕ್ಷೆಯು ನಿಮ್ಮ ಮಗುವಿನ ಸುತ್ತಲೂ ಒಂದು ಲೂಫ್ ತೋರಿಸಬಹುದು. ಇದನ್ನು ಚಿಂತಿಸುವ ಅಗತ್ಯವಿಲ್ಲ. ನಿಮಗೆ ಸಹಜ ಹೆರಿಗೆ ಆಗುವ ಸಾಧ್ಯತೆ ಇದೆ ಎಂದು ತೋರಿಸುತ್ತದೆ. ಹೆಚ್ಚು ಲೂಪ್‌ಗಳು, ಕಾರ್ಡ್‌ನಲ್ಲಿ ಹೆಚ್ಚು ಗಂಟುಗಳು ಕಂಡು ಬಂದರೇ ವೈದ್ಯರು ನಿಮಗೆ ಸಿ-ಸೆಂಕ್ಷನ್ ಶಿಫಾರಸ್ಸು ಮಾಡಬಹುದು.
ಹಳೆಯ ಹೆಂಡತಿಯರ ಕಥೆಗಳು
ಅನೇಕ ನಿರೀಕ್ಷಿತ ತಾಯಂದಿರಿಗೆ ಕೊನೆಯ ತಿಂಗಳುಗಳಲ್ಲಿ ಒಂದು ಗ್ಲಾಸ್ ಬಿಸಿ ಹಾಲು ಮತ್ತು ಎರಡು ಟೇಬಲ ಸ್ಪೂನ್ ತುಪ್ಪ ಸೇವಿಸಲು ಹೇಳಲಾಗುತ್ತದೆ, ಇದರಿಂದ ಜನನ ಕಾಲುವೆ ಹೆಚ್ಚು ಜಾರುವಂತೆ ಆಗಿ ಹೆರಿಗೆ ಸುಲಭವಾಗುತ್ತದೆ. ಇದು ಸಂಪೂರ್ಣ ಸುಳ್ಳು. ಹೆಚ್ಚು ಕೊಬ್ಬು ಸೇವಿಸುವುದರಿಂದ ನಿಮ್ಮ ತೂಕ ಹೆಚ್ಚಾಗುತ್ತದೆ. ಇದೆಲ್ಲವೂ ನಿಮ್ಮ ಹಿಂಭಾಗದ ಮೇಲೆ ಶೇಖರಣೆಗೊಂಡಿರುತ್ತದೆ. ಇದರಿಂದ ನಿಮ್ಮ ಹೆರಿಗೆ ನೋವು ಇನ್ನೂ ಕಷ್ಟವಾಗುತ್ತದೆ. ಆದ್ದರಿಂದ ಹೆಚ್ಚುವರಿ ತುಪ್ಪ ಸೇವನೆಯಿಂದ ದೂರವಿರಿ.
A