• Home  /  
  • Learn  /  
  • ಗರ್ಭವಾಸ್ಥೆಯಲ್ಲಿ ಉಂಟಾಗುವ ಅಸ್ವಸ್ಥತೆಗಳಿಗೆ ಮನೆಯ ಮದ್ದು
ಗರ್ಭವಾಸ್ಥೆಯಲ್ಲಿ ಉಂಟಾಗುವ ಅಸ್ವಸ್ಥತೆಗಳಿಗೆ ಮನೆಯ ಮದ್ದು

ಗರ್ಭವಾಸ್ಥೆಯಲ್ಲಿ ಉಂಟಾಗುವ ಅಸ್ವಸ್ಥತೆಗಳಿಗೆ ಮನೆಯ ಮದ್ದು

27 Jun 2019 | 1 min Read

cheni adukia

Author | 20 Articles

ಗರ್ಭಧಾರಣೆಯ ಸಮಯದಲ್ಲಿ ಮಹಿಳೆಯರಿಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆಗಳೆಂದರೆ ವಾಕರಿಕೆ, ಸ್ಟ್ರೆಚ್ ಮಾರ್ಕ್ಸ್ ಹಾಗು ಊದಿಕೊಂಡ ಮೊಣಕಾಲು.

ಗರ್ಭಧಾರಣೆಯು ಮಹಿಳೆಯರ ಜೀವನದಲ್ಲಿ ಒಂದು ಸುಂದರ ಅನುಭವ. ತಾಯ್ತನ ಎನ್ನುವುದು ಜೀವನದ ಒಂದು ಸುಂದರವಾದ ಕೊನೆಯಾಗದ ಶುಭ ಆರಂಭ. ಗರ್ಭಧಾರಣೆಯು ತಾಯ್ತನದ ರೀತಿಯೇ ಸಾಕಷ್ಟು ಏಳು-ಬೀಳುಗಳಿರುತ್ತವೆ. ಮಗುವಿನ ಸುಂದರವಾದ ಹೃದಯದ ಬಡಿತದ ಭಾವನೆಯ ಜೊತೆಗೆ ವಾಕರಿಕೆಯು ಬರುತ್ತದೆ. ಮಗುವಿನ ಒದೆತದಿಂದ ಖುಷಿಯಾಗಿ ಇರಬೇಕಾದ ಸಮಯದಲ್ಲಿ ಮೊಣಕಾಲುಗಳ ಊತವಿರುತ್ತದೆ. ಗರ್ಭಧಾರಣೆಯ ಕಾಂತಿಯು ನಿಮ್ಮ ಮುಖದಲ್ಲಿ ಇರಬೇಕಾದರೆ ಸ್ಟ್ರೆಚ್ ಮಾರ್ಕ್ಸ್  ಹೊಟ್ಟೆಯ ಮೇಲೆ ಕಾಣಿಸಿಕೊಳ್ಳುತ್ತದೆ.

 

ವಾಕರಿಕೆ:

ಉನ್ನತ ಮಟ್ಟದ ಗರ್ಭಧಾರಣೆಯ ಹಾರ್ಮೋನುಗಳ ಹರಿಯುವಿಕೆಯು ನಿಮ್ಮ ದೇಹದ, ಗರ್ಭಾವಸ್ಥೆಯಲ್ಲಿ ವಾಕರಿಕೆ ಬರುವಂತೆ ಮಾಡುತ್ತದೆ.  ಆಶಾದಾಯಕವಾಗಿ, ನಿಮ್ಮ ಬೆಳಗಿನ ಬೇನೆಯು ಸುಮಾರು ಹದಿನಾಲ್ಕು ವಾರಗಳ ಮತ್ತು ಹದಿನಾರು ವಾರಗಳ ನಡುವೆ ಕಡಿಮೆಯಾಗುತ್ತದೆ. ಆದರೂ, ಕೆಲವು ಮಹಿಳೆಯರಲ್ಲಿ ಇದು ಇನ್ನು ಸ್ವಲ್ಪ ದಿನಗಳು ಮುಂದುವರಿಯ ಬಹುದು. ನಿಮ್ಮ ವಾಕರಿಕೆ ತಡೆಯಲು ಇಲ್ಲಿ ಕೆಲವು ಮನೆ ಮದ್ದುಗಳನ್ನು ಈ ಕೆಳಗೆ ನೀಡಲಾಗಿದೆ.

