ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳ

ಗರ್ಭಾವಸ್ಥೆಯಲ್ಲಿ ತೂಕ ಹೆಚ್ಚಳ

2 Jul 2019 | 1 min Read

Medically reviewed by

Author | Articles

ಗರ್ಭವಾಸ್ಥೆಯಲ್ಲಿ ಹೆಚ್ಚಿದ ತೂಕವನ್ನು ಉತ್ತಮ ಆಹಾರ ಆಯ್ಕೆ ಮತ್ತು ವ್ಯಾಯಾಮದ ಸಂಯೋಜನೆಯ ಮೂಲಕ ನಿರ್ವಹಿಸಬಹುದಾಗಿದೆ. ದೇಹದ ಹೆಚ್ಚಿಸಿಕೊಳ್ಳುವುದು ಎಷ್ಟು ಮುಖ್ಯವೋ, ತುಂಬಾ ತೂಕ ಹೆಚ್ಚಿಸಿಕೊಳ್ಳುವುದು ಅಗತ್ಯವಲ್ಲ, ಇದರಿಂದ ತನ್ನದೇ ಆದ ತೊಡಕುಗಳಿಗೆ ಕಾರಣವಾಗುತ್ತದೆ!

 

ಗರ್ಭವಾಸ್ಥೆಯಲ್ಲಿ ಸಾಮಾನ್ಯ ತೂಕ ಹೆಚ್ಚಳ ಎಷ್ಟಿರಬಹುದು?

 

ಒಬ್ಬ ಗರ್ಭಿಣಿ ಮಹಿಳೆಯ ದೇಹ ಗರ್ಭವಾಸ್ಥೆಯ ಅವಧಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣುತ್ತದೆ. ದೇಹದ ತೂಕ ಹೆಚ್ಚಿಸಿಕೊಳ್ಳುವುದು ಅಂತಹ ಒಂದು ಬದಲಾವಣೆ, ಇದು ಒಂದು ಪ್ರಮುಖ ಮತ್ತು ಅಗತ್ಯವಾದ ರೂಪಾಂತರವಾಗಿದ್ದು ಬೆಳೆಯುವ ಮಗುವಿಗೂ, ಹೆರಿಗೆಗೆ ಮತ್ತು ತಾಯ್ತನಕ್ಕೆ ಸಹಾಯವಾಗುತ್ತದೆ.

ಸರಾಸರಿ, ಗರ್ಭವಾಸ್ಥೆಯಲ್ಲಿ ಮಹಿಳೆಯರು 11.5 ಕೆಜಿ ಇಂದ 16 ಕೆಜಿ ವರೆಗೂ ತೂಕದಲ್ಲಿ ಹೆಚ್ಚುತ್ತಾರೆ. ಮೊದಲ ತ್ರೈಮಾಸಿಕದಲ್ಲಿ 1 ಕೆಜಿ ಇಂದ 2 ಕೆಜಿ ನಡುವೆ ತೂಕ ಹೆಚ್ಚುತ್ತದೆ, ನಂತರ ಗರ್ಭಿಣಿ ಮಹಿಳೆಯರು ಪ್ರತಿ ವಾರದಂತೆ 0.5 ಕೆಜಿ ಹೆಚ್ಚುತ್ತಾ ಹೋಗುತ್ತಾರೆ.

ಇದು ಗರ್ಭವಾಸ್ಥೆಯಲ್ಲಿ ನಿರೀಕ್ಷಿಸಬಹುದಾದ ಸರಾಸರಿ ತೂಕ ಹೆಚ್ಚಳದ ಸೂಚಕವಾಗಿದೆ. ಆದಾಗ್ಯೂ, ಪೂರ್ವ ಗರ್ಭಿಣಿ ತೂಕವನ್ನು ಅವಲಂಬಿಸಿ, ಪೌಷ್ಟಿಕಾಂಶದ ಸ್ಥಿತಿ ಮತ್ತು ಬಹು ಗರ್ಭಧಾರಣೆಯ ಪರಿಸ್ಥಿತಿ, ನಿರೀಕ್ಸ್ಥಿತಾ ತಾಯಿಯು ಕಡಿಮೆ ಅಥವಾ ಹೆಚ್ಚು ತೂಕವನ್ನು ಪಡೆಯುತ್ತಾರೆ.

