• Home  /  
  • Learn  /  
  • ವೈರಲ್ ಸೋಂಕುಗಳು: ಬಾಲ್ಯದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ
ವೈರಲ್ ಸೋಂಕುಗಳು: ಬಾಲ್ಯದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ

ವೈರಲ್ ಸೋಂಕುಗಳು: ಬಾಲ್ಯದಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ

2 Jul 2019 | 1 min Read

Medically reviewed by

Author | Articles

ಶಿಶುಗಳಲ್ಲಿ ವೈರಾಣುವಿನ ಸೋಂಕು ಶಿಶುಗಳನ್ನು ಬಾಧಿಸುವ ಸಾಮಾನ್ಯ ರೋಗಗಳಾಗಿವೆ. ಉಸಿರಾಟದ ವ್ಯವಸ್ಥೆ ಮತ್ತು ಕರುಳಿನ ಒಂದು ವೈರಸ್ ಸೋಂಕು ಸಾಮಾನ್ಯವಾಗಿದೆ. ಇದು ಸೋಂಕಿತ ಮಗುವಿನಿಂದ ಸೀನುವಿಕೆ, ಕೆಮ್ಮುವುದು, ಸಾಮಾನ್ಯ ಟವೆಲ್ ಕೈಗವಸುಗಳು ಇತ್ಯಾದಿಗಳನ್ನು ಬಳಸುವುದರಿಂದ ಇತರ ಮಕ್ಕಳು ಅಥವಾ ಕುಟುಂಬ ಸದಸ್ಯರಿಗೆ ವೇಗವಾಗಿ ಹರಡುತ್ತದೆ.

ಔಷಧಿಗಳಿಲ್ಲದೆ 7 ರಿಂದ 10 ದಿನಗಳಲ್ಲಿ ವೈರಲ್ ಸೋಂಕುಗಳಿಂದ ಚೇತರಿಸಿಕೊಳ್ಳಲು ಸಾಧ್ಯವಿದೆ. ಅಸ್ತಿತ್ವದಲ್ಲಿರುವ ವೈರಲ್ ಸೋಂಕಿನೊಂದಿಗೆ ಬ್ಯಾಕ್ಟೀರಿಯಾದ ಸೋಂಕುಗಳು ಹೊಂದಿದಾಗ ಮಾತ್ರ ಪ್ರತಿಜೀವಕಗಳನ್ನು ಬಳಸಲಾಗುತ್ತದೆ. ಸಾಮಾನ್ಯ ಶೀತ ಮತ್ತು ಕೆಮ್ಮೆಯಂತೆಯೇ, ವೈರಸ್ಗಳು ದೇಹದ ವಿಭಿನ್ನ ವ್ಯವಸ್ಥೆಗಳನ್ನು ಆಕ್ರಮಿಸುತ್ತವೆ ಮತ್ತು ಹೆಪಟೈಟಿಸ್, ಮೆನಿಂಜೈಟಿಸ್ ಮುಂತಾದ ತೀವ್ರ ರೋಗಗಳಿಗೆ ಕಾರಣವಾಗುತ್ತದೆ.

 

ಮಕ್ಕಳಲ್ಲಿ ವೈರಲ್ ಸೋಂಕಿನ ಚಿಹ್ನೆಗಳು

ರೋಗನಿರೋಧಕ ವ್ಯವಸ್ಥೆಯು ಪ್ರಬಲವಾಗಿದ್ದಾಗ ಒಂದು ವೈರಸ್ ಸೋಂಕು ಗೋಚರಿಸುವುದಿಲ್ಲ ಅಥವಾ ರೋಗಲಕ್ಷಣಗಳನ್ನು ಉಂಟುಮಾಡುವುದಿಲ್ಲ. ಇದು ಸಾಮಾನ್ಯವಾಗಿ ವಯಸ್ಕರಲ್ಲಿ ಕಂಡುಬರುತ್ತದೆ. ಆದಾಗ್ಯೂ, ವೈರಸ್ ರೋಗಲಕ್ಷಣಗಳು ಮಕ್ಕಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತವೆ ಏಕೆಂದರೆ ಅವುಗಳ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗಿದೆ.

ಮಕ್ಕಳಲ್ಲಿ ವೈರಲ್ ಜ್ವರವು ವೈರಸ್ ಸೋಂಕಿನ ಮುಖ್ಯ ಲಕ್ಷಣವಾಗಿದೆ. ಅನೇಕ ಸಂದರ್ಭಗಳಲ್ಲಿ, ರಾಶ್ ಜ್ವರದ ಜೊತೆಗೂಡಿರುತ್ತದೆ.

6 ತಿಂಗಳಿಂದ 5 ವರ್ಷ ವಯಸ್ಸಿನ ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ವೈರಾಣು ರೋಗಗಳ ಉದಾಹರಣೆಗಳು ಕೆಳಕಂಡಂತಿವೆ

. ಉಸಿರಾಟದ ವ್ಯವಸ್ಥೆಯನ್ನು ಅವ್ಯವಸ್ಥೆ ಉಂಟುಮಾಡುವ ಇನ್ಫ್ಲುಯೆನ್ಸ ವೈರಸ್ ಪರಿಣಾಮವಾಗಿ ಕೆಮ್ಮು ಮತ್ತು ಸಾಮಾನ್ಯ ಶೀತಕ್ಕೆ ಕಾರಣವಾಗುತ್ತದೆ. ಮೂಗು ಅಥವಾ ಉಸಿರುಕಟ್ಟಿದ ಮೂಗು, ಸೀನುವಿಕೆ, ಕಣ್ಣುಗಳ ನೀರು, ನೋಯುತ್ತಿರುವ ಗಂಟಲು, ಮುಂತಾದವುಗಳು ವೈರಲ್ ಸೋಂಕಿನ ಸಮಯದಲ್ಲಿ ಸಾಮಾನ್ಯವಾಗುತ್ತವೆ. ಮಗು ರಂಪಾಟ ಮಾಡುತ್ತದೆ, ಆಹಾರ ತಪ್ಪಿಸುತ್ತದೆ ಮತ್ತು ವೈರಸ್ ಸೋಂಕು ಕಾರಣ ಮಂದ ಮತ್ತು ದುರ್ಬಲ ಆಗುತ್ತದೆ.

. ಉಸಿರಾಟದ ವ್ಯವಸ್ಥೆ ಮತ್ತು ಕರುಳಿನಲ್ಲಿ ಉಂಟಾಗುವ ರೊಟ್ರಾ ವೈರಸ್ ಸೋಂಕಿನಿಂದ ಫ್ಲೂ ಮತ್ತು ಲೂಸ್ ಮೋಶನ್ ಆಗುತ್ತದೆ. ಮಗು ನೀರಿನಂಶದ ಅಥವಾ ಸಡಿಲ ಸ್ತೂಲ್ಗಳನ್ನು ದಿನಕ್ಕೆ ಹಲವು ಬಾರಿ ಹೋಗಬಹುದು, ಮತ್ತು ಹೆಚ್ಚಿನ ಜ್ವರದ ಜೊತೆಗೆ ವಾಂತಿಯು ಇರಬಹುದು ಅಥವಾ ಇರದೆಯೂ ಇರಬಹುದು.

. ಕ್ರೋಪ್ ಒಂದು ವೈರಲ್ ಸೋಂಕಾಗಿರುತ್ತದೆ, ಇದು ಗಾಳಿನಾಳ ಮತ್ತು ಧ್ವನಿಪೆಟ್ಟಿಗೆಯನ್ನು ಊದುವಂತೆ ಮಾಡುತ್ತದೆ.ಧ್ವನಿಯು ಒರಟಾಗುತ್ತದೆ, ದೊರಗಲು ಕೆಮ್ಮು, ಮೂಗು ಸೋರುವಿಕೆ, ಜ್ವರ ಮತ್ತು ಉಬ್ಬಸದ ರೀತಿ ಉಂಟಾಗುತ್ತದೆ. ಕೆಲವು ಸನ್ನಿವೇಶಗಳಲ್ಲಿ ಕ್ಷಿಪ್ರ ಮತ್ತು ಕಷ್ಟದ ಉಸಿರಾಟವಿರುತ್ತದೆ.

. ಚಿಕನ್ ಪಾಸ್ ವರಿಸಿಲ್ಲ ಝೋಸ್ಟರ್ ವೈರಾಣುವಿಂಗಡಿ ಉಂಟಾಗುತ್ತದೆ, ಇದು ನೋವಿನಿಂದ ಅಥವಾ ನವೆ ಉಂಟುಮಾಡುವ ಪಾರದರ್ಶಕ ದ್ರವ ತುಂಬಿದ ಗುಳ್ಳೆಗಳಿಂದ ದೇಹದಲೆಲ್ಲ ಆಗಿರುತ್ತದೆ.

. ದಡಾರ ದೇಹದಲ್ಲಿ ಜ್ವರ ಮತ್ತು ರಾಶ್ ಆಗಿರುತ್ತದೆ, ಜೊತೆಗೆ, ಮೂಗು ಸೋರುವಿಕೆ, ಮೈ ನೋವು ಮತ್ತು ಬಾಯಿ ಒಳಗೆ ಬಿಳಿಯ ಮಚ್ಚೆಗಳನ್ನು(ಕೋಪಿಲಿಕ್ಸ್ ಸ್ಪೋಟ್ಸ್) ಹೊಂದಿರುತ್ತದೆ.

. ಮುಮ್ಪ್ಸ್ಲಾಲಾಲಾಗ್ರಂಥಿಯ ಊತ, ಜ್ವರ, ಸ್ರವಿಸುವ ಅಥವಾ ಕಟ್ಟಿದ ಮೂಗು ಮತ್ತು ಕೆಮ್ಮಿನಿಂದ ಕೂಡಿರುತ್ತದೆ.

ದಡಾರ, ಮುಮ್ಪ್ಸ್, ರುಬೆಲ್ಲಾ, ಚಿಕೆನ್ ಪಾಸ್, ಇತ್ಯಾದಿ, ವೈರಾಣು ರೋಗಗಳು ಸುಮಾರು 5 ವರ್ಷದ ವರೆಗಿನ ಮಕ್ಕಳಲ್ಲಿ ದೀರ್ಘ ಕಾಲ ಉಳಿಯುವಂತಹ ಪರಿಣಾಮವನ್ನು ಬೀರುತ್ತದೆ.

ಆದಾಗ್ಯೂ, ಈ ರೋಗಗಳನ್ನು ವಿಷ್ಯ ಅರೋಗ್ಯ ಸಂಸ್ಥೆ ಕೊಟ್ಟಿರುವ ಲಸಿಕೆಯ ವೇಳಾಪಟ್ಟಿಯಂತೆ ನಿಮ್ಮ ವೈದ್ಯರ ಬಳಿ ಲಸಿಕೆ ಹಾಕಿಸಿದಾಗ ಇವನ್ನು ತಡೆಯಬಹುದಾಗಿದೆ.

. ಮೊಲ್ಲುಸ್ಕ್ಯುಮ್ ಕಾಂತಾಜಿವ್ಸ್ಮ್ ಪೋಸ್ ವೈರಾಣುವಿನಿಂದ ಉಂಟಾಗುವ ಚರ್ಮದ ಸೋಂಕು. ಇದು ಮುತ್ತಿನಂತೆ ಕಾಣುವ ಬಿಳಿ ಬಣ್ಣದ ಗುಳ್ಳೆಗಳಿಂದ ಕೂಡಿರುತ್ತದೆ. ಈ ಗುಳ್ಳೆಗಳು ಬಾಯಿಯ ಹತ್ತಿರ, ಮುಖದ ಮೇಲೆ, ಜನನಾಂಗದ ಪ್ರದೇಶದಲ್ಲಿ, ಬೆನ್ನಿನಲ್ಲಿ, ಇತ್ಯಾದಿ ಕಾಣುತ್ತವೆ. ಈ ಗುಳ್ಳೆಗಳು ಹೆಚ್ಚು ವೇಗವಾಗಿ ಮತ್ತು ಸಾಂಕ್ರಾಮಿಕವಾಗಿ ಹರಡುತ್ತವೆ.

. ಕೈ-ಕಾಲು-ಬಾಯಿ ರೋಗ ಜ್ವರ, ನೆಗಡಿ, ಕೆಮ್ಮು ಮತ್ತು ಕೈ, ಕಾಲು ಮತ್ತು ಬಾಯಿಯ ಸುತ್ತಲೂ ಗುಳ್ಳೆಗಳಿಂದ ಕೂಡಿರುತ್ತವೆ.

. ಕಾಂಜುಂಕ್ಟಿವಿಟಿಸ್ ಅಥವಾ ಪಿಂಕ್ ಐ ಕಣ್ಣಿನ ವೈರಾಣು ಸೋಂಕಿನಿಂದ ಬರುತ್ತದೆ. ಕಣ್ಣಿನಿಂದ ನೀರು ಸೋರುವುದು, ಜಿಗುಟಾದ ಸೋರುವಿಕೆ, ಪ್ರಕಾಶಮಾನವಾದ ಬೆಳಕಿನಿಂದ ಕಣ್ಣಿನಲ್ಲಿ ನೋವು ಮತ್ತು ಕಣ್ಣುಗಳ ಕೆರಳಿಕೆ ಈ ರೋಗದ ರೋಗ ಲಕ್ಷಣಗಳಗಿವೆ.

ವೈರಾಣು ರೋಗಗಳಿಗೆ ಚಿಕಿತ್ಸೆಗಳು

ವೈರಾಣು ಸೋಂಕುಗಳು ಸಾಮಾನ್ಯವಾಗಿ ಔಷದಿಗಳಿಲ್ಲದೆ ಗುಣವಾಗುತ್ತವೆ. ವೈರಾಣುವಿನಿಂದ ಉಂಟಾದ ರೋಗವು ಅಂಟಿಬಿಯೋಟಿಕ್ಸ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಬಸಿಟೇರಿಯಾದ ಸೋಂಕು ಜೊತೆಗಿಲ್ಲದೆ ಇದ್ದರೆ, ಅಂಟಿಬಿಯೋಟಿಕ್ಸ್ ಅನ್ನು ವೈರಾಣು ರೋಗಗಳನ್ನು ಗುಣಪಡಿಸಲು ಕೊಡುವುದಿಲ್ಲ.

. ಪ್ಯಾರಸಿಟಮಾಲ್ ಅನ್ನು ಜ್ವರ ಕಮ್ಮಿ ಮಾಡಲು ನೀಡಲಾಗುತ್ತದೆ.

. ಲವಣಯುಕ್ತ ಮೂಗಿನ ಸ್ಪ್ರೇ, ಕೆಮ್ಮಿನ ಸಿರಪ್ ಉಸಿರಾಟದ ಕಿರಿಕಿರಿಯನ್ನು ಕಮ್ಮಿ ಮಾಡಲು ಸಹಕಾರಿಯಾಗಿವೆ.

. ಜೇನು ಗಂಟಲ ಕೆರೆತವನ್ನು ಶಮನಗೊಳಿಸುತ್ತದೆ ಮತ್ತು ಪುಟ್ಟ ಮಕ್ಕಳಿಗೆ ಉಪಯುಕ್ತವಾಗಿದೆ.

. ಸ್ಟೀಮ್ ಒಳತೆಗುದುಕೊಳ್ಳುವುದರಿಂದ ಅಥವಾ ಹೂಮಿಡಿಫೈಎರ್ಸ್ ಅನ್ನು ರೂಮ್ ಅಲ್ಲಿ  ಇಡುವುದರಿಂದ ಕಟ್ಟಿದ ಅಥವಾ ಒಣ ಮೂಗನ್ನು ನಿವಾರಿಸುತ್ತದೆ.

. ತುಳಸಿ ಎಲೆ, ಪುದಿನ ಎಲೆ ಮತ್ತು ಶುಂಠಿಯನ್ನು ಕುದಿಸಿದ ನೀರನ್ನು ಕುಡಿಯುವುದರಿಂದ ಮೈ ನೋವು ಮತ್ತು ಅಸ್ತವ್ಯವಸ್ಥ್ಯನ್ನು ನಿವಾರಿಸುತ್ತದೆ.

ನಿಮ್ಮ ಮಗುವಿನಲ್ಲಿ ವೈರಾಣು ಸೋಂಕನ್ನು  ಸುಲಭವಾಗಿ ಹೋಗಿಸಲು ಸಾಕಷ್ಟು ವಿಶ್ರಾಂತಿ, ಪೌಷ್ಟಿಕ ಆಹಾರ ಮತ್ತು ದೇಹಕ್ಕೆ ಸಾಕಷ್ಟು ನೀರಿನಂಶ ಬೇಕಾಗುತ್ತದೆ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.