 

-ನಿಮಗೆ ಯಾವಾಗ ಮತ್ತು ಏನನ್ನು ತಿನ್ನಬೇಕೆನ್ನಿಸುತ್ತದೊ ಅದನ್ನು ತಿನ್ನಿ : ನಿಮ್ಮ ವಾಕರಿಕೆಯನ್ನು ತಡೆಯಲು ಆಗಾಗ್ಗೆ ಸ್ವಲ್ಪ ಪ್ರಮಾಣದ ಭಾಗಗಳನ್ನು ತಿನ್ನುವುದರಿಂದ ಶಕ್ತಿಯುತವಾಗಿ ಇರಲು ಅನುಕೂಲವಾಗುತ್ತದೆ.

-ನಿಮ್ಮ ಶುಭದಿನ ಸಿಹಿಯೊಂದಿಗೆ ಶುರುವಾಗಲಿ: ಬೆಳಗ್ಗೆ ಎದ್ದ ಸಮಯದಲ್ಲಿ ಸಿಹಿ ತಿನ್ನುವುದರಿಂದ ವಾಕರಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನೀವು ಎದ್ದ ಕೂಡಲೇ ಸ್ವಲ್ಪ ಗುಲ್ಕನ್ ಅಥವಾ ಬಿಸ್ಕತಗಳನ್ನೂ ತಿನ್ನಬಹುದು.

-ತಾಜಾತನಕ್ಕಾಗಿ ಸ್ಪಷ್ಟವಾದ ಸುವಾಸನೆ ಅಥವಾ ಬಹುಪ್ರಮಾಣದ ಪುದಿನ ಹೊಂದಿರುವ ಟೂತ್ ಪೇಸ್ಟ್ ಅನ್ನು ಬಳಸಬೇಡಿ. ಗಿಡಮೂಲಿಕೆಗಳು ಹಾಗೂ ಸುವಾಸನೆ ಕಡಿಮೆ ಇರುವಂತಹ ಟೂತ್ ಪೇಸ್ಟ್ ಅನ್ನು ಬಳಸಿ.

-ತಾಜಾ ಹಣ್ಣುಗಳಾದ ಬಾಳೆಹಣ್ಣು ಮತ್ತು ಅವಕ್ಯಾಡೊ, ಬೆಳ್ಳಗಿನ ಉಪಹಾರಕ್ಕಾಗಿ  ತಿನ್ನುವುದರಿಂದ ವಾಕರಿಕೆಯು ಕಡಿಮೆಯ ಮಟ್ಟದಲ್ಲಿರುತ್ತದೆ. ಈ ಹಣ್ಣುಗಳು ವಿಟಮಿನ್ ಬಿ ಯಲ್ಲಿ ಶ್ರೀಮಂತವಾಗಿವೆ.

-ಹುಳಿಯಾದ ಕ್ಯಾಂಡಿಯನ್ನು ಸವಿಯಿರಿ: ಕಿತ್ತಳೆ ಅಥವಾ ನಿಂಬೆ ರುಚಿಯ ಕ್ಯಾಂಡಿಯನ್ನು ತಿನ್ನುವುದರಿಂದ ವಾಕರಿಕೆಯು ಸ್ವಲ್ಪ ಪ್ರಮಾಣದ ಮಟ್ಟಿಗೆ ಕಡಿಮೆಯಾಗುತ್ತದೆ.

 

ಮೊಣಕಾಲು ಊತ:

ಮೊಣಕಾಲು ಊತ ನಿಮ್ಮ ದೇಹದಲ್ಲಿರುವ ದ್ರವದ ಪ್ರಮಾಣವು ಸಹಜಕ್ಕಿಂತ ಹೆಚ್ಚಾದಾಗ. ಊತವು ಸಹಜ. ಬಹಳಷ್ಟು ಮಹಿಳೆಯರಿಗೆ ಈ ಊತವು ತಮ್ಮ ಕೊನೆಯ ತ್ರೈಮಾಸಿಕದಲ್ಲಿ ಕಾಣಿಸಿಕೊಳ್ಳುತ್ತದೆ.

-ಉಪ್ಪಿನಿಂದ ಕಾಲುಗಳನ್ನು ನೆನೆಸಿ: ಕಾಲುಗಳ ಊತವನ್ನು ನಿವಾರಿಸಲು ಬೆಚ್ಚಗಿನ ನೀರಿನಲ್ಲಿ ಅರ್ಧ ಚಮಚ ಉಪ್ಪು ಹಾಕಿ ಅದರಲ್ಲಿ ಕಾಲುಗಳನ್ನು  ಇಟ್ಟರೆ ಸ್ವಲ್ಪ ನೋವು ಕಡಿಮೆಯಾಗುತ್ತದೆ. ಗರ್ಭಧಾರಣೆಯ ಸಮಯದಲ್ಲಿ ಇದಕ್ಕಾಗಿ ಎಪ್ಸಮ್ ಉಪ್ಪನ್ನು ಬಳಸಿದರೆ ಉತ್ತಮ ಒಳ್ಳೆಯ ನಿರ್ಧಾರ.

