ಗರ್ಭಾವಸ್ಥೆಯಲ್ಲಿ ವಾಯುವಿಕಾರಗಳಿಂದ ಉಂಟಾಗುವ ಸಮಸ್ಯೆಗಳನ್ನು ನಿರ್ವಹಿಸಲು 5 ಸಲಹೆಗಳು

cover-image
ಗರ್ಭಾವಸ್ಥೆಯಲ್ಲಿ ವಾಯುವಿಕಾರಗಳಿಂದ ಉಂಟಾಗುವ ಸಮಸ್ಯೆಗಳನ್ನು ನಿರ್ವಹಿಸಲು 5 ಸಲಹೆಗಳು

ಗರ್ಭಧಾರಣೆಯು ನಮ್ಮ ದೇಹದಲ್ಲಿ ಬಹಳಷ್ಟು ಬದಲಾವಣೆಗಳನ್ನು ತರುತ್ತದೆ. ಇದು ನಮ್ಮ ದೇಹದ ಕೆಲವು ವ್ಯವಸ್ಥೆಗಳನ್ನು ಸಹ ದುರ್ಬಲಗೊಳಿಸುತ್ತದೆ ಮತ್ತು ಒಬ್ಬ ಮಹಿಳೆಗೆ ಉತ್ತಮ ಜೀರ್ಣಶಕ್ತಿ ಇದ್ದಿಲ್ಲದಿದ್ದರೆ ಗರ್ಭಿಣಿಯಾದಾಗ ಗ್ಯಾಸ್ ಸಂಬಂಧ ಸಮಸ್ಯೆಗಳನ್ನು ಎದುರಿಸಬಹುದು.

ವಿಶೇಷವಾಗಿ ಕೆಲ ತಿಂಗಳು ಕಳೆದಂತೆ ಗರ್ಭಕೋಶ ಬೆಳೆಯುತ್ತಾ ಹೋದಂತೆ ಕಿಬ್ಬೊಟ್ಟೆಯ ಅಂಗಗಳ ಮೇಲೆ ಒತ್ತಡ ಹೆಚ್ಚಾಗಿ ಈ ಸಮಸ್ಯೆ ಉಲ್ಬಣವಾಗುತ್ತದೆ. ಇದನ್ನು ನಿರ್ವಹಿಸಸಲು ಕೆಲವು ಸಲಹೆಗಲು ಕೆಳಕಂಡಂತಿವೆ:

  1. ಮೊಟ್ಟಮೊದಲೆನೆಯದಾಗಿ ನಿಮ್ಮ ಆಹಾರವನ್ನು ಸರಿಯಾದ ಸಮಯಕ್ಕೆ ಸೇವಿಸಿ. ವಾಕರಿಕೆ ಅಥವಾ ಅಸ್ವಸ್ಥತೆ ಇದ್ದರೇ ಹೊರತಾಗಿ ಯಾವುದೇ ಕಾರಣಕ್ಕೂ ತಿಂಡಿ ಅಥವಾ ಊಟವನ್ನು ತಪ್ಪಿಸಬೇಡಿ. ಸಮ ಪೌಷ್ಟಿಕಾಂಶ ಇರುವ ಆಹಾರವನ್ನು ಸೇವಿಸಿ. ತಿಂಡಿ, ಮಧ್ಯಾಹ್ನ ಮತ್ತು ರಾತ್ರಿ ಊಟದ ಜೊತೆಗೆ ಕೆಲವು ಸ್ವಲ್ಪ ಊಟವನ್ನು ಸಹ ಮಾಡಿ. ಹಣ್ಣು, ತರಕಾರಿ ಇತ್ಯಾದಿ. ಹಗಲಿನಲ್ಲಿ ಸಮವಾದ ಸಣ್ಣ ಊಟ ಮಾಡುವುದು ಮಂತ್ರವಾಗಬೇಕು. ಎಂದಿಗೂ ಹಸಿವಿನಿಂದ ಉಳಿಯಬೇಡಿ, ಇದು ಸಹ ಗ್ಯಾಸ್ ಸಂಭಂಧ ಸಮಸ್ಯೆಗೆ ಕಾರಣವಾಗಬಹುದು.
  2. ಕಾರ್ಬ್ಸ್ಸ, ಪ್ರೋಟೀನ್ಸ್, ಮಿನರಲ್ಸ್ಮ ಮತ್ತು ವಿಟಮಿನ್ಸ್ ಮತ್ತು ಸ್ವಲ್ಪ ಮಟ್ಟದ ಕೊಬ್ಬಿನಂಶವಿರುವಂಥಹ ಸಮತೋಲನವಾದ ಆಹಾರವನ್ನು ಸೇವಿಸಿ. ಉತ್ತಮ ಜೀರ್ಣಕ್ರಿಯೆಗೆ ಮತ್ತು ಮಲಬದ್ದತೆಯನ್ನು ತಪ್ಪಿಸಲು ಫೈಬರ್  ಇರುವಂತಹ ಆಹಾರ ಮತ್ತು ಸಾಕಷ್ಟು ನೀರು ಮತ್ತು ದ್ರವ್ಯಗಳನ್ನು ಸೇವಿಸಿ. ಮೊಸರು ಮತ್ತು ಮಜ್ಜಿಗೆಯನ್ನು ನಿಮ್ಮ ಆಹಾರದಲ್ಲಿ ಸೇರಿಸಲು ಪ್ರಯತ್ನಿಸಿ.
  3. ನೀವು ಈಗಾಗಲೇ ಗ್ಯಾಸ್ ಸಮಸ್ಯೆಗೆ ಒಳಗಾಗಿದ್ದರೆ ಊಟದ ನಂತರ ತಪ್ಪದೆ ವಾಕ್ ಮಾಡಿ. ಹಗಲಿನಲ್ಲಿ ಸಕ್ರಿಯವಾಗಿ ಇರುವುದರಿಂದ, ಮತ್ತು ಬೆಳಗ್ಗೆ ಸ್ವಲ್ಪ ಯೋಗ ಮಾಡುವುದು ಕೂಡ ಸಹಾಯ ಮಾಡುತ್ತದೆ. ಊಟದ ಮಧ್ಯೆ ನೀರು ಕುಡಿಯುವುದನ್ನು ತಪ್ಪಿಸಿ ಮತ್ತು ಊಟದ ಮುಂಚೆ ಅಥವಾ ನಂತರ ಅರ್ಧ ಗಂಟೆ ಅಂತರದಲ್ಲಿ ಕುಡಿಯಿರಿ. ನಿಮಗೆ ವಿಶ್ರಾಂತಿಯಿ ತೊಗೋಬೇಕು ಅನ್ನಿಸಿದಾಗ ಎಡಗಡೆಗೆ ಮಲಗಿ ವಿಶ್ರಮಿಸಿ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ.
  4. ನೈಸರ್ಗಿಕ ಪರಿಹಾರಗಳಾದ ಬೆಚ್ಚಗಿನ ಅಜ್ವಾನ್ನ್ ಮತ್ತು ಜೀರಾ ನೀರನ್ನು( ಅಜ್ವಾನ್ನ್ ಮತ್ತು ಜೀರಾವನ್ನು ನೀರಿನಲ್ಲಿ ಕುದಿಸಿ, ಸೋಸಿ ಮತ್ತು ಸ್ವಲ್ಪ ಉಪ್ಪು ಸೇರಿಸಿ) ಊಟದ ನಂತರ ಅಥವಾ ಮಜ್ಜಿಗೆಗೆ ಸ್ವಲ್ಪ ಕಪ್ಪು ಉಪ್ಪು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ. ನಿಂಬೆ ರಸವನ್ನು ಸ್ವಲ್ಪ ಬೆಚ್ಚನೆ ನೀರಿನ ಜೊತೆ ಕುಡಿಯುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ. ಜೀರಿಗೆ ಅಥವಾ ಮೆಂತ್ಯೆ ಬೀಜಗಳು ಸಹ ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ. ಇದನ್ನು ನೀರಿನಲ್ಲಿ ಕುದಿಸಿ ಕುಡಿಯಬಹುದು ಅಥವಾ ಅಡುಗೆಗೆ ಹಾಕಬಹುದು.
  5. ನಿಮಗೆ ತಕ್ಷಣಕ್ಕೆ ಗ್ಯಾಸ್ ಸಮಸ್ಯೆಯಿಂದ ತೀವ್ರ ನೋವು ಬಂದಲ್ಲಿ ತಕ್ಷಣ ಪರಿಹಾರವಾಗಿ ನಿಮ್ಮ ಹೊಕ್ಕಳ ಸುತ್ತ ಮತ್ತು ಸ್ವಲ್ಪ ಮೇಲೆ ಎದೆಯ ಕೆಳಗಿನವರೆಗೂ ಮುಲಾಮನ್ನು ಹಚ್ಚಿ. ಒಂದು ಬೆಚ್ಚಗಿನ ಒತ್ತು ಸಹ ಸಹಾಯ ಮಾಡುತ್ತದೆ.

ಹೊರಗಿನ ಆಹಾರ ಮತ್ತು ತ್ವರಿತ ಆಹಾರ ಅಥವಾ ಹೆಚ್ಚು ಎಣ್ಣೆ, ತುಪ್ಪ, ಸಕ್ಕರೆ ಅಥವಾ ಸಂರಕ್ಷಕಗಳನ್ನು ತುಂಬಿದ ಆಹಾರವನ್ನು ತಪ್ಪಿಸುವಂತಹ ಸಣ್ಣ ಸಲಹೆಗಳು ಸಹ ಸಹಾಯ ಮಾಡುತ್ತವೆ. ಅತಿಯಾಗಿ ತಿನ್ನುವುದು ಮತ್ತು ಬಯಕೆ ಎಂದು ತೀರಾ ಖಾರ ಅಥವಾ ಗ್ಯಾಸ್ ಆಗುವಂತಹ ಚೀಸ್, ಬೆಳ್ಳುಳ್ಳಿ ಮತ್ತು ಕೆಲವು ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಿ.

ಹೀಗಾಗಿ,  ಗ್ಯಾಸ್ ಸಮಸ್ಯೆಯಿಂದ ಬಳಲುವ ಗರ್ಭಿಣಿಯರಲ್ಲಿ ಮತ್ತು ಇತರರಲ್ಲಿ ಸಹ ಈ ಮೇಲ್ಕಂಡ ಕೆಲವು ಸಲಹೆಗಳು ನಿವಾರಿಸುತ್ತದೆ . ನಿಮಗೆ ತೀವ್ರ ಗ್ಯಾಸ್ ಸಮಸ್ಯೆಯಿಂದ ಅಸಿಡಿಟಿ ಅಥವಾ ಎದೆ ಉರಿ ಕಾಣಿಸಿಕೊಂಡಲ್ಲಿ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

 

#babychakrakannada
logo

Select Language

down - arrow
Personalizing BabyChakra just for you!
This may take a moment!