ಗರ್ಭಾವಸ್ಥೆಯಲ್ಲಿ ರಕ್ತಹೀನತೆ

cover-image
ಗರ್ಭಾವಸ್ಥೆಯಲ್ಲಿ ರಕ್ತಹೀನತೆ

ಗರ್ಭಾವಸ್ಥೆಯಲ್ಲಿ ನಿಮ್ಮ ದೇಹಕ್ಕೆ ವಿವಿಧ ಪೌಷ್ಠಿಕಾಂಶಗಳು ಮತ್ತು ಹೆಚ್ಚುವರಿ ಪ್ರಮಾಣದ ಪೌಷ್ಠಿಕ ಅಗತ್ಯಗಳು ನಿಮ್ಮ ಮತ್ತು ನಿಮ್ಮ ಮಗುವಿಗೆ ಬೇಕಾಗುತ್ತದೆ. ಸಾಕಷ್ಟು ಪೌಷ್ಠಿಕಾಂಶಗಳ ದೇಹಕ್ಕೆ ಒದಗಿಸಿಲ್ಲವೆಂದರೆ ನಿಮ್ಮ ದೇಹವು ಸಮರ್ಪಕವಾಗುತ್ತದೆ ಉದಾಹರಣೆಗೆ ಗರ್ಭಾವಸ್ಠಿಯಲ್ಲಿ ಕೆಡಿಮೆ ಹಿಮೋಗ್ಲೋಬಿನ್, ಇದನ್ನು ರಕ್ತ ಹೀನತೆ ಎಂದು ಕರೆಯುತ್ತಾರೆ, ಇದು ಸಾಮಾನ್ಯ ಮತ್ತು ಇದು ಕಬ್ಬಿಣದ ಕೊರತೆಯಿಂದ ಉಂಟಾಗುತ್ತದೆ.

 

ಗರ್ಭಾವಸ್ಥೆಯಲ್ಲಿ ರಕ್ತಹೀನತೆಯ ಕಾರಣಗಳು

ಅಂಗಾಂಶಗಳಿಗೆ ಕಬ್ಬಿಣವು ರಕ್ತದ ಉತ್ಪಾದನೆಯಲ್ಲಿ ಮತ್ತು ಆಮ್ಲಜನಕವನ್ನು ಸಾಗಿಸುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ದೇಹಕ್ಕೆ ಗರ್ಭಾವಸ್ಥೆಯಲ್ಲಿ ಎರಡುಪಟ್ಟು ಹೆಚ್ಚು ಕಬ್ಬಿಣದ ಅಂಶವು ನಿಮಗೆ ಮತ್ತು ನಿಮ್ಮ ಮಗುವಿಗೆ ಹೆಚ್ಚುವರಿ ರಕ್ತವನ್ನು ಉತ್ಪಾದಿಸಲು ಬೇಕಾಗುತ್ತದೆ. ಮಗುವು ಕಬ್ಬಿಣವನ್ನು ಸಂಗ್ರಹಿಸಿ ಹುಟ್ಟಿದ ನಂತರ ಆರೋಗ್ಯವಾಗಿರಲು ಮತ್ತು ರಕ್ತಹೀನತೆಯನ್ನು ತಡೆಗಟ್ಟುತ್ತದೆ. ಹೀಮೋಗ್ಲೋಬಿನ್ ಕಬ್ಬಿಣದ ಮಟ್ಟಕ್ಕೆ ಸೇರಿರುವುದರಿಂದ, ಕಬ್ಬಿಣದ ಮಟ್ಟವು ಕಡಿಮೆಯಾದರೆ ರಕ್ತಹೀನತೆಯಾಗುತ್ತದೆ. ಒಂದು ಹುಣ್ಣಿನ ಕಾರಣದಿಂದ ರಕ್ತ ನಷ್ಟವಾಗುವುದು ಅಥವಾ ಬೇರೆ ಕಾರಣದಿಂದ ರಕ್ತ ಹೀನತೆಯಾಬಹುದು.

 

ಗರ್ಭಾವಸ್ಥೆಯಲ್ಲಿ ರಕ್ತಹೀನತೆಯ ಚಿಹ್ನೆಗಳು

ರಕ್ತ ಹೀನತೆಯ ಚಿಹ್ನೆಗಳು ಆರಂಭದಲ್ಲಿ ಸಣ್ಣದಾಗಿದ್ದರೂ, ನಂತರ ಅದು ಕೆಟ್ಟದಾಗಬಹುದು. ಇದನ್ನು ಗಮನಿಸಿ ಅದಕ್ಕೆ ತಕ್ಕ ಚಿಕೆತ್ಸೆ ಕೊಡುವುದು ಮುಖ್ಯ. ಕೆಲವು ಸಾಮಾನ್ಯ ರಕ್ತ ಹೀನತೆಯ ಚಿಹ್ನೆಗಳೆಂದರೆ:

