ಹೆರಿಗೆಯ ನಂತರ ಋತುಸ್ರಾವ

cover-image
ಹೆರಿಗೆಯ ನಂತರ ಋತುಸ್ರಾವ

ದೀರ್ಘಕಾಲದ ಆರೋಗ್ಯ ಮತ್ತು ಯೋಗಕ್ಷೇಮಕ್ಕಾಗಿ, ಹೆರಿಗೆಯಾದ ಕೆಲವು ವಾರಗಳು ಮಹಿಳೆಗೆ ಮತ್ತು ಅವಳ ಶಿಶುವಿಗೆ ನಿರ್ಣಾಯಕ ಅವಧಿಯಾಗಿರುತ್ತದೆ,

ಗರ್ಭವಾಸ್ಥೆಯೇ ಒಂದು ಕ್ರಿಯಾತ್ಮಕ ಹಂತವಾಗಿರುವುದರಿಂದ ಮತ್ತು ಸಾಕಷ್ಟು ದೈಹಿಕ ಮತ್ತು ಮಾನಸಿಕ ಬದಲಾವಣೆಗಳನ್ನು ಹೊಂದಿರುವ ಕಾರಣ ಬಹಳ ವಿರಾಮವಿರುವ ಮುಟ್ಟಿನ ಬಗ್ಗೆ ಗಮನಕ್ಕೆ ತೆಗೆದುಕೊಳ್ಳುವುದನ್ನು ಮರೆತೇಹೋಗುತ್ತಾರೆ.ಮಹಿಳೆಯಲ್ಲಿ ಮತ್ತು ಶಿಶುವಿನಲ್ಲಿ ಆರೋಗ್ಯ ಉತ್ತಮಗೊಳ್ಳಿಸಲು, ಮೌ ಜನನದ ನಂತರದ ಋತುಚಕ್ರದ ಅರಿವು ಮತ್ತು ಕಾಳಜಿ ಮಹಿಳೆಯ ವೈಯ್ಯಕ್ತಿಕ ಅಗತ್ಯಗಳಿಗೆ ಅನುಗುಣವಾಗಿ ಸೂಕ್ತ ರಕ್ಷಣೆ ಇರಬೇಕು.

 

ಮಗುವಿಗೆ ಜನ್ಮ ನೀಡಿದ ನಂತರ ಮುಟ್ಟನ್ನು ನಾನು ಯಾವಾಗ ನಿರೀಕ್ಷಿಸಬಹುದು?

ಹೆರಿಗೆಯ ನಂತರ, ನೀವು ತಕ್ಷಣ ಮುಟ್ಟನ್ನು ಹೊಂದುವುದಿಲ್ಲ, ಆದರೂ ನಿಮ್ಮ ದೇಹ ರಕ್ತ ಮತ್ತು ನೀವು ಗರ್ಭಿಣಿಯಾಗಿದ್ದಾಗ ಗರ್ಭಕೋಶಕ್ಕೆ ಸುತ್ತುವರೆದ ಅಂಗಾಂಶಗಳನ್ನು ಕಳೆದುಕೊಳ್ಳುತ್ತದೆ. ಮೂರನೇ ದಿನದಿಂದ, ರಕ್ತವು ಸ್ಪಷ್ಟವಾದ ಅಥವಾ ಕೆನೆ ಬಿಳಿಯ ಬಣ್ಣದಿಂದ ಕೆಂಪು ಯೋನಿಯ ಅಂಶವನ್ನು ಹೊರಹಾಕುತ್ತದೆ, ಇದನ್ನು ಲೊಚಿಯ ಎಂದು ಕರೆಯಲ್ಪಡುತ್ತದೆ, ಇದು ಸಹ ಕೆಲವು ವಾರಗಳಲ್ಲಿ ನಿಲ್ಲುತ್ತದೆ.

ಮುಟ್ಟಿನ ಅನುಪಸ್ಥಿತಿಯು(ಅಮೆನೋರಿಯಾ) ಸಾಮಾನ್ಯವಾಗಿ ಆರು ವಾರಗಳವರೆಗೂ ಇರುತ್ತದೆ. ಅಮೆನೋರಿಯಾ ಎದೆಹಾಲುಣಿಸುವ ಅಭ್ಯಾಸದಿಂದ ವಿಸ್ತೃತಗೊಳ್ಳುತ್ತದೆ, ಮತ್ತು ಹಲವು ಬಾರಿ ಹಾಲುಣಿಸುವ ಕಾಲದ ವರೆಗೂ ಇರುತ್ತದೆ. ದೀರ್ಘಕಾಲದವರೆಗೂ ಎದೆಹಾಲುಣಿಸುವುದರಿಂದ ಕೆಲ ಸನ್ನಿವೇಶಗಳಲ್ಲಿ, ಅಮೆನೋರಿಯಾ ಅವಧಿಯು 18 ರಿಂದ 24 ತಿಂಗಳವರೆಗೂ ಇರುತ್ತದೆ.

 

ಮಗುವಿಗೆ ಜನ್ಮ ನೀಡಿದ ನಂತರ ಯಾವಾಗ  ಮುಟ್ಟನ್ನು ಹೊಂದುತ್ತೆನೆ?

ಹೆರಿಗೆಯ ನಂತರದ ಮೊದಲ ಮುಟ್ಟು ಬಹಳ ಮತ್ತು ಮಹಾತ್ತರವಾಗಿ ಶಿಶುವಿಗೆ ಹಾಲುಣಿಸುವುದರ ಮೇಲೆ ಅವಲಂಬಿತವಾಗಿರುತ್ತದೆ. ಯಾವ ಮಹಿಳೆ ತನ್ನ ಶಿಶುವಿಗೆ ಹಾಲನ್ನು ಕೊಡುವಳೋ ಆಕೆಗಿಂತ ಯಾವ ಮಹಿಳೆ ಬರೇ ಎದೆಹಾಲನ್ನೇ ಉಣಿಸುವಳೋ ಆಕೆಯು ದೀರ್ಘಕಾಲದ ಅಮೆನೋರಿಯಾ ಹೊಂದಿರುತ್ತಾಳೆ. ಹಾಲುಣಿಸದೆ ಇರುವ ತಾಯಿಗೆ  ನಿಯಮಿತ ಮುಟ್ಟು ಅಂದರೆ ಹೆರಿಗೆಯ 27 ದಿನಗಳ ನಂತರ ಮುಟ್ಟನ್ನು ಹೊಂದುತ್ತಾರೆ. ಸಾಮಾನ್ಯವಾಗಿ ಮಹಿಳೆಯರು, ಹೆರಿಗೆಯ 12 ವಾರಗಳ ನಂತರ ಮುಟ್ಟನ್ನು ಹೊಂದುತ್ತಾರೆ: ಮೊದಲ ಋತುಚಕ್ರದ ಸರಾಸರಿ ಸಮಯ 7-9 ವಾರಗಳು.

ಹಾಲುಣಿಸುವ ಮಹಿಳೆಯರ ಪೈಕಿ, ಹೆರಿಗೆ ನಂತರದ ಋತುಚಕ್ರ ಸಾಕಷ್ಟು  ಕೂಡಿರುತ್ತದೆ ಮತ್ತು ಹಲವಾರು ಅವಲಂಬಿತವಾಗಿರುತ್ತದೆ:

. ಹಾಲುಣಿಸುವ ಪ್ರಮಾಣ ಮತ್ತು ಆವರ್ತನ

. ಮಗುವಿನ ಆಹಾರ ಫಾರ್ಮುಲಾದಿಂದ ಕೂಡಿದಿಯೇ ಇಲ್ಲವೇ

. ಹಾರ್ಮೋನಲ್ ಬದಲಾವಣೆಗೆ ನಿಮ್ಮ ದೇಹದ ಪ್ರತಿಕ್ರಿಯೆ

ಸುಮಾರು 50% ರಿಂದ 75% ಹಾಲುಣಿಸುವ ಮಹಿಳೆಯರು  ಹೆರಿಗೆಯ 36 ವಾರಗಳ ಒಳಗಾಗಿ ಮುಟ್ಟಿಗೆ ಮರಳುತ್ತಾರೆ.

ಒಮ್ಮೆ ಮುಟ್ಟು ಹೊಂದಿದ ನಂತರ, ನಿಮ್ಮ ಋತುಚಕ್ರ ಅಸಮಂಜಸವಾಗಿರಬಹುದು, ವಿಶೇಷವಾಗಿ ನೀವಿನ್ನು ಹಾಲನ್ನು ಉತ್ಪದಿಸುತಿದ್ದರೆ(ಲಕ್ಟ್ಟಿಂಗ್). ಮುಟ್ಟಿನ ಅವಧಿಯು ಬದಲಾಗುತ್ತದೆ ಮತ್ತು ಕೆಲವೊಂದು ಬಾರಿ ಒಂದು ಅಥವಾ ಎರಡು ತಿಂಗಳು ತಡವಾಗಿ ಆಗಬಹುದು.

 

ಹೆರಿಗೆಯ ನಂತರ ಮುಟ್ಟಿನ ಮರಳುವಿಕೆಯಿಂದ ಏನನ್ನು ನಿರೀಕ್ಷಿಸಬಹುದು?

ಹೆರಿಗೆಯ ನಂತರ ನಿಯಮಿತ ಋತುಚಕ್ರದ ಮರಳುವಿಕೆಯು ನಿಮ್ಮ ದೇಹವು  ಗರ್ಭವಾಸ್ಥೆಯ ಪೂರ್ವ ಸ್ಥಿತಿಗೆ ಮರಳುತಿದೆ ಎಂಬುದರ ಒಂದು ಹಂತವಾಗಿದೆ. ನೀವು ಸಾಮಾನ್ಯವಲ್ಲದ ತೀವ್ರ, ನಿರಂತರವಾದ ರಕ್ತಸಾವ್ರವಾದಲ್ಲಿ, ಮೂತ್ರದ ಅಸಂಯಮ ಅಥವಾ ಯಾವುದೇ ಸೋಂಕಿನ ಚಿಹ್ನೆಗಳು ಕಾಣಿಸಿಕೊಂಡಲ್ಲಿ, ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಶಿಫ್ಫಾರಸ್ಸು ಮಾಡಲಾಗಿದೆ.

 

#babychakrakannada
logo

Select Language

down - arrow
Personalizing BabyChakra just for you!
This may take a moment!