  •  ಹೆಚ್ಚು ತೂಕವಿರುವ ಮಹಿಳೆಯು ತಮ್ಮ ತೂಕವನ್ನು ಕಡಿಮೆ ಇರಿಸಬೇಕಾಗುತ್ತದೆ ಅಂದರೆ 7ಕೆಜಿ ಇಂದ 9ಕೆಜಿ ನಡುವೆ ಅಥವಾ ಅವರ ಪೂರ್ವ ಗರ್ಭಧಾರಣೆಯ ತೂಕವನ್ನು ಆದರಿಸಿ ಇನ್ನು ಕಡಿಮೆ ತೂಕ ಹೊಂದಬೇಕಾಗುತ್ತದೆ.
  •  ಕಡಿಮೆ ತೂಕವಿರುವ ಮಹಿಳೆಯರು ಹೆಚ್ಚು ತೂಕವನ್ನು ಹೊಂದಬೇಕಾಗುತ್ತದೆ, ಸುಮಾರು 13ಕೆಜಿ ಇಂದ 18ಕೆಜಿ ತೂಕವನ್ನು ಹೊಂದಬೇಕಾಗುತ್ತದೆ.
  •  ಅವಳಿ ಅಥವಾ ತ್ರಿವಳಿ ಮಕ್ಕಳನ್ನು ಹೊಂದಿರುವ ಗರ್ಭಿಣಿಯರು ಇನ್ನಷ್ಟು ತೂಕವನ್ನು ಹೆಚ್ಚಿಸುವ ಅಗತ್ಯವಿದೆ, ಇದು 16.5ಕೆಜಿ ಇಂದ 25.5ಕೆಜಿ ವ್ಯಪ್ತಿಯೊಂದಿರುತ್ತದೆ..

ನೀವು ಹೆಚ್ಚು ತೂಕವಿದ್ದಿರೋ ಇಲ್ಲವೋ ಎಂದು ಲೆಕ್ಕಿಸದೆ, ಯಾವುದೇ ಕಾರಣಕ್ಕೂ ಗರ್ಭವಾಸ್ಥೆಯ ಸಮಯದಲ್ಲಿ ತೂಕ ಇಳಿಸಲು ಪ್ರಯತ್ನಿಸಬೇಡಿ. ಗರ್ಭವಾಸ್ಥೆಯಲ್ಲಿ ಯುಕ ಇಳಿಸುವುದರಿಂದ ತಾಯಿ ಮತ್ತು ಮಗು ಇಬ್ಬರಿಗೂ ಅಪಾಯಕಾರಿ. ಬದಲಿಗೆ, ಪೋಷಕಾಂಶ ದಟ್ಟವಾಗಿರುವ ಮತ್ತು ಬೆಳೆಯುತ್ತಿರುವ ಬ್ರೂಣಕ್ಕೆ ಅಗತ್ಯವಿರುವ ಒಂದು ಸಂಪೂರ್ಣ ಶ್ರೇಣಿಯ ಪೋಷಕಾಂಶಗಳನ್ನು ಒದಗಿಸುವ ಸರಿಯಾದ ಆಹಾರವನ್ನು ಸೇವಿಸುವುದರ ಕಡೆ ಗಮನ ಹರಿಸಿ. ಖಾಲಿ ಕ್ಯಾಲೋರಿಸ್ ಮತ್ತು ಪೋಷಕಾಂಶದ ಕೊರತೆಯಿರುವ ಆಹಾರವನ್ನು ನಿಮ್ಮಗೂ ಮತ್ತು ನಿಮ್ಮ ಮಗುವಿಗೆ ಇಬ್ಬರಿಗೂ ತಪ್ಪಿಸಿ.

ಗರ್ಭವಾಸ್ಥೆಯಲ್ಲಿ ಹೆಚ್ಚುವರಿ ತೂಕ ಹೊಂದುವುದರಿಂದ ಸುಮಾರು ತೊಡಕುಗಳಿಗೆ ಕಾರಣವಾಗುತ್ತದೆ ಮತ್ತು ತಾಯಿ ಮತ್ತು ಮಗು ಇಬ್ಬರಿಗೂ ಸಹ ಅನಾರೋಗ್ಯಕರ. ಜಂಕ್ ಆಹಾರವನ್ನು ತಪ್ಪಿಸುವುದರಿಂದ ಮತ್ತು ಸಕ್ಕರೆಯಿಂದ ಕೂಡಿದ ಪಾನೀಯಗಳನ್ನು ತಪ್ಪಿಸುವುದರಿಂದ ಗರ್ಭವಾಸ್ಥೆಯಲ್ಲಿ ತೂಕ ನಿರ್ವಹಣೆಯು ಚೆನ್ನಾಗಿರುತ್ತದೆ.

