2 Jul 2019 | 1 min Read
Medically reviewed by
Author | Articles
ನವಜಾತ ಶಿಶುವಿಗೆ ಕೊಲಸ್ಟ್ರಮ್ ನಿಂದ ಆಗುವ ಎಲ್ಲಾ ಪ್ರಯೋಜನಗಳೆನೆಂದು ತಿಳಿಯಿರಿ ಮತ್ತು ಇದು ನಿಮ್ಮ ಮಗುವಿಗೆ ಹೇಗೆ ಒಂದು ಉತ್ತಮವಾದ ಸೂಪರ್ ಫುಡ್ ಎಂದು ತಿಳಿಯಿರಿ.
ಕೊಲಸ್ಟ್ರಮ್ ಎಂದರೇನು?
ಕೊಲೊಸ್ಟ್ರಮ್ ಮೊದಲ ಹಾಲು(ಇದನ್ನು ಮೊದಲಿನ–ಹಾಲು ಎಂದು ಸಹ ಕರೆಯಲಾಗುತ್ತದೆ)ಪ್ರತಿ ಸಸ್ತನಿ ತಾಯಿ(ಮಾನವರು ಸೇರಿದಂತೆ) ಜನ್ಮ ನೀಡಿದ ನಂತರ ಉತ್ಪಾದಿಸಲ್ಪಡುವ ಹಾಲು. ಇದು ಕೆಲವೊಮ್ಮೆ ಗರ್ಭವಸ್ಥ್ಯಾ ಕೊನೆಯಲ್ಲಿ ಸ್ರವಿಸಲ್ಪಡುತ್ತದೆ. ಇದು ಜಿಗುಟಾಗಿ, ಹಳದಿ ಬಣ್ಣದ ದ್ರವವಾಗಿದ್ದು, ಇದು ಅತ್ಯಂತ ಸಮೃದ್ಧ ಪೋಷ್ಟಕಾಂಶಗಳನ್ನು ಮತ್ತು ಇತರ ಅಂಶಗಳನ್ನು ಹೊಂದಿದ್ದು, ನವಜಾತ ಶಿಶುವು ಗರ್ಭದ ಹೊರಗಿನ ಜೀವನಕ್ಕೆ ಹೊಂದಿಕೊಳ್ಳಲು ಸಹಾಯ ಮಾಡುತ್ತದೆ.
ಕೊಲಸ್ಟ್ರಮ್ ಏಕೆ ಒಂದು ಸೂಪರ್ ಫುಡ್ ?
ನವಜಾತ ಶಿಶುವಿಗೆ ಕೊಲಸ್ಟ್ರಮ್ ನಿಂದ ಆಗುವ ಪ್ರಯೋಜನಗಳೇನು?
ನವಜಾತ ಶಿಶುವಿಗೆ ಕೊಲಸ್ಟ್ರಮ್ ಕೊಡುವುದರಿಂದ ಕೆಳಗಿನ ಪ್ರಯೋಜನಗಳನ್ನು ಕಾಣಬಹುದು:
ಇದೇ ಪೌಷ್ಟಿಕತೆಯ ಪ್ರಯೋಜನಗಳನ್ನು ಹೊಂದಿರುವ ಹಲವಾರು ಕೊಲೊಸ್ಟ್ರಮ್ ಪೂರಕಗಳು ಸೂಪರ್ಮಾರ್ಕೆಟ್ಗಳಲ್ಲಿ ಲಭ್ಯವಿದೆ. ಜೊತೆಗೆ,
ಕೊಲೊಸ್ಟ್ರಮ್ ತೆಗೆದುಕೊಳ್ಳುವುದರಿಂದ ಆಗುವ ಇತರ ಅನುಕೂಲಗಳು ಯಾವುವೆಂದರೆ:
ಎಷ್ಟು ಕೊಲಸ್ಟ್ರಮ್ ಪೂರಕ ಅವಶ್ಯವಿದೆ?
ಸುಮಾರು 1 ರಿಂದ 4 ಚಮಚಗಳಷ್ಟು ನೈಸರ್ಗಿಕವಾದ ಕೊಲೊಸ್ಟ್ರಮ್ ಅನ್ನು ನೇರವಾಗಿ ಸ್ತನದಿಂದ ಪ್ರತಿ ದಿನ ಸ್ರವಿಸಬಹುದು. ಸ್ರವಿಸಲ್ಪಟ್ಟಿರುವ ಕೊಲೊಸ್ಟ್ರಮ್ ಪ್ರಮಾಣವು ಕೇವಲ ಮಗುವಿನ ಅಗತ್ಯತೆಗಳನ್ನು ಪೂರೈಸಲು ಸಾಕಾಗುತ್ತದೆ. ಅನೇಕ ತಾಯಂದಿರು ಕೇವಲ 1 ಔನ್ಸ್(ಸುಮಾರು 30 ಮಿಲಿ) ಕೊಲೊಸ್ಟ್ರಮ್ ಅನ್ನು ಮೊದಲ 24 ಗಂಟೆಗಳಲ್ಲಿ ಉತ್ಪಾದಿಸುತ್ತಾರೆ, ಈ ಪ್ರಮಾಣವು ಮಗುವಿನ ಹೊಟ್ಟೆ ಒಂದು ಗೋಲಿಯಷ್ಟು ದೊಡ್ಡದಿರುವುದರಿಂದ ಅವರ ಹೊಟ್ಟೆ ತುಂಬಿಸಲು ಪರಿಪೂರ್ಣವಾಗುತ್ತದೆ. ಆದರಿಂದ, ಸಾಮಾನ್ಯವಾಗಿ ಎದೆಹಾಲು ಪೂರೈಕೆ ಆಗಲು ಮಗುವಿಗೆ ಹೆಚ್ಚು ಎದೆಹಾಲು ಉಣಿಸುವುದು ಮುಖ್ಯವೆಂದು ಖಚಿತಪಡಿಸಿಕೊಳ್ಳಿ.
ವಯಸ್ಕರಿಗೆ, ಸಾಮಾನ್ಯವಾಗಿ ಒಂದು ಚಮಚದಷ್ಟು ಕೊಲೊಸ್ಟ್ರಮ್ ಪುಡಿಯನ್ನು( ಮಕ್ಕಳಿಗೆ ಅರ್ಧ ಚಮಚ) ಖಾಲಿ ಹೊಟ್ಟೆಯಲ್ಲಿ, ನೀರನಲ್ಲಿ ಬೆರಿಸಿಕೊಂಡು ದಿನಕ್ಕೆ ಎರಡು ಬಾರಿಯಂತೆ ಕುಡಿಯುವುದನ್ನು ಶಿಫಾರಸ್ಸು ಮಾಡಲಾಗುತ್ತದೆ. ನೀವು ಪೂರಕವನ್ನು ಕ್ಯಾಪ್ಸುಲ್ ರೂಪದಲ್ಲಿಯೂ ತೆಗೆದುಕೊಳ್ಳಬಹುದು ಮತ್ತು ಡೋಸೇಜ್ ಕ್ಯಾಪ್ಸುಲ್ ಶಕ್ತಿಯ ಮೇಲೆ ಅವಲಂಭಿತವಾಗಿರುತ್ತದೆ.
ಸಾವಯವ ಕೊಲೊಸ್ಟ್ರಮ್ಗೆ ಯಾವುದೇ ಪದಾರ್ಥಗಳನ್ನು ಸೇರಿಸಿಲ್ಲ ಮತು ಶೈತ್ಯಿಕರಣದ ಅಗತ್ಯವಿಲ್ಲ.
ಶಿಶುಗಳಗೆ ಯಾವುದೇ ರೂಪದಲ್ಲಿ ಪೂರಕಗಳನ್ನು ನೀಡುವ ಅಗತ್ಯವಲ್ಲ, ಏಕೆಂದರೆ, ಕೊಲೊಸ್ಟ್ರಮ್ ಹೆಚ್ಚು ಕಾನ್ಸನ್ಟ್ರೇಟೆಡ್ ಆಗಿದ್ದು ಮತ್ತು ಉನ್ನತ ಮಟ್ಟದ ಪೋಷಕಾಂಶಗಳನ್ನು ಹೊಂದಿದೆ.
ಯಾವುದೇ ಕಾಳಜಿಯ ಸಂದರ್ಭದಲ್ಲಿ, ಯಾವಾಗಲು ನಿಮ್ಮ ಮಕ್ಕಳ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ. ಇನ್ನು ಉತ್ತಮವೆಂದರೆ, ಲಕ್ಟ್ಯಾಷನ್ ಸಲಹೆಗಾರರನ್ನು ಸಂಪರ್ಕಿಸಿ ಏಕೆಂದರೆ ಅವರು ನಿಮ್ಮ ಮಗುವಿನ ಆಹಾರದ ಬಗ್ಗೆ ಸಲಹೆ ನೀಡುತ್ತಾರೆ.
A
Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.