ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 37 ನೇ ವಾರ

cover-image
ನಿಮ್ಮೊಳಗೆ ನಿಮ್ಮ ಮಗು ಹೇಗೆ ಬೆಳೆಯುತ್ತದೆ: 37 ನೇ ವಾರ

ನಿಮ್ಮ ಮಗು ಈಗ ಸಂಪೂರ್ಣವಾಗಿ ಬೆಳೆದಿದೆ. ಇದನ್ನು ಪೂರ್ಣಾವಧಿ ಎಂದು ಪರಿಗಣಿಸಲಾಗುತ್ತದೆ. ಈಗ ನಿಮ್ಮ ಮಗು 19 ಇಂಚು ಉದ್ದ ಮತ್ತು 3 ಕೀಲೊಗಳಿಗಿಂತ ಸ್ವಲ್ಪ ಕಡಿಮೆ ಇದೆ.

ಇನ್ನೂ ಒಂದೆರಡುವಾರಗಳಲ್ಲಿ ನಿಮ್ಮ ಮಗುವಿನ ಶ್ವಾಸಕೋಶ ಮತ್ತು ಮೆದುಳು ಸಂಪೂರ್ಣವಾಗಿ ಬೆಳೆಯುತ್ತದೆ. ನಿಮ್ಮ ಮಗು ಈಗ ಜನಿಸಿದರೇ ಹೊರಜಗತ್ತಿನಲ್ಲಿ ಬದುಕಲು ಸಂಪೂರ್ಣ ಸಾಮರ್ಥ್ಯವನ್ನು ಪಡೆದುಕೊಂಡಿದೆ.

ನೀವು ಹಿಂದೆ ಸಿ-ಸೆಂಕ್ಷನ್  ಹೊಂದಿದ್ದರೆ ಅಥವಾ ಬ್ರೀಚ್ ಬೇಬಿ ಅಥವಾ ಪ್ಲೆಸೆಂಟಾ ಪ್ರೆವೆಯಾ ನಂತಹ ಕೆಲವು ವೈದ್ಯಕೀಯ ಪರಿಗಣನೆಗಳನ್ನು ಹೊಂದಿದ್ದರೆ, ನಿಮ್ಮ ವೈದ್ಯರು ನಿಮ್ಮೊಂದಿಗೆ ಯೋಜಿತ  ಸಿ-ಸೆಂಕ್ಷನ್ ಚರ್ಚಿಸಲು ಬಯಸುತ್ತಾರೆ.

 

ಚಿಹ್ನೆಗಳು ಮತ್ತು ಲಕ್ಷಣಗಳು

ನಿಮ್ಮ ಗರ್ಭಾವಸ್ಥೆಯಲ್ಲಿ, ವಿಶೇಷವಾಗಿ ಎರಡನೇ ತ್ರೈಮಾಸಿಕದಲ್ಲಿ ನಿಮ್ಮ ಮಗು  ಆಗಾಗ ಬಿಕ್ಕಳಿಸುವುದನ್ನು ನೀವು ಕೇಳಬಹುದು. ಇವುಗಳು ಲಯಬದ್ಧವಾದದ್ದು, ನಿಮ್ಮ ಕಿಬ್ಬೊಟ್ಟೆಯಲ್ಲಿ ಚಿಕ್ಕದಾಗಿ ಬಡಿದಂತೆ ತೋರುತ್ತದೆ. ನೀವು ಈಗಲೂ ಸ್ವಲ್ಪ ಅನಾನುಕೂಲತೆಯನ್ನು ಅನುಭವಿಸಬಹುದು ಮತ್ತು  ಬ್ರಾಕ್ಸ್ಟನ್-ಹಿಕ್ಸ್ ಸಂಕೋಚನಗಳನ್ನು ಹೆಚ್ಚಾಗಿ ಅನುಭವಿಸುತ್ತೀರಿ.

ನೀವು ಈಗ ನಿಮ್ಮ ಡೆಲಿವರಿ ಆಗುವ ಆಸ್ಪತ್ರೆಯನ್ನು ನೋಡಲು ಮತ್ತು ಅಲ್ಲಿಯ ಸೌಲಭ್ಯಗಳನ್ನು ತಿಳಿದುಕೊಳ್ಳಲು ಬಯಸಬಹುದು. ಇದೊಂದು ಉತ್ತಮ ವಿಚಾರವಾಗಿದೆ. ಹೆರಿಗೆಯ ಸಮಯದಲ್ಲಿ ನಿಮಗೆ ಹಿತಕರ ಅನುಭವನ್ನು ನೀಡುತ್ತದೆ.

 

ದೈಹಿಕ ಬೆಳವಣಿಗೆ

ಈಗ ನಿಮಗೆ ಜನರು ಯಾವಾಗಲಾದರೂ ಹೆರಿಗೆ ಆಗಬಹುದು ಎಂದು ಹೇಳುತ್ತಾರ‍ೆ. ನೀವು ಪೂರ್ಣ ಗರ್ಭಿಣೆಯಂತೆ ಕಾಣುತ್ತಿದ್ದೀರಿ. ನೀವು ಪ್ರಸವಪೂರ್ವ ವ್ಯಾಯಾಮಗಳನ್ನು ಮುಂದುವರೆಸಿ. ಇದರಿಂದ ಹೆರಿಗೆ ಸರಳವಾಗುತ್ತದೆ.

