• Home  /  
  • Learn  /  
  • ಸಾಮಾನ್ಯವಾಗಿ ಜನಿಸಿರುವ ನವಜಾತ ಶಿಶುವಿನ ತೂಕ ಹೆಚ್ಚಳದ ಮಾರ್ಗ ಮತ್ತು ಮೈಲಿಗಲ್ಲುಗಳು
ಸಾಮಾನ್ಯವಾಗಿ ಜನಿಸಿರುವ ನವಜಾತ ಶಿಶುವಿನ ತೂಕ ಹೆಚ್ಚಳದ ಮಾರ್ಗ ಮತ್ತು ಮೈಲಿಗಲ್ಲುಗಳು

ಸಾಮಾನ್ಯವಾಗಿ ಜನಿಸಿರುವ ನವಜಾತ ಶಿಶುವಿನ ತೂಕ ಹೆಚ್ಚಳದ ಮಾರ್ಗ ಮತ್ತು ಮೈಲಿಗಲ್ಲುಗಳು

2 Jul 2019 | 1 min Read

Medically reviewed by

Author | Articles

ಮೊದಲ ವರ್ಷದಲ್ಲಿ ನಿಮ್ಮ ನವಜಾತ ಶಿಶುವಿನ ಸೂಕ್ತವಾದ ತೂಕವನ್ನು ಮೇಲ್ವಿಚಾರಣೆ ಮಾಡಿ.

ನವಜಾತ ಶಿಶುವಿನ ಉದ್ದ ಮತ್ತು ತೂಕ ಗಮನಾರ್ಹವಾಗಿ  ಬದಲಾಗಬಹುದು. ಹೇಗಾದರೂ, ಸಮಯ ಕಳೆದಂತೆ, ಶಿಶು ಬೆಳವಣಿಗೆ ಸಾಕಷ್ಟು ಪ್ರಮಾಣಿತ ಮಾರ್ಗವನ್ನು ಅನುಸರಿಸುತ್ತದೆ, ಮತ್ತು ಸರಾಸರಿ ಶಿಶು ತೂಕ ಹೆಚ್ಚಾಗುತ್ತದೆ. ಹೊಸ ಪೋಷಕರು ಶಿಶುವೈದ್ಯರನ್ನು ಕೇಳುವ ಅತ್ಯಂತ ಸಾಮಾನ್ಯವಾದ ಪ್ರಶ್ನೆಗಳಲ್ಲಿ ಒಂದಾಗಿದೆ, “ಮಗು ಹೇಗೆ ಬೆಳೆಯುತ್ತಿದೆ?” ನವಜಾತ ಶಿಶುವಿನ ತೂಕವು ಆಗಾಗ್ಗೆ ಸಾಮಾನ್ಯ ಯೋಗಕ್ಷೇಮದ ಸೂಚಕವಾಗಿ ಬಳಸಲಾಗುತ್ತದೆ. ಆದರೆ ಅವರ ಶಿಶುವು ಸ್ಥಿರವಾದ ವೇಗದಲ್ಲಿ ತೂಕವನ್ನು ಪಡೆಯುತ್ತಿದೆಯೇ ಎಂದು ಪೋಷಕರು ಹೇಗೆ ತಿಳಿದಿದ್ದಾರೆ? ಮೊದಲ ವರ್ಷದಲ್ಲಿ ನಿಮ್ಮ ಮಗುವಿನ ಬೆಳವಣಿಗೆಯನ್ನು ಮೇಲ್ವಿಚಾರಣೆ ಮಾಡಲು ಕೆಳಗಿನ ಮಾರ್ಗಸೂಚಿಗಳನ್ನು ಪರಿಗಣಿಸಿ.

 

ಮಗುವಿನ ಸರಾಸರಿ ತೂಕದ ಹೆಚ್ಚಳವೆಷ್ಟು?

