2 Jul 2019 | 1 min Read
Medically reviewed by
Author | Articles
ನೀವು ಖಚಿತಪಡಿಸಿಕೊಳ್ಳಲು ಮೂರು ಸಲ ಯೂರಿನ್ ಟೆಸ್ಟ್ ಮಾಡಿದ್ದೀರಿ ಹಾಗು ಸಂತೋಷವಾಗಿದ್ದೀರಿ. ಮುಂದೇನು?
ನಿಮ್ಮ ಅಮ್ಮ ಅಥವಾ ಅಜ್ಜಿ ಹೊಗುತ್ತಿದ್ದ ಅದೇ ಡಾಕ್ಟರ್ ಬಳಿ ಅಥವಾ ಆನ್ಲೈನ್ ಅಲ್ಲಿ ಸೂಚಿಸುವ ವೈದ್ಯರ ಬಳಿ ಹೋಗುವ ಮೊದಲು, ನಿಮಗಿರುವ ಇತರೆ ಆಯ್ಕೆಗಳ ಬಗ್ಗೆ ಯೋಚಿಸಿ.
ಗರ್ಭಧಾರಣೆಯು ಒಂದು ಅನಾರೋಗ್ಯವಲ್ಲ – ಒಂದು ಹೊಸ ಮುದ್ದಾದ ಜೀವವನ್ನು ನಿಮ್ಮ ಜೀವನ ಮತ್ತು ಪ್ರೀತಿಯಲ್ಲಿ ಬರಮಾಡಿಕೊಳ್ಳುವ ಒಂದು ಸಂತಸದ ಸಮಯ.
ನಿಮ್ಮ ನಿಯಮಿತ ಜೀವನ ಶೈಲಿ ಹೇಗಿದೆ? ನಿಮಗೇ ಅವಕಾಶ ನೀಡಿದರೆ ಅನಾರೋಗ್ಯಕರ ಆಹಾರವನ್ನು ತಿನ್ನುವ, ಕೆಲಸಕ್ಕೆ ಹೋಗುವ, ಅವಿಶ್ರಾಂತ ವ್ಯಕ್ತಿಯೇ? ಕರಿದ ಪದಾರ್ಥಗಳನ್ನು ಇಷ್ಟಪಡುವವರೇ? ಆರ್ಗಾನಿಕ್ ಆಹಾರ ಸೇವಿಸುವವರೇ ಹಾಗು ಯೋಗ ಮಾಡುವವರೇ? ನೀವು ಸ್ವಲ್ಪ ಸಮಸ್ಯೆಯಿದ್ದರೂ ಮಾತ್ರೆ ತೆಗೆದುಕೊಳ್ಳುವುದು ಅಥವಾ ವೈದ್ಯರನ್ನು ಕಾಣುವವರೇ?
ನಿಮ್ಮ ಗರ್ಭದಾರಣೆಯನ್ನು ಯಾವ ರೀತಿಯಲ್ಲಿ ಮುಂದುವರಸಬೇಕು ಹಾಗು ಈ ಪಯಣದಲ್ಲಿ ಯಾರು ನಿಮ್ಮ ಜೊತೆಯಲ್ಲಿ ಇರಬೇಕು ಎಂಬುದನ್ನು ನಿರ್ಧರಿಸಿ. ಉದಾಹರಣೆಗೆ, ನೀವು ಆಫ್ರಿಕಾದ ಟ್ರಿಪ್ಪಿಗೆ ಹೋಗುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ , ನಿಮ್ಮ ಜೊತೆಯಲ್ಲಿರುವವರು ನಿಮ್ಮನ್ನು ಹೆಜ್ಜೆ ಹೆಜ್ಜೆಗು ಹೆದರಿಸುವವರಿರಬೇಕೋ, ಅಥವಾ ಅಲ್ಲಿನ ಪರಿಸರದ ಸೌಂದರ್ಯವನ್ನು ಹಾಗು ವನ್ಯಜೀವಿ ಕುಲದ ಅದ್ಭುತಗಳನ್ನು ಆನಂದಿಸುವವರಿರಬೇಕೋ?
ಪುಸ್ತಕದಲ್ಲಿ ಅಥವಾ ಆನ್ಲೈನ್ ನಲ್ಲಿ ಗೂಗಲ್ ಮಾಡಿ ಏನು ಓದುತ್ತೀರಿ, ದೂರದರ್ಶನದಲ್ಲಿ ನೋಡುವುದು ಮತ್ತು ನಿಮ್ಮ ಮನಸನ್ನು ಯಾವುದಕ್ಕೆ ತೆರೆದುಕೊಳ್ಳುತ್ತೀರಿ, ಇವೆಲ್ಲವೂ ನಿಮ್ಮ ಆತಂಕದ ಹಾಗು ನೆಮ್ಮದಿಯ ಮೇಲೆ ಪರಿಣಾಮ ಬೀರುತ್ತವೆ. ನೀವು ಬಾಸ್! ನೀವು ಯಾರಿಗೆ ಹೇಳಬೇಕು, ಯಾರ ಮಾತನ್ನು ನೀವು ಕೇಳುಬೇಕು, ನಿಮ್ಮ ಹಾಗು ನಿಮ್ಮ ಮಗುವಿನ ಬೆಳವಣಿಗೆಯ ಮೇಲೆ ಯಾರ ಪ್ರಭಾವ ಬೀಳಬೇಕು ಎಂಬುದನ್ನು ನೀವೇ ನಿರ್ಧರಿಸಿ.
ನಿಮ್ಮ ಆರೋಗ್ಯ ಮತ್ತು ಪರಿಸ್ಥಿತಿಯ ಬಗ್ಗೆ ಅಸಾಮಾನ್ಯ ಏನಾದರೂ ಕಂಡುಬರದ ಹೊರತು ಯೋನಿ ಅಲ್ಟ್ರಾಸೌಂಡ್‌ಗಳಿಗೆ ಧಾವಿಸಿ ನಿಮ್ಮನ್ನು ಮತ್ತು ನಿಮ್ಮ ಮಗುವನ್ನು ಔಷಧಿಗಳು ಮತ್ತು ಯಂತ್ರಗಳಿಗೆ ಒಡ್ಡುವ ಅಗತ್ಯವಿಲ್ಲ. ಉದಾಹರಣೆಗೆ, “ಗರ್ಭಧಾರಣೆಯನ್ನು ರಕ್ಷಿಸಲು ಪ್ರೊಜೆಸ್ಟರಾನ್ ಅನ್ನು ಹಾಕುವುದು ಸಾಮಾನ್ಯವಾಗಿದೆ” ಎಂದು ಹೇಳಲಾಗುತ್ತದೆ, ಇದು ಗರ್ಭಪಾತದ ಬೆದರಿಕೆ ಇಲ್ಲದಿದ್ದರೆ ಅನೇಕ ದೇಶಗಳಲ್ಲಿ ಇದು ಸಾಮಾನ್ಯವಲ್ಲ. ಬೇಬಿಚಕ್ರ ಸಮುದಾಯ ಮತ್ತು ಇತರ ರೀತಿಯ ಆನ್‌ಲೈನ್ ಸಂಪನ್ಮೂಲಗಳನ್ನು ಅನ್ವೇಷಿಸಿ. ನಿಮಗೆ ತಿಳಿದಿರುವ ಮಹಿಳೆಯರಲ್ಲಿ ಚರ್ಚಿಸಿ ಹಾಗು ಅವರ ಮಾತುಗಳನ್ನು ನಂಬಿ. ನಿಮ್ಮ ಅಜ್ಜಿಯರು ಹೇಗೆ ಮನೆಯಲ್ಲೇ ಧೈರ್ಯದಿಂದ ಹೆರಿಗೆ ಮಾಡಿಸಿಕೊಂಡರು ಎಂಬುದನ್ನು ಕೇಳಿ ತಿಳಿಯಿರಿ. ನಿಮ್ಮ ಸುತ್ತಾ ನಿಮನ್ನು ಬೆಂಬಲಿಸುವ ಸ್ನೇಹಿತರು, ಸಂಬಂಧಿಗಳೇ ಇರಲಿ ಹಾಗು ನಕಾರಾತ್ಮಕತೆಯಿಂದ ಹಾಗು ಭಯದಿಂದ ದೂರವಿರಿ. ಜನರು ತಮ್ಮ ಕೆಟ್ಟ ಅನುಭವಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಿಡಬೇಡಿ. ನಿಮಗೆ ನಿಮ್ಮ ವೈದ್ಯರು ನೀಡಿರುವ ಔಷಧಿ/ಸಲಹೆಯ ಮೇಲೆ ಸಂಶಯವಿದ್ದರೆ , ಎರಡನೇ ಅಭಿಪ್ರಾಯ ಪಡೆಯಿರಿ .ಇದರಲ್ಲಿ ಯಾವ ತಪ್ಪು ಇಲ್ಲ.
ನಿಮ್ಮ ಹೆರಿಗೆಯ ಅಂದಾಜಿನ ದಿನವನ್ನು ಪತ್ತೆಹಚ್ಚಲು ಒಂದು ಸುಲಭದ ಮಾರ್ಗವಿದೆ. ನಿಮ್ಮ ಕೊನೆಯ ಮುಟ್ಟಿನ ಮೊದಲನೆಯ ದಿನದ ದಿನಾಂಕಕ್ಕೆ 3 ತಿಂಗಳು ಕಳೆಯಿರಿ ಹಾಗು 7 ದಿನಗಳನ್ನು ಸೇರಿಸಿ. ಉದಾಹರಣೆಗೆ, ನಿಮ್ಮ ಕೊನೆಯ ಮುಟ್ಟಿನ 1ನೇ ದಿನ 1-04-2005 ಆದಲ್ಲಿ , ನಿಮ್ಮ ಹೆರಿಗೆಯ ಅಂದಾಜಿನ ದಿನ 8 – ೦1 – 2006.
ಹೆರಿಗೆಯ ಅಂದಾಜಿನ ದಿನ , ಕೇವಲ ಒಂದು ಅಂದಾಜು. ನಿಮ್ಮ ಹೆರಿಗೆಯ ದಿನ ಜನವರಿ 1ನೇ ವಾರವಿದ್ದರೆ, ನಿಮ್ಮ ಸ್ನೇಹಿತರಿಗೆ ಹಾಗು ಸಹದ್ಯೋಗಿಗಳಿಗೆ ಜನವರಿ ಕೊನೆಯ ವಾರ ಎಂದು ಹೇಳಿ. ಇದು ನಿಮಗೆ ಸ್ವಲ್ಪ ಸಮಯ ನೀಡುತ್ತದೆ, ನೀವು ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಣಿದಿದ್ದಾಗ. ಇದರಿಂದ ನಿಮ್ಮ ಹೆರಿಗೆ ದಿನ ಸಮೀಪಿಸಿದಾಗ, ಯಾರು ನಿಮ್ಮನ್ನು ಕೆಣುಕುವುದಿಲ್ಲ.
A