 

ಗರ್ಭವಾಸ್ಥೆಯಲ್ಲಿ ಉತ್ತಮ ತೂಕ ನಿರ್ವಹಣೆ

ಕೆಲವು ಯೋಜನೆಗಳೊಂದಿಗೆ ತೂಕ ನಿರ್ವಹಣೆಯು ಗರ್ಭವಾಸ್ಥೆಯಲ್ಲಿ ಸರಳವಾಗುತ್ತದೆ. ನೀವು ಗರ್ಭವಾಸ್ಥೆಯ ದೂರದ ಪ್ರಯಾಣದಲ್ಲಿ ಆರೋಗ್ಯಕರವಾದ ತೂಕ ಉಳಿಸಿಕೊಳ್ಳಲು ಕೆಲವು ಸಲಹೆಗಳು ಕೆಳಕಂಡಂತಿವೆ:

ಸಣ್ಣ ಊಟಗಳನ್ನು ಸೇವಿಸಿ ಮತ್ತು ಪದೇ ಪದೇ ಸೇವಿಸಿ. ಉತ್ತಮವಾದ ವಿಟಮಿನ್ಸ್, ಮಿನರಲ್ಸ್, ಮತ್ತು ಫೈಬರ್ ಅಂಶವಿರುವ ಸಣ್ಣ ಊಟವನ್ನು ಆಯ್ಕೆ ಮಾಡಿ. ಸಣ್ಣ ಊಟ ಮಾಡುವುದು ಮತ್ತು ಆಗಾಗ್ಗೆ ಊಟ ಮಾಡುವುದರಿಂದ ಒಂದೇ ಸಮನೆ ಹೆಚ್ಚು ಊಟ ಮಾಡುವುದನ್ನು ತಪ್ಪಿಸಬಹುದು, ವಾಕರಿಕೆಯನ್ನು ತಡೆಯುತ್ತದೆ ಮತ್ತು ಇದೆ ಸಮಯದಲ್ಲಿ ಹಸಿವು ವ್ಯಪಾಳ್ಯದ ನೋವನ್ನು ನಿಯಂತ್ರಿಸುತ್ತದೆ.

ಸಾಕಷ್ಟು ಕಾಲೋಚಿತ ಹಣ್ಣುಗಳು ಮತ್ತು ಪ್ರತಿ ಬಣ್ಣದ ತರಕಾರಿಗಳನ್ನು ಸೇವಿಸಿ. ಹೆಚ್ಚಾಗಿ ಧಾನ್ಯಗಳನ್ನು ಆಯ್ಕೆ ಮಾಡಿ ಮತ್ತು ಸಂಸ್ಕರಿತ ಆಹಾರಗಳನ್ನು ತಪ್ಪಿಸಿ.

ನೀವು ದಿನವಿಡೀ ಸಾಕಷ್ಟು ನೀರು ಕುಡಿಯುತ್ತಿರಿ ಮತ್ತು ನಿಮ್ಮ ದೇಹದಲ್ಲಿ ನೀರಿನಂಶವಿದೆ ಎಂದು ಖಚಿತಪಡಿಸಿಕೊಳ್ಳಿ. ಊಟದ ಮಧ್ಯೆ ತಾಜಾ ಹಣ್ಣಿನ ರಸಗಳು ಅಥವಾ ತರಕಾರಿಯ ರಸಗಳನ್ನು ಸೇವಿಸಿ ಮಿನರಲ್ಸ್ ಮತ್ತು ವಿಟಮಿನ್ಸ್ಗಳನ್ನು ಹೆಚ್ಚಿಸಿಕೊಳ್ಳಿ.