ಪೂರ್ಣ ಪ್ರಮಾಣದಲ್ಲಿ( 38 ರಿಂದ 40 ವಾರಗಳ ಗರ್ಭಧಾರಣೆಯ ಅವಧಿ) ಜನಿಸಿದ ಮಗುವಿನ ಆದರ್ಶಪ್ರಾಯ ತೂಕ 2 ರಿಂದ 2.5 ಕೆಜಿ ಇರಬೇಕು. ಜನನದ ತೂಕ ಹಲವಾರು ಅಂಶಗಳಿಂದ ಪ್ರಭಾವಕ್ಕೆ ಒಳಗಾಗಬಹುದು, ಅವು ಯಾವುದೆಂದರೆ ಗರ್ಭಧಾರಣೆಯ ಅವಧಿ( ಪೂರ್ಣ ಅವಧಿ ಅಥವಾ ಪೂರ್ಣ ಅವಧಿಗೂ ಮುಂಚಿತ), ಲಿಂಗ, ತಾಯಿಯ ಅರೋಗ್ಯ, ಗರ್ಭವಾಸ್ಥೆಯಲ್ಲಿ ಪೌಷ್ಟಿಕ ಸ್ಥಿತಿ, ಅನೇಕ ಹೆರಿಗೆಗಳು, ಇತ್ಯಾದಿ.

ಆದಾಗ್ಯೂ, ಪರಿಮಿತಿಯಿಂದ ಹೊರಗೆ ಬರುವ ತೂಕದಲ್ಲಿ ಜನಿಸಿದ ಮಕ್ಕಳು ಅಗತ್ಯವಾಗಿ ಅನಾರೋಗ್ಯದಿಂದಿದ್ದಾರೆ ಎಂದು ಇದು ಸೂಚಿಸುವುದಿಲ್ಲ. ಪರಿಮಿತಿಯಿಂದ ಹೊರಗೆ ಜನಿಸಿದ ಮಕ್ಕಳು ಕೂಡ ಆರೋಗ್ಯದಿಂದ ಇರಬಹುದು. ಹೆಚ್ಚುವರಿಯಾಗಿ, ಸಾಮಾನ್ಯವಾಗಿ, ಹೆಚ್ಚಿನ ಶಿಶುಗಳು ಸುಮಾರು 5% ತೂಕವನ್ನು ಜನಿಸಿದ ಕೆಲವು ದಿನಗಳಲ್ಲಿ ಕಳೆದುಕೊಳ್ಳುತ್ತಾರೆ. ವಾಸ್ತವವಾಗಿ, 7 ರಿಂದ 10% ತೂಕ ಇಳಿಕೆಯು ಎದೆಹಾಲು ಕುಡಿಯುವ ಮಕ್ಕಳಲ್ಲಿ ಸಾಮಾನ್ಯ ಎಂದು ಹೇಳಲಾಗುತ್ತದೆ. ಬಹುತೇಕ ಎಲ್ಲ ಮಕ್ಕಳು ಮುಂದಿನ 10 ರಿಂದ 14 ದಿನಗಳಲ್ಲಿ ತಮ್ಮ ಕಳೆದುಕೊಂಡ ತೂಕವನ್ನು ಮರಳಿ ಪಡೆಯುತ್ತಾರೆ. ತೂಕ ಇಳಿಕೆಯು ತೀವ್ರವಾಗಿದ್ದಾಗ ಅಥವಾ ಮಗುವಿಗೆ ಹುಷಾರಯಿಲ್ಲದಿದ್ದಾಗ ಅಥವಾ ಪೂರ್ಣ ಅವಧಿಗೂ ಮುಂಚಿತವಾಗಿ ಜನಿಸಿದ ಮಗು, ಇಂತಹ ಸಂದರ್ಭಗಳಲ್ಲಿ, ಇದು ಮರಳಿ ತೂಕವನ್ನು ಪಡೆಯಲು 3 ವಾರಗಳು ಅಥವಾ ಅದಕ್ಕಿಂತ ಹೆಚ್ಚು ಸಮಯವನ್ನು ತೆಗುದುಕೊಳ್ಳಬಹುದು.

