ಮಕ್ಕಳಲ್ಲಿ ಕಾಮಾಲೆ - ಕಾರಣಗಳು, ರೋಗಲಕ್ಷಣಗಳು ಮತ್ತು ಚಿಕಿತ್ಸೆಗಳೇನು?

cover-image
ಮಕ್ಕಳಲ್ಲಿ ಕಾಮಾಲೆ - ಕಾರಣಗಳು, ರೋಗಲಕ್ಷಣಗಳು ಮತ್ತು ಚಿಕಿತ್ಸೆಗಳೇನು?

ನವಜಾತ ಶಿಶುಗಳಲ್ಲಿ ಕಾಮಾಲೆ ಎಂದರೇನು?

ನವಜಾತ ಕಾಮಾಲೆ ಅಂದರೆ ಶಿಶುಗಳಲ್ಲಿ ಕಣ್ಣುವ ಕಾಮಾಲೆಯನ್ನು ವೈದ್ಯಕೀಯವಾಗಿ ಹೈಪೆರ್ಬೈಲಿರೂಬಿನ್ಎಮಿಯಾ ಎಂದು ಕರೆಯಲಾಗುತ್ತದೆ. ಇದು ಶಿಶುವಿನ ರಕ್ತದಲ್ಲಿ ಬಿಲಿರುಬಿನ್ ಅಂಶ ಹೆಚ್ಚಿನ ಮಟ್ಟದಲ್ಲಿದ್ದರೆ ಕಾಮಾಲೆಗೆ ಕಾರಣವಾಗುತ್ತದೆ. ಇದು ಚರ್ಮದ ಮೇಲೆ ತುಸು ಹಳದಿ ಬಣ್ಣದ ಛಾಯೆಗೆ ಕಾರಣವಾಗುತ್ತದೆ ಅಥವಾ ಕಣ್ಣಿನಲ್ಲಿ (ಸ್ಕಿಲೇರ) ಬಿಳಿ ಭಾಗವೊಂದು ಕಾಣುತ್ತದೆ. ಸಾಮಾನ್ಯವಾಗಿ ಬಿಲಿರುಬಿನ್ ಮಕ್ಕಳಲ್ಲಿ ಮತ್ತು ವಯಸ್ಕರಲ್ಲಿಯೂ ಇರುತ್ತದೆ, ಆದರೆ ಯಾವಾಗ ಇದು ಆರೋಗ್ಯ ಮಟ್ಟವನ್ನು ದಾಟುತ್ತದೆಯೋ ಆವಾಗ ಚರ್ಮದ ಬಣ್ಣ ಕಳೆಗುಂದುವುದು ಮತ್ತು ಇತರ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ನವಜಾತ ಕಾಮಾಲೆ ಸಾಮಾನ್ಯವಾಗಿ ಮಗು ಹುಟ್ಟಿದ ಮೊದಲ ವಾರದಲ್ಲಿ ಗೋಚರವಾಗುತ್ತದೆ. ಸಾಮಾನ್ಯವಾಗಿ ಕಾಮಾಲೆಯ ಲಕ್ಷಣಗಳು ಕಾಣಿಸುವ ಹೊತ್ತಿಗೆ ಶಿಶುಗಳು ಮನೆಗೆ ಹೋಗಿರುತ್ತಾರೆ. ಆದರಿಂದ, ಮಕ್ಕಳ ತಜ್ಞರು ಮಗುವಿನ ಜನನದ 3 ರಿಂದ 5 ದಿನಗಳಲ್ಲಿ ಪರೀಕ್ಷೆಯನ್ನು ಮಾಡುತ್ತಾರೆ.

