• Home  /  
  • Learn  /  
  • ನಿಮಗೆ ತಿಳಿದಿರಲೇಬೇಕಾದ ಗರ್ಭಾವಸ್ಥೆಯ ಮೊದಲ 8 ತೊಡುಕುಗಳು
ನಿಮಗೆ ತಿಳಿದಿರಲೇಬೇಕಾದ ಗರ್ಭಾವಸ್ಥೆಯ ಮೊದಲ 8 ತೊಡುಕುಗಳು

ನಿಮಗೆ ತಿಳಿದಿರಲೇಬೇಕಾದ ಗರ್ಭಾವಸ್ಥೆಯ ಮೊದಲ 8 ತೊಡುಕುಗಳು

2 Jul 2019 | 1 min Read

Medically reviewed by

Author | Articles

ಹೆಚ್ಚಿನ ಗರ್ಭಧಾರಣೆಗಳು ಸುಲಭವಾಗಿ ಮತ್ತು ತೊಡಕಿಲ್ಲದೆ ಮುಗಿದು ಹೋಗುತ್ತದೆ. ಆದರೆ ತಪ್ಪಾಗಬಹುದಾದ ವಿಷಯಗಳ ಬಗ್ಗೆ ಜಾಗೃತರಾಗಿರುವುದು ನೋಯಿಸುವುದಿಲ್ಲ , ಹಾಗು ಇದರ ಬಗ್ಗೆ ಮುಂಚಿತವಾಗಿ ತಿಳಿದುಕೊಂಡಿರುವುದು ಒಳ್ಳೆಯದು. ಏಕೆಂದರೆ , ಏನಾದರು ತಪ್ಪಾದರೆ, ಅದನ್ನು ಗುರುತಿಸಿ, ಸರಿಯಾದ ಸಮಯಕ್ಕೆ ಸಹಾಯ ಪಡೆಯಬಹುದು. ನೀವು ಗರ್ಭಧಾರಣೆಗೆ ಪ್ರಯತ್ನ ಮಾಡುವ ಮೊದಲು , ನಿಮ್ಮ ಆರೋಗ್ಯದ ಪೂರ್ಣ ತಪಾಸಣೆ ಮಾಡಿಸಿಕೊಂಡರೆ ಒಳ್ಳೆಯದು. ಇದರಿಂದ, ಸುಲಭವಾಗಿ ತಪ್ಪಿಸಬಹುದಾದ ಸಮಸ್ಯೆಗಳು, ಉದಾಹರಣೆಗೆ ಅನೀಮಿಯಾ, ಥೈರಾಯಿಡ್  ಅಸಮತೋಲನಗಳನ್ನು ಗರ್ಭಧಾರಣೆಗೆ ಮುಂಚಿತವಾಗಿಯೇ ಪರಿಹರಿಸಿಕೊಳ್ಳಬಹುದು.

ಗರ್ಭಾವಸ್ಥೆಯಲ್ಲಿ ನೀವು ಗಮನಿಸಬೇಕಾದ ಕೆಲವು ಗರ್ಭಧಾರಣೆಯ ತೊಡಕುಗಳ ಪಟ್ಟಿ ಇಲ್ಲಿದೆ :

೧. ಆರಂಭಿಕ ಗರ್ಭಧಾರಣೆಯ ಸಮಯದಲ್ಲಿ ರಕ್ತಸ್ರಾವವಾಗುವುದು:

ಆರಂಭಿಕ ಗರ್ಭಧಾರಣೆಯ ಸಮಯದಲ್ಲಿ ಸ್ವಲ್ಪ ರಕ್ತಸ್ರಾವವಾಗುವುದು ಸಾಮಾನ್ಯ. ಇದು ಇಂಪ್ಲಾಂಟೇಶನ್ ರಕ್ತಸ್ರಾವ. ಯೋನಿ ಅಥವಾ ಗರ್ಭಕಂಠದ ಸೋಂಕಾಗಿದ್ದರೆ ಅಥವಾ ಪಾಲಿಪಿ, ಅದನ್ನು ಪರಿಹರಿಸಬಹುದು. ಕೆಲವೊಮ್ಮೆ, ಪ್ರೊಜೆಸ್ಟರಾನ್ ಮಟ್ಟ ಕಡಿಮೆಯಿದ್ದರೆ. ಅದರಿಂದ ಮೊದಲನೆಯ ಟ್ರಿಮಿಸ್ಟರ್ ಪೂರಾ ರಕ್ತಸ್ರಾವವಾಗಬಹುದು. ಇದನ್ನು ಹಾರ್ಮೋನ್ ಪೂರಕಗಳಿಂದ ಕಡಿಮೆ ಮಾಡಬಹುದು. ಆದರೆ ರಕ್ತಸ್ರಾವವಾದರೆ, ಅದನ್ನು ಮೊದಲು ವೈದ್ಯರಿಗೆ ತಿಳಿಸುವುದು ಬಹಳ ಮುಖ್ಯ. ಗಾಬರಿಯಾಗಬೇಡಿ ಹಾಗು ರಕ್ತಸ್ರಾವವೆಂದರೆ ಗರ್ಭಪಾತವಾಗುತ್ತದೆ ಎಂದು ಊಹಿಸಿಕೊಳ್ಳಬೇಡಿ. ಏಕೆಂದರೆ ಗರ್ಭಪಾತದ ಸಮಯದಲ್ಲಿ, ಹೆಚ್ಚಿನ ನೋವು ಹಾಗು ಹೆಚ್ಚಿನ ಪ್ರಮಾಣದಲ್ಲಿ ರಕ್ತಸ್ರಾವವಾಗುತ್ತದೆ ಮತ್ತು ಹೆಪ್ಪುಗಟ್ಟುವಿಕೆಯಿಂದ ತುಂಬಿರುತ್ತದೆ.

೨. ಎಕ್ಟೋಪಿಕ್ ಗರ್ಭದಾರಣೆ:

ಇದನ್ನು ಟ್ಯೂಬಲ್ ಗರ್ಭಧಾರಣೆಯೆಂದೂ ಸಹ ಕರೆಯುತ್ತಾರೆ. ಇದರಲ್ಲಿ ಫಲವತ್ತಾದ ಮೊಟ್ಟೆಯು ಗರ್ಭಾಶಯದ ಹೊರಗಡೆ ಅಳವಡಿಕೆಗೊಂಡಿರುತ್ತದೆ, ಸಾಮಾನ್ಯವಾಗಿ ಫಾಲೋಪಿಯನ್ ಟ್ಯೂಬ್ಸ್ನಲ್ಲಿ. ಈ ರೀತಿಯ ಗರ್ಭಧಾರಣೆಯಲ್ಲಿ ರಕ್ತಸ್ರಾವ ಹಾಗು ಹೊಟ್ಟೆ ನೋವು ಕಾಣಿಸಿಕೊಳ್ಳುತ್ತವೆ. ಇಂತ ಸಮಯದಲ್ಲಿ ಗರ್ಭಪಾತಮಾಡಿಸಬೇಕಾಗುತ್ತದೆ. ಇಂತ ಗರ್ಭಧಾರಣೆಯನ್ನು, ಆರಂಭದಲ್ಲೇ ಪತ್ತೆಹಚ್ಚುವುದು ಬಹಳ ಮುಖ್ಯ, ಇಲ್ಲವಾದರೆ ಬ್ರೂಣ ದೊಡ್ಡದಾದರೆ, ಟ್ಯೂಬ್ಸ್ಗಳು ಛಿದ್ರವಾಗಿ, ಬಹಳ ರಕ್ತಸ್ರಾವಾಗಿ ಜೀವಕ್ಕೆ ಅಪಾಯವಾಗಬಹುದು. ಆದ್ದರಿಂದ, ಆರಂಭಿಕ ಗರ್ಭಧಾರಣೆಯ ಸ್ಕ್ಯಾನ್ ನಿಂದ ಅಥವಾ ರಕ್ತ ಟೆಸ್ಟ್ ನಿಂದ, ಹಚ್ ಸಿ ಜಿ ಮಟ್ಟವನ್ನು ತಿಳಿಯಬಹುದು ಹಾಗೂ ಇದರಿಂದ ಈ ರೀತಿಯ ಗರ್ಭಧಾರಣೆಯನ್ನು ಸುಲಭವಾಗಿ ಪತ್ತೆಹಚ್ಚಬಹುದು.

೩. ಅಸಮರ್ಥ ಗರ್ಭಕಂಠ :

ಗರ್ಭಿಣಿಯ ಗರ್ಭಕಂಠವು ದುರ್ಬಲವಾದರೆ, ಮಗುವು ಪೂರ್ತಿಯಾಗಿ ಬೆಳೆಯುವ ಮೊದಲೇ ಗರ್ಭಕಂಠವು ತೆಳ್ಳಗಾಗುತ್ತದೆ. ಇದನ್ನು ಅಸಮರ್ಥ ಗರ್ಭಕಂಠ ಎನ್ನುತ್ತಾರೆ. ಮಗುವು ಬೆಳೆದಂತೆ, ಅದು ಕೆಳಗೆ ತಳ್ಳುತ್ತ  ಬರುತ್ತದೆ ಹಾಗು ಇದರಿಂದ ಅಕಾಲಿಕ ಹೆರಿಗೆಯಾಗುವ ಸಾಧ್ಯತೆಯಿರುತ್ತದೆ. ದೈಹಿಕ ಪರೀಕ್ಷೆಯಿಂದ ಇದನ್ನು ಪತ್ತೆಹಚ್ಚಬಹುದು ಹಾಗು ಇಂತ ಸಮಯದಲ್ಲಿ ಬೆಡ್ ರೆಸ್ಟ್ ಬಹಳ ಮುಖ್ಯ. ಕ್ಲಿಷ್ಟವಾದ ಪ್ರಕರಣಗಳಲ್ಲಿ, ಗರ್ಭಕಂಠವನ್ನು ಬಿಗಿಯಾಗಿ ಹೊಲಿಯಲಾಗುತ್ತದೆ, ಹಾಗೂ ಈ ಹೊಲಿಗೆಗಳನ್ನು 38 ನೇ ವಾರದಲ್ಲಿ  ಬಿಚ್ಚಲಾಗುತ್ತದೆ.

೪. ಪ್ಲಾಸೆಂಟಾ ಪ್ರೆವಿಯಾ :

ಈ  ಪರಿಸ್ಥಿತಿಯಲ್ಲಿ , ಪ್ಲಾಸೆಂಟಾ ಗರ್ಭಕೋಶಕ್ಕಿಂತ ಕೆಳಗಿರುತ್ತದೆ, ಕೆಲಮೊಮ್ಮೆ ಭಾಗಶಃ ಅಥವಾ ಪೂರ್ಣವಾಗಿ ಗರ್ಭಕಂಠವನ್ನು ಮುಚ್ಚಿಬಿಡುತ್ತದೆ.  ಗರ್ಭಧಾರಣೆಯ ಕೊನೆಯಲ್ಲಿ ರಕ್ತಸ್ರಾವ ಉಂಟಾಗಬಹುದು, ಹಾಗು ಬೇರೆ ರೀತಿಯ ತೊಂದರೆಗಳಿಗೆ ಕಾರಣವಾಗಬಹುದು ಹಾಗು ಅಕಾಲಿಕ ಹೆರಿಗೆಯೂ ಆಗುವ ಸಾಧ್ಯತೆಗಳಿರುತ್ತದೆ. ಇದು ದೈಹಿಕ ಪರೀಕ್ಷೆಯಿಂದ ಅಥವಾ ಮದ್ಯ ಗರ್ಭವಾಸ್ಥೆಯ ಅಲ್ಟ್ರಾಸೌಂಡ್ ಸ್ಕ್ಯಾನ್ ನಿಂದ ತಿಳಿಯುತ್ತದೆ.

೫. ಪ್ರಿಕ್ಲಾಂಪ್ಸಿಯಾ :

ಈ ಪರಿಸ್ಥಿತಿ ತಡವಾದ ಗರ್ಭಾವಸ್ಥೆಯಲ್ಲಿ ಕಂಡುಬರುತ್ತದೆ, ಇಲ್ಲಿ ಗರ್ಭಿಣಿಯಲ್ಲಿ ರಕ್ತದೊತ್ತಡ ಹೆಚ್ಚಿರುತ್ತದೆ ಹಾಗು ರಕ್ತದಲ್ಲಿ ಪ್ರೋಟೀನ್ ಇರುತ್ತದೆ. ಇಂತ ಪರಿಸ್ಥಿತಿಯಲ್ಲಿ ತೀವ್ರವಾದ, ನಿರಂತರ  ತಲೆನೋವು, ಹೊಟ್ಟೆ ನೋವು, ವಾಕರಿಕೆ, ವಾಂತಿ, ಊತ ಹಾಗು ಕಣ್ಣಿನ ತೊಂದರೆಗಳುಂಟಾಗುತ್ತವೆ. 35 ವರ್ಷ ಮೇಲ್ಪಟ್ಟ ಹೆಂಗಸರಲ್ಲಿ, ಡಯಾಬಿಟಿಸ್ ಇರುವವರಲ್ಲಿ , ಜಾಸ್ತಿ ತೂಕದವರಲ್ಲಿ , ಈ ಸಮಸ್ಯೆ ಉಂಟಾಗುವುದು ಸಾಮಾನ್ಯ. ತೀವ್ರ ಪ್ರಿಕ್ಲಾಂಪ್ಸಿಯಾ ಬಹಳ ಅಪಾಯಕಾರಿ, ಇದು ತಾಯಿಯ ಅಂಗಾಂಗಗಳಿಗೆ ಹಾಗು ಮಗುವಿಗೆ ರಕ್ತದ ಚಲನೆಯನ್ನು ಕಡಿಮೆ ಮಾಡುತ್ತದೆ. ಪ್ರಿಕ್ಲಾಂಪ್ಸಿಯಾ ಕಂಡುಬಂದಲ್ಲಿ, ತಕ್ಷಣವೇ ಹೆರಿಗೆ ಮಾಡಬೇಕಾಗುತ್ತದೆ.

೬. ಗರ್ಭಾಧಾರಣೆಯ ಮಧುಮೇಹ :

ಇದು ಒಂದು ರೀತಿಯ ಮಧುಮೇಹವಾಗಿದ್ದು 2 -10% ಮಹಿಳೆಯರಲ್ಲಿ, ಈ ರೀತಿಯ ಮಧುಮೇಹ ಗರ್ಭಾವಸ್ಥೆಯಲ್ಲಿ ಉಂಟಾಗುತ್ತದೆ. ಗರ್ಭಾಧಾರಣೆಯ ಸಮಯದಲ್ಲಿ , ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಯಿದು. ಇದು ಯಾವುದೇ ರೋಗಲಕ್ಷಣಗಳನ್ನು ಹೊಂದಿರುವುದಿಲ್ಲ. ಇದನ್ನು 24 -28 ವಾರದಲ್ಲಿ, ಗ್ಲೂಕೋಸ್ ಟೆಸ್ಟ್ ಮೂಲಕ ತಿಳಿಯಬಹುದು. ಅನಿಯಂತ್ರಿತ ಗರ್ಭಾವಸ್ಥೆಯ ಮಧುಮೇಹದಿಂದ, ಮಗುವಿನ ತೂಕ ಹೆಚ್ಚಬಹುದು , ಇದರಿಂದ ಮಗು ಜನ್ಮ ಕಾಲುವೆಯಲ್ಲಿ ತೂರುವುದಿಲ್ಲ. ಆಗ ಸಿ-ಸೆಕ್ಷನ್ ಮಾಡಬೇಕಾಗುತ್ತದೆ. ತಾಯಿಯಲ್ಲೂ ಸಹಾ ಮುಂಬರುವ ವರ್ಷಗಳಲ್ಲಿ ಮಧುಮೇಹ ಉಂಟಾಗಬಹುದು. ಗರ್ಭಾವಸ್ಥೆಯ ಮಧುಮೇಹವನ್ನು ಹೆಚ್ಚಾಗಿ, ವ್ಯಾಯಾಮ ಮತ್ತು ಉತ್ತಮ ಆಹಾರದಿಂದ ನಿಯಂತ್ರಿಸಬಹುದು.

೭. ಕಡಿಮೆ ಆಮ್ನಿಯೋಟಿಕ್ ದ್ರವ ( ಆಲಿಗೋಹೈಡ್ರಮ್ನಿಯೋಸ್ ) :

ಆಮ್ನಿಯೋಟಿಕ್ ದ್ರವವು ರಕ್ಷಣಾತ್ಮಕ ಹಾಗು ಪೋಷಣೆ ನೀಡುವ ದ್ರವ. ಅದು  ಹೊಟ್ಟೆಯಲ್ಲಿ ಮಗುವಿರುವ ಆಮ್ನಿಯೋಟಿಕ್ ಚೀಲವನ್ನು ತುಂಬುತ್ತದೆ. ಕೆಲವು ಗರ್ಭಿಣಿಯರಲ್ಲಿ, ಇದರ ಮಟ್ಟ ಕಡಿಮೆಯಿರುತ್ತದೆ ಹಾಗು ಮಗುವಿನ ಬೆಳವಣಿಗೆ ಕುಂದುತ್ತದೆ. ಗರ್ಭಿಣಿಯಲ್ಲಿ , ಈ ದ್ರವವು ಲೀಕ್ ಆದರೆ, ಮಗುವಿನ ಚಲನೆ ತಿಳಿಯದಿದ್ದರೆ , ವೈದ್ಯರು ಆಮ್ನಿಯೋಟಿಕ್ ದ್ರವದ ಮಟ್ಟವನ್ನು ಪರೀಕ್ಷಿಸುತ್ತಾರೆ. ಈ ದ್ರವದ ಮಟ್ಟವು ಕಡಿಮೆಯಿದ್ದರೆ, ಗರ್ಭಾವಸ್ಥೆಯನ್ನು ಬಹಳ ಸೂಕ್ಷ್ಮವಾಗಿ ಮಾನಿಟರ್ ಮಾಡಬೇಕಾಗುತ್ತದೆ. ಗರ್ಭಿಣಿಯು ಹೆರಿಗೆಯ ದಿನವನ್ನು ಸಮೀಪಿಸುತ್ತಿದ್ದರೆ, ಹೆರಿಗೆಯನ್ನು ಪ್ರಚೋದಿಸಬೇಕಾಗುತ್ತದೆ.

೮. Rh  ರೋಗ :

ಮಹಿಳೆಯ ರಕ್ತದ ಗುಂಪು Rh  ನೆಗಟಿವ್ ಇದ್ದಲ್ಲಿ ಹಾಗು ಮಗುವಿನ ರಕ್ತದ ಗುಂಪು Rh ಪಾಸಿಟಿವ್ ಇದ್ದಲ್ಲಿ , ಈ ಸಮಸ್ಯೆಯುಂಟಾಗುತ್ತದೆ. ಹೆರಿಗೆಯ ಸಮಯದಲ್ಲಿ, ಬ್ರೂಣದ ರಕ್ತ ಪ್ಲಾಸೆಂಟಾ ದಿಂದ ಹೊರಗೆ  ಹರಿದು, ತಾಯಿಯ ರಕ್ತದಲ್ಲಿ ಬೆರೆಯುತ್ತದೆ. ತಕ್ಷಣ ತಾಯಿಯ ನಿರೋಧಕ ವ್ಯವಸ್ಥೆಯು ಮಗುವಿನ Rh ಅಂಶದ ವಿರುದ್ಧ ಪ್ರತಿಕಾಯಗಳನ್ನು ಬೆಳೆಸುತ್ತದೆ. ಇದರಿಂದ ಮೊದಲನೆಯ ಮಗುವಿಗೆ ಯಾವ ತೊಂದರೆಯಾಗುವುದಿಲ್ಲ ಆದರೆ ಎರಡನೇ ಗರ್ಭಾವಸ್ಥೆಯಲ್ಲಿ ತೊಂದರೆಯಾಗಬಹುದು. ಜೀವಕೋಶಗಳನ್ನು ನಾಶಮಾಡಬಹುದು ಹಾಗು ‘ಎರಿಥ್ರೋಬ್ಲಾಸ್ಟೋಸಿಸ್ ‘ ಎಂಬ ಸಮಸ್ಯೆಯುಂಟಾಗಬಹುದು. ಇದು ಮಗುವಿನ ಜೀವಕ್ಕೆ ಅಪಾಯ ಉಂಟುಮಾಡಬಹುದು. ಆದ್ದರಿಂದ , ಸುಲಭದ ರಕ್ತ ಟೆಸ್ಟ್ಯಿಂದ ತಾಯಿ ಹಾಗು ತಂದೆಯ ರಕ್ತದ ಗುಂಪು ತಿಳಿಯಬಹುದು. ತಾಯಿಯ ರಕ್ತದ  ಗುಂಪು ಆರ್ ಹಚ್ ನೆಗೆಟಿವ್ ಆಗಿದ್ದಲ್ಲಿ , ಹಾಗು ತಂದೆಯ ರಕ್ತದ ಗುಂಪು ಆರ್ ಹಚ್ ಪಾಸಿಟಿವ್ ಆಗಿದ್ದಲ್ಲಿ , ಮಗುವಿನ ರಕ್ತದ ಗುಂಪು ಆರ್ ಹಚ್ ಪಾಸಿಟಿವ್ ಆಗಿರುತ್ತದೆ. ಆ ಸಂದರ್ಭದಲ್ಲಿ , 28 ನೇ ವಾರದಲ್ಲಿ ಹಾಗು ಹೆರಿಗೆಯ ಮುಂಚೆ ಒಂದು ಔಷಧಿಯನ್ನು ನೀಡಲಾಗುತ್ತದೆ. ಇದು ಮಗುವಿನ ವಿರುದ್ಧ ತಾಯಿಯ ದೇಹವು ಪ್ರತಿಕ್ರಿಯಿಸುವುದನ್ನು ತಡೆಗಟ್ಟುತ್ತದೆ.

ಈ ವಿಷಯಗಳಿಂದ ನೀವು ಗಾಬರಿಯಾಗುವ ಅಗತ್ಯವಿಲ್ಲ. ಈ ಸಮಸ್ಯೆಗಳು ಆಗುವ  ಸಾಧ್ಯತೆ ಬಹಳ ಕಡಿಮೆ. ಹಾಗೂ ಔಷಧಿಗಳಿಂದ ಈ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ಗರ್ಭಾಧಾರಣೆಯ ಸಮಯದಲ್ಲಿ ವೈದ್ಯರನ್ನು ಕಾಲ ಕಾಲಕ್ಕೆ ಭೇಟಿ ಮಾಡಿ. ಎಲ್ಲಾ ರೀತಿಯ ರಕ್ತ ಟೆಸ್ಟ್ ಹಾಗು ಸ್ಕ್ಯಾನ್ಸ್ಗಳನ್ನೂ ಮಾಡಿಸಿ  ಹಾಗು ಯಾವುದೇ ಲಕ್ಷಣಗಳು ಕಂಡುಬಂದಲ್ಲಿ, ವೈದ್ಯರಿಗೆ ತಿಳಿಸಿ. ಇದರಿಂದ ನಿಮ್ಮ ಗರ್ಭಾವಸ್ಥೆಯು ಸುಖಮಯವಾಗಿರುತ್ತದೆ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.