ಹೆಣ್ಣು ಹುಲಿಯಂತೆ ಅವುಗಳನ್ನು ಧರಿಸಿ - ಗರ್ಭಾವಸ್ಥೆಯಲ್ಲಿ ಸಂಭವಿಸುವ ಸುಕ್ಕುಗಳ ಬಗ್ಗೆ ತಿಳಿದುಕೊಳ್ಳಿ

cover-image
ಹೆಣ್ಣು ಹುಲಿಯಂತೆ ಅವುಗಳನ್ನು ಧರಿಸಿ - ಗರ್ಭಾವಸ್ಥೆಯಲ್ಲಿ ಸಂಭವಿಸುವ ಸುಕ್ಕುಗಳ ಬಗ್ಗೆ ತಿಳಿದುಕೊಳ್ಳಿ

ನೀವು ನಿಮ್ಮ ಮೊದಲ ಮಗುವಿನ ಬಗ್ಗೆ ಸಂಭ್ರಮ ಪಡುವ ಸಮಯದಲ್ಲಿ ನಿಮಗೆ ಹಿಗ್ಗಿಸಲಾದ ಗೆರೆಗಳ ಬಗ್ಗೆ ಭಯ ಅಥವಾ ಅನುಮಾನಗಳಿರಬಹುದು. ಬಹಳ ಮಹಿಳೆಯರಿಗೆ ಹಿಗ್ಗಿಸಲಾದ ಗೆರೆಗಳಿಂದ ದೇಹದಲ್ಲಿ ತುಂಬಾ ಬದಲಾವಣೆಗಳನ್ನು ಅನುಭವಿಸುತ್ತಾರೆ. ನಿಮ್ಮ ದೇಹದಲ್ಲಾಗುವ ದಪ್ಪ, ಮಧ್ಯರಾತ್ರಿ ಎದ್ದು ಮಗುವಿಗೆ ಹಾಲುಣಿಸುವುದು, ಮಕ್ಕಳ ಕಚ್ಚೆ ಬದಲಾಯಿಸುವುದು, ಇದ್ದೆಲ್ಲಾ ಹೇಗೆ ಶಾಂತ ರೀತಿಯಿಂದ ಅನುಭವಿಸುತ್ತೀರೋ ಹಾಗೆಯೇ ಹೊಟ್ಟೆಯ ಮೇಲಾಗುವ ಗೆರೆಗಳನ್ನು ಕೂಡ ಒಂದು ಭಾಗವೆಂದು ಕೊಳ್ಳಬೇಕು. ಇದೆಲ್ಲಾ ಪರಿಣಾಮಗಳು ಗರ್ಭಾವಸ್ಥೆಯಲ್ಲಿ ನೀವು ಕಲಿಯಬೇಕಾದ ಅಂಶಗಳು.

ನೀವು ಇವುಗಳನ್ನು ಕುರಿತು ತಿಳಿದುಕೊಂಡಿರಬೇಕು. ಈ ಕೆಳಗೆ ಕೊಟ್ಟಿರುವ ಕೆಲವು ಮುಖ್ಯ ಪ್ರಶ್ನೆಗಳಿಗೆ ಉತ್ತರಿಸಲಾಗಿದೆ.

 

ಹಿಗ್ಗಿಸಲಾದ ಗೆರೆಗಳು ಎಂದರೇನು?

ಹಿಗ್ಗಿಸಲಾದ ಗೆರೆಗಳು ಯಾವಾಗ ಬರುವುದೆಂದರೆ, ನಿಮ್ಮ ಚರ್ಮಕ್ಕಿಂತ ನಿಮ್ಮ ದೇಹವು ಅತಿ ವೇಗವಾಗಿ ಬೆಳೆಯುತ್ತಿರುತ್ತದೆ. ನಿಮ್ಮ ಚರ್ಮದ ಮೇಲ್ಮೈ ಭಾಗದಲ್ಲಿ ಸ್ಥಿತಿಸ್ಥಾಪಕ ನಾರುಗಳು ಇರುತ್ತವೆ. ಇದೆಲ್ಲದರಲ್ಲಿ ಕೆಲವು ಮೊತ್ತದ ಸ್ಥಿತಿಸ್ಥಾಪಕತ್ವ ಇರುತ್ತದೆ, ಆದಾಗ್ಯೂ ಇಲ್ಲಿ ಒಂದು ಅಂಶವೆಂದರೆ, ಯಾವಾಗ ಇದು ಇನ್ನು ಮುಂದೆ ಕೊನೆಯವರೆಗೂ ಎಳೆಯಲಾಗುವುದೆಲ್ಲವೋ, ಅದು ಹಿಗ್ಗಿಸಲಾದ ಗೆರೆಗಳಾಗುತ್ತವೆ.