ಸಾಮಾನ್ಯವಾಗಿ ಅನೇಕ ಮಕ್ಕಳು ಕಾಮಾಲೆಯ ಸೌಮ್ಯ ಲಕ್ಷಣಗಳನ್ನು ತೋರಿಸುತ್ತಾರೆ ಮತ್ತು ಇಸು ಅನಾರೋಗ್ಯದ ಚಿಹ್ನೆ ಆಗಿರದೆ ಇರಬಹುದು. ಇದು ಯಾವುದೇ ತೊಡಕುಗಳಿಲ್ಲದೆ ಒಂದು ಅಥವಾ ಎರಡು ವಾರಗಳಲ್ಲಿ ವಾಸಿಯಾಗುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಬಿಲಿರುಬಿನ್ ಮಟ್ಟವು ದೀರ್ಘಕಾಲದವರೆಗೂ ಹೆಚ್ಚಾಗಿಯೇ ಇದ್ದು ಇದನ್ನು ಪರಿಹಾರ ಮಾಡದಿದ್ದರೆ, ಇವು ಕೆರ್ನಿಸಿಟರ್ಸ್ ಎಂಬ ಸ್ಥಿತಿಗೆ ಕಾರಣವಾಗಬಹುದು ಮತ್ತು ಇದರಿಂದ ಮೆದುಳಿನ ಹಾನಿ ಮತ್ತು ಇತರ ಜೀವನಪರ್ಯಂತ ಅನುಭಿಸಬೇಕಾದ ಸಮಸ್ಯೆಗಳಿಗೆ ಗುರಿಯಾಗಬಹುದು. ಆದರಿಂದ,ಎಲ್ಲ ಸಂದರ್ಭಗಳಲ್ಲಿಯೂ, ಕಾಮಾಲೆ ರೋಗವನ್ನು ಗಂಭೀರವಾಗಿ ತೆಗೆದುಕೊಂಡು ಅದರ ಉಪಸ್ಥಿತಿಗೆ ಮೂಲಕಾರಣದ ಮೌಲ್ಯಮಾಪನವನ್ನು ಮಾಡಬೇಕಾಗುತ್ತದೆ.

 

ನವಜಾತ ಶಿಶುಗಳಲ್ಲಿ ಕಾಮಾಲೆಗೆ ಕಾರಣಗಳೇನು?

ದೇಹವು ಮೆಟಬೊಲೈಸ್ ಮಾಡಿ ಮತ್ತು ದೇಹದಿಂದ ಹೊರಹಾಕಿದ ಮೇಲು ಇನ್ನು ಹೆಚ್ಚು ಬಿಲಿರುಬಿನ್ ದೇಹದಿಂದ ಉತ್ಪಾದನೆಯಾದರೆ ಕಾಮಾಲೆಗೆ ಕಾರಣವಾಗುತ್ತದೆ. ಬೈಲಿರುಬಿನ್ ಒಂದು ಹಳದಿ ಬಣ್ಣದ ಪದಾರ್ಥ, ಇದು ಕೆಂಪು ರಕ್ತ ಕಣಗಳು ಯಾವಾಗ ಹಳೆಯದಾದಾಗಿ ಮತ್ತು ಅನುಪಯುಕ್ತವಾಗುತ್ತದೋ ಆಗ ದೇಹದಲ್ಲಿ ಬೀಳುತ್ತವೆ. ಸೂಕ್ತವಾದ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಬಿಲಿರುಬಿನ್ ಅನ್ನು ಸಾಮಾನ್ಯವಾಗಿ ದೇಹದಿಂದ ಮೂತ್ರದ ಮೂಲಕ ಅಥವಾ ಸ್ಟೂಲ್ನ ಮೂಲಕ ಹೊರಹಾಕುತ್ತದೆ. ಗರ್ಭವಾಸ್ಥೆಯಲ್ಲಿ, ಬಿಲಿರುಬಿನ್ ಬಿಮಗುವಿನ ದೇಹದಿಂದ ಜರವುಯುವಿನ ಮೂಲಕ ಹೊರಬರುತ್ತದೆ.

ಹೆಚ್ಚಿನ ಸಂದರ್ಭಗಳಲ್ಲಿ ಕಾಮಾಲೆಯು ನವಜಾತ ಶಿಶುಗಳಲ್ಲಿ, ಶಿಶುಗಳು ಫಿಸಿಯೋಲಾಜಿಕಲ್ ಕಾಮಾಲೆಯಿಂದ ಬಳಲುತ್ತಾರೆ. ಇದು ಬ್ರೂಣದ ಕೆಂಪು ರಕ್ತಚ್ ಕಣಗಳು ಹೀಚುವರಿಯಾಗಿ ಬೀಳುವುದರಿಂದ, ಮತ್ತು ಮಗುವಿನ ಯಕೃತ್ ಹೆಚ್ಚುವರಿ ಬಿಲಿರುಬಿನ್ ಅನ್ನು ದೇಹದಿಂದ ಸಂಪೂರ್ಣವಾಗಿ ಹೊರಹಾಕಲು ಅಸಮರ್ಥತೆಯಿಂದ ಆಗುತ್ತದೆ. ಇಂತಹ ಕಾಮಾಲೆಯು ಜನನದ 24 ಗಂಟೆಗಳಲ್ಲಿ ಕಾಣಿಸುತ್ತದೆ. ಮೂರನೇ ಅಥವಾ ನಾಲ್ಕನೇ ದಿನ ಇದು ಹೆಚ್ಚಾಗುತ್ತದೆ ಮತ್ತು ಕೆಲವು ವಾರಗಳಲ್ಲಿ ತಾನಾಗಿಯೇ ಸ್ವತಃ ಪರಿಹಾರವಾಗುತ್ತದೆ.