-ಕಾಲುಗಳ ಮಸಾಜ್ ಪಡೆದುಕೊಳ್ಳಿ: ನಿಮ್ಮ ಜೊತೆಗಾರರಾಗಲಿ ಅಥವಾ ಮಾಲಿಶ್ ಮಾಡುವವರಾಗಲಿ ಅವರು ನಿಮಗೆ  ಯಾವುದೇ ತೊಂದರೆಯಾಗದಂತೆ ಕಾಲುಗಳನ್ನು ಒತ್ತುವುದು ಅವಶ್ಯವಾಗುತ್ತದೆ. ಮೃದುವಾಗಿ ಕಾಲುಗಳ ಮಸಾಜ್ ಮಾಡಿಕೊಳ್ಳಿ.

-ಪೊಟಾಶಿಯಮ್ ನಂತಹ ಶ್ರೀಮಂತ ಊಟವನ್ನು ನಿಮ್ಮ ದೈನಂದಿನ ಊಟದಲ್ಲಿ ಬಳಸಬೇಕು: ಕಿವಿ ಹಣ್ಣು, ಅವಕಾಡೊ ಹಾಗೂ ಬಾಳೆಹಣ್ಣುಗಳು ಪೊಟಾಶಿಯಂ ನಲ್ಲಿ ತುಂಬಾ ಶ್ರೀಮಂತವಾಗಿದ್ದು ನಿಮ್ಮ ಆರೋಗ್ಯಕ್ಕೆ ಅದರಲ್ಲೂ ಮಧ್ಯ ಊಟದ ವೇಳೆಯಲ್ಲಿ ತಿನ್ನುವುದು ಗರ್ಭಧಾರಣೆಗೆ ಒಳ್ಳೆಯದು. ನಿಮ್ಮ ದೇಹದಲ್ಲಿ ಉಪ್ಪಿನಿಂದ ನೀರಿನ ಅಂಶವನ್ನು ಸರಿಯಾಗಿಡಲು ಪೊಟಾಶಿಯಂ ಒಂದು ಮುಖ್ಯವಾದ ಖನಿಜವಾಗಿದೆ.

-ಕಾಲುಗಳ ನೋವು ಬೇಗ ನಿವಾರಿಸ ಬೇಕೆಂದರೆ ಒಂದು ಟೆನಿಸ್ ಬಾಲ್ ಅಥವಾ ನೀರು ತುಂಬಿದ ಬಾಟಲಿನ ಮೇಲೆ ನಿಮ್ಮ ಕಾಲುಗಳನ್ನು ಉರುಳಿಸಿ. ಈ ರೀತಿ ಮಾಡ ಬೇಕಾದರೆ  ನೀವು ಕುಳಿತುಕೊಂಡಿರಬೇಕು ಹಾಗು ನಿಮ್ಮ ದೇಹವು ಅದಕ್ಕೆ ಸಮನಾಗಿರಬೇಕು.

-ಹೆಚ್ಚಾಗಿ ನೀರು ಕುಡಿಯಬೇಕು, ಇದರಿಂದ ನಿಮ್ಮ ದೇಹವನ್ನು ಒಳ್ಳೆಯ ಧಾರಣ ಸ್ಥಿತಿಯಲ್ಲಿಡಬಹುದು.

 

ಸ್ಟ್ರೆಚ್ ಮಾರ್ಕ್ಸ್ :

ಗರ್ಭಾವಸ್ಥೆಯಲ್ಲಿ  ನಿಮ್ಮ ತೂಕ ಹೆಚ್ಚಾಗುತ್ತದೆ ಹಾಗೂ ನಿಮ್ಮ ಚರ್ಮ ಅಗಲವಾಗುತ್ತದೆ, ಆದ್ದರಿಂದ ಸ್ಟ್ರೆಚ್ ಮಾರ್ಕ್ಸ್  ಬರುತ್ತವೆ. ಈ ಗೆರೆಗಳು ಸಾಮಾನ್ಯವಾಗಿ ಗುಲಾಬಿ, ಕೆಂಪು ಅಥವಾ ನೇರಳೆ ಲೇಪಿತ ಬಣ್ಣಗಳಾಗಿ ಕಾಣಬಹುದಾಗಿದೆ.

-ಎಣ್ಣೆಯಿಂದ ಮಾಲಿಷ್ ಮಾಡಿ: ಗೆರೆಗಳು ಬಂದಿರುವ ಜಾಗಗಳಲ್ಲಿ ವಿಟಮಿನ್ ಇ ತೈಲವನ್ನು  ಯಾವುದಾದರೂ ಮಾಸ್ಚುರೈಸರ್ ನೊಂದಿಗೆ ಬೆರೆಸಿ ಮಾಲಿಷ್ ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ಕಡಿಮೆ ಆಗುತ್ತದೆ.