 

ಭಾವನಾತ್ಮಕ ಬದಲಾವಣೆಗಳು

ವೈಯಕ್ತಿಕ ಅಥವಾ ಮಂಗಳಕರ ಕಾರಣಗಳಿಗಾಗಿ ನಿಮ್ಮ ಮಗುವನ್ನು ನಿರ್ದಿಷ್ಟ ದಿನಾಂಕದಂದು ಹಡೆಯಲು  ನೀವು ಬಯಸಬಹುದು. ಇದು ಅತ್ಯುತ್ತಮ ಆಲೋಚನೆ ಆಗಿಲ್ಲ. ನಿಮ್ಮ ಮಗುವು ಹೊರಜಗತ್ತಿಗೆ ಬರಲು ಸಂಪೂರ್ಣವಾಗಿ ಸಿದ್ಧವಾಗಿರುವುದು ಅವಶ್ಯಕವಾಗಿದೆ.  ನಿಮ್ಮ ಮಗು ಸಿದ್ಧಗೊಂಡ ಮೇಲೆ ತಾನೇ ಸಹಜವಾಗಿ ಪ್ರಸವ ವೇದನೆಯನ್ನು ಪ್ರಾರಂಭಿಸಿ ಜನ್ಮ ಪ್ರಕ್ರಿಯೆಯನ್ನು ಬೆಂಬಲಿಸುತ್ತದೆ.

ನೀವು ಪ್ರಸವದ ಖಿನ್ನತೆಯ ಬಗ್ಗೆ ಓದುವದು ಮುಖ್ಯ. ಬಹಳಷ್ಟು ತಾಯಂದಿರು ಈ ಸ್ಥಿತಿಯಿಂದ ಬಳಲುತ್ತಿದ್ದಾರೆ, ಇದು ಪ್ರಸವದ ನಂತರ ಹಾರ್ಮೋನಗಳ  ಪರಿಣಾಮವಾಗಿ ಮತ್ತು ಮಾನಸಿಕ ಬದಲಾವಣೆಗಳನ್ನು ಪ್ರಕಟಿಸುತ್ತದೆ.

 

ರೆಡ್ ಫ್ಲಾಗ್ಸ್

ಪ್ರತಿವಾರವೂ ನಿಮ್ಮ ಗರ್ಭಾವಸ್ಥೆಯನ್ನು ಟ್ರ್ಯಾಕ್ ಮಾಡಿ. ನಿಮ್ಮ ಯೋನಿಯಿಂದ ಏನಾದರೂ  ಸೋರಿಕೆಯಾಗುತ್ತಿದೆಯೇ ಎಂದು ಗಮನಿಸಿ. ಸರ್ವಿಕ್ಸ್  ವಿರುದ್ಧ ನಿಮ್ಮ ಮಗುವಿನ ತಲೆ ಒತ್ತುವಂತೆ, ಕೆಲ ದ್ರವವು ಸೋರಿಕೆಯಾಗುತ್ತದೆ ಮತ್ತು ನಿಮಗೆ ತೇವದ ಭಾವನೆ ನೀಡುತ್ತದೆ. . ನೀವೇ ನಿರಂತರವಾಗಿ ತೇವವನ್ನು ಅನುಭವಿಸಿದರೆ, ಅದು ಆಮ್ನಿಯೋಟಿಕ್ ದ್ರವದ ಸೋರಿಕೆಯಾಗಬಹುದು. ಇದರಿಂದ ತೊಂದರೆ ಆಗಲಿದೆ, ಆದ್ದರಿಂದ ನೀವು ಖಚಿತವಾಗಿ ನಿಮ್ಮ ವೈದ್ಯರೊಂದಿಗೆ ಪರೀಕ್ಷಿಸಬೇಕು.

 

ಹಳೆಯ ಹೆಂಡತಿಯರ ಕಥೆಗಳು

ಈಗ ನಿಮಗೆ ಕೆಲವು ಹಿರಿಯರು ಮಸಾಲೆಯುಕ್ತ ಆಹಾರವನ್ನು ಸೇವಿಸಲು ಹೇಳುತ್ತಾರೆ. ಇದು ಪ್ರಸವ ವೇದನೆಯನ್ನು ಉತ್ತೇಜಿಸುತ್ತದೆ ಎಂಬುದು ಇವರ ನಂಬಿಕೆಯಾಗಿದೆ. ಆದರೆ ಇದು ಎಷ್ಟು ಸರಿ ಎಂದು ನಾವು ತಿಳಿದಿಲ್ಲ. ಆದರೆ ಮಸಾಲೆಯ ಸೇವನೆಯು ಅತಿಸಾರ, ವಾಂತಿ ಮತ್ತು ಎದೆಉರಿಗೆ ಕಾರಣವಾಗುತ್ತದೆ.

 

#babychakrakannada
logo

Select Language

down - arrow
Rewards
0 shopping - cart
Personalizing BabyChakra just for you!
This may take a moment!