ಮೊದಲನೇ ದಿನದಿಂದ 6 ತಿಂಗಳವರೆಗೂ, ಮಗು ಒಂದು ವಾರದಲ್ಲಿ  ½ ರಿಂದ 1 ಇಂಚಿನ ವರೆಗೆ ಮತ್ತು 140 ರಿಂದ 200 ಗ್ರಾಂ ಗಳಷ್ಟು ಬೆಳೆಯಬಹುದು. 5 ತಿಂಗಳ ಹೊತ್ತಿಗೆ, ಸಾಮಾನ್ಯ ಮಗುವಿನ ತೂಕವು ಜನನದ ತೂಕಕ್ಕಿಂತ ಎರಡು ಪಟ್ಟು ಆಗಿರಬೇಕು ಎಂದು ನಿರೀಕ್ಷಿಸಲಾಗುತ್ತದೆ.

6 ತಿಂಗಳಿಂದ 1 ವರ್ಷದವರೆಗೂ, ಒಂದು ಮಗು ಒಂದು ತಿಂಗಳಲ್ಲಿ 1 ಸಿಎಂ ಉದ್ದವಾಗುತ್ತದೆ, ಮತ್ತು ಒಂದು ವಾರಕ್ಕೆ 140ಗ್ರಾಂ ತೂಕ ಹೆಚ್ಚಳವಾಗುತ್ತದೆ. ಒಂದು ವರ್ಷದ ಕೊನೆಯಲ್ಲಿ, ಮಗುವಿನ ತೂಕವು ಜಾನಂದ ತೂಕಕ್ಕಿಂತ ಮೂರು ಪಟ್ಟು ಜಾಸ್ತಿಯಾಗುವುದನ್ನು ನೀವು ನಿರೀಕ್ಷಿಸಬಹುದು.

ಮಕ್ಕಳ ತಜ್ಞರು ರೂಟೀನ್ ಪರೀಕ್ಷೆಗಳನ್ನು ಮಾಡಿದಾಗ ಮಕ್ಕಳ ಬೆಳ್ವಣಿಗೆಯನ್ನು ಗಮನಿಸುತ್ತಾರೆ ಮತ್ತು ಬದಲಾವಣೆಗಳನ್ನು ಒಂದು ಬೆಳವಣಿಗೆಯ ಚಾಹರ್ಟ್ ಅಲ್ಲಿ ಗುರುತು ಹಾಕುತ್ತಾರೆ.

ಅರೋಗ್ಯ ಶಿಶುಗಳು ಸಹ ಕೆಲವೊಂದು ಸಂಕ್ಷಿಪ್ತ ಅವಧಿಗಳಲ್ಲಿ ಯಾವುದೇ ತೂಕ ಹೆಚ್ಚಳವಿಲ್ಲದೆ, ಅಥವಾ ತೂಕ ನಷ್ಟವನ್ನು ಸಹ ತೋರಿಸಬಹುದು ಎಂಬುದನ್ನು ಯಾವಾಗಲು ನೆನಪಿಡಿ. ಮಗು ಒಂದು ಉತ್ತಮ ಪರೀಕ್ಷೆಗಿಂತ ಮುಂದಿನ ಪರೀಕ್ಷೆಯವರೆಗೂ ಯಾವುದೇ ತೂಕ ಹೆಚ್ಚಳ ಚಿಹ್ನೆಗಳನ್ನು ತೋರಿಸದೆ ಇದ್ದಾಗ ವೈದ್ಯರು ಕಾಳಜಿವಹಿಸುತ್ತಾರೆ.

 

ಶಿಶುವಿನ ತೂಕ ಹೆಚ್ಚುವಿಕೆಯನ್ನು ಹೇಗೆ ಗಮನಿಸುವುದು?

