1 Jul 2019 | 1 min Read
Medically reviewed by
Author | Articles
ಉದ್ಯೋಗದಲ್ಲಿರುವ ಮಹಿಳೆಯರಿಗೆ ತಮ್ಮ ಗರ್ಭಾವಸ್ಥೆಯು ಒಂದು ರೀತಿಯ ಚಾತುರ್ಯದ ಕಾರ್ಯ ಸಮತೋಲನದ ಅವಧಿ. ಬಹುತೇಕ ಮಹಿಳೆಯರು ತಮ್ಮ ಗರ್ಭಾವಸ್ಥೆಯಲ್ಲಿ ತಮ್ಮ ಉದ್ಯೋಗವನ್ನು ನಿರ್ವಹಿಸುತ್ತಾರೆ, ಅವರಿಗೆ ಇದರಿಂದ ಅವರ ಚಟುವಟಿಕೆಯು ತಮ್ಮ ಮಗುವಿನ ಹಾಗೂ ತಮ್ಮ ಆರೋಗ್ಯದ ಅಡ್ಡಪರಿಣಾಮಗಳ ಬಗ್ಗೆ ಅರ್ಥ ಮಾಡಿಕೊಳ್ಳುವುದು ಒಳ್ಳೆಯದು.
ಧೀರ್ಘಾವದಿಯ ಕೆಲಸ ಮಾಡುವುದು ಗರ್ಭಾವಸ್ಥೆಯ ಮುಂಚೆ ಸರಿ ಆದರೆ ಗರ್ಭ ಧರಿಸಿದ ಮೇಲೆ ತಮ್ಮ ಮತ್ತು ಮಗು ಇಬ್ಬರ ಮೇಲೂ ಒತ್ತಡ ಬೀಳುತ್ತದೆ. ಈ ಅಭ್ಯಾಸವನ್ನು ಮುಂದುವರೆಸುವುದು ನಿಮಗೆ ಒತ್ತಡವಾಗಿ ಇದರ ಅಂಶವು ವೈದ್ಯಕೀಯ ಕ್ಲೇಶಗಳಿಗೆ ಕಾರಣವಾಗಬಹುದು. ದೀರ್ಘ ಕಾಲದ ಕೆಲದಿಂದ ಕೆಟ್ಟ ಪರಿಣಾಮಗಳೆಂದರೆ ಹೆಚ್ಚು ರಕ್ತದೊತ್ತಡ, ಅಸಮತೋಲನ ಹಾರ್ಮೋನುಗಳು ಮತ್ತು ಬಳಲಿಕೆ. ಈ ಅನೇಕ ಕಾರಣಗಳಿಂದ ಅಕಾಲಿಕ ಜನನ ಮತ್ತು ಮಗುವಿನ ತೂಕ ಕಡಿಮೆಯಾಗಬಹುದು. ಈ ಲೇಖನದಲ್ಲಿ ನಾವು ನಿಮಗೆ ಗರ್ಭಾವಸ್ಥೆಯಲ್ಲಿ ಧೀರ್ಘ ಅವಧಿಯ ಕೆಲಸ ಮಾಡುವ ಪರಿಣಾಮಗಳ ಬಗ್ಗೆ ಸಹಾಯ ಮಾಡುತ್ತೇವೆ.
ಬಸರಿನ ನಂಜು ಗರ್ಭಧಾರಣೆಯಲ್ಲಿ ಧೀರ್ಘಾವದಿ ಕೆಲಸ ಮಾಡುವುದರಿಂದ ಒಂದು ಪ್ರಮುಖ ಪರಿಣಾಮ. ಈ ಸ್ಥಿತಿಯು ಹೆಚ್ಚು ರಕ್ತದೊತ್ತಡ ಮತ್ತು ಬೇರೆ ಅಂಗಗಳಿಗೆ ಹಾನಿಯುಂಟು ಮಾಡುವ ಗುಣಲಕ್ಷಣಗಳಿವೆ, ಅದರಲ್ಲೂ ಯಕೃತ್ತು ಅಥವಾ ಮೂತ್ರಪಿಂಡ. ಒಂದು ಅಧ್ಯಯನದ ಪ್ರಕಾರ ಬಸರಿನ ನಂಜು ನಿರ್ದಿಷ್ಟ ಬೆಸುಗೆಯ ನಡುವೆ ನಿರಂತರ ಒತ್ತಡದ ದೀರ್ಘ ಗಂಟೆಗಳ ಕೆಲಸ ಮತ್ತು ಇದರಿಂದ ಅಪಾಯ ಹೆಚಾಗುತ್ತದೆ. ಬಸರಿನ ನಂಜಿನಿಂದ ಕೈ-ಕಾಲುಗಳು ಊದಿಕೊಳ್ಳುವುದು, ರಕ್ತ ಹೆಪ್ಪುಗಟ್ಟಬಹುದು, ಇನ್ನು ಕೆಲವು ಸಂದರ್ಭಗಳಲ್ಲಿ, ಇದು ಅಪಾಯಕಾರಿಯಾಗಬಹುದು.
ಒಂದು ಅಧ್ಯಯನವು ತಮ್ಮ ಮುಖಾಂಶಗಳಲ್ಲಿ ದೀರ್ಘಾವಧಿಯ ಒತ್ತಡದ ಕೆಲಸವು ಗರ್ಭಾದಾರಣೆಯಲ್ಲಿ ಹಾರ್ಮೋನುಗಳ ಒತ್ತಡ ಹೆಚ್ಚಾಗುವುದು ಎಂದು ಹೇಳಿದ್ದಾರೆ. ಹಾರ್ಮೋನುಗಳ ಅಸಮತೋಲನದಿಂದ ರಕ್ತದೊತ್ತಡ ಹೆಚ್ಚಾಗಿ ಅಕಾಲಿಕ ಪ್ರಸವಕ್ಕೆ ದಾರಿ ಮಾಡಿಕೊಡುತ್ತದೆ.
ಕೆಲವು ಮಹಿಳೆಯರು ಕೈಗಾರಿಕಾ ಕೆಲಸದಲ್ಲಿ ಬಹಳಷ್ಟು ಗಂಟೆಗಳ ಕಾಲ ನಿಂತು ಕೆಲಸ ಮಾಡಬೇಕಾಗಬಹುದು. ಉದಾಹರಣೆಗೆ: ಅಡುಗೆಯವರು, ದಾದಿಯರು, ಮಾಣಿಗಳು ಮತ್ತು ಪೊಲೀಸ್ ಅಧಿಕಾರಿಗಳು ತಮ್ಮ ವೃತ್ತಿಯಲ್ಲಿ ಮಹಿಳೆಯರು ಇಡೀ ದಿನ ನಿಂತು ಕೆಲಸ ಮಾಡಬೇಕಾಗುತ್ತದೆ. ಈ ರೀತಿಯ ಕೆಲಸದಲ್ಲಿ ಅದರಲ್ಲೂ ಕೊನೆಯ ಅರ್ಧ ಗರ್ಭಾವಸ್ಥೆಯಲ್ಲಿ ರಕ್ತದ ಹರಿವನ್ನು ತೊಂದರೆ ಮಾಡುತ್ತದೆ. ಆದ್ದರಿಂದ, ಹೆಚ್ಚಿನ ಅಪಾಯದ ಗರ್ಭದಾರಣೆಯಲ್ಲಿ ಮಹೆಳೆಯರು ನಾಲ್ಕು ಘಂಟೆಗಳ ಕಾಲ ನಿಂತು ಕೆಲಸ ಮಾಡುವವರು ಈ ಕೆಲಸವನ್ನು ತಮ್ಮ 24ನೇ ವಾರದಲ್ಲಿ ಬಿಟ್ಟು ಯಾವುದಾದರು ಕೂತು ಮಾಡುವ ಕೆಲಸವನ್ನು ಮಾಡುವುದು ಒಳ್ಳೆಯದು ಎಂದು ಸೂಚಿಸಲಾಗಿದೆ.
ಧೀರ್ಘಾವಧಿಯ ಕೆಲಸದಲ್ಲಿ ಆರೋಗ್ಯವು ಬಹಳ ಮುಖ್ಯ ಸಮಸ್ಯೆಯಾಗಿದೆ. ಗರ್ಭಾವಸ್ಥೆಯಲ್ಲಿ ಆರೋಗ್ಯ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದರೆ ನಿಮ್ಮ ಆರೊಗ್ಯದ ಸಮಸ್ಯೆಯು ಹಲವಾರು ಜೈವಿಕ ಅಂಶಗಳಾದ ವೈರಸ್, ಬ್ಯಾಕ್ಟೀರಿಯಾ, ಶಿಲೀಂದ್ರ ಅಥವಾ ಪರಾವಲಂಬಿಗೆ ಆಗಬಹುದು.
ಧೀರ್ಘ ಗಂಟೆಗಳ ಕೆಲಸ ಮತ್ತು ಹೆರಿಗೆಯ ನಡುವೆ ಸಮತೋಲನ
ಕೆಲವು ಸಣ್ಣ ಬದಲಾವಣೆಗಳು ಕೆಲಸದಲ್ಲಿ ಹೆಚ್ಚು ಬದಲಾವಣೆಗಳನ್ನು ನಿಮ್ಮ ಹುಟ್ಟುವ ಮಗುವಿನ ಆರೋಗ್ಯದಲ್ಲಿ ಆಗಬಹುದು. ಸರಿಯಾದ ಚೆನ್ನಾಗಿ ಕಾಲಿಗೆ ಹೊಂದುವ ಶೂಗಳನ್ನು ಬಳಸುವುದು, ತಿರುಗಾಡುವ ಕಾರ್ಯಗಳು ಮತ್ತು ಒಮ್ಮೆ ಕೆಲಸದ ನಡುವೆ ಕಾಲುಗಳು ಮೇಲಿಟ್ಟು ಆರಾಮ ಮಾಡುವುದು ಇವೆಲ್ಲಾ ಸಹಾಯ ಮಾಡುತ್ತದೆ. ನಿಮ್ಮ ಕೆಲಸದ ಒತ್ತಡ ಜಾಸ್ತಿಯಾದಾಗ ವಿಶ್ರಾಂತಿಯ ವೇಳೆಯನ್ನು ನಿಗದಿಪಡಿಸಿಕೊಳ್ಳಿ. ನೀವು ಇರುವ ಸ್ಥಳದಲ್ಲಿ ಹವಾಮಾನದ ಬದಲಾವಣೆಗಳು ಆಗಗ್ಗೆ ಆಗುತ್ತಿದ್ದರೆ ಅದು ನಿಮಗ ತೊಂದರೆಯಾಗ ಬಹುದು ಎಂದು ಎನಿಸಿದರೆ ನಿಮ್ಮ ವೈದ್ಯರನ್ನು ಕೂಡಲೇ ಕಾಣುವುದು ಒಳ್ಳೆಯದು.
ಗರ್ಭಧಾರಣೆಯ ಶುಭಾಶಯಗಳು!
A