ಇತರ ಸಂದರ್ಭಗಳಲ್ಲಿ, ನವಜಾತ ಅವಧಿಯಲ್ಲಿ ಪ್ಯಾಥೋಲಾಜಿಕಲ್ ಕಾಮಾಲೆಯನ್ನು ಸೋಂಕಿನ ಕಾರಣದಿಂದಾಗಿ, ಕಿಣ್ವ ಕೊರತೆ, ಅಥವಾ ಮಗುವಿನ ಮತ್ತು ತಾಯಿಯ ರಕ್ತದ ಅಸಮರಸ್ಯದಿಂದಾಗಿ ಕಾಣಬಹುದು.

 

ನಿಯೋನಾಟಲ್ ಕಾಮಾಲೆಯ ಲಕ್ಷಣಗಳೆನು?

ಒಂದು ವೇಳೆ ಮಗುವಿಗೆ ನವಜಾತ ಕಾಮಾಲೆ ಹೊಂದಿದೆ ಎಂದು ಶಂಕೆಯಾದರೆ, ಚರ್ಮ ಮತ್ತು ಕಣ್ಣಿನ ಬಿಳಿ ಭಾಗವು ಹಳದಿಯಾಗಿ ಕಾಣುತ್ತವೆ. ಜನನದ 1 ರಿಂದ 5 ದಿನಗಳ ನಂತರ ಹಳದಿ ಬಣ್ಣವು ಆರಂಭದಲ್ಲಿ ಮುಖ ಮತ್ತು ಎದೆಯ ಮೇಲೆ ಕಾಣಿಸುತ್ತದೆ.

ಬಿಲ್ರುಬಿನ್ ಮಟ್ಟ ಹೆಚ್ಚಾಗಿರುವ ಮಕ್ಕಳು ಕೆಳಗಿನವುಗಳನ್ನು ತೋರಿಸುತ್ತವೆ:

  1. ಚರ್ಮದ ಮತ್ತು ಕಣ್ಣಿನ (ಸ್ಕಿಲೇರ) ದೃಷ್ಟಿಯಲ್ಲಿ ಹಳದಿ ಬಣ್ಣ ಕಾಣಿಸುತ್ತದೆ.
  2. ಸೋಮಾರಿತನ
  3. ಆಹಾರ ಸೇವಿಸಲು ನಿರಾಕರಣೆ.
  4. ರಂಪಾಟ
  5. ಬೆನ್ನು ನೋವು
  6. ಜೋರಾಗಿ ಅಳುವುದು
  7. ತೂಕ ಇಳಿಕೆ

 

ನವಜಾತ ಕಾಮಾಲೆಯನ್ನು ಹೇಗೆ ಕಂಡು ಹಿಡಿಯುತ್ತಾರೆ?

ವೈದ್ಯರು ಒಂದು ದೈಹಿಕ ಪರೀಕ್ಷೆಯನ್ನು ಮಾಡಿ ಮಗುವಿನ ಮತ್ತು ತಾಯಿಯ ಆರೋಗ್ಯವನ್ನು ವಿಚಾರಿಸುತ್ತಾರೆ. ಅವರ ರಕ್ತದ ಗುಂಪುಗಳ ಬಗ್ಗೆ ಕೇಳುತ್ತಾರೆ. ಒಂದು ರಕ್ತದ ಪರೀಕ್ಷೆಯನ್ನು ಮಾಡಿ ಬಿಲಿರುಬಿನ್ ಮಟ್ಟವು ಎಷ್ಟಿದೆ ಎಂದು ತಿಳಿಯುತ್ತಾರೆ ಮತ್ತು ಮಗುವಿಗೆ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆಯೇ ಎಂದು ಪರಿಶೀಲಿಸುತ್ತಾರೆ. ಹೆಚ್ಚಿದ ಬಿಲಿರುಬಿನ್ ಮಟ್ಟವಿರುವುದ್ದಕ್ಕೆ ಕಾರಣವನ್ನು ಕಂಡುಹಿಡಿಯಲು ಹೆಚ್ಚುವರಿ ಪರೀಕ್ಷೆಗಳನ್ನು ಮಾಡುತ್ತಾರೆ.