ಎತ್ತರ ಮತ್ತು ತೂಕದ ಚಾರ್ಟ್ ಹುಡುಗರಿಗೆ ( 0 ಇಂದ 18 ವರ್ಷಗಳು ) (ಐಎಪಿ ಮತ್ತು ಡಬ್ಲ್ಯೂ ಎಚ್ ಸೇರಿ)

 

ವಯಸ್ಸು (ವರ್ಷಗಳಲ್ಲಿ)

ಎತ್ತರ (ಸೆಂಟಿಮೀಟರ್)

ತೂಕ (ಕಿಲೋಗ್ರ್ಯಾಮ್)

0 to 1

46 to 80

2.5 to 12

1 to 2

71 to 94

7.5 to 15

2 to 3

82 to 103

9.5 to 18

3 to 4

89 to 111

11.5 to 21

4 to 5

95.5 to 118.5

12.5 to 24.5

5 to 6

100 to 126

13.5 to 28

6 to 7

104 to 132.5

14.5 to 33.5

7 to 8

109 to 139

16 to 39.5

8 to 9

114 to 145.5

17.5 to 45.5

9 to 10

119 to 151.5

19 to 51.5

10 to 11

123.5 to 157

21 to 58

11 to 12

128 to 163.5

22.5 to 66

12 to 13

133 to 170

25 to 175.5

13 to 14

138 to 175.5

27.5 to 78

14 to 15

143 to 179.5

30.5 to 83

15 to 16

148 to 183

34.5 to 86

16 to 17

152 to 184.5

37 to 87.5

17 to 18

155 to 186.5

39.5 to 88

 

 ಎತ್ತರ ಮತ್ತು ತೂಕ ಚಾರ್ಟ್ ಟೇಬಲ್ ಹುಡುಗಿಯರಿಗೆ (0 ಇಂದ 18 ವರ್ಷ) (ಐಎಪಿ ಮತ್ತು ಡಬ್ಲ್ಯೂಎಚ್ ಒ ಸೇರಿ)

 

ವಯಸ್ಸು (ವರ್ಷಗಳಲ್ಲಿ)

ಎತ್ತರ (ಸೆಂಟಿಮೀಟರ್)

ತೂಕ (ಕಿಲೋಗ್ರ್ಯಾಮ್)

0 to 1

46 to 79

2.3 to 11.5

1 to 2

69 to 92.5

7 to 14.5

2 to 3

80 to 102

9 to 17.5

3 to 4

85.5 to 111

11 to 21

4 to 5

95 to 118

12.5 to 25

5 to 6

97.5 to 125.5

13 to 29

6 to7

102 to 135

13.8 to 33

7 to 8

107 to 138

15 to 38

8 to 9

112.5 to 144.5

16.5 to 43

9 to 10

117.5 to 151

18.2 to 49

10 to 11

123 to 157

20.8 to 56

11 to 12

129 to 162

23 to 62

12 to 13

134 to 166

26 to 67

13 to 14

138 to 168

28.5 to 70.5

14 to 15

141 to 169.5

31.2 to 72

15 to 16

143.5 to 170

33 to 72 .5

16 to 17

144.5 to 170.5

34.8 to 73

17 to 18

146 to 171

36 to 74

 

ತೂಕ ಮತ್ತು ಎತ್ತರವನ್ನು ವೈದ್ಯರ ಕ್ಲಿನಿಕ್ನಲ್ಲಿ ಅಥವಾ ಕಚೇರಿಯಲ್ಲಿ ಅಳೆಯಲಾಗುತ್ತದೆ. ಮಗವು ಮೊದಲನೇ ತಿಂಗಳಿಂದ ತನ್ನ ಮೊದಲನೇ ಹುಟ್ಟುಹಬ್ಬದವರೆಗೂ ಪ್ರತಿ 2 ರಿಂದ 3 ತಿಂಗಳಿಗೊಮ್ಮೆ ರೂಟೀನ್ ಪರೀಕ್ಷೆ ಮಾಡಿಸಬೇಕೆಂದು ಸೂಚಿಸಲಾಗುತ್ತದೆ. ಇಂತಹ ಭೇಟಿಯು ಮಗುವು ನಿರೀಕ್ಷೆಯಂತೆ ಬೆಳೆಯುತ್ತಿದೆಯೆ ಮತ್ತು ಅಭಿವೃದ್ಧಿಯಾಗುತ್ತಿದೆಯೇ ಅಂದು ಖಚಿತಪಡಿಸಿಕೊಳ್ಳಲು ಸಹಾಯವಾಗುತ್ತದೆ. ಭೇಟಿಗಳು ಮಗುವಿಗೆ ವೇಳಾಪಟ್ಟಿಯ ಪ್ರಕಾರ ಶಿಫಾರಸ್ಸು ಮಾಡಲಾದ ಲಸಿಕೆಯನ್ನು ಹಾಕಿಸಲು ಸಹಾಯ ಮಾಡುತ್ತದೆ.