-ಆಲೋ ವೆರಾ ಜೆಲ್: ಆಲೋ ವೆರಾ ಜೆಲ್ ಅನ್ನು ಸುತ್ತುವ ಆಕಾರದಲ್ಲಿ ನಯವಾಗಿ ಮಾಲಿಷ್ ಮಾಡಿದರೆ ಅದು ನಿಮ್ಮ ಚರ್ಮವನ್ನು ನಯವಾಗಿರಿಸುತ್ತದೆ ಹಾಗೂ ಒಣಗುವಂತೆ ಮಾಡುತ್ತದೆ. ಮಾರ್ಕೆಟಿನಲ್ಲಿ ದೊರೆಯುವ ಜೆಲ್ ಅನ್ನು ಬಳಸುವುದಕ್ಕಿಂತ ತಾಜಾ ಜೆಲ್ ಅನ್ನು ಉಪಯೋಗಿಸಿ.

-ಹಾಲು, ಸಕ್ಕರೆ  ಮತ್ತು ನಿಂಬೆ: ಮನೆಯಲ್ಲೇ ಸ್ಟ್ರೆಚ್ ಮಾರ್ಕ್ಸ್ ಅಳಿಸಲು , ಹಸಿ ಹಾಲು ಮತ್ತು ಸ್ವಲ್ಪ ನಿಂಬೆಯ ರಸವನ್ನು ಸ್ಕ್ರಬ್ ಮಾಡಿ ಅದನ್ನು ವೃತ್ತಾಕಾರವಾಗಿ ಹಚ್ಚಿಕೊಳ್ಳಿ. ಮತ್ತು ಬೆಚ್ಚಗಿನ ನೀರಿನಲ್ಲಿ ತೊಳೆದು ಮಾಶ್ಚುರೈಸರ್  ಆ ಗೆರೆಗಳ ಜಾಗಕ್ಕೆ ಹಚ್ಚುವುದು.

-ಆಲೂಗಡ್ಡೆ ರಸವನ್ನು ಬಳಸಿ: ಆಲೂಗಡ್ಡೆ ರಸವನ್ನು ಮಾಡಿಕೊಳ್ಳಿ ಅಥವಾ ಆಲೂಗಡ್ಡೆಯನ್ನು ಅರ್ಧ ಭಾಗಗಳನ್ನಾಗಿ ಮಾಡಿ ಗೆರೆಗಳು ಇರುವ ಜಾಗದಲ್ಲಿ ವೃತ್ತಾಕಾರವಾಗಿ ಉಜ್ಜಿ ಸ್ವಲ್ಪ ಒಣಗಲು ಬಿಡಿ. ಸ್ವಲ್ಪ ಸಮಯದ ನಂತರ ಬೆಚ್ಚಗಿನ ನೀರಿನಲ್ಲಿ ತೊಳೆದು, ಮಾಶ್ಚುರೈಸರ್ ಹಚ್ಚಿ.

ಎಲ್ಲಾ ಗರ್ಭಾವಸ್ಥೆಯು ಒಂದೇ ರೀತಿ ಇರುವುದಿಲ್ಲ, ಆದರೆ ಮೇಲಿನ ಯಾವುದಾದರೂ ಎರಡು ಅಂಶವಾದರೂ ಗರ್ಭಧಾರಣೆಯ ಸಮಯದಲ್ಲಿ ಕಾಣಿಸಿಕೊಳ್ಳುತ್ತದೆ. ವಾಕರಿಕೆ, ಕಾಲುಗಳ ಊತ ಅಥವಾ ಸ್ಟ್ರೆಚ್ ಮಾರ್ಕ್ಸ್, ಇದೆಲ್ಲವೂ ಕೇವಲ ಅಡ್ಡ ಪರಿಣಾಮಗಳು, ನಿಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಇವುಗಳು ಕಾಣಿಸಿಕೊಳ್ಳುತ್ತವೆ.

ಶುಭದಾಯಕ ಗರ್ಭದಾರಣೆ ನಿಮ್ಮದಾಗಲಿ!

ಹಕ್ಕು ತ್ಯಾಗ:  ಈ ಲೇಖನದ ಶಿಫಾರಸ್ಸು ಲೇಖಕರ ಸ್ವಂತದ್ದು. ಏನಾದರೂ ಪ್ರಶ್ನೆಗಳು  ಇದಲ್ಲಿ ನಿಮ್ಮ ಡಾಕ್ಟರ್ ಅನ್ನು ಸಂಪರ್ಕಿಸಿ.

 

#babychakrakannada

A

gallery
send-btn

Related Topics for you