ಬಯಕೆಗಳು ಗರ್ಭವಾಸ್ಥೆಯ ಆಂತರಿಕ ಭಾಗವಾಗಿದ್ದು ಮತ್ತು ಇದು ನಿಮ್ಮ ಆರೋಗ್ಯಕರ ಆಹಾರದ ಯೋಜನೆಗಳನ್ನು ಧ್ವಂಸ  ಮಾಡಬಹುದು. ಕೆಲವೊಮ್ಮೆ ಕೆಲವು ಆಹಾರಗಳನ್ನು ಆಸ್ವಾದಿಸಬಹುದು ಎಂಬ ಒಂದು ಸರಳ ಉಪಾಯವು ನಿಮ್ಮ ನೆನಪಿನಲ್ಲಿರಲಿ.

ವ್ಯಾಯಾಮವು ಅಸಮರ್ಥನೀಯ

ನೀವು ಗರ್ಭಧಾರಣೆಯ ಮೊದಲು ದೈಹಿಕವಾಗಿ ಸಕ್ರಿಯರಾಗಿದ್ದಾರೆ, ಕೆಲವು ಮುನ್ನೆಚ್ಚರಿಕೆಗಳೊಂದಿಗೆ, ನೀವು ಗರ್ಭವಾಸ್ಥೆಯಲ್ಲಿ ಸುರಕ್ಷಿತವಾಗಿ ನಿಮ್ಮ ದಿನನಿತ್ಯದ ಚಟುವಟಿಕೆಗಳನ್ನು ಮುಂದುವರೆಸಬಹುದು. ಯಾವುದೇ ಚಟುವಟಿಕೆ ಅಥವಾ ವ್ಯಾಯಾಮ ಹೊಟ್ಟೆಯ ಮೇಲೆ ಒತ್ತಡ ಇರಿಸುತದೆಯೂ ಅವನ್ನು ತಡೆಯಬೇಕು.

ವ್ಯಾಯಾಮವು ಗರ್ಭಧಾರಣೆಯ ಮೊದಲು ನಿಮ್ಮ ಜೀವನಶೈಲಿಯ ಒಂದು ಭಾಗವಾಗದಿದ್ದರು ಸಹ, ಗರ್ಭವಾಸ್ಥೆಯು ವ್ಯಾಯಾಮವನ್ನು ಆರಂಭಿಸಲು ಒಳ್ಳೆಯ ಸಮಯವಾಗಿದೆ. ಚೆನ್ನಾಗಿ ನಡೆದಾಡಿ, ಅಥವಾ ಒಬ್ಬ ಅರ್ಹ ಶಿಕ್ಷಕರ ಅಡಿಯಲ್ಲಿ ಯೋಗ ಅಭ್ಯಾಸ ಮಾಡುವುದನ್ನು ಪ್ರಾರಂಭಿಸಿ. ನಿಮ್ಮ ಯೋಗ ಶಿಕ್ಷಕರಿಗೆ ನಿಮ್ಮ ಗರ್ಭವಾಸ್ಥೆಯ ಸ್ಥಿತಿಯ ಬಗ್ಗೆ ತಿಳಿಸಲು ಖಚಿತಪಡಿಸಿಕೊಳ್ಳಿ.

ಗರ್ಭವಾಸ್ಥೆಯಲ್ಲಿ ವ್ಯಾಯಾಮ ಮಾಡುವುದರಿಂದ ನಿಮ್ಮನ್ನು ಫಿಟ್ ಆಗಿ  ಇಡಲು ಸಹಾಯ ಮಾಡುವುದಲದೆ, ಹೆರಿಗೆಯೂ ಸರಾಗವಾಗುವಂತೆ ಮಾಡುತ್ತದೆ, ಗರ್ಭಧಾರಣೆಯ ಸಮಯದಲ್ಲಿ ಇರುವ ಬೆನ್ನು ನೋವನ್ನು ಕಡಿಮೆ ಮಾಡುತ್ತದೆ ಮತ್ತು ಹೆರಿಗೆಯ ನಂತರ ವೇಗವಾಗಿ ಹಿಂದಿನ ಆಕಾರ ಪಡೆಯಲು ಸಹಾಯ ಮಾಡುತ್ತದೆ.

 

#babychakrakannada

A

gallery
send-btn

Related Topics for you

Suggestions offered by doctors on BabyChakra are of advisory nature i.e., for educational and informational purposes only. Content posted on, created for, or compiled by BabyChakra is not intended or designed to replace your doctor's independent judgment about any symptom, condition, or the appropriateness or risks of a procedure or treatment for a given person.