 

ಭೇಟಿಯ ಸಮದಲ್ಲಿ, ವೈದ್ಯರು:

  •  ದೈಹಿಕ ಪರೀಕ್ಷೆ ಮಾಡುತ್ತಾರೆ
  •  ಮಗುವಿನ ಚುಚ್ಚುಮದ್ದು ದಾಖಲೆಯನ್ನು ಪರಿಶೀಲಿಸುತ್ತಾರೆ.
  •  ಮಗುವಿನ ತೂಕ ಮತ್ತು ಎತ್ತರವನ್ನು ಅಳತೆ ಮಾಡಿ ಸ್ಟ್ಯಾಂಡರ್ಡ್ ಚಾರ್ಟ್ನೊಂದಿಗೆ ಹೋಲಿಕೆ ಮಾಡಿ ನಿಮ್ಮ ಮಗು ಇತರರಂತೆ ಬೆಳೆಯುತ್ತಿದೆಯೆ ಎಂದು ನೋಡುತ್ತಾರೆ.
  •  ಕುಟುಂಬಕ್ಕೆ ಮತ್ತು ಮಗುವಿಗೆ ಸಂಭಂದಿಸಿದ ಪ್ರಶ್ನೆಗಳನ್ನು ಕೇಳುತ್ತಾರೆ.

 

ರೂಟೀನ್ ಭೇಟಿಗಳಲ್ಲದೆ, ನಿಮ್ಮ ವೈದ್ಯರಿಗೆ ಕೆಳಕಂಡ ಸಂದರ್ಭಗಳಲ್ಲಿ ಕರೆ ಮಾಡಿ:

  •  ಮಗು ನಿರೀಕ್ಷೆಯಂತೆ ಬೆಳೆದಿಲ್ಲವಾದಾಗ
  •  ಅವನು/ಅವಳು ಸಾಕಷ್ಟು ತಿನ್ನದೇ ಇರುವಾಗ
  •  ತೆವಳುವುದು ಅಥವಾ ಮಕಾಡೆಯಾಗುವ ಕೌಶಲ್ಯವನ್ನು ಕಳೆದುಕೊಂಡಾಗ
  •  ಶಬ್ದಗಳಿಗೆ ಸರಿಯಾಗಿ ಪ್ರತಿಕ್ರಿಯೆ ನೀಡದಿದ್ದಾಗ

ಮಕ್ಕಳು ತಮ್ಮ ವಿಭಿನ್ನ ತಳಿಯ ರಚನೆಯ  ಮಿನಿವಯಸ್ಕರಾಗಿರುತ್ತಾರೆ, ಇದು ಇತರರೊಂದಿಗೆ ಹೋಲಿಸಿದರೆ ಅವರು ಸ್ವಲ್ಪ ವೇಗವಾಗಿ ಅಥವಾ ನಿಧಾನವಾಗಿ ಬೆಳೆಯುತ್ತಾರೆ. ನಿಮ್ಮ ಮಗುವು ಪರಿಮಿತಿಗಿಂತ ಬೆಳವಣಿಗೆಯ ಮೈಲಿಗಲ್ಲುಗಲ್ಲಿ ತುಂಬಾ ಹೊರಗೆ ಇದ್ದಲ್ಲಿ ಮಾತ್ರ ಚಿಂತೆಗೆ ಕಾರಣವಾಗುತ್ತದೆ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.