ಗರ್ಭಾವಸ್ಥೆ ಮತ್ತು ಸುರಕ್ಷಿತ ಔಷಧೋಪಚಾರ

cover-image
ಗರ್ಭಾವಸ್ಥೆ ಮತ್ತು ಸುರಕ್ಷಿತ ಔಷಧೋಪಚಾರ

ಗರ್ಭಾವಸ್ಠೆಯಲ್ಲಿ ಒಂದು ಒಳ್ಳೆಯ ಅನುಭವ ಆದರೆ ಬಹಳ ದೂರುಗಳು.

ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಅನಾರೋಗ್ಯ ಬೀಳುವುದು ಸಹಜ, ಆದರೆ ಅದು ತುಂಬಾ ತೊಂದರೆಗೀಡು ಮಾಡುತ್ತದೆ, ಏಕೆಂದರೆ ಯಾವ ಔಷಧಿಯನ್ನು ತೆಗೆದುಕೊಳ್ಳಬೇಕೋ, ಬೇಡವೋ, ಮಗುವಿಗೆ ಒಳ್ಳೆಯದೋ, ಕೆಟ್ಟದ್ದೋ ಎಂದು ಚಿಂತೆಯಾಗುತ್ತದೆ. ಆದರೂ ಕೆಲವು ಸಮಯದಲ್ಲಿ ಔಷಧ ತೆಗೆದುಕೊಳ್ಳುವುದು ಅನಿವಾರ್ಯ, ಇಲ್ಲದಿದ್ದಲ್ಲಿ ನಿಮ್ಮ ಆರೋಗ್ಯ ಕೆಡುತ್ತದೆ.

 

ಗರ್ಭಾವಸ್ಥೆಯಲ್ಲಿ ಸಾಮಾನ್ಯವಾದ ದೂರುಗಳೇನು?

ಗರ್ಭಾವಸ್ಥೆಯ ಸಮಯದಲ್ಲಿ, ಬಹಳ ಮಹಿಳೆಯರಲ್ಲಿ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಏಕೆಂದರೆ ನಮ್ಮ ದೇಹದಲ್ಲಾಗುವ ದೈಹಿಕವಾದ ಹಾಗೂ ಹಾರ್ಮೋನುಗಳ ಬದಲಾವಣೆಗಳ ಕಾರಣದಿಂದ. ಕೆಲವು ಅಸ್ವಸ್ಥೆಗಳು ಸಣ್ಣ ಮನೆಯ ಮದ್ದುಗಳಿಂದ ಸಡಿಲಗೊಳಿಸುತ್ತದೆ, ಆದರೆ ಇನ್ನು ಕೆಲವು ಅನಾರೋಗಕ್ಕೆ ಔಷಧ ತೆಗೆದುಕೊಳ್ಳುವುದು ಅತ್ಯವಶ್ಯಕ. ಗರ್ಭಾವಸ್ಠೆಯಲ್ಲಿ ಕಾಣುವ ಸಾಮಾನ್ಯವಾದ ತೊಂದರೆಗಳನ್ನು ಈ ಕೆಳಗೆ ತಿಳಿಸಲಾಗಿದೆ.

-ಬೆನ್ನು ನೋವು

-ಮಲ ಬದ್ಧತೆ

-ಎದೆ ಉರಿ ಅಥವಾ ಆಮ್ಲತೆ

-ತಲೆ ತಿರುಗುವುದು

-ಅಸಂಯಮಿ

-ಕೆಮ್ಮು ನಗಡಿಯ ಸೋಂಕು ಅಥವಾ ಕರುಳಿನ ಉರಿಯೂತ

-ಪೈಲ್ಸ್

-ಉಬ್ಬಿರುವ ರಕ್ತನಾಳಗಳು

-ಕಾಲು ನೋವು ಹಾಗೂ ಒಡೆತಗಳು

 

ಕೆಲವು ಮಹಿಳೆಯರಲ್ಲಿ ಹೆಚ್ಚಿನ ತೀವ್ರತೆಯನ್ನು ಪೂರ್ವ ಅಸ್ತಿತ್ವದಲ್ಲಿರುವ ವೈದ್ಯಕೀಯ ಸ್ಥಿತಿಯನ್ನು ಅನುಭವಿಸುತ್ತಾರೆ ಅದಾವುದೆಂದರೆ ಅಧಿಕ ರಕ್ತದೊತ್ತಡ, ಮಧುಮೇಹ, ಹೈಪೋಥೈರಾಯ್ಡಿಸಮ್, ಉಬ್ಬಸ, ರೋಗಗ್ರಸ್ತವಾಗುವಿಕೆ. ವೈದ್ಯರು ಈ ಮೇಲೆ ಕೊಟ್ಟಿರುವ ಖಾಯಿಲೆಗಳನ್ನು ನಿಭಾಯಿಸಲು ಕೆಲವು  ಔಷಧಗಳನ್ನು ಬದಲಾಯಿಸಿಕೊಡಬಹುದು ಅಥವಾ ಔಷಧದ ಡೋಸೇಜ್ ಅನ್ನು ಹೆಚ್ಚಿಸುತ್ತಾರೆ.