ಒಬ್ಬ ಮಹಿಳೆ ತನ್ನ ಗರ್ಭಾಬಸ್ಥೆಯಲ್ಲಿ ಸುಮಾರು ಹತ್ತರಿಂದ-ಹದಿನಾಲ್ಕು ಕೆಜಿ ದಪ್ಪಗಾಗುತ್ತಾರೆ, ಅದರಲ್ಲೂ ಈ ದೇಹದ ತೂಕ ತಮ್ಮ ಹೊಟ್ಟೆಯ ಸುತ್ತ, ಸ್ತನಗಳು ಹಾಗೂ ಮುಕುಳೆಯಲ್ಲಿ ಕಂಡು ಬರುತ್ತದೆ. ಗೆರೆಗಳು ಹೀಗಾಗಿ ಈ ರೀತಿಯಲ್ಲಿ ಈ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತವೆ.

ಗರ್ಭಾವಸ್ಥೆಯಲ್ಲಿ ಒಳ್ಳೆಯ ರೀತಿ ದೇಹದ ತೂಕವನ್ನು ಪಡೆಯುವುದು ಒಳಿತು, ಆದರೆ ಇದರಲ್ಲಿ ಮುಖ್ಯವೆಂದರೆ ತೂಕವು ಎಷ್ಟು ಪ್ರಮಾಣದಲ್ಲಿರಬೇಕೆಂದು ತಿಳಿದಿರಬೇಕು. ದೇಹದ ತೂಕ ವೇಗವಾಗಿ ಹೆಚ್ಚಾಗುತ್ತಿದ್ದರೆ, ಹೊಟ್ಟೆಯ ಸುತ್ತ ಗೆರೆಗಳು ಜಾಸ್ತಿಯಾಗುತ್ತಾ ಹೋಗುತ್ತದೆ.

 

ಯಾರಿಗಾದರು ಹಿಗ್ಗಿಸಲಾದ ಗೆರೆಗಳು ಬರುತ್ತದೆಯೇ?

ಶೇಕಡ 90% ಮಹಿಳೆಯರಿಗೆ ಹಿಗ್ಗಿಸಲಾದ ಗೆರೆಗಳು ಗರ್ಭಾವಸ್ಥೆಯ ಆರನೇ ಅಥವಾ ಏಳನೇ ತಿಂಗಳಿನಲ್ಲಿ ಕಾಣಿಸಿಕೊಳ್ಳುತ್ತದೆ.

ಕೆಲವು ಅಂಶಗಳು ಪೂರ್ವಭಾವಿಯಾಗಿ ಹಿಗ್ಗಿಸಲಾದ ಗೆರೆಗಳನ್ನು ತಡೆಯಲು ಈ ಕೆಳಗೆ ನೀಡಲಾಗಿದೆ.

-ಹಿಗ್ಗಿಸಲಾದ ಗೆರೆಗಳು ಅನುವಂಶಿಕ - ಇದು ನಿಮ್ಮ ತಾಯಿಯಲ್ಲಿ ಕಾಣಿಸಿಕೊಂಡಿದ್ದರೆ, ನಿಮಗೂ ಸಹ ಬರಬಹುದು.

- ಮಹಿಳೆಯರು ಬಿಳಿಯ ಬಣ್ಣವಿದ್ದರೆ ಅವರಿಗೆ ಕೆಂಪು ಗೆರೆಗಳು ಕಾಣಿಸಿಕೊಳ್ಳುತ್ತವೆ, ಹಾಗೂ ಮಹಿಳೆಯರು ಕಪ್ಪು ಬಣ್ಣದವರಾಗಿದ್ದರೆ ಬೆಳ್ಳಿಯ ಬಿಳಿಯ ಗೆರೆಗಳು ಕಾಣಿಸಿಕೊಳ್ಳುತ್ತವೆ.

 

ಹಿಗ್ಗಿಸಲಾದ ಗೆರೆಗಳನ್ನು  ತಡೆಯಬಹುದೇ?

ದುರಾದೃಷ್ಟವಶಾತ್ ಇಲ್ಲ, ಆದರೆ ಕೆಲವು ವಿಷಯಗಳ ಮೇಲೆ ಗಮನಕೊಟ್ಟರೆ ಅದರ ಗುರುತುಗಳನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಬಹುದು.

-ಗೆರೆಗಳನ್ನು ತಡೆಯಲು ಯಾವುದೇ ರೀತಿಯ ಲೇಪನ/ಕ್ರೀಮ್ ಅಥವಾ ಲೋಷನ್  ಇಲ್ಲ. ನಿಮ್ಮ ಕ್ರೀಮ್ ಗಳು ಕೆರೆತವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಹಾಗೆ ತಂಪು ಮಾಡಿ ನಿಮ್ಮ ಚರ್ಮವನ್ನು ಮೃದು ಮತ್ತು ಕೋಮಲವಾಗಿಡುತ್ತದೆ. ನೀವು ವಿಟಮಿನ್-ಇ ಕ್ರೀಮ್ ಅಥವಾ ಲೋಷನ್ ನ್ನು ಆಯ್ಕೆ ಮಾಡಿ ಹಾಗೂ ಹೊಟ್ಟೆಯ  ಸುತ್ತ ದಿನಕ್ಕೆ ಎರಡು ಭಾರಿ ಮಾಲಿಷ್ ಮಾಡಿ.

-ಬಹಳಷ್ಟು ತಾಜಾ ಹಣ್ಣುಗಳು ಹಾಗೂ ತರಕಾರಿಗಳನ್ನು ತಿನ್ನಿ. ಇವು ನಿಮ್ಮ ಚರ್ಮದಲ್ಲಿ ಕಾಲಜನ್ ಎಂಬ ಅಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಸ್ಥಿತಿಸ್ಥಾಪಕತ್ವದ ಅಂಶ.

-ಬಹಳಷ್ಟು ನೀರು ಕುಡಿಯುವುದು ಅತ್ಯವಶ್ಯಕ. ನೀರು ಚರ್ಮವನ್ನು ಹೈಡ್ ರೇಟ್ ಮಾಡಿ ಒಣಗದಿರುವಂತೆ ಪ್ರಯತ್ನಿಸುತ್ತದೆ.

-ಒಳ್ಳೆಯ ಬೆಂಬಲ ನೀಡುವ ಬ್ರಾವನ್ನು ಅಥವಾ ಒಳ ಉಡುಪುಗಳನ್ನು ಧರಿಸಿ, ಏಕೆಂದರೆ ಇದು ನಿಮ್ಮ ಸ್ತನಗಳನ್ನು ಹಿಗ್ಗಿಸಲು  ಬಿಡುವುದಿಲ್ಲ ನಿಮ್ಮ ತೂಕಕ್ಕೂ ಒಳ್ಳೆಯ ಬೆಂಬಲ ನೀಡುತ್ತದೆ.

ಹಿಗ್ಗಿಸಲಾದ ಗೆರೆಗಳು ಕಾಲ ಕಳೆದಂತೆ ಮಾಸುತ್ತಾ  ಹೋಗುತ್ತದೆ, ಆದರೆ ಸ್ವಲ್ಪ ಗರೆಗಳಂತೂ ಕಂಡೇ ಕಾಣುತ್ತದೆ. ನೀವು ಇದನ್ನು ನಿಮ್ಮ ಗರ್ಭಾವಸ್ಥೆಯಲ್ಲಿ ಈ ಗೆರೆಗಳು ಕಾಣಿಸಿಕೊಂಡರೆ, ಇದನ್ನು ತಾಯ್ತನದ ಗೌರವದ ಗುರುತು ಎಂದು ಹೆಮ್ಮೆ ಪಡಿ ಹಾಗೂ ಇದರ ಬಗ್ಗೆ ಜಾಸ್ತಿ ತಲೆ ಕೆಡೆಸಿಕೊಳ್ಳಬೇಡಿ.

ಬ್ಯಾನರ್ನ ಮೂಲ ಚಿತ್ರ: ಎವೆರಿವೆಲ್.ಕಾಮ್

 

#babychakrakannada
logo

Select Language

down - arrow
Personalizing BabyChakra just for you!
This may take a moment!