ಹೆರಿಗೆಯ ನಂತರ ಆಹಾರಕ್ರಮ: ನೀವು ಸೇವಿಸಲೇಬೇಕಾದ ಅತ್ಯುತ್ತಮ ಆಹಾರಗಳು

cover-image
ಹೆರಿಗೆಯ ನಂತರ ಆಹಾರಕ್ರಮ: ನೀವು ಸೇವಿಸಲೇಬೇಕಾದ ಅತ್ಯುತ್ತಮ ಆಹಾರಗಳು

ಇದು ನಿಮ್ಮ ಜೀವನದ ರೋಮಾಂಚನಕಾರಿಯಾದ ಘಟ್ಟದ ಆರಂಭವಾಗಿದೆ. ನೀವು ಒಂದು ಹೊಸ ತಾಯಿಯಾಗಿ, ನಿಮಗೆ ಮಗು ಸಂಬಂಧಿತ ಹಲವು ಕೆಲಸಗಳು ಇರುತ್ತವೆ. ಸಹಜವಾಗಿ, ಮಗುವಿನ ಆರೈಕೆ ನಿಮ್ಮ ಮುಖ್ಯ ಆದ್ಯತೆಯಾಗಿರುತ್ತದೆ, ಆದರೆ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸುವುದು ಒಳ್ಳೆಯದಲ್ಲ. ನಿಮ್ಮ ಆರೈಕೆಯನ್ನು ಮಾಡಿಕೊಳ್ಳುವ ಪ್ರಮುಖ ದಾರಿಯೆಂದರೆ ಪೌಷ್ಟಿಕ ಆಹಾರವನ್ನು ಸೇವಿಸುವುದು.

ನೀವು ಹಾಲುಣಿಸುತಿದ್ದರೆ, ನಿಮಗೆ ದಿನಕ್ಕೆ 300 ಹೆಚ್ಚುವರಿ ಕ್ಯಾಲೋರಿಸ್ ಬೇಕಾಗುತ್ತದೆ. ಸಮತೋಲನ ಆಹಾರವನ್ನು ಸೇವಿಸಿ ಮತ್ತು ಖಾರ, ಎಣ್ಣೆಯುಕ್ತ ಆಹಾರದಿಂದ ಆದಷ್ಟು ದೂರವಿರಿ. ಜೊತೆಗೆ, ವಿಟಮಿನ್ಸ್ ಮತ್ತು ಮಿನರಲ್ಸ್, ಪ್ರೋಟೀನ್ಸ್, ಐರನ್, ಕ್ಯಾಲ್ಸಿಯಂ ಮತ್ತು ಒಮೇಗಾ-೩ ಕೊಬ್ಬಿನ ಆಮ್ಲ, ಇವೆಲ್ಲ ಹೆಚ್ಚಾಗಿರುವ ಆಹಾರವನ್ನು ಸೇವಿಸಿ. ಇವೆಲ್ಲ ನಿಮಗೆ ಹೆರಿಯಯಿಂದ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ದೇಹವನ್ನು ಪೋಷಿಸುತ್ತದೆ.

ನಾವು ನಿಮ್ಮ ಬಾಣಂತಿಯ ಅವಧಿಗಾಗಿ 15 ಸೂಪರ್ ಆಹಾರಗಳ ಪಟ್ಟಿ ಮಾಡಿದ್ದೇವೆ. ಇವನ್ನು ನಿಮ್ಮ ಹೆರಿಗೆಯ ನಂತರ ಕನಿಷ್ಠ ಮೂರು ತಿಂಗಳು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳುವಂತೆ ನೋಡಿಕೊಳ್ಳಿ.

ಡೇರಿ ಉತ್ಪನ್ನಗಳು

ಮೂರು ಕಪ್ಗಳ ಕಡಿಮೆ ಕೊಬ್ಬಿನಂಶವಿರುವ ಡೇರಿ ಉತ್ಪನ್ನಗಳಾದ ಹಾಲು ಮತ್ತು ಮೊಸರನ್ನು ನಿಮ್ಮ ಆಹಾರದಲ್ಲಿ ಸೇರಿಸಿ. ಇವು ಪ್ರೋಟೀನ್, ಕ್ಯಾಲ್ಸಿಯಂ, ಮತ್ತು ವಿಟಮಿನ್ ಬಿ ಅಲ್ಲಿ ಸಮೃದ್ಧವಾಗಿರುತ್ತವೆ.

ಹಳದಿ ಹೆಸರುಬೇಳೆ

ದ್ವಿದಳ ಧಾನ್ಯಗಳಲ್ಲಿ, ಹಳದಿ ಹೆಸರುಬೇಳೆಯು ಸುಲಭವಾಗಿ ಜೀರ್ಣವಾಗುವುದರಿಂದ ವೈದ್ಯರು ಇದನ್ನು ಹೆರಿಗೆಯ ನಂತರದ ಆಹಾರದಲ್ಲಿ ಹೆಚ್ಚಾಗಿ ಶಿಫ್ಹರಸ್ಸು ಮಾಡುತ್ತಾರೆ. ದ್ವಿದಳ ಧಾನ್ಯಗಳು ಸಹ ದೇಹದಲ್ಲಿ ಕೊಬ್ಬಿನ ಶೇಖರಣೆಯನ್ನು ತಡೆಗಟ್ಟುತ್ತದೆ.

ರಾಗಿ

ರಾಗಿ ಬಹಳ ಪ್ರಯೋಜನಕಾರಿಯಾಗಿದ್ದು, ಇದು ನಿಮಗೆ ಹೆರಿಗೆಯ ನಂತರ ನವೀಕೃತ ಶಕ್ತಿಯನ್ನು ಒದಗಿಸುತ್ತದೆ.

ಓಟ್ಸ್

ಐರನ್ ಮತ್ತು ಕ್ಯಾಲ್ಸಿಯಂ ಇಂದ ಸಮೃದ್ದವಾಗಿರುತ್ತದ್ದೆ, ಓಟ್ಸ್ನಲ್ಲಿ ಉತ್ತಮ ಪ್ರಮಾಣದ ನಾರಿನಂಶ ಇರುವ ಕಾರಣ ಮಲಬದ್ದತೆಯನ್ನು ತಡೆಯುತ್ತದೆ.

ಹಸಿರು ಸೊಪ್ಪು ತರಕಾರಿಗಳು

ಹಸಿರು ಎಳೆಯ ತರಕಾರಿಗಳಾದ ಪಾಲಕ್ ಮತ್ತು ಕೋಸುಗಡ್ಡೆಯು ವಿಟಮಿನ್ ಎ ಮತ್ತು ಸಿ, ಫೋಲಿಕ್ ಆಸಿಡ್, ಐರನ್, ಕ್ಯಾಲ್ಸಿಯಂ, ಮತ್ತು ಫೈಬರ್ ಅಲ್ಲಿ ಅಧಿಕವಾಗಿರುವುದರಿಂದ ಇವನ್ನು ಖಂಡಿತವಾಗಿಯೂ ಸೇರಿಸಿಕೊಳ್ಳಿ.

ಸೋರೆಕಾಯಿ

ಸೋರೆಕಾಯಿ 90% ನೀರನ್ನು ಹೊಂದಿರುತ್ತದೆ ಮತ್ತು ನೀರನಾಂಶಕ್ಕಾಗಿ ಉತ್ತಮವಾಗಿರುತ್ತದೆ, ಇದು ಹಾಲಿನ ಪೂರೈಕೆಯನ್ನು ಹೆಚ್ಚಿಸುತ್ತದೆ ಮತ್ತು ತೂಕವನ್ನು ಸಹ ಕಡಿಮೆ ಮಾಡುತ್ತದೆ.

ನುಗ್ಗೆಕಾಯಿ ಎಲೆಗಳು

ನುಗ್ಗೆಕಾಯಿ ಎಲೆಗಳಿಂದ ಸೂಪ್ ಮತ್ತು ಪಲ್ಯಗಳ್ನ್ನ ಮಾಡಿ ಸೇವಿಸುವುದರಿಂದ ಹೆರಿಗೆಯ ನಂತರ ಪ್ರಯೋಜನಕಾರಿಯಾಗಿರುತ್ತದೆ. ಇವು ವಿಟಮಿನ್ ಎ, ಬಿ ಮತ್ತು ಸಿ, ಕ್ಯಾಲ್ಸಿಯಂ, ಐರನ್, ಮತ್ತು ಪ್ರೊಟೀನ್ಗಳಲ್ಲಿ ಅಧಿಕವಾಗಿರುತ್ತವೆ.

ಸಿಟ್ರಸ್ ಹಣ್ಣುಗಳು

ಕಿತ್ತಳೆ ಮತ್ತು ಇತರ ಸಿಟ್ರಸ್ ಹಣ್ಣುಗಳು ವಿಶೇಷವಾಗಿ ಬಾಣಂತಿಯರಿಗೆ ಅದರ ವಿಟಮಿನ್ ಸಿ ಅಂಶದಿಂದ ಉತ್ತಮವಾಗಿರುತ್ತದೆ.

ಮೆಂತ್ಯ

ರಾತ್ರಿ ನೆನಸಿಟ್ಟ ಒಂದು ಚಮಚ ಮೆಂತ್ಯೆಯನ್ನು ಸೇವಿಸುವುದರಿಂದ ಹಾಲನ್ನು ಹೆಚ್ಚಿಸುವುದಲದೆ ತೂಕ ಕಡಿಮೆ ಮಾಡಲು ಸಹ ಸಹಕಾರಿಯಾಗಿರುತ್ತದೆ.

ಅಜ್ವಾನ್ನ್ ಬೀಜಗಳು

ಅಜ್ವಾನ್ನ್ ಬೀಜಗಳು ಸಹ ಆಶ್ಚರ್ಯಕರವಾದ ಆಹಾರವಾಗಿದೆ. ಇದು ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಜೊತೆಗೆ ಗರ್ಭಷ್ಯವನ್ನು ಕುಗ್ಗಿಸುತ್ತದೆ. ಅಲ್ಲದೆ, ಅಜ್ವಾನ್ನ್ ಬೀಜಗಳನ್ನು ಕುದಿಸಿದ ನೀರನ್ನು ಕುಡಿಯುವುದರಿಂದ ಅಜೀರ್ಣದಿಂದ ಮತ್ತು ಗ್ಯಾಸ್ನಿಂದ ಉಂಟಾಗುವ ನೋವನ್ನು ಶಮನ ಮಾಡುತ್ತದೆ. ಇದು ಹೆರಿಗೆಯ ನಂತರದ ಆಹಾರದಲ್ಲಿ ಅತ್ಯಾವಶ್ಯಕವಾಗಿರುತ್ತದೆ.

ಒಣ ಶುಂಠಿ

ಒಣ ಶುಂಠಿಯು ಬಾಣಂತಿಯ ಆಹಾರದ ಪ್ರಮುಖ ಪದಾರ್ಥವಾಗಿದೆ. ಇದು ವಿಟಮಿನ್ಸ್ ಮತ್ತು ಮಿನರಲ್ಸ್ ಮತ್ತು ಆಂಟಿ-ಇಂಪ್ಲಾಮ್ಮಟೋರಿ ಅಂಶ ಅಧಿಕವಾಗಿರುವುದರಿಂದ ಇದನ್ನು ಒಂದು ಚಿಟಿಕೆಯಷ್ಟು ನಿಮ್ಮ ಪಾಳ್ಯದಲ್ಲಿ ಸೇರಿಸಿ.

ಬೆಳ್ಳುಳ್ಳಿ

ಬೆಳ್ಳುಳ್ಳಿಯು ಎದೆಹಾಲಿನ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಇದು ಹೊಸ ತಾಯಂದಿರು ಬೇಗ ಪ್ರಭಾವಿತರಾಗುವ ರೋಗಗಳಿಂದ ತಡೆಗಟ್ಟಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅರಿಸಿನ

ಅರಿಶಿನವು ವಾಸಿಮಾಡುವ ಗುಣವನ್ನು ಹೊಂದಿದೆ. ಇದು ಪಿತಾಜನಕಾಂಗದ ನಂಜನ್ನು ಕಡಿಮೆ ಮಾಡುತ್ತದೆ ಮಾತು ತೂಕವನ್ನು ಸಹ ಕಡಿಮೆ ಮಾಡುತ್ತದೆ.

ಬಾದಾಮಿ

ನಿಮಗೆ ಹಸಿವು ಉಂಟಾದಾಗೆಲ್ಲ ಬಾದಾಮಿಯನ್ನು ಸೇವಿಸುತಿರಿ. ಇದು ಪೋಷಕಾಂಶದಲ್ಲಿ ಹೆಚ್ಚಾಗಿರುವುದರಿಂದ, ಇದು ಮಹಾನ್ ಶಕ್ತಿಯನ್ನು ನೀಡುತ್ತದೆ.

ಗೊಂದು

ಖಾದ್ಯ ಗೊಂದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದರಿಂದ ನಿಮ್ಮ ಹಾಲಿನ ಉತ್ಪಾದನೆಯನ್ನು ಇದು ಉತ್ತೆಜಿಸುತ್ತದೆ. ಇದು ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗೆ ಇಡುತ್ತದೆ.

ಪ್ರೊ ಸಲಹೆ

ಸಾಕಷ್ಟು ದ್ರವ್ಯಗಳನ್ನು ಅಂದರೆ ನೀರು, ಹಾಲು, ಮತ್ತು ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಿರಿ ಆದರೆ ಕೆಫೀನ್ ಪಾನೀಯಗಳನ್ನು  ತಪ್ಪಿಸಿ. ದ್ರವ್ಯಗಳು ನೀರಾಂಶವನ್ನು ಕಾಯಲು ಪ್ರಮುಖವಾಗಿವೆ ಮತ್ತು ಇವ್ ಹಾಲಿನ ಉಥಾಪಾದನೆಯನ್ನು ಹೆಚ್ಚಿಸುವುದಲ್ಲದೆ ನಿಮ್ಮ ಶಕ್ತಿಯನ್ನು ಸಹ ಹೆಚ್ಚಿಸುತ್ತದೆ.

ಆರೋಗ್ಯದಿಂದಿರಿ ಮತ್ತು ನಿಮ್ಮ  ಜೀವನದ ಈ ವಿಶೇಷ ಸಮಯವನ್ನು ಆನಂದಿಸಿ.

#babychakrakannada
logo

Select Language

down - arrow
Personalizing BabyChakra just for you!
This may take a moment!