2 Jul 2019 | 1 min Read
Medically reviewed by
Author | Articles
ಟೈಫಾಯಿಡ್ ಒಂದು ಕಾಯಿಲೆಯಾಗಿದ್ದು ಗಂಭೀರ ಪರಿಣಾಮವನ್ನು ಬೀರುತ್ತದೆ. ಈ ಸಂಭಾವ್ಯ ಮಾರಕ ರೋಗವನ್ನು ತಡೆಗಟ್ಟುವಲ್ಲಿ ಒಂದು ಸರಳ ಲಸಿಕೆ ಸಹಾಯ ಮಾಡಬಹುದು.
ಟೈಫಾಯಿಡ್ (ಟೈಫಾಯಿಡ್ ಜ್ವರ) ಸಾಲ್ಮೊನೆಲ್ಲಾ ಟೈಫಿ ಎಂಬ ಬ್ಯಾಕ್ಟೀರಿಯಾದ ಕಾರಣದಿಂದ ಉಂಟಾಗುವ ಗಂಭೀರ ರೋಗವಾಗಿದೆ. ಇದು ಸಾಮಾನ್ಯವಾಗಿ ಕಲುಷಿತ ಆಹಾರ ಅಥವಾ ನೀರಿನಿಂದ ಹರಡುತ್ತದೆ. ಈ ರೋಗದಿಂದ ಬಳಲುತ್ತಿರುವವರು ರೋಗವನ್ನು ಇತರರಿಗೆ ಹರಡಬಹುದು ಹಾಗೂ ಇವರನ್ನು ‘ವಾಹಕಗಳು‘ ಎಂದು ಕರೆಯುತ್ತಾರೆ. ಈ ವಾಹಕಗಳು ಚಿಕಿತ್ಸೆಯ ನಂತರವೂ ದೀರ್ಘಕಾಲದವರೆಗೆ ಸೂಕ್ಷ್ಮಾಣುಗಳನ್ನು ಹರಡಬಹುದು.
ರೋಗದ ಲಕ್ಷಣಗಳು ಅಧಿಕ ಜ್ವರ (102 ° F – 104 ° F ವರೆಗೆ), ತಲೆನೋವು, ಸ್ನಾಯು ನೋವು, ಹೊಟ್ಟೆ ನೋವು, ಹಸಿವಿನ ಕೊರತೆ, ಆಯಾಸ, ಮಲಬದ್ಧತೆ ಅಥವಾ ಅತಿಸಾರ, ಮತ್ತು ಸಾಂದರ್ಭಿಕವಾಗಿ, ಗುಲಾಬಿ ಬಣ್ನದ ದದ್ದುಗಳು, ಇದಕ್ಕೆ ಚಿಕಿತ್ಸೆ ನೀಡದಿದ್ದರೆ, ಟೈಫಾಯಿಡ್ ಜ್ವರವು ಸಾವಿಗೆ ಕಾರಣವಾಗಬಹುದು. ಟೈಫಾಯಿಡ್ ಲಸಿಕೆಯು ಇದನ್ನು ತಡೆಗಟ್ಟಬಹುದು.
ಟೈಫಾಯಿಡ್ ಲಸಿಕೆ ವಿಧಗಳು
ಮೂರು ಪ್ರಕಾರದ ಟೈಫಯಿಡ್ ಲಸಿಕೆಗಳು ಲಭ್ಯವಿವೆ:
2.ಟೈಫಾಯಿಡ್ ವಿ ಪಾಲಿಸ್ಯಾಕರೈಡ್ ಲಸಿಕೆ (ವಿಐ ಪಿಎಸ್) ಚುಚ್ಚುಮದ್ದಿನಂತೆ ನೀಡಲಾಗುವುದು
ಟೈಫಾಯಿಡ್ ಲಸಿಕೆ ನೀಡಬೇಕಾದ ಸಮಯ
ವಿಐ ಪಿಎಸ್ ಲಸಿಕೆಯನ್ನು ಬಳಸಿದ್ದರೆ, 2 ವರ್ಷ ವಯಸ್ಸಿನವರಿಗೆ ಇದನ್ನು ನೀಡಬೇಕು ಮತ್ತು ಮರುಲಸಿಕೆಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಮಾಡಬೇಕು. 2 ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಇದನ್ನು ನೀಡಬಾರದು.
ನಿಮ್ಮ ಮಗುವಿಗೆ ಟೈಫಾಯಿಡ್ ಲಸಿಕೆಯನ್ನು ಯಾವಾಗ ನೀಡಬೇಕು ಎಂಬುದನ್ನು ಕುರಿತು ನಿಮ್ಮ ವೈದ್ಯರೊಂದಿಗೆ ಮಾತನಾಡಿ.
A