• Home  /  
  • Learn  /  
  • ಗರ್ಭಾವಸ್ಥೆಯಲ್ಲಿ ನೀವು ಕೆಲಸ ಮಾಡುವಾಗ ಮಾಡಬೇಕಾದುದು ಮತ್ತು ಮಾಡಬಾರದ ಕೆಲಸಗಳ ಪಟ್ಟಿ
ಗರ್ಭಾವಸ್ಥೆಯಲ್ಲಿ ನೀವು ಕೆಲಸ ಮಾಡುವಾಗ ಮಾಡಬೇಕಾದುದು ಮತ್ತು ಮಾಡಬಾರದ ಕೆಲಸಗಳ ಪಟ್ಟಿ

ಗರ್ಭಾವಸ್ಥೆಯಲ್ಲಿ ನೀವು ಕೆಲಸ ಮಾಡುವಾಗ ಮಾಡಬೇಕಾದುದು ಮತ್ತು ಮಾಡಬಾರದ ಕೆಲಸಗಳ ಪಟ್ಟಿ

1 Jul 2019 | 1 min Read

Medically reviewed by

Author | Articles

ಗರ್ಭಿಣಿಯಾಗಿದ್ದಾಗ ಕೆಲಸ ಮಾಡುವುದು ಅವರ ಆಯ್ಕೆಯ ಪ್ರಶ್ನೆ. ಆದರೆ ಕೆಲವೊಮ್ಮೆ, ಸಂದರ್ಭಗಳಿಂದ ಅಥವಾ ಆರ್ಥಿಕ ನಿರ್ಬಂಧನೆಗಳಿಂದ, ಮಹಿಳೆಯರು ಗರ್ಭವಾಸ್ಥೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಇಂಥಾ ಇಕ್ಕಟಾದ ಪರಿಸ್ಥಿತಿಯಿಂದ ಗರ್ಭಿಣಿಯರಿಗೆ ಕೆಲಸ ಮತ್ತು ಅವರ ಆರೈಕೆ ಮಾಡಿಕೊಳ್ಳುವುದು ಸಹ ಕಷ್ಟವಾಗುತ್ತದೆ. ಈ ಸಮಯದಲ್ಲಿ ತಮ್ಮ ದೇಹದಲ್ಲಿಯಾಗುವ ಬದಲಾವಣೆಗಳಿಂದ ಕೆಲಸ ಮಾಡುವ ಮಹಿಳೆಯರಿಗೆ ಗರ್ಭವಾಸ್ಥೆಯ ಸಮಯದಲ್ಲಿ ಕಷ್ಟವಾಗುತ್ತದೆ. ಗರ್ಭವಸ್ಥೆ ಸುಂದರವಾಗಿದ್ದರೂ ಸಹ ಇದು ತನ್ನದೇ ಆದ ಅನಿವಾರ್ಯ ಸವಾಲುಗಳನ್ನು ಹೊಂದಿರುತ್ತದೆ.

ಬೆಳಗ್ಗಿನ ಬೇನೆ, ಮನೋಭಾವದ ಬದಲಾವಣೆ, ತಲೆನೋವು, ಮತ್ತು ಇತರ ನೋವುಗಳು ನಿಮ್ಮ ಕಛೇರಿಯ ವೇಳೆಗೆ ಪರಿಶಿಷ್ಟವಾಗಿ ಬರುವುದಿಲ್ಲ. ಅವು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಬರಬಹುದು. ನೀವು ಗರ್ಭವಾಸ್ಥೆಯಲ್ಲಿ ಕೆಲಸ ಮಾಡಲು ಬಯಸಿದ್ದರೆ ಕೆಲವು ವಿಷಯಗಳನ್ನು ಮೊದಲೇ ತಿಳಿದಿರಬೇಕು. ನೀವು ಗರ್ಭವಾಸ್ಥೆಯಲ್ಲಿ ಕೆಲಸಕ್ಕೆ ಹೋಗಲು ನಿರ್ಧರಿಸಿದರೆ ಮತ್ತು ನೀವು ಆಟವನ್ನು ನಿಯಮದ ಪ್ರಕಾರ ಆಡಿದರೆ ಈ ಅಪ್ರಾಯೋಗಿಕವೇನಲ್ಲ. ಅನೇಕ ಮಹಿಳೆಯರು ತಾವು ಗರ್ಭಿಣಿ ಆಗುವುನ್ನು ನೀರಿಕ್ಷಿಸುತ್ತಿರುವಾಗ ತಮ್ಮ ವೃತಿಪರ ಜೀವನದಲ್ಲಿ ಮುಂದುವರೆಯಲು ಆಯ್ಕೆ ಮಾಡಿ ಯಶಸ್ವಿ ಕೂಡ ಆಗಿದ್ದಾರೆ.