 

ಗರ್ಭಾವಸ್ಠೆಯಲ್ಲಿ ಯಾವ ಔಷಧಿಗಳನ್ನು ತೆಗೆದುಕೊಳ್ಳಬೇಕು?

ಬಹಳ ಔಷಧಗಳು ಗರ್ಭಾವಸ್ಥೆಯಲ್ಲಿ ಸಾಕಷ್ಟು ಸುರಕ್ಷಿತವಾಗಿದೆ, ಆದರೆ ಡೋಸೇಜ್ ಬಳಕೆಯ ಬಗ್ಗೆ ಎಚ್ಚರವಿರಬೇಕು. ಈ ಕೆಳಗೆ ಗರ್ಭಾವಸ್ಥೆಯ ಸಮಯದಲ್ಲಿ ಸುರಕ್ಷಿತವಾಗಿರಲು, ನಿಮ್ಮಗೆ ಸಾಮಾನ್ಯವಾಗಿ ಬರುವ ಅನಾರೋಗ್ಯವನ್ನು ನಿಭಾಯಿಸಲು ಔಷಧಗಳ ಪಟ್ಟಿಯನ್ನು ನಿಮಗಾಗಿ ನೀಡಲಾಗಿದೆ.

-ನೋವು: ಗರ್ಭಾವಸ್ಠೆಯಲ್ಲಿ ನೋವನ್ನು ನೀವಾರಿಸಲು ಏಸ್ಟಮಿನೋಫೆನ್ ನ್ನು ತೆಗೆದುಕೊಳ್ಳುವುದು ಒಳಿತು.

-ಮಲಬದ್ದತೆ: ಇಸಬ್ ಗೋಲ್ ಅಥವಾ ಸಿಲ್ಲಿಯಮ್ ಪೈಬರ್ ಎಂಬ ಜೌಷಧವನ್ನು ಮಲಬದ್ದತೆಯಿಂದ ನಿವಾರಿಸಲು ಸಹಾಯ ಮಾಡುತ್ತದೆ, ಆದರೆ ಇದು ನಿಮಗೆ ಸಹಾಯ ಮಾಡದಿದ್ದರೆ, ನೀವು ಮಗ್ನೀಶಿಯ ಹಾಲು, ಡಾಕುಸೇಟ್ ಅಥವಾ ಬಿಸಕೋಡಿಲ್ ಅನ್ನು ತೆಗೆದುಕೊಳ್ಳಬಹುದು.

-ಎದೆ ಉರಿ ಮತ್ತು ಅಮ್ಲತೆ: ರಾನಿಟಿಡೈನ್, ಫಾಮೊಟಿಡೈನ್ ಅಥವಾ ಕ್ಯಾಲ್ ಶಿಯಮ್-ಮೆಗ್ ನೀಷಿಯಮ್ ಕಾರ್ಬೋನೇಟ್, ಎದೆ ಉರಿ ಹಾಗೂ ಆಮ್ಲತೆಯನ್ನು ಬೇಗನೆ ಕಮ್ಮಿ ಮಾಡುತ್ತದೆ. ಇದನ್ನು ಸ್ವಲ್ಪ ಮತ್ತು ಅಗ್ಗಾಗೆ ಊಟ ಮಾಡುವುದರಿಂದ ಎದೆಉರಿಯನ್ನು ಕಮ್ಮಿ ಮಾಡುವುದು.

-ಕೆಮ್ಮು-ನೆಗಡಿ: ಡೈಫೆಣ್ಹೈಡ್ರಮೈನ್, ಒಂದು ವಿರೋಧಿ ಅಲರ್ಜೆನ್, ಇದು ನಿಮ್ಮನ್ನು ಗರ್ಭಾವಸ್ಥೆಯಲ್ಲಿ ಸುರಕ್ಷಿತವಾಗಿರುಡುತ್ತದೆ. ನಿಮಗೆ ಅಸ್ವಸ್ಥತೆ ಅಥವಾ ಜ್ವರ ಬಂದಿರುವ ಸೂಚನೆಗಳೇನಾದರು ಅನುಭವಿಸಿದರೆ ಏಸ್ ಟಮಿನೋಫೆನ್ ಕೂಡ ಉಪಯೋಗಿಸಬಹುದು.

ಸೋಂಕು: ಸೋಂಕುಗಳನ್ನು ತಡೆಯಲು ಪೆನ್ಸಿಲಿನ್ ತುಂಬಾ ಸುರಕ್ಷಿತವಾಗಿದೆ. ಮತ್ತೆ,ಇದರ ಜೊತೆ ಜ್ವರಕ್ಕೆ ಮತ್ತು ಅಸ್ವಸ್ಥತೆಯನ್ನು ತಡೆಯಲು ಏಸ್ಟಮಿನೋಫೆನ್ ತೆಗೆದುಕೊಳ್ಳಬಹುದು.

ಚರ್ಮದ ದದ್ದುಗಳು: ಚರ್ಮದ ದದ್ದುಗಳಿಗೆ ಸ್ಥಳೀಯ ಔಷಧಿಗಳು ಅನ್ವಯಿಸುತ್ತದೆ. ಗರ್ಭಾವಸ್ಥೆಯಲ್ಲಿ ಹೈಡ್ರೊಕೊರ್ಟಿಸೋನ್ ತುಂಬಿದ ಮುಲಾಮನ್ನು ಹಚ್ಚುವುದರಿಂದ ಕೆರೆತ ಹಾಗು ದದ್ದುಗಳು ಕಡಿಮೆಯಾಗುತ್ತದೆ.

ಮೊದಲೇ ಬರುವ ವೈದ್ಯಕೀಯ ಖಾಯಿಲೆಗಳಾದ ಅಧಿಕ ರಕ್ತದೊತ್ತಡ,  ಮಧುಮೇಹ, ಹೈಪೋಥೈರಾಯ್ಡಿಸಮ್, ಉಬ್ಬಸ, ರೋಗಗ್ರಸ್ತವಾಗುವಿಕೆಯನ್ನು ಒಳ್ಳೆಯ ವೈದ್ಯರೊಂದಿಗೆ ನಿರ್ವಹಣೆ ಮಾಡಬೇಕು, ಏಕೆಂದರೆ ಅವರು ನಿಮಗೆ ಈಗಾಗಲೆ ಕೊಟ್ಟಿರುವ ಮಾತ್ರೆಗಳ ಪಟ್ಟಿಯಿಂದ ಬೇರೆ ರೀತಿಯ ಔಷಧಗಳನ್ನು ಸೂಚಿಸುತ್ತಾರೆ, ಇದು ಗರ್ಭಾವಸ್ಥೆಯಲ್ಲಿ ನಿಮಗೆ ಹಾನಿಯುಂಟು ಮಾಡುವುದಿಲ್ಲ.

 

-ಯಾವ ಔಷಧಿಗಳು ಗರ್ಭಾವಸ್ಠೆಯಲ್ಲಿ ಸುರಕ್ಷಿತವಲ್ಲ?

ಕೆಲವು ಜೌಷಧಗಳು ನಿಮ್ಮ ಮಗುವಿನ ಬೆಳವಣಿಗೆ ಅಥವಾ ಹುಟ್ಟಿನ ತೊಂದರೆಗಳಿಂದ ಬಳಲಬಹುದು. ನಿಮ್ಮ ಗರ್ಭಾವಸ್ಥೆಯಲ್ಲಿ ವೈದ್ಯರು ಸೂಚಿಸುವ ಮುನ್ನ ಯಾವ ಜೌಷಧಿಗಳನ್ನು ತೆಗೆದುಕೊಳ್ಳಬಾರದೆಂದು ಈ ಕೆಳಗೆ ಕೊಡಲಾಗಿದೆ. ಹಾಗೂ ನಿಮ್ಮ ವೈದ್ಯರಿಗೆ ಈ ಔಷಧಗಳನ್ನು ನಿಮ್ಮ ಗರ್ಭಾವಸ್ಥೆಯ ಸಮಯದಲ್ಲಿ ತೆಗೆದುಕೊಂಡಿರುತ್ತೇವೆ ಎಂದು ತಿಳಿಸಬೇಕಾಗುತ್ತದೆ.

-ಐಸೊಟ್ರೆಟಿನೋನ್

-ಲಿಸಿನ್ ಪ್ರಿಲ್ ಹಾಗೂ ಬೆನ್ಸೆಪ್ರಿಲ್ ಏಸ್ ಪ್ರತಿಬಂಧಕಗಳು

-ವ್ಯಾಲ್ಪ್ರಾಪಿಕ್ ಆಮ್ಲ

-ಡೊಕ್ಸಿಸೈಕ್ಲಿನ್ ಹಾಗೂ ಟೆಟ್ರಾಸೈಕ್ಲಿನ್

-ಮೆಥೊಟ್ರಾಕ್ಸೆಟ್

-ವಾರ್ ಫರಿನ್

-ಲಿಥಿಯಮ್

-ಅಲ್ಪಝೋಲಮ್

-ಇಬುಪ್ರೊಫೆನ್ ಹಾಗೂ ನಾಪ್ರೋಕ್ಸೆನ್

 

ಮಲ್ಟಿ ವಿಟಮಿನ್ ಹಾಗೂ ಗಿಡ ಮೂಲಿಕೆಗಳ ಪೂರಕಗಳಾನ್ನು ತೆಗೆದುಕೊಳ್ಳಬಹುದೇ?

ಸದ್ಯಕ್ಕೆ ನೀವು ಮಲ್ಟಿ ವಿಟಮಿನ್ ಅಥವಾ ಗಿಡ ಮೂಲಿಕೆಗಳ ಔಷಧಿಗಳನ್ನು ತೆಗೆದುಕೊಳ್ಳಬಹುದು. ಆದರೂ ಕೆಲವು ನಿಮ್ಮ ಗರ್ಭಾವಸ್ಥೆಯಲ್ಲಿ ಹಾನಿಕಾರಕವಾಗಬಹುದು. ನೀವು ನಿಮ್ಮ ವೈದ್ಯರ ಬಳಿ ಮಲ್ಟಿ ವಿಟಮಿನ್ ಅಥವಾ ಗಿಡ ಮೂಲಿಕೆಗಳ ಔಷಧಿಗಳ ಬಗ್ಗೆ ಮಾತನಾಡುವುದು ಒಳ್ಳೆಯದು. ಬಹಳಷ್ಟು ವೈದ್ಯರು ನಿಮಗೆ ಮಲ್ಟಿ ವಿಟಮಿನ್ ಅಥವಾ ಗಿಡ ಮೂಲಿಕೆಗಳ ಔಷಧಿಗಳಾದ ಹೆಚ್ಚಿನ ಫೋಲಿಕ್ ಆಮ್ಲ ಇರುವುದನ್ನು ಹುಟ್ಟಿನ ದೋಷಗಳಿರಬಾರದೆಂದು ಉಪಯೋಗಿಸಲು ತಿಳಿಸುತ್ತಾರೆ ಹಾಗೂ ವಿಟಮಿನ್ ಡಿ ಮತ್ತು ಐರನ್ ಮಾತ್ರೆಗಳನ್ನು ತೆಗೆದುಕೊಳ್ಳಲು ಹೇಳುತ್ತಾರೆ.

ನಿಮಗೂ ಹಾಗೂ ಮಗುವಿಗು ಯಾವುದು ಒಳ್ಳೆಯದೆಂದು ನಿಮ್ಮ ವೈದ್ಯರಿಗೆ ಚೆನ್ನಾಗಿ ತಿಳಿದಿರುತ್ತದೆ ಎಂದು ನೆನಪಿನಲ್ಲಿಟ್ಟುಕೊಳ್ಳಿ.

ಬ್ಯಾನರ್ ಚಿತ್ರ: americanpregnancy

ಹಕ್ಕು ತ್ಯಾಗ:  ಈ ಲೇಖನದ ಮಾಹಿತಿಯು ಯಾವುದೇ ಉದ್ದೇಶವನ್ನು ಹೊಂದಿರುವುದಿಲ್ಲ. ಅಥವಾ ವೈದ್ಯಕೀಯ ವೃತ್ತಿಯ, ವೈದ್ಯಕೀಯ ಸಲಹೆ ಅಥವಾ ಚಿಕಿತ್ಸೆಯ ಬದಲಿ ಅಲ್ಲ. ಯಾವಗಲೂ ನಿಮ್ಮ ವೈದ್ಯರ ಸಲಹೆ  ಪಡೆಯಿರಿ.

 

#babychakrakannada
logo

Select Language

down - arrow
Personalizing BabyChakra just for you!
This may take a moment!