  • ಸುಸ್ತು ಅಥವಾ ದೌರ್ಬಲ್ಯ
  • ಉಸಿರಾಟದ ತೊಂದರೆ
  • ತಲೆತಿರುಗುವಿಕೆ
  • ತಣ್ಣಗಾಗುವ ಕೈಗಳು ಮತ್ತು ಪಾದಗಳನ್ನು
  • ತೆಳು ಚರ್ಮ
  • ಕ್ಷಿಪ್ರ ಅಥವಾ ಅನಿಯಮಿತ ಎದೆಬಡಿತ
  • ಎದೆ ನೋವು

 

ಗರ್ಭಾವಸ್ಥೆಯಲ್ಲಿ ರಕ್ತಹೀನತೆಯ ಚಿಕಿತ್ಸೆ

ಕಬ್ಬಿಣದ ಕೊರತೆಯನ್ನು ಸುಲಭವಾಗಿ ವ್ಯತಿರಿಕ್ತ ಮಾಡಬಹುದು ಹೇಗೆಂದರೆ ಕಬ್ಬಿಣ ಭರಿತ ಆಹಾರ ಮತ್ತು ಕಬ್ಬಿಣ ಪೂರಕ ಆಹಾರವನ್ನು ನೀವು ಸೇವಿಸುವುದರಿಂದ. ಅಪರೂಪದ ರಕ್ತ ಹೀನತೆಯ ಸಂದರ್ಭಗಳಲ್ಲಿ ರಕ್ತ ವರ್ಗಾವಣೆ ಮಾಡಬೇಕಾಗುವಂತಹ ಆಕ್ರಮಣಕಾರಿ ಚಿಕಿತ್ಸೆ ಮಾಡಬೇಕಾಗುತ್ತದೆ.

 

ಗರ್ಭಧಾರಣೆಯ ರಕ್ತಹೀನತೆಯನ್ನು ತಡೆಗಟ್ಟುವುದು

ಗರ್ಭಾವಸ್ಥೆಯಲ್ಲಿ ರಕ್ತ ಹೀನತೆಯನ್ನು ತಡೆಯಲು ಅದನ್ನು ಬಗೆಹರಿಸಬೇಕು. ಭಾರತದಲ್ಲಿ ಗರ್ಭಿಣಿ ಮಹಿಳೆಯರು ತಮ್ಮ ಆಹಾರದಲ್ಲಿ ದಿನಕ್ಕೆ 35 ಎಮ್ ಜಿ ಯಷ್ಟು ಕಬ್ಬಿಣದ ಅಂಶವನ್ನು ತೆಗೆದುಕೊಳ್ಳುತ್ತಾರೆ. ಇದನ್ನು ಸಾಧಿಸಲು ನಿಮ್ಮ ಆಹಾರದಲ್ಲಿ ಹೆಚ್ಚುವರಿ ಕಬ್ಬಿಣ ಅಂಶದ ಊಟವನ್ನು ಸೇವಿಸಬೇಕು ಅವು ಹಸಿರು ಸೊಪ್ಪು, ಮೊಟ್ಟೆ, ಮಾಂಸ, ಕೋಳಿ, ಬಾದಾಮಿ, ಬೀಜಗಳು, ಹುರುಳಿ ಇತ್ಯಾದಿ. ವಿಟಮಿನ್ ಸಿ ಉತ್ತಮ ಕಬ್ಬಿಣವನ್ನು ಹೀರುವುದಕ್ಕೆ ನಿಂಬೆಕುಲ, ಬೆರ್ರಿ ಹಣ್ಣು, ದಪ್ಪ ಮೆಣಸಿನಕಾಯಿ, ಟಮೋಟೊಗಳಿಂದ ಗಳಿಸಬಹುದು.

ಕಬ್ಬಿಣವನ್ನು ಪಡೆಯಲು ಅಗತ್ಯ ಪ್ರಮಾಣದ ಆಹಾರ ಒಂದೇ ಸಾಕಾಗುವುದಿಲ್ಲ, ಆದ್ದರಿಂದ ಕಬ್ಬಿಣ ಪೂರಕದ ಆಹಾರವನ್ನು ವೈದ್ಯರು ಶಿಫಾರಸ್ಸು ಮಾಡುತ್ತಾರೆ. ಕಬ್ಬಿಣ ಪೂರಕವಾದ ಆಹಾರವು  ನಿಮ್ಮ ಪ್ರಸವಪೂರ್ವ ಜೀವಸತ್ವಗಳ ಭಾಗವಾಗಿರಬೇಕು ಹಾಗೂ ಅದನ್ನು ತಪ್ಪಿಸಿಕೊಳ್ಳಬಾರದು. ಗರ್ಭಾವಸ್ಥೆಯ ಸಮಯದಲ್ಲಿ ರಕ್ತ ಹೀನತೆ ಮತ್ತು ಅದರ ತೊಡಕುಗಳನ್ನು ತಡೆಗಟ್ಟಲು ಹಿಮೋಗ್ಲೋಬಿನ ಮಟ್ಟವನ್ನು ನಿಯಮಿತ ಪರಿಶೀಲನೆ  ಮಾಡಿಸಬೇಕಾಗುತ್ತದೆ.

 

#babychakrakannada
logo

Select Language

down - arrow
Personalizing BabyChakra just for you!
This may take a moment!