 

ನೀವು ಕೆಲಸದಲ್ಲಿ ಫಲದಾಯಕವಾಗಿ ಇದ್ದುಕೊಂಡು ನಿಮ್ಮ ಆರೋಗ್ಯವನ್ನು ಸಹ ನಿಭಾಯಿಸುವುದರ ಬಗ್ಗೆ ಕೆಲವು ಸಲಹೆಗಳು ಇಲ್ಲಿವೆ.

ಏನು ಮಾಡಬೇಕು

ಲಘು ಉಪಹಾರವನ್ನು ಹೆಚ್ಚಾಗಿ ಸೇವಿಸಿ:

ನಿಮ್ಮ ದೇಹ ನಿಮಗೆ ಮತ್ತು ನಿಮ್ಮ ಮಗುವಿಗೆ ಆಹಾರವನ್ನು ಒದಗಿಸುವ ಕಾರಣದಿಂದಾಗಿ, ದಿನದ ಹೆಚ್ಚಿನ ಸಮಯ ನೀವು ಉಪವಾಸ ಇದ್ದೀರೆಂದು ಅನಿಸುತ್ತದೆ. ಹಾಗಾಗಿ ನಿಮ್ಮ ಜೊತೆ ಆ ದಿನಕ್ಕೆ ಆಗುವಂತೆ ಸಾಕಷ್ಟು ಸಣ್ಣ ತಿಂಡಿಗಳನ್ನು ತೆಗೆದುಕೊಂಡು ಹೋಗಿ. ಹಣ್ಣುಗಳು, ಒಣ ಹಣ್ಣುಗಳು, ಮಾಂಸ, ಸಲಾಡ್ಗಳು, ಇತ್ಯಾದಿ ತೆಗೆದುಕೊಂಡು ಹೋಗಿ ಸಮಯಕ್ಕೆ ಸರಿಯಾಗಿ ಸೇವಿಸಿ. ಯಾವುದೇ ಸಮಯದಲ್ಲಿ ವಾಕರಿಕೆಯ ಪ್ರಚೋದನೆಯಾಗಬಹುದು, ಆದರಿಂದ ನಿಮ್ಮ ದೇಹಕ್ಕೆ ಪ್ರಸ್ತುತವಾಗಿ ಒಗ್ಗದಂತಹ ವಾಸನೆಗಳಿಂದ ಆದಷ್ಟು ದೂರ ಇರಿ.

 

ನೀರಿನಂಶ ಇರುವಂತೆ ನೋಡಿಕೊಳ್ಳಿ:

ನಿಮ್ಮ ದೇಹಕ್ಕೆ ಸಾಕಷ್ಟು ನೀರಿನಂಶ ಸಿಗಲು ದಿನವಿಡೀ ಸಾಕಷ್ಟು ನೀರು ಕುಡಿಯಿರಿ. ಸ್ವಚ್ಛವಾಗಿ ಮತ್ತು ಫಿಲ್ಟರ್ ಆಗಿರುವಂತಹ ನೀರನ್ನು ಮನೆಯಿಂದಲೇ ಬಾಟಲಿ ಅಲ್ಲಿ ಒಯ್ಯಿರಿ. ಹೆಚ್ಚಾಗಿ ನೀರನ್ನು ಕುಡಿಯಿರಿ. ತಾಜಾ ಹಣ್ಣಿನ ರಸವನ್ನು ಸಹ ನೀವು ಸೇವಿಸಬಹುದು, ಆದರೂ ಅವು ಕ್ಯಾಲೋರಿಸ್ ಇಂದ ಕೂಡಿರುತ್ತವೆ. ಸೋಡಾ ಮತ್ತು ಕೆಫೀನ್ ಇಂದ ದೂರವಿರಿ, ಇದು ಈ ಹಂತದಲ್ಲಿ ನಿಮ್ಮ ಮಗುವಿಗೆ ಹಾನಿಕಾರಕವಾಗಿರಬಹುದು.

 

ವಿರಾಮಗಳನ್ನು ತೆಗೆದುಕೊಳ್ಳಿರಿ:

ಆಗಾಗ್ಗೆ ವಿರಾಮ ತೆಗುದುಕೊಳ್ಳಿರಿ ಮತ್ತು ನಿರಂತರವಾಗಿ ಕೆಲಸ ಮಾಡುವುದನ್ನು ತಪ್ಪಿಸಿ. ಸುಮಾರು ಐದು ಅಥವಾ ಹತ್ತು ನಿಮಷಗಳ ಕಾಲ ವಾಕ್ ಮಾಡಿ ಮತ್ತು ತಾಜಾ ಮನಸಿನೊಂದಿಗೆ ಕೆಲಸವನ್ನು ಮುಂದುವರಿಸಿ. ವಿರಾಮ ತೆಗೆದುಕೊಳ್ಳುವುದರಿಂದ ದಿನವೆಲ್ಲ ನಿಮ್ಮ ಬ್ಯಾಟರಿ ಚಾರ್ಜ್ ಆಗಿರುತ್ತದೆ.

 

ಮಾತನಾಡಿ ಮತ್ತು ಚರ್ಚಿಸಿ:

ನಿಮ್ಮ ದೇಹದಲ್ಲಿ ಮತ್ತು ಮೆದುಳಿನಲ್ಲಿ ಸಾಕಷ್ಟು ಅಳವಣೆಗಳು ಆಗುವ ಕಾರಣ ಗರ್ಭವಾಸ್ಥೆಯು ಆಘಾದವಾಗಿರಬಹುದು. ನಿಮ್ಮ ಮೆದುಳಿನಲ್ಲಿ ಗರ್ಭವಾಸ್ಥೆಯ ಬಗ್ಗೆ, ಮಗುವಿನ ಜನನ, ಪೋಷಿಸುವುದು ಮತ್ತು ವೃತ್ತಿಯ ಬಗ್ಗೆ  1000 ಪ್ರಶ್ನೆಗಳು ಓಡುತಿರಬಹುದು. ಗರ್ಭವಾಸ್ಥೆಯಲ್ಲಿ ಕೆಲಸ ಮಾಡಿರುವ ನಿಮ್ಮ ಸಹೋದ್ಯೋಗಿಗಳ ಬಳಿ ಮಾರ್ಗದರ್ಶನವನ್ನು ಪಡೆಯಿರಿ. ನಿಮ್ಮ ಆತಂಕವನ್ನು ಹೊರಹಾಕಿ, ಮತ್ತು ಮುಂದಿನ ದಿನಗಳು ಹೇಗಿರುತ್ತವೆ ಎಂಬ ಸುಳಿವನ್ನು ಪಡೆಯಿರಿ.

 

ದೈನಂದಿನ ವ್ಯಾಯಾಮ:

ಒತ್ತಡದ ಕಛೇರಿಯ ವೇಳಾಪಟ್ಟಿಯಿಂದಾಗಿ ನಿಮಗೆ ಫಿಟ್ನೆಸ್ ಕಾಯ್ದುಕೊಳ್ಳಲು ಸಮಯ ಸಿಗದೇ ಇರಬಹುದು ಆದರಿಂದ ಫಿಟ್ನೆಸ್ ಕಾಯ್ದುಕೊಳ್ಳಲು ನೀವು ಸಮಯ ಮಾಡಿಕೊಳ್ಳಬೇಕು. ಇದು ಸರಳವಾಗಿ ದಿನಕ್ಕೆ ಎರಡು ಬಾರಿ ವಾಕ್ ಮಾಡುವುದು ಆಗಬಹುದು. ನೀವು ಬಯಸಿದರೆ, ಯೋಗ ಅಥವಾ ಸರಳ ವ್ಯಾಯಾಮಗಳನ್ನು ಗರ್ಭಿಣಿಯಾಗಿದ್ದಾಗ ಮಾಡಬಹುದು. ಸ್ವಲ್ಪ ಚಟುವಟಿಕೆ ಮಾಡುವುದರಿಂದ ನೀವು ಶಕ್ತಿಯಿಂದ ಇರಬಹುದು ಮತ್ತು ಕೆಲಸದಲ್ಲಿ ಉಲ್ಲಾಸದಿಂದ ಇರಬಹುದು. ಸಮಯ ಅಣುವು ಮಾಡಿಕೊಟ್ಟಲ್ಲಿ, ನಿಮ್ಮ ವೈದ್ಯರು ಅನುಮತಿ ಕೊಟ್ಟಲ್ಲಿ, ಪ್ರಸವಪೂರ್ವ ಫಿಟ್ನೆಸ್ ಕ್ಲಾಸ್ ಸೇರಿಕೊಳ್ಳಿ. ಇತ್ತೀಚಿನ ದಿನಗಳಲ್ಲಿ, ಬಹಳಷ್ಟು ಕಛೇರಿಗಳಲ್ಲಿ, ವ್ಯಾಯಾಮ ಆಯ್ಕೆ ಹೊಂದಿವೆ. ಒಂದನ್ನು ಕಂಡುಕೊಂಡು ಸೇರಿಕೊಳ್ಳಿ.

 

ವಿಟಮಿನ್ಸ್ ಅನ್ನು ಕಡೆಗಳಿಸಬೇಡಿ:

ನಿಮ್ಮ ಔಷಧಿ ಮತ್ತು ಪೂರಕಗಳನ್ನು ಸಮಯ್ಕ್ಕೆ ಸರಿಯಾಗಿ ತೆಗೆದುಕೊಳ್ಳಿ. ವೈದ್ಯರು ಔಷಧಿಗಳನ್ನು ಮತ್ತು ಪೂರಕಗಳನ್ನು ನಿಮ್ಮ ಗರ್ಭವಾಸ್ಥೆಯಲ್ಲಿ ಶಿಫಾರಸು ಮಾಡಬಹುದು, ಇದನ್ನು ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳುವುದರಿಂದ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೂ ಒಳ್ಳೆಯದು. ನಿಮಗೆ ನೆನಪಿಟ್ಟುಕೊಳ್ಳುವುದು ಕಷ್ಟವಾದಲ್ಲಿ, ನಿಮ್ಮ ಮೊಬೈಲ್ನಲ್ಲಿ ಅಲಾರ್ಮ್ ಇಟ್ಟುಕೊಳ್ಳಿ. ತಂತ್ರಜ್ಞಾನದಿಂದ ಒಳ್ಳೆಯ ಬಳಕೆ ಮಾಡಿಕೊಳ್ಳಿ.

ನಿಮ್ಮ ತಾಯ್ತನದ ರಜೆಯನ್ನು ಪ್ಲಾನ್ ಮಾಡಿಕೊಳ್ಳಿ: ಇದು ಬಹಳ ನೆನಪಿನಲ್ಲಿ ಇಡಬೇಕಾದ ವಿಷಯ. ನಿಮ್ಮ ತಾಯ್ತನದ ರಜೆಯ ಬಗ್ಗೆ ಸಂಬಂಧಪಟ್ಟವರ ಹತ್ತಿರ ಚರ್ಚಿಸಿ. ನೀವು ಈ ರಜೆಯನ್ನು ನಿಮಗಾಗಿ ಮತ್ತು ನಿಮ್ಮ ನವಜಾತ ಶಿಶುವಿನ ಆರೈಕೆಗಾಗಿ ಹೇಗೆ ಬಳಸುತ್ತೀರ ಎಂದು ಪ್ಲಾನ್ ಮಾಡಿ. ನೀವು ನಿಮ್ಮ ಮಗುವಿನೊಂದಿಗೆ ಹೆಚ್ಚು ಸಮಯ ಕಳೆಯಲು ಬಯಸಿದರೆ, ನಿಮ್ಮ ಕಛೇರಿಯವರ ಬಳಿ ಹೆಚ್ಚಿನ ರಜೆಗೆ ಅವಕಾಶವಿದೆಯೇ ಎಂದು ತಿಳಿದುಕೊಳ್ಳಿ. ನಿಮ್ಮ ಕಚೇರಿಯ ಮಾನವ ಸಂಪನ್ಮೂಲ ಇಲಾಖೆಯು ಈ ನಿಟ್ಟಿನಲ್ಲಿ ನಿಮಗೆ ಸಹಾಯ ಮಾಡಬಹುದು.

 

ಏನನ್ನು ಮಾಡಬಾರದು

ಒತ್ತಡ ತಪ್ಪಿಸಿ:

ಯಾವುದೇ ಕಾರಣಕ್ಕೂ ನಿಮ್ಮ ಕೆಲ್ಸದಲ್ಲಿ ಒತ್ತಡ ಮಡಿಕೊಳ್ಳಬೇಡಿ. ಏನೇ ಆದರೂ, ಒತ್ತಡವನ್ನು ದೂರವಿಟ್ಟು, ಆಯೋಜನೆ ಇಂದ ಇದ್ದು, ಕೆಲಸದಲ್ಲಿ ಅಹಿತಕರ ಘಟನೆಗಳಾಗುವುದನ್ನು ತಪ್ಪಿಸಿ. ನಿಯಮಿತ ಕೆಲಸಗಳು ಇರುವಂತೆ ನೋಡಿಕೊಳ್ಳಿ, ಆದರಿಂದ ನೀವು ಒತ್ತಡಕ್ಕೆ ಒಳಗಾಗದೆ ಇರಬಹುದು. ಮನೆಯಲ್ಲಿಯೂ ಸಹ ನಿಮ್ಮ ಮತ್ತು ನಿಮ್ಮ ಮಗುವಿನ ಆರೋಗ್ಯಕ್ಕೆ ಪೂರಕವಾದ ವಾತಾವರಣವಿರುವಂತೆ ನೋಡಿಕೊಳ್ಳಿ. ನಿಮ್ಮ ಸಂಸ್ಥೆಯು ಈ ಸಮಯದಲ್ಲಿ ಅರ್ಥ ಮಾಡಿಕೊಂಡು ಮತ್ತು ಸಹಕರಿಸಲು ಪ್ರಯತ್ನ ಮಾಡುತ್ತದೆ.

 

ನಿಮ್ಮ ಸ್ಥಾನಗಳನ್ನು ಬದಲಾಯಿಸಿ:

ಹಲವು ಗಂಟೆಗಳ ಕಾಲ ಒಂದೇ ಜಾಗದಲ್ಲಿ ಕುಳಿತಿರಬೇಡಿ. ಕಂಪ್ಯೂಟರ್ನಲ್ಲಿ ಕೆಲಸ ಇರುವ ಉದ್ಯೋಗಗಳಲ್ಲಿ ನಿರಂತರವಾಗಿ ಪ್ರಕಾಶಮಾನವಾದ ಪರದೆಯ ಮುಂಧೆ ಕೂರುವುದಿರುತ್ತದೆ,, ಇದರಿಂದ ನಿಮ್ಮ ಸ್ಥಾನಕ್ಕೂ ಮತ್ತು ಮಗುವಿನ ಬೆಳವಣಿಗೆಗೆ ಒಳ್ಳೆಯದಲ್ಲ. ಪ್ರತಿ ಕೆಲವು ನಿಮಿಷಗಳಿಗೊಮ್ಮೆ ನಿಮ್ಮ ಕೈ,ಕಾಲು,ಬೆನ್ನು ಅನ್ನು ಸ್ಟ್ರೆಚ್ ಮಾಡುತ್ತಿರಿ. ನಿಮ್ಮ ಸಹುದ್ಯೋಗಿಯೊಂದಿಗೆ ಏನಾದರು ಕೆಲಸವಿದಲ್ಲಿ ಅವರಿಗೆ ಫೋನ್ ಮಾಡುವ ಬದಲು ಅವರ ಮೇಜಿನ ಬಳಿಗೆ ನಡೆಯಿರಿ. ಒಂದೇ ಜಾಗದಲ್ಲಿ ಕುಳಿತುಕೊಳ್ಳುವುದನ್ನು ತಪ್ಪಿಸಿ, ನಿಮ್ಮ ಮೇಜಿನ ಸುತ್ತಾನೆ ವಿಹರಿಸುತ್ತಾ ವಿಶ್ರಾಂತಿ ಪಡೆಯಿರಿ.

 

ಅನಾರೋಗ್ಯಕರವಾದ ಅಭ್ಯಾಸಗಳಿಂದ ದೂರವಿರಿ:

ನೀವು ಇದನ್ನು 100 ಬಾರಿ ಕೇಳಬಹುದು, ಆದರೆ ಇದು ನಿಮ್ಮ ಮನಸ್ಸನ್ನು ಕೊರೆಯುವಂತದ್ದು. ಧೂಮಪಾನ ಮಾಡಬೇಡಿ;ಜಾಸ್ತಿ ಕಾಫಿ ಕುಡಿಯಬೇಡಿ. ಕಚೇರಿಗಳಲ್ಲಿ ಯೋಗ್ಯ ಕಾಫಿ ನೀಡುವಂತಹ ಕಾಫಿ ಯಂತ್ರವಿರುತ್ತದೆ, ಆದರೆ ನೀವು ಗರ್ಭಿಣಿಯಾಗಿರುವ ಕಾರಣ ನಿಕೋಟಿನ್ ಬಳಕೆಯನ್ನು ತ್ಯಜಿಸಿರಿ ಮತ್ತು ಕಾಫಿಯನ್ನು ತಪ್ಪಿಸಿ. ಗಾಳಿಯ ಪಾನಕಗಳಿಂದ ಮತ್ತು ಮದ್ಯಪಾನದಿಂದ ದೂರವಿರಿ. ನೀವು ಗರ್ಭಿಣಿಯಾಗಿರುವ ಕಾರಣ ಆರೋಗ್ಯಕರ ಆಹಾರ ಒಂದು ಅವಿಭಾಜ್ಯ ಅಂಗವಾಗಿದೆ.

 

ಎತ್ತರದ ಚಪ್ಪಲಿಗಳನ್ನು ಧರಿಸಬೇಡಿ:

ಎತ್ತರದ ಚಪ್ಪಲಿಯನ್ನು ಹಾಕಿಕೊಂಡು ನಡೆಯುವಾಗ ದೇಹದ ಸಮತೋಲನವನ್ನು ಪಾದದ ಮೇಲೆ ಕಾಯ್ದುಕೊಳ್ಳಿ. ನೀವು ಗರ್ಭಿಯಾಗಿದ್ದಾಗ ಎತ್ತರದ ಚಪ್ಪಲಿ ಹಾಕುವುದರಿಂದ ಆಯಾ ತಪ್ಪಿ ಬೀಳಬಹುದು. ಆದರಿಂದ ಎತ್ತರದ ಚಪ್ಪಲಿಯ ಬಗ್ಗೆ ಕೆಲಸಕ್ಕಾಗಲಿ ಅಥವಾ ಬೇರೆ ಯಾವುದೇ ಸ್ಥಳಕ್ಕಾಗಲಿ ಹಾಕುವುದನ್ನು ಯೋಚಿಸಬೇಡಿ. ಆರಾಮದಾಯಕ ಮತ್ತು ಸಾದಾ ಚಪ್ಪಲಿಗಳನ್ನು ಬಳಸಿ. ಸಾದಾ ಚಪ್ಪಲಿಯಲ್ಲಿಯೂ ಸಹ ನೀವು ಫ್ಯಾಷನೇಬಲ್ ಆಗಿರಬಹುದು.

 

ತಡರಾತ್ರಿಗಳನ್ನು ತಪ್ಪಿಸಿ:

ಗರ್ಭವಾಸ್ಥೆಯು ಸಾಮಾನ್ಯವಾಗಿ ಮಹಿಳೆಯರಲ್ಲಿ ನಿದ್ದೆಯ ಅಭಾವಕ್ಕೆ ಕಾರಣವಾಗುತ್ತದೆ. ಕಾರ್ಪೊರೇಟ್ ಪಾರ್ಟಿಗಳಿಗೆ ಅವಶ್ಯವಿದ್ದರೆ ಮಾತ್ರ ಹೋಗಿ. ‘ಇಲ್ಲ’ ಎನ್ನುವ ಅವಕಾಶ ಇಲ್ಲದೆ ಹೋದಲ್ಲಿ, ಬೇಗ ವಾಪಸ್ ಬರುದಕ್ಕೆ ಪ್ರಯತ್ನಿಸಿ. ಕಚೇರಿಯ ಪಾರ್ಟಿಗಳಲ್ಲಿ ಮಧ್ಯಪಾನ ಮಾಡಬೇಡಿ. ತುಂಬಾ ಜನಸಂದಣಿಯಿಂದ ದೂರವಿರಿ.

ನೀವು ಗರ್ಭಿಣಿಯಾಗಿದ್ದಾಗ ಕೆಲಸದಲ್ಲಿ ಮುಂದುವರೆಯಲು ಇಚ್ಛಿಸಿದಲ್ಲಿ, ನೀವು ಮನೆಯ ಕೆಲಸಗಳನ್ನು ಸುಲಭವಾಗಿ ಮಾಡುವ ರೀತಿಯಲ್ಲಿ  ವಾತಾವರಣವನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಕಚೇರಿಗಳಲ್ಲಿ ನಿಮಗೆ ಬೇಕಾದ ಎಲ್ಲ ವಸ್ತುಗಳು ಇರುವುದಿಲ್ಲ, ಆದರಿಂದ ನೀವು ಇದ್ದಕೆಲ್ಲ ಸಿದ್ಧವಾಗಿರುವುದು ಮುಖ್ಯ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.