 

ಶಿಶುಗಳಲ್ಲಿ ಕಾಮಾಲೆಗೆ ಹೇಗೆ ಚಿಕಿತ್ಸೆ ನೀಡುತ್ತಾರೆ?

ಸೌಮ್ಯ ಕಾಮಾಲೆಯು ಎರಡು ಅಥವಾ ಮೂರು ವಾರಗಳಲ್ಲಿ ತಾನಾಗಿಯೇ ಸ್ವತಃ ಪರಿಹಾರವಾಗುತ್ತದೆ, ಮತ್ತು ಇದಕ್ಕೆ ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ. ಮಾಧ್ಯಮ ಮತ್ತು ಗಂಭೀರ ಪರಿಸ್ಥಿತಿಗಳಲ್ಲಿ, ಮಗುವನ್ನು ಹೆಚ್ಚುವರಿ ಅರೋಗ್ಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಬಹುದುಮಗುವನ್ನು ಒಂದು ರೀತಿಯ ಫ್ಲ್ಯೂರೋಸ್ಕಿಯೆಂಟ್ ಬೆಳಕಿನ ಕೆಳಗೆ ಇರಿಸಲಾಗುತ್ತದೆ. ಇದನ್ನು ಫೋಟೋಥೆರಪಿ ಎಂದು ಕರೆಯುತ್ತಾರೆ. ಚರ್ಮವು ಫ್ಲ್ಯೂರೋಸ್ಕಿಯೆಂಟ್ ಬೆಳಕನ್ನು ಹೀರಿಕೊಂಡು ಬಿಲಿರುಬಿನ್ ಅಣುಗಳನ್ನು ದೇಹದಿಂದ ಮೂತ್ರದ  ಮೂಲಕ ಅಥವಾ ಸ್ಟೂಲ್ ಮೂಲಕ ಹೊರಹಾಕುವಲ್ಲಿ ಸಹಾಯ ಮಾಡುತ್ತದೆ. ಮಗುವನ್ನು ಸೂರ್ಯನ ಬೆಳಕಿನಡಿಯಲ್ಲಿ ಹಿಡಿಯುವುದನ್ನು ತಪ್ಪಿಸಿ. ವಿಶೇಷ ಬೆಳಕುಗಳು ಮತ್ತು ನಿಯಂತ್ರಿತ ಸೆಟ್ಟಿಂಗ್ಗಳು ಕಾಮಾಲೆ ಚಿಕಿತ್ಸೆಗೆ ಅಗತ್ಯವಿದೆ.

ಇತರ ಕಾರಣಗಳಿಂದ ಕಾಮಾಲೆಯು ಉಂಟಾಗಿದ್ದರೆ, ಅವರಿಗೆ ಇತರ ರೂಪದಲ್ಲಿ ಚಿಕಿತ್ಸೆಯನ್ನು ನೀಡುತ್ತಾರೆ. ಉದಾಹರಣೆಗೆ, ಕಾಮಾಲೆಯು ಆರ್ ಹೆಚ್ ಅಸಮರಸ್ಯದಿಂದಾಗಿ ಉಂಟಾಗಿದ್ದರೆ ಶಿಶುವಿಗೆ ರಕ್ತದ ವರ್ಗಾವಣೆಯ ಅಗತ್ಯವಿರುತ್ತದೆ.

ನವಜಾತ ಕಾಮಾಲೆಯು ಮಗುವಿನ ಬೆಳವಣಿಗೆ ಪ್ರಕ್ರಿಯೆಯ ಒಂದು ಭಾಗವಾಗಿದೆ. ಆದಾಗ್ಯೂ, ಹೀಚಿನ ಬಿಲಿರುಬಿನ್ ಮಾಅತವು ಒಂದು ವಾರದ ಒಳಗೆ ಕಡಿಮೆಯಾಗದಿದ್ದಲ್ಲಿ ಇದು ಕಾಮಾಲೆ ರೋಗವನ್ನು ಸೂಚಿಸುತ್ತದೆ ಮತ್ತು ಬಹಳ ಅಪಾಯಕಾರಿ ಎಂದು ಸೂಚಿಸುತ್ತದೆ. ಆದರಿಂದ, ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸ್ ಪಡೆಯುವುದು ಉತ್ತಮ.

#babychakrakannada
logo

Select Language

down - arrow
Personalizing BabyChakra just for